‘ಪ್ರಜಾಪ್ರಭುತ್ವದ ಸಬಲೀಕರಣಕ್ಕೆ ಮಾಧ್ಯಮ ಸ್ವಾತಂತ್ರ್ಯ ಅಗತ್ಯ !’ (ಅಂತೆ) – ಅಮೇರಿಕಾ

ಅಮೇರಿಕಾದಿಂದ ‘ಬಿಬಿಸಿ ನ್ಯೂಸ್’ ಸಾಕ್ಷ್ಯಚಿತ್ರದ ನಿಲುವಿನಲ್ಲಿ ಬದಲಾವಣೆ !

ಅಮೇರಿಕಾದ ರಾಷ್ಟ್ರಾಧ್ಯಕ್ಷ ಕಾರ್ಯಾಲಯದ ವಕ್ತಾರರು ನೇಡ್ ಪ್ರಾಯಿಸ್

ವಾಷಿಂಗ್ಟನ್ (ಅಮೆರಿಕ) – ಬಿಬಿಸಿ ನ್ಯೂಸ್ ಪ್ರಧಾನಿ ಮೋದಿ ಮತ್ತು ಗುಜರಾತ ಗಲಭೆ ಇವರ ಬಗ್ಗೆ ನಿರ್ಮಿಸಿರುವ ಸಾಕ್ಷ್ಯಚಿತ್ರದ ಮೇಲೆ ಕೇಂದ್ರ ಸರಕಾರ ಈ ಹಿಂದೆಯೇ ನಿಷೇಧ ಹೇರಿದೆ. ಇದರಿಂದ ಭಾರತದಲ್ಲಿ ಕೆಲವು ಸ್ಥಳಗಳಲ್ಲಿ ವಿವಾದ ಕೂಡ ನಡೆದಿದೆ. ಈ ಕಿರುವಿಚಿತ್ರದ ಬಗ್ಗೆ ಅಮೇರಿಕಾದಿಂದ ಎರಡೇ ದಿನದಲ್ಲಿ ಅದರ ನಿಲುವು ಬದಲಾಯಿಸಿದೆ. ”ನಾವು ಯಾವಾಗಲೂ ಮಾಧ್ಯಮ ಸ್ವಾತಂತ್ರ್ಯವನ್ನು ಬೆಂಬಲಿಸಿದ್ದೇವೆ, ಅದು ಇನ್ನು ಮುಂದೆ ಕೂಡ ನೀಡುವೆವು. ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಮಹತ್ವ ನಮಗೆ ತಿಳಿದಿದೆ. ಪ್ರಜಾಪ್ರಭುತ್ವದ ಸಬಲೀಕರಣಕ್ಕಾಗಿ ಅದು ಅವಶ್ಯಕವಾಗಿದೆ. ನಾವು ಭಾರತ ಸಹಿತ ಜಗತ್ತಿನಾದ್ಯಂತ ಈ ಅಂಶ ಮಂಡಿಸಿದ್ದೇವೆ’, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಕಾರ್ಯಾಲಯದ ವಕ್ತಾರರು ನೇಡ್ ಪ್ರಾಯಿಸ್ ಹೇಳಿದರು.

ಎರಡು ದಿನದ ಹಿಂದೆ ಪತ್ರಿಕಾಗೋಷ್ಠಿಯಲ್ಲಿ ನೇಡ್ ಪ್ರಾಯಿಸ್ ಇವರು ಈ ಸಾಕ್ಷ್ಯಚಿತ್ರದ ಬಗ್ಗೆ ಕೇಳಿರುವ ಪ್ರಶ್ನೆಗೆ ಉತ್ತರಿಸುವಾಗ, ‘ನನಗೆ ಇದರ ಬಗ್ಗೆ ತಿಳಿದಿಲ್ಲ. ನಾನು ಕೇವಲ ಅಮೆರಿಕಾ ಮತ್ತು ಭಾರತ ಎರಡು ದೇಶದ ಸಂಬಂಧ ಗಟ್ಟಿಗೊಳಿಸುವುದಕ್ಕಾಗಿ ಹಂಚಿಕೊಂಡಿರುವ ಮೌಲ್ಯದ ಅರಿವಿದೆ. ಭಾರತದಲ್ಲಿ ಏನೆಲ್ಲಾ ನಡೆಯುತ್ತದೆ ಅದರ ಬಗ್ಗೆ ನಮಗೆ ಕಳವಳ ಇದೆ, ನಾವು ಆಗಾಗ ಇದರ ವಿರುದ್ಧ ಧ್ವನಿ ಎತ್ತುತ್ತೇವೆ.’ ಎಂದು ಹೇಳಿದರು.

ಸಂಪಾದಕರ ನಿಲುವು

‘ಪ್ರಜಾಪ್ರಭುತ್ವದ ಸಬಲೀಕರಣಕ್ಕೆ ಮಾಧ್ಯಮ ಸ್ವಾತಂತ್ರ್ಯ ಅಗತ್ಯ ಇದನ್ನು ಯಾರೂ ನಿರಾಕರಿಸುವುದಿಲ್ಲ; ಆದರೆ ಸ್ವಾತಂತ್ರ್ಯದ ಹೆಸರಿನಲ್ಲಿ ಸುಳ್ಳು, ಹಿಂದೂ ದ್ವೇಷ ಮತ್ತು ಭಾರತ ದ್ವೇಷ ಇದನ್ನು ಯಾರಾದರೂ ಸತತ ಮಾಡುತ್ತಿದ್ದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲೇಬೇಕು !