42 ವರ್ಷಗಳಿಂದ ಮುಚ್ಚಿರುವ ಉತ್ತರ ಪ್ರದೇಶದ ಮೇರಠನ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿರುವ ಪಿಪಳೇಶ್ವರ ಶಿವ ಮಂದಿರ !

ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಹಿಂದೂಗಳಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ

ಮೇರಠ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಸಂಭಲ್‌ನಂತೆ ಮೇರಠನಲ್ಲಿಯೂ 42 ವರ್ಷಗಳಷ್ಟು ಹಳೆಯದಾದ ದೇವಸ್ಥಾನ ಪತ್ತೆಯಾಗಿದೆ. ಮೇರಠನ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಶಹಾಗಾಸಾದಲ್ಲಿ ಬಂದ್ ಆಗಿರುವ ಪಿಪಳೇಶ್ವರ ಶಿವ ದೇವಸ್ಥಾನ ಪತ್ತೆ. ಈ ದೇವಸ್ಥಾನವನ್ನು 1982 ರಲ್ಲಿ ಮುಚ್ಚಲಾಯಿತು. ಸದ್ಯ ದೇವಸ್ಥಾನದ ಸ್ಥಿತಿಗತಿ ಕುರಿತು ಹೇಳುವುದಾದರೆ, ಇದು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ದೇವಸ್ಥಾನದ ಸಮೀಪದಲ್ಲಿಯೇ ಬಾವಿ ಇದ್ದು, ಆಡಳಿತ ಮಂಡಳಿ ಅದಕ್ಕೆ ಬೀಗ ಹಾಕಿದೆ. ದೇವಸ್ಥಾನದ ಮೇಲೆ ಹೋಗಲು ರಸ್ತೆ ಇಲ್ಲ. ಹಿಂದೂಗಳು ಇಂದಿಗೂ ದೇವಸ್ಥಾನದ ಕೆಳಗೆ ಪೂಜೆ ಮಾಡುತ್ತಾರೆ.

ದೇವಸ್ಥಾನದ ಜೀರ್ಣೋದ್ಧಾರ ಮಾಡಿರಿ! – ಹಿಂದೂಗಳ ಬೇಡಿಕೆ

ದೇವಸ್ಥಾನದ ಜೀರ್ಣೋದ್ಧಾರ ಮತ್ತು ಪುನರ್ ನಿರ್ಮಾಣ ಮಾಡಬೇಕು ಎಂದು ಹಿಂದೂಗಳ ಇಚ್ಛೆ ಆಗಿದೆ. ಅನೇಕ ವರ್ಷಗಳಿಂದ ಪಾಳು ಬಿದ್ದಿರುವ ಈ ದೇವಸ್ಥಾನದ ಜೀರ್ಣೋದ್ಧಾರ ಮಾಡಿ ಇಲ್ಲಿ ಪೂಜೆ ಪ್ರಾರಂಭವಾಗಬೇಕು ಎಂದು ಎಲ್ಲರೂ ಬಯಸುತ್ತಿದ್ದಾರೆ. ಜನರು ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಅಯೋಧ್ಯೆಯಿಂದ ಸಂಭಲವರೆಗೂ ನಿರ್ಜನ ದೇವಸ್ಥಾನಗಳನ್ನು ತೆರೆಯುತ್ತಿರುವಾಗ ಈ ಐತಿಹಾಸಿಕ ದೇವಸ್ಥಾನವನ್ನೂ ಜೀರ್ಣೋದ್ಧಾರ ಮಾಡಬೇಕು ಎಂದು ಕೋರಿದ್ದಾರೆ.

42 ವರ್ಷಗಳ ಹಿಂದೆ ದೇವಸ್ಥಾನವನ್ನು ಏಕೆ ಮುಚ್ಚಲಾಗಿತ್ತು ?

ಆಡಳಿತವು ದೇವಸ್ಥಾನಕ್ಕೆ ಬೀಗ ಹಾಕಿದ್ದು, ದೇವಸ್ಥಾನವನ್ನು ತೆರೆಯುವುದು ಅಥವಾ ಮುಚ್ಚುವುದು ಆಡಳಿತದ ತೀರ್ಮಾನವಾಗಿದೆಯೆಂದು ಸ್ಥಳೀಯ ಮುಸಲ್ಮಾನರ ಹೇಳಿಕೆಯಾಗಿದೆ. 1982ರಲ್ಲಿ ಇಲ್ಲಿ ಆರತಿ ಬೆಳಗುವಾಗ ರಾಮಭೋಲೆ ಹೆಸರಿನ ಅರ್ಚಕರ ಹತ್ಯೆ ಮಾಡಿದ್ದರು. ಆನಂತರ ಮೇರಠನಲ್ಲಿ ಗಲಭೆ ಭುಗಿಲೆದ್ದಿತ್ತು. ಆಗಿನಿಂದ ದೇವಸ್ಥಾನದ ಬಾಗಿಲು ಮುಚ್ಚಿದೆ. ದೇವಸ್ಥಾನದ ಪ್ರಕರಣ ನ್ಯಾಯಾಲಯದಲ್ಲಿ ದಾಖಲಾಗಿದೆ. ಮುಸ್ಲಿಂ ಪಕ್ಷದವರು ಈ ಬಗ್ಗೆ ನ್ಯಾಯಾಲಯಕ್ಕೆ ಹೋಗಿದ್ದರು ಆದರೆ ಅವರು ಈಗ ಇಲ್ಲ ನ್ಯಾಯಾಲಯದಲ್ಲಿ ಹಿಂದೂ ಪಕ್ಷವು ನ್ಯಾಯಾಲಯದಲ್ಲಿ ಗೆದ್ದರೂ ಹಿಂದೂ ಪಕ್ಷದ ಜನರು ಸಾವನ್ನಪ್ಪಿದ್ದಾರೆ. ಈ ಕಾರಣದಿಂದ ದೇವಸ್ಥಾನ ಮುಚ್ಚಿದ್ದು ಶಿಥಿಲಾವಸ್ಥೆಯಲ್ಲಿದೆ.