ಒಂದೇ ರೀತಿಯ ಜೀವನಶೈಲಿ (ಜಡ ಜೀವನಶೈಲಿ) ಯಿಂದಾಗುವ ದುಷ್ಪರಿಣಾಮಗಳನ್ನು ತಪ್ಪಿಸಲು ಪ್ರತಿದಿನ ವ್ಯಾಯಾಮ ಮಾಡಿರಿ !
ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯವಾಗಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಮತ್ತು ಆ ಬಗ್ಗೆ ಜಾಗರೂಕತೆ ನಿರ್ಮಾಣವಾಗಿದ್ದರೂ, ವ್ಯಾಯಾಮ ಮಾಡುವುದು ಮಾತ್ರ ಸ್ವಲ್ಪ ಪ್ರಮಾಣದಲ್ಲಿಯೇ ಕಂಡು ಬರುತ್ತದೆ. ಇನ್ನೂ ಅನೇಕರಿಗೆ ಮನಸ್ಸಿನಲ್ಲಿ ವ್ಯಾಯಾಮ ವಿಷಯದ ಬಗ್ಗೆ ಕೆಲವು ಸಂದೇಹಗಳಿರುವುದು ಕಂಡು ಬರುತ್ತದೆ. ಸದ್ಯ ಆಗುತ್ತಿರುವ ಅನೇಕ ದೈಹಿಕ ಸಮಸ್ಯೆಗಳಿಗೆ ಉದಾ. ಬೆನ್ನುಮೂಳೆಯ ಕಾಯಿಲೆ, ಮಧುಮೇಹ, ಸ್ಥೂಲತೆ ಇತ್ಯಾದಿಗಳಿಗೆ ಉಪಾಯವೆಂದು ಔಷಧೋಪಚಾರ, ಪಥ್ಯ, ಉಪವಾಸ, ಹೀಗೆ ಅನೇಕ ಮಾರ್ಗಗಳನ್ನು ಆಯ್ಕೆ ಮಾಡುತ್ತಾರೆ. ಈ ಅಂಕಣದಿಂದ ನಾವು ವ್ಯಾಯಾಮ ಮಾಡುವ ಬಗ್ಗೆ ಜಾಗರೂಕತೆಯನ್ನು ನಿರ್ಮಾಣ ಮಾಡಲಿದ್ದೇವೆ. ಇದರ ಆವಶ್ಯಕತೆ ಮತ್ತು ಮಹತ್ವವನ್ನು ತಿಳಿದುಕೊಳ್ಳಲಿದ್ದೇವೆ, ಹಾಗೆಯೇ ವ್ಯಾಯಾಮ ವಿಷಯದಲ್ಲಿನ ಸಂದೇಹ ನಿವಾರಣೆ ಮಾಡಲಿದ್ದೇವೆ.
ತೂಕ ಕಡಿಮೆ ಮಾಡುವುದಕ್ಕಾಗಿ ವ್ಯಾಯಾಮದಿಂದ ಖಂಡಿತವಾಗಿಯೂ ಲಾಭವಾಗುತ್ತದೆ; ಆದರೆ ಇದು ವ್ಯಾಯಾಮದ ಏಕೈಕ ಲಾಭ ಅಥವಾ ಉದ್ದೇಶವಲ್ಲ. ನಿಯಮಿತ ವ್ಯಾಯಾಮದಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ, ಸ್ನಾಯುಗಳು ಮತ್ತು ಮೂಳೆಗಳು ಶಕ್ತಿಶಾಲಿ ಆಗುತ್ತವೆ, ಮನಸಿಕ ಸ್ಥಿತಿ ಸುಧಾರಿಸುತ್ತದೆ, ಮನಸ್ಸಿನ ಮೇಲಿನ ಒತ್ತಡ ಕಡಿಮೆ ಆಗುತ್ತದೆ ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ. ಆದ್ದರಿಂದ ಶಕ್ತಿ ಹೆಚ್ಚುತ್ತದೆ, ನಿದ್ದೆಯಲ್ಲಿ ಸುಧಾರಣೆ ಆಗುತ್ತದೆ ಮತ್ತು ಹೃದ್ರೋಗ ಮತ್ತು ಮಧುಮೇಹ (ಡೈಯಾಬಿಟಿಸ್) ಇವುಗಳಂತಹ ಹಳೆಯ ರೋಗಗಳ ಅಪಾಯ ಕಡಿಮೆ ಆಗುತ್ತದೆ. ವ್ಯಾಯಾಮ ಇದು ಒಂದು ಸಂಪೂರ್ಣ ಆರೋಗ್ಯ ವರ್ಧಕವಾಗಿದೆ, ಕೇವಲ ತೂಕ ಕಡಿಮೆ ಮಾಡುವ ಸಾಧನವಲ್ಲ. ಆದ್ದರಿಂದ ಸ್ವಂತದ ಶರೀರ ಮತ್ತು ಮನಸ್ಸು ಇವುಗಳು ಆರೋಗ್ಯವಾಗಿ ಇರಲು ಎಲ್ಲಾ ಅಡಚಣೆಗಳನ್ನು ದೂರಸರಿಸಿ ನಿಯಮಿತವಾಗಿ ವ್ಯಾಯಾಮ ಮಾಡಲು ಪ್ರಯತ್ನ ಮಾಡೋಣ !’
– ಸೌ. ಅಕ್ಷತಾ ರೂಪೇಶ ರೆಡಕರ, ಭೌತಿಕೋಪಚಾರ ತಜ್ಞ (ಫಿಜಿಯೋಥೆರಫಿಸ್ಟ್), ಫೋಂಡಾ, ಗೋವಾ.