ಮಕ್ಕಳಿಗೆ ಪದೇ ಪದೇ ನೆಗಡಿ, ಕೆಮ್ಮು ಆಗಲು ಕಾರಣವೇನು ?

‘ನಮ್ಮ ಮಕ್ಕಳಿಗೆ ಏಕೆ ಪದೇ ಪದೇ ನೆಗಡಿ, ಕೆಮ್ಮು ಆಗುತ್ತದೆ ?’ ಅಥವಾ ‘ನಮ್ಮ ಮಕ್ಕಳ ನೆಗಡಿ, ಕೆಮ್ಮು ಬೇಗನೇ ಏಕೆ ವಾಸಿಯಾಗುವುದಿಲ್ಲ ?’, ಇವು ತಂದೆ-ತಾಯಿಯರು ಪದೇ ಪದೇ ಕೇಳುವ ಪ್ರಶ್ನೆಗಳು. ನೆಗಡಿ, ಕೆಮ್ಮು  ಆದಾಗ ಔಷಧಿ ಅಂಗಡಿಗೆ ಹೋಗಿ ಯಾವುದಾದರೂ ‘ಕಫ್‌ ಸಿರಪ್’ ಅಥವಾ ಸ್ವತಃ ತಯಾರಿಸಿದ ಯಾವುದಾದರೊಂದು ಲೇಹ ಅಥವಾ ಕಷಾಯವನ್ನು ಕೊಡುವುದು, ಇಂತಹ ಒಂದು ಸಮೀಕರಣವು ಜನರಲ್ಲಿ ರೂಢಿಯಾಗಿದೆ. ಹಸಿ ಕೆಮ್ಮು ಇದೆಯೋ ಅಥವಾ ಒಣ ಕೆಮ್ಮು ಇದೆಯಾ ?, ಕೆಮ್ಮು ಆರಂಭವಾದಾಗ ಅದು ತಕ್ಷಣ ಕಡಿಮೆ ಆಗುತ್ತದೆಯೇ, ಕಫ ಹೊರಗೆ ಬರುತ್ತದೆಯೋ ಅಥವಾ ಹೆಚ್ಚು ಕೆಮ್ಮಿದ ನಂತರ ಸ್ವಲ್ಪ ಕಫ ಬರುತ್ತದೆಯೇ ?, ಹೊಟ್ಟೆಯಲ್ಲಿ ‘ಗ್ಯಾಸ್’ (ವಾಯು) ಇದೆಯೇ ?, ಹೊಟ್ಟೆ ಹೇಗೆ ಸ್ವಚ್ಛವಾಗುತ್ತದೆ ? ನಮ್ಮ ಮಕ್ಕಳಿಗೆ ಪಿತ್ತವೇನಾದರೂ ಆಗಿದೆಯೇ ? ಜ್ವರ ಕಡಿಮೆಯಾದ ನಂತರ ಬಂದಿರುವ ಒಣ ಕೆಮ್ಮು ಇದೆಯೇ ? ಈ ಪ್ರತಿಯೊಂದು ವಿಚಾರಗಳಿಗನುಸಾರ ಔಷಧಿಗಳು ಬದಲಾಗುತ್ತವೆ ಆದ್ದರಿಂದ ಕೇಳಿ ಅಥವಾ ನೋಡಿ ಮನೆಮದ್ದು ಉಪಚಾರ ಮಾಡುವ ಬದಲು ವೈದ್ಯರ ಸಲಹೆಯನ್ನು ಪಡೆದ ನಂತರ ಕೆಮ್ಮು ತಕ್ಷಣ ವಾಸಿಯೇ ಆಗುತ್ತದೆ ಮತ್ತು ಅದರ ಪುನರಾವರ್ತನೆಯೂ ಕಡಿಮೆಯಾಗುತ್ತದೆ.

ವೈದ್ಯೆ ಸ್ವರಾಲಿ ಶೆಂಡ್ಯೆ

೧. ಕಫದ ತೊಂದರೆ ಹೆಚ್ಚಾಗುವುದರ ಹಿಂದಿನ ಕಾರಣಗಳು

ಕೆಳಗೆ ಕೆಲವು ಕಾರಣಗಳನ್ನು ಕೊಡಲಾಗಿದ್ದು ಅವುಗಳಲ್ಲಿ ಯಾವುದಾದರೂ ಮಕ್ಕಳಲ್ಲಿ ಇದೆಯೇ ಎಂದೂ ನೋಡಬೇಕು.

೧. ನಿಮ್ಮ ಮಕ್ಕಳಿಗೆ ಒಣ ಕೆಮ್ಮು ಮತ್ತು ಒಂದೇ ಸಮನೆ ಬರುವ ಕೆಮ್ಮು ಇದ್ದರೆ ಔಷಧಿ ಅಂಗಡಿಗೆ ಹೋಗಿ ಯಾವುದಾದರೂ ‘ಕಫ್‌ ಸಿರಪ್‌’ಅನ್ನು ತೆಗೆದುಕೊಳ್ಳಬಾರದು. ಅದರಿಂದ ಒಣ ಕೆಮ್ಮು ಹೆಚ್ಚಾಗುತ್ತದೆ. ಬಹಳಷ್ಟು ಜೇನುತುಪ್ಪವನ್ನು ನೆಕ್ಕಿಸಬಾರದು, ಅದರಿಂದ ಶುಷ್ಕತೆ ಹೆಚ್ಚಾಗುತ್ತದೆ. ಒಣ ಕೆಮ್ಮು ಆಗಿದ್ದರೆ ಮಂಡಕ್ಕಿ, ವಿವಿಧ ರೀತಿಯ ಉಸುಳಿಗಳು, ಜೇನುತುಪ್ಪ ಇತರ ವಾತದ ಪದಾರ್ಥಗಳನ್ನು ತಿನ್ನಬಾರದು.

೨. ಮೊಸರು, ಉದ್ದಿನಬೇಳೆ, ಹಣ್ಣುಗಳು, ಚೀಜ್‌ ಇಂತಹ ಪದಾರ್ಥಗಳನ್ನು ಪ್ರತಿದಿನ ಅಥವಾ ಸತತವಾಗಿ ತಿನ್ನಲು ಕೊಡಬಾರದು. ಇದರಿಂದ ಕಫ ಹೆಚ್ಚಾಗುತ್ತದೆ ಮತ್ತು ಶರೀರದಲ್ಲಿ ಕಫಕ್ಕೆ ಸಂಬಂಧಿಸಿದ ಕಾಯಿಲೆಗಳಾಗಲು ಅನುಕೂಲಕರ ವಾತಾವರಣ ತಯಾರಾಗುತ್ತದೆ.

೩. ಹುಳಿ, ಉಪ್ಪು, ಖಾರ ಈ ಪದಾರ್ಥಗಳನ್ನು ಹೆಚ್ಚು ಪ್ರಮಾಣದಲ್ಲಿ ತಿಂದರೆ ಚಿಕ್ಕ ಮಕ್ಕಳಿಗೂ ಪಿತ್ತವಾಗುತ್ತದೆ. ಇದರಿಂದ ಒಣಕೆಮ್ಮಿನ ಲಕ್ಷಣಗಳು ಕಾಣಿಸುತ್ತವೆ.

೪. ನೀವಿರುವ ಪ್ರದೇಶದಲ್ಲಿ ಹೆಚ್ಚು ನೀರಿದ್ದರೆ, ಆರ್ದ್ರ ವಾತಾವರಣ ಇದ್ದರೆ, ಮನೆಯಲ್ಲಿ ಧೂಪ ಹಚ್ಚುವುದರಿಂದ ಲಾಭ ಆಗುತ್ತದೆ. ಇಂತಹ ಸ್ಥಳದಲ್ಲಿ ಕಫದ ತೊಂದರೆ ಹೆಚ್ಚಾಗುವುದರಿಂದ ಬೇಸಿಗೆಯ ಋತುವಿನಿಂದ ಚಳಿಗಾಲಕ್ಕೆ ಹೋಗುವಾಗ ಕಫನಾಶಕ ಔಷಧಿಗಳನ್ನು, ಕೆಲವು ವಿಶಿಷ್ಟ ಮಾಸಾಲೆ ಪದಾರ್ಥಗಳನ್ನು ಬಳಸಬೇಕು. ಅಂಶ ಕ್ರ. ೨ ಮತ್ತು ೩ ರಲ್ಲಿ ಹೇಳಿದ ಪದಾರ್ಥಗಳನ್ನು ತಡೆಗಟ್ಟಬೇಕು.

೫. ಮಕ್ಕಳಲ್ಲಿ ಸಿಹಿ ಪದಾರ್ಥಗಳನ್ನು ತಿನ್ನುವ ಇಚ್ಛೆ ಹೆಚ್ಚು ಇರುವುದು, ಸೀನುವಿಕೆ, ಹೊಟ್ಟೆ ಉಬ್ಬುವುದು, ಮೈ ಸೋತು ಹೋಗುವುದು, ಮೇಲಿಂದ ಮೇಲೆ ಜ್ವರ ಬರುವುದು, ಇಂತಹ ಲಕ್ಷಣಗಳು ಆಯುರ್ವೇದಕ್ಕನುಸಾರ ‘ಕ್ರಿಮಿ’ (ಜಂತು) ರೋಗದ ಲಕ್ಷಣಗಳಾಗಿರಬಹುದು. ಆ ರೋಗನಿದಾನಕ್ಕನುಸಾರ ಔಷಧಿಗಳನ್ನು ಕೊಟ್ಟರೆ ಮೇಲಿಂದ ಮೇಲಾಗುವ ನೆಗಡಿ, ಕೆಮ್ಮು, ಜ್ವರ ಬರುವುದು ಕಡಿಮೆಯಾಗುತ್ತಾ ಹೋಗುತ್ತದೆ.

೬. ‘ಕೋವಿಡ್’ ಮಹಾಮಾರಿಯ ಸೋಂಕು ಮತ್ತು ದೊಡ್ಡ ಪ್ರಮಾಣದಲ್ಲಾದ ಲಸೀಕಿಕರಣದ ನಂತರ ವಿಷಾಣುಗಳಲ್ಲಿ ಸತತವಾಗಿ ಆಗುತ್ತಿರುವ ಬದಲಾವಣೆ ಮತ್ತು ಅದರ ಹಿಂದಿನಿಂದ ಬರುವ ದೊಡ್ಡ ದೊಡ್ಡ ಸೋಂಕುಗಳು ಅನಿವಾರ್ಯವಾಗಿರುತ್ತವೆ. ಅವುಗಳನ್ನು ಎದುರಿಸಲು ಆಯುರ್ವೇದದಲ್ಲಿನ ‘ರಸಾಯನ’ದ ಬಗ್ಗೆ ವೈದ್ಯರಲ್ಲಿ ಅವಶ್ಯ ಕೇಳಬೇಕು. ಎಲ್ಲ ರೋಗಗಳಿಗೆ ಚವನಪ್ರಾಶ್‌ ಒಂದೇ ಉಪಾಯವಲ್ಲ.

೨. ಆಯುರ್ವೇದ ಔಷಧಿಗಳ ಲಾಭ

ಆಯುರ್ವೇದದ ಔಷಧಿಗಳು ರೋಗವಾದಾಗ ರೋಗವನ್ನು ಕಡಿಮೆ ಮಾಡಲು ಉಪಯುಕ್ತವಂತೂ ಆಗಿವೆ, ಹಾಗೆಯೇ ರೋಗಗಳು ಪುನರಾವರ್ತಿಸಬಾರದೆಂದು ಶರೀರದಲ್ಲಿ ಆ ಕಾಯಿಲೆ ಆಗಲು ಯಾವ ದೋಷ ಅಥವಾ ಕಾರಣಗಳಿವೆಯೋ, ಅವುಗಳನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ. ಆದ್ದರಿಂದ ಪದೇ ಪದೇ ಆಗುವ ರೋಗದ ಪ್ರಕೃತಿಯು ಕಡಿಮೆಯಾಗುತ್ತದೆ. ಇದರಿಂದ ಶರೀರದಲ್ಲಿ ಆ ರೋಗ ಹೆಚ್ಚಾಗಲು ಬೇಕಾಗುವ ವಾತಾವರಣ ಸಿಗುವುದಿಲ್ಲ. ಇದರಿಂದ ತನ್ನಿಂದ ತಾನೇ ಮುಂದುಮುಂದಿನ ಸೋಂಕು ಮತ್ತು ಅದರ ತೀವ್ರತೆ ಕಡಿಮೆಯಾಗುತ್ತ ಹೋಗುತ್ತದೆ.

– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.

ಒಳ್ಳೆಯ ಆರೋಗ್ಯಕ್ಕಾಗಿ ಅಂಶಗಳು !

ಸತತವಾಗಿ ಶರೀರದ ಕಡೆಗೆ ಗಮನ ಇಡುವುದು ಅಥವಾ ಶರೀರವು ನೀಡುತ್ತಿರುವ ಸೂಚನೆಗಳ ಕಡೆಗೆ ಗಮನ ಇಡುವುದು, ಇದು ಆರೋಗ್ಯಕ್ಕಾಗಿ ಮಹತ್ವದ ಮೆಟ್ಟಿಲಾಗಿದೆ. ಮುಂದಿನ ವಿಷಯಗಳು ಸಕಾರಾತ್ಮಕವಾಗಿದ್ದರೆ ಅವು ದೀರ್ಘಕಾಲ ಆರೋಗ್ಯವಾಗಿರಲು ಸಹಾಯ ಮಾಡುತ್ತವೆ. ಇದರಲ್ಲಿ ಲಕ್ಷಣಗಳಲ್ಲಿ ಬದಲಾವಣೆ ಆಗತೊಡಗಿದಾಗ ಅಥವಾ ಬೇರೆ ಯಾವ ಲಕ್ಷಣಗಳು ಕಂಡುಬರುತ್ತಿದ್ದರೆ, ಅದೇ ಸಮಯದಲ್ಲಿ ಸಲಹೆಯನ್ನು ಪಡೆಯುವುದು ಒಳ್ಳೆಯದು !

೧. ಪ್ರತಿದಿನ ಹೊಟ್ಟೆ ಸ್ವಚ್ಛವಾಗುತ್ತದೆಯೇ ? ಹೇಗೆ ಆಗುತ್ತದೆ ?

. ರಾತ್ರಿ ಶಾಂತ ನಿದ್ದೆ ಬರುತ್ತದೆಯೇ ?

. ಬೆಳಗ್ಗೆ ಎದ್ದ ನಂತರ ಪ್ರಸನ್ನ ಮತ್ತು ಉತ್ಸಾಹವೆನಿಸುತ್ತದೆಯೇ ?

. ನಾಲಿಗೆ ಸ್ವಚ್ಛವಾಗಿರುತ್ತದೆಯೇ ? ಹಲ್ಲುಗಳು ಮೇಲೆ ಹೊಲಸು ಕುಳಿತಿದೆಯೇ ?

. ಊಟದ ನಂತರ ಸುಮಾರು ೨ ಗಂಟೆಗಳ ನಂತರ ಮಗ್ಗುಲಿನಲ್ಲಿ ಮತ್ತು ಹೊಟ್ಟೆ ಹಗುರ ಎನಿಸುತ್ತದೆಯೇ ?

. ವಾಸನೆ ಇಲ್ಲದಿರುವ ತೇಗು ಬರುತ್ತವೆಯೇ ?

. ಮೂಗಿನಿಂದ ವಾಸನೆ, ನಾಲಿಗೆಗೆ ರುಚಿ, ಕಣ್ಣುಗಳಿಗೆ ದೃಷ್ಟಿ, ತ್ವಚೆಗೆ ಸ್ಪರ್ಶ ಮತ್ತು ಕಿವಿಗೆ ಆಲಿಕೆ ಆಗುತ್ತದೆಯೇ ?

. ಕೆಲವೊಮ್ಮೆ ಏನಾದರೂ ಹೊಸದು ತಿಂದರೆ ಅಥವಾ ದಿನಚರಿಯಲ್ಲಿ ಬದಲಾವಣೆಯಾದರೂ ನೀವು ಆರೋಗ್ಯವಾಗಿ ಇರುತ್ತೀರಾ ?

. ನಿಮ್ಮ ತೂಕ ಹಿಡಿತದಲ್ಲಿದೆಯೇ ?

೧೦. ನೀವು ಪ್ರತಿದಿನ ವ್ಯಾಯಾಮ ಮಾಡುತ್ತೀರಾ ?

೧೧. ಮಾಸಿಕ ಸರದಿ ನಿಯಮಿತವಾಗಿ ಬರುತ್ತದೆಯೇ ?

ಜನ್ಮತಃ ಬೀಜದೋಷಕ್ಕನುಸಾರ ಯಾವುದಾದರೊಬ್ಬ ವ್ಯಕ್ತಿಯ ತೊಂದರೆ ಯಾವುದಾದರೊಂದು ರೋಗದ ಕಡೆಗೆ ಇರಬಹುದು. ಇಂತಹ ಪರಿಸ್ಥಿತಿಯಲ್ಲಿ ಶರೀರದ ಸಮತೋಲನ ಕಾಯುವ ಕೆಲಸ ಮತ್ತು ಪ್ರಕೃತಿಗೆ ಯೋಗ್ಯ ದಿನಚರಿ, ಋತುಚರ್ಯ ಮತ್ತು ಔಷಧಿಗಳನ್ನು ಆರ್ಯರ್ವೇದ ಮಾಡಬಲ್ಲದು. ಇತ್ತೀಚಿನ ಸೊಂಕು ರೋಗ, ಬದಲಾಯಿಸುವ ಜೀವಾಣುಗಳ ವಿಧಗಳು ಮತ್ತು ಅವುಗಳ ಮುಂದೆ ಕಡಿಮೆ ಬೀಳುವ ವೈದ್ಯಕೀಯ ಜ್ಞಾನವನ್ನು ನೋಡಿದರೆ ಶರೀರವನ್ನು ಉತ್ತಮವಾಗಿಡುವುದೇ ಈ ಎಲ್ಲವನ್ನು ಎದುರಿಸಲು ಸಹಾಯಕವಾಗಿದೆ !

– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ