‘ಸಾಮಾನ್ಯವಾಗಿ, ನಮ್ಮ ಮನೆಯಲ್ಲಿ ವಯಸ್ಸಾದ ವ್ಯಕ್ತಿಗಳಿರುವಾಗ ಅವರಿಗೆ ತಿನ್ನಲು ಏನು ಕೊಡಬೇಕು ?’, ಈ ಪ್ರಶ್ನೆ ಆಗಾಗ ಇರುತ್ತದೆ. ಅದರಿಂದ ಅವರ ವಯಸ್ಸು, ಅನಾರೋಗ್ಯ, ಮನೆಯಲ್ಲಿ ಚಿಕ್ಕಮಕ್ಕಳಿದ್ದರೆ, ೨-೩ ಬಗೆಯ ಪದಾರ್ಥಗಳು ಗಮನದಲ್ಲಿಟ್ಟುಕೊಂಡು ಕೆಲಸವನ್ನು ನೋಡಿಕೊಳ್ಳುವ ಮೂಲಕ ಅಡುಗೆ ನಿರ್ಧರಿಸಬೇಕಾಗುತ್ತದೆ. ಅದಕ್ಕಾಗಿ ಕೆಲವು ಸರಳ ವಿಷಯಗಳು ಮತ್ತು ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ಆದ್ದರಿಂದ ರುಚಿಕರವಾದ ಆಹಾರವನ್ನು ತ್ವರಿತವಾಗಿ ತಯಾರಿಸಬಹುದು. ಇವುಗಳಲ್ಲಿ ಆರೋಗ್ಯ, ವಯಸ್ಸು ಮತ್ತು ವ್ಯಾವಹಾರಿಕ ಅಡಚಣೆಗಳ ವಿಚಾರ ಮಾಡಿ ಕೆಲವು ವಿಷಯಗಳನ್ನು ಇಲ್ಲಿ ನೀಡಲಾಗಿದೆ.
೧. ಸಾಮಾನ್ಯವಾಗಿ ವಯಸ್ಸು ೬೦ ರಿಂದ ೭೦ ವರ್ಷಗಳು, ೭೦ ರಿಂದ ೮೦ ವರ್ಷಗಳು ಮತ್ತು ೮೦ ವರ್ಷಕ್ಕಿಂತ ಮೇಲ್ಪಟ್ಟವರು ಹೀಗೆ ೩ ಗುಂಪುಗಳಲ್ಲಿ ವಯಸ್ಸಾದ ವ್ಯಕ್ತಿಗಳನ್ನು ವಿಂಗಡಿಸಬಹುದು. ೬೦ ರಿಂದ ೭೦ ವರ್ಷಗಳ ವಯಸ್ಸಿನಲ್ಲಿ, ಹಲ್ಲುಗಳು ಒಂದೇ ಮಟ್ಟದಲ್ಲಿರುತ್ತವೆ ಮತ್ತು ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ. ೭೦ ರಿಂದ ೮೦ ವರ್ಷ ವಯಸ್ಸಿನವರಲ್ಲಿ ಮಧುಮೇಹ ಅಥವಾ ಮೂತ್ರಪಿಂಡದ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅದರ ಆಹಾರವನ್ನು ವಿಭಿನ್ನವಾಗಿ ತೆಗೆದುಕೊಳ್ಳಲಾಗುತ್ತದೆ. ವಯಸ್ಸು ೮೦ ವರ್ಷಗಳ ಮುಂದೆ ಕೃತಕ ಹಲ್ಲು ಮತ್ತು ಜೀರ್ಣಕ್ರಿಯೆ ಈ ಎರಡೂ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ವಯಸ್ಸಾದ ಜನರಿಗೆ ಬೇಗನೆ ಗಂಟಲಿನಲ್ಲಿ ಸಿಲುಕಿದಂತಾಗುವುದು, ಕಚ್ಚಿ ತಿನ್ನಲು ಬೇಸರ ಬರುವುದು, ತರಕಾರಿಗಳು ಸರಿಯಾಗಿ ಬೇಯದಿದ್ದರೆ ಅಜೀರ್ಣದ ಸಮಸ್ಯೆ ಉಂಟಾಗುತ್ತದೆ. ಇವೆಲ್ಲ ಕಾಳಜಿ ವಹಿಸಿ ಅವರ ಆಹಾರವನ್ನು ತಯಾರಿಸಬೇಕಾಗುತ್ತದೆ.
೨. ಕೆಲವರಿಗೆ ಸಂಜೆ ಹಸಿವಾಗುವುದಿಲ್ಲ, ಅದರಂತೆ ಕೆಲವು ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲು ತೊಂದರೆಯಾಗಬಹುದು. ಇದರಲ್ಲಿ ಸಾಮಾನ್ಯವಾಗಿ ಎಲೆಕೋಸು, ಹಸಿರು ಮೆಣಸಿನಕಾಯಿ, ದೊಣ್ಣೆಮೆಣಸು, ಕಡಲೆಬೇಳೆ ಹಿಟ್ಟು ಇವು ಸಾಮಾನ್ಯವಾಗಿ ಕಂಡುಬರುತ್ತವೆ. ಪ್ರಸ್ತುತ ವಾತಾವರಣದಲ್ಲಾಗುವ ಬದಲಾವಣೆ ಮತ್ತು ದಿನಚರಿಯಲ್ಲಿನ ಬದಲಾವಣೆಯನ್ನು ನೋಡಿ ಹಸಿರು ಮೆಣಸಿನಕಾಯಿಯನ್ನು ಕಡ್ಡಾಯವಾಗಿ ನಿರ್ಬಂಧಿಸಬಹುದು. ವಯಸ್ಸಿಗೆ ಅನುಗುಣವಾಗಿ ಇದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಅದರ ಬದಲು ಮಸಾಲೆ ಎಂದು ಶುಂಠಿ, ಬೆಳ್ಳುಳ್ಳಿ, ಕರಿಮೆಣಸು, ಕೊತ್ತಂಬರಿ ಇವುಗಳಿಂದ ಉತ್ತಮ ಸ್ವಾದ ಬರುತ್ತದೆ.
೩. ಈ ವಯಸ್ಸಿನಲ್ಲಿ ಸಾಕಷ್ಟು ಬಾರಿ ಬೇಸರವಾಗಿದ್ದರಿಂದ ಅಥವಾ ಎಲ್ಲಾ ಪೋಷಣೆ ಒಟ್ಟಿಗೆ ಒಳಗೆ ಹೋಗುತ್ತದೆ ಎಂಬ ತಪ್ಪು ತಿಳುವಳಿಕೆಯಿಂದ ಸ್ವತಃ ಬೆಳಗ್ಗೆ ೨ ಚಮಚ ಪ್ರೋಟೀನ್ ಪುಡಿ ಮತ್ತು ಹಾಲು ಹೀಗೆ ತೆಗೆದುಕೊಳ್ಳುವ ರೂಢಿಯಾಗುತ್ತದೆ; ಆದರೆ ಹೆಚ್ಚುವರಿ ಪ್ರೋಟೀನ್ ವಯಸ್ಸಿನಂತೆ ಕಡಿಮೆಯಾಗಿದ್ದ ಶಾರೀರಿಕ ಕಷ್ಟಕ್ಕೆ ಆವಶ್ಯಕವಿಲ್ಲ ಮತ್ತು ಉಪಯುಕ್ತವೂ ಅಲ್ಲ. ತದ್ವಿರುದ್ಧ ಅವು ಮೂತ್ರಪಿಂಡಗಳು ಮತ್ತು ಯಕೃತ್ತಿನಲ್ಲಿ ಹೆಚ್ಚುವರಿ ಒತ್ತಡ ತರುವಂತಹದ್ದಾಗಿದ್ದು ಅದನ್ನು ತಪ್ಪಿಸಬೇಕು.
೪. ಬೆಳಗ್ಗೆ ಬಹಳಷ್ಟು ಜನರಿಗೆ ಹಸಿವಾಗುವುದಿಲ್ಲ ಅಥವಾ ಬೆಳ್ಳಗೆ ೧೧ ಗಂಟೆಗೆ ಸುಮಾರು ಹಸಿವಾಗುತ್ತದೆ. ಬೆಳಗ್ಗೆ ೧೧ ಅಥವಾ ೧೧.೩೦ ಕ್ಕೆ ಊಟ ಮಾಡುವುದು ಉತ್ತಮ ಆಯ್ಕೆಯಾಗಿದೆ. ಸಂಜೆ ೬ ಅಥವಾ ೬.೩೦ ಗಂಟೆಗೆ ಹಸಿವಾದಾಗ ಊಟ ಮಾಡುವುದು ಒಳ್ಳೆಯದು.
೫. ಮಧ್ಯಾಹ್ನದ ಊಟದಲ್ಲಿ ಚಪಾತಿ-ಪಲ್ಯ/ರೊಟ್ಟಿ-ಪಲ್ಯ ತಿನ್ನಲು ಯಾವುದೇ ಅಡಚಣೆ ಇಲ್ಲ. ಒಂದು ಹೊತ್ತಿನ ಊಟದಲ್ಲಿ ಚಪಾತಿ ಮತ್ತು ಅನ್ನವನ್ನು ಎರಡನ್ನು ತಿನ್ನುವ ಬದಲು ಒಂದು ಊಟದಲ್ಲಿ ಒಂದು ಧಾನ್ಯವನ್ನು ತಿಂದರೆ ಆದ್ದರಿಂದ ಅದನ್ನು ತಯಾರಿಸಲು ಸಹ ಸುಲಭವಾಗುತ್ತದೆ ಮತ್ತು ಜೀರ್ಣಕ್ಕೂ ಹಿತಕರವಾಗಿರುತ್ತದೆ. ಯಾರಿಗೆ ಬೆಳಗ್ಗೆ ಉಪಾಹಾರದ ಸಮಯದಲ್ಲಿ ಚೆನ್ನಾಗಿ ಹೊಟ್ಟೆ ಹಸಿವಾಗುತ್ತದೆ ಅವರು ಬೆಳಗ್ಗೆ ಬೇಳೆ ಸಾರು-ಅನ್ನ ಮತ್ತು ಮಧ್ಯಾಹ್ನ ಚಪಾತಿ/ರೊಟ್ಟಿ-ಪಲ್ಯ ತಿಂದರೆ, ಆದ್ದರಿಂದ ಅದನ್ನು ತಯಾರಿಸುವುದು ಮತ್ತು ಆರೋಗ್ಯದ ದೃಷ್ಟಿಯಿಂದ ಸುಲಭವಾಗುತ್ತದೆ. ಉಪಾಹಾರ ಮಾಡುತ್ತಿಲ್ಲದಿದ್ದರೆ, ಆಗ ಒಂದು ಹೊತ್ತಿಗೆ ಚಪಾತಿ-ಪಲ್ಯ ಮತ್ತು ಒಂದು ಹೊತ್ತಿಗೆ ಬೇಳೆಸಾರು-ಅನ್ನ ಅಥವಾ ಬರಿ ಅನ್ನದ ವಿಧಗಳನ್ನು ತಯಾರಿಸಿ ಊಟ ತಯಾರಿಸಬಹುದು.
೬. ಸಂಜೆ ಪರಾಠ, ಜೋಳ ಮತ್ತು ಮಿಶ್ರಣ ಹಿಟ್ಟಿನ ರೊಟ್ಟಿ, ಯಾವುದಾದರೊಂದು ಸೂಪ್ ಮತ್ತು ಒಂದು ಬಟ್ಟಲು ಉಪ್ಪಿಟ್ಟು ಮಾಡಬಹುದು. ಹೊರಗಿನ ರವೆ ಬಳಸದೆ ಮನೆಯಲ್ಲಿ ತಯಾರಿಸಿದ ಅಕ್ಕಿ ಅಥವಾ ಗೋಧಿ ರವೆಯ ಉಪ್ಪಿಟ್ಟು ಉತ್ತಮವಾಗಿದೆ. ಹೆಚ್ಚು ವಯಸ್ಸು ಮತ್ತು ಹಲ್ಲಿನ ಸಮಸ್ಯೆಗಳಿದ್ದರೆ ಅಕ್ಕಿಹಿಟ್ಟಿನ ಮೆದುದೋಸೆ, ಪುಂಡಿ (ಬೇಯಿಸಿದ ಹಿಟ್ಟು), ರಾಗಿ ಅಂಬಲಿ, ಖಿಚಡಿ ನೀಡಬಹುದು. ಸಕ್ಕರೆ ಕಾಯಿಲೆ ಇಲ್ಲದಿದ್ದರೆ, ಬೆಲ್ಲದೊಂದಿಗೆ ಗೋಧಿ ರವೆಯ ಸಿಹಿ (ಶಿರಾ); ವಯಸ್ಸು ಹೆಚ್ಚಿದ್ದರೆ ಮತ್ತು ಹಸಿವು ಕಡಿಮೆಯಿದ್ದರೆ, ಪೌಷ್ಟಿಕಾಂಶವುಳ್ಳ ಲಡ್ಡು ಮತ್ತು ಹಾಲು ಕೂಡ ನೀಡಬಹುದು. ರಾತ್ರಿಯಲ್ಲಿ ಹಸಿವು ತೀರಾ ಕಡಿಮೆಯಿದ್ದರೆ ಜೋಳದ ಅರಳು, ಹಾಲು, ಸಕ್ಕರೆ ಅಥವಾ ರಾಜಗಿರಿ ಧಾನ್ಯದ ಅರಳನ್ನು ತುಪ್ಪದೊಂದಿಗೆ ಬೆರೆಸಿ ಸ್ವಲ್ಪ ಹಸಿ ತೆಂಗಿನಕಾಯಿಯನ್ನು ಸೇರಿಸಿ ಕೊಡಬಹುದು.
೭. ತರಕಾರಿಗಳಲ್ಲಿ ಮುಖ್ಯವಾಗಿ ಹಣ್ಣು-ಕಾಯಿಪಲ್ಲೆಗಳಿರಬೇಕು. ಉಸಳಿ ನೀಡಲು ಬಯಸಿದರೆ, ಸಂಪೂರ್ಣವಾಗಿ ಬೇಯಿಸಿ ಮತ್ತು ಬೆಳ್ಳುಳ್ಳಿ ಸೇರಿಸಿ ನಿಂಬೆ ಹಿಂಡಿ ನೀಡಬೇಕು. ರಾಗಿ, ಸಜ್ಜೆ ಇದು ಒಣ ಮತ್ತು ವಾತಕರ ಇರುವುದರಿಂದ ಮಿತವಾಗಿ ಕೊಡಬೇಕು. ಸಜ್ಜೆ ಕೊಡಬೇಕಿದ್ದರೆ ಖರ್ಜೂರ ಮತ್ತು ಬೆಲ್ಲ ಸೇರಿಸಿ ತುಪ್ಪದಲ್ಲಿ ಹುರಿದು ಅದರ ರುಚಿಯಾದ ದಪ್ಪರೊಟ್ಟಿ ಮಾಡಿಕೊಡಬಹುದಾಗಿದೆ.
೮. ವಯಸ್ಸಾದ ವ್ಯಕ್ತಿಯ ಆಹಾರವು ಸ್ನಿಗ್ಧದಿಂದ ಕೂಡಿರಬೇಕು. ಇದಕ್ಕಾಗಿ ತುಪ್ಪ, ಕೆನೆ, ಹಾಲು, ಬೆಣ್ಣೆ ಇವೆಲ್ಲ ಆಹಾರದಲ್ಲಿ ಇರಬೇಕು. ದೇಹಪ್ರಕೃತಿ ತೆಳ್ಳಗೆ, ಸಣಕಲು ಮತ್ತು ಹಸಿವು ಉತ್ತಮವಾಗಿದ್ದರೆ ಕೆನೆ ಮತ್ತು ಕಲ್ಲುಸಕ್ಕರೆಯನ್ನು ಕೊಡಬಹುದು. ಸಲಾಡ್ (ಕೊಸಂಬರಿ), ‘ಸ್ಮೂಥಿಗಳು’ (ನಯವಾದ ದ್ರವಗಳು) ಇಂತಹ ಹಸಿ ಆಹಾರಗಳನ್ನು ಹೆಚ್ಚು ನೀಡಬಾರದು. ಆಗಾಗ ಕಫದ ಸಮಸ್ಯೆ ಇದ್ದರೆ ಅಥವಾ ಹೆಚ್ಚು ಹಾಸಿಗೆಯಲ್ಲಿ ಮಲಗಿರುವ ರೋಗಿಗಳಿದ್ದರೆ ಮಜ್ಜಿಗೆ, ಮೊಸರು, ಹಣ್ಣುಗಳಂತಹ ಆಹಾರಗಳನ್ನು ಕೊಡಬಾರದು. ಮಧ್ಯಾಹ್ನದ ಊಟದಲ್ಲಿ ಹೆಸರುಕಾಳು ಹಿಟ್ಟು ಅಥವಾ ಜೋಳದ ಹಿಟ್ಟನ್ನು ಮಜ್ಜಿಗೆಯಲ್ಲಿ ಬೆರೆಸಿ ಅದಕ್ಕೆ ಬೇಯಿಸಿದ ಕಾಯಿಪಲ್ಯಗಳನ್ನು ಸೇರಿಸಿ ನೀಡಬಹುದು. ಕೇವಲ ಮೊಸರು, ಮಜ್ಜಿಗೆ ಮಾತ್ರ ನೀಡುವುದನ್ನು ತಪ್ಪಿಸಿ.
೯. ಹಲ್ಲುಗಳಿಲ್ಲದಿರುವಾಗ ಅಥವಾ ಸರಿಯಾಗಿ ಕಚ್ಚಲು ಆಗದಿದ್ದರೆ ಜೋಳ, ಅಕ್ಕಿ ರೊಟ್ಟಿಯನ್ನು ಬೇಯಿಸಿ ಅದರ ಚಿಕ್ಕ ಚಿಕ್ಕ ತುಂಡುಗಳನ್ನು ತಯಾರಿಸಬಹುದು. ಸಲಾಡ್ ಬಹಳಷ್ಟು ಇಷ್ಟ ಇದ್ದರೆ ಸಣ್ಣ ತುರಿಯುವ ಮಣೆಯಿಂದ ಸೌತೆಕಾಯಿ, ಕ್ಯಾರೆಟ್, ಬೀಟರೂಟ್ ತುರಿ ಮಾಡಬಹುದು. ಅದರಲ್ಲಿ ನಿಂಬೆ, ದಾಳಿಂಬೆ ಬೀಜಗಳು ಹಾಗೆ ತುಪ್ಪ ಮತ್ತು ಜೀರಿಗೆಯ ಒಗ್ಗರಣೆ ಅವಶ್ಯವಾಗಿ ಸೇರಿಸಬೇಕು. ವಯಸ್ಸಾದ ಮನುಷ್ಯರಿಗೆ ಉಪ್ಪಿನಕಾಯಿ ಕೊಡಬಾರದು, ಹಸಿ ತೆಂಗಿನಕಾಯಿ ಅಥವಾ ಶುಂಠಿ ಮತ್ತು ಪುದೀನಾ ಚಟ್ನಿಯನ್ನು ಕೊಡುವುದರಿಂದ ಅವರ ಊಟದ ರುಚಿ ಹೆಚ್ಚುತ್ತದೆ. ಬಾಯಿರುಚಿಗೆ ಮುರಂಬವನ್ನೂ ಬಳಸಬಹುದು.
೧೦. ಯಾರ ಮಕ್ಕಳು ದೂರ ಅಥವಾ ಬೇರೆಡೆ ವಾಸಿಸುತ್ತಿದ್ದರೆ, ಅದರ ಬಗ್ಗೆಯೂ ಒಂದು ಮಾನಸಿಕ ಒತ್ತಡ ಇರುತ್ತದೆ. ಹಸಿವು ತನ್ನಿಂದತಾನೇ ಕಡಿಮೆಯಾಗುತ್ತದೆ. ಅಂತಹ ಸಮಯದಲ್ಲಿ, ಅವರ ‘ಕೇರ್ ಟೇಕರ್ಸ್’ (ಕಾಳಜಿ ವಹಿಸುವ ವ್ಯಕ್ತಿ) ಇರುತ್ತಾರೆ ಸುತ್ತಲಿನ ಜನರು ಇರುತ್ತಾರೆ. ಇವರ ಕೊಡುಗೆ ತುಂಬಾ ದೊಡ್ಡದಾಗಿದೆ. ದೂರದಲ್ಲಿದ್ದರೆ, ಒಂದು ಫೋನ್ ಮೂಲಕ; ಅಕ್ಕಪಕ್ಕದವವರು ಅಥವಾ ಹತ್ತಿರದಲ್ಲಿದ್ದ ಜನರು, ಇಣುಕಿ ನೋಡಿ ಏನು ಅಜ್ಜ ಏನು ಮಾಡುತ್ತಿದ್ದೀರಿ ?’ ಅಥವಾ ‘ಇವತ್ತು ಮನೆಯಲ್ಲಿ ಸೂಪ್ ಮಾಡಿದೆವು; ಆದ್ದರಿಂದ ನಿಮಗೆ ರುಚಿ ನೋಡಲು ತಂದಿರುವೆ’, ಈ ರೀತಿಯ ವಾಕ್ಯ ಅವರ ನೈತಿಕ ಬಲವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಹಿರಿಯ ವ್ಯಕ್ತಿಗಳು ಇದ್ದರೆ, ದಿನದಲ್ಲಿ ೫-೧೦ ನಿಮಿಷಗಳ ಕಾಲ ಅವರ ಹತ್ತಿರ ಕುಳಿತು ಮಾತನಾಡಿದರೆ, ಅವರಿಗೆ ತುಂಬಾ ಒಳ್ಳೆಯದೆನಿಸುತ್ತದೆ. ನಾವು ಒಂದು ಸಮಾಜದ ಅಂಗವಾಗಿಯೂ ಈ ಅಂಶದ ಬಗ್ಗೆ ವಿಶೇಷ ಗಮನ ಹರಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಇಂತಹ ಸಣ್ಣ ಕೃತಿಗಳಿಂದ ಅವರ ಊಟವು ಚೆನ್ನಾಗಾದರೆ ನಮಗೂ ಒಳ್ಳೆಯದಾಗುತ್ತದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.’
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಯುರ್ವೇದ, ಪುಣೆ. (೩೦.೯.೨೦೨೪)