ಅಮೆರಿಕಾದಲ್ಲಿನ ಬೈಡನ್ ಸರಕಾರದ ಹೇಳಿಕೆ
ವಾಷಿಂಗ್ಟನ್ (ಅಮೆರಿಕ) – ನಾವು ಕೈಗಾರಿಕೆ, ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಸಂಬಂಧಗಳನ್ನು ಸ್ಥಾಪಿಸಿ ಅವುಗಳನ್ನು ಸಾಧ್ಯವಾದಷ್ಟು ಪ್ರಬಲ ಸ್ಥಾನಕ್ಕೆ ಕೊಂಡೊಯ್ದಿದ್ದೇವೆ. ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷತೆಯ ಕಾಲದಲ್ಲೂ ಅದು ಬಲವಾಗಿ ಉಳಿಯುತ್ತದೆ ಎಂದು ನಾವು ಆಶಿಸುತ್ತೇವೆ, ಎಂದು ನಿರ್ಗಮಿಸುತ್ತಿರುವ ಅಮೇರಿಕಾದ ಅಧ್ಯಕ್ಷ ಬೈಡೆನ್ ಅವರ ಸರಕಾರದಲ್ಲಿನ ಉಪ ವಿದೇಶಾಂಗ ಸಚಿವ ಕರ್ಟ್ ಕ್ಯಾಂಪ್ಬೆಲ್ ಅವರು ಹೇಳಿದ್ದಾರೆ.
ಸಂಪಾದಕೀಯ ನಿಲುವುಬೈಡೆನ್ ಆಡಳಿತವು ಭಾರತದೊಂದಿಗೆ ಬಲವಾದ ಸಂಬಂಧವನ್ನು ನಿರ್ಮಿಸುವ ಹೆಸರಿನಲ್ಲಿ ಭಾರತದ ಕಾಲೆಳೆಯುವ ಮತ್ತು ವಿಶ್ವಾಸಘಾತ ಮಾಡುವ ಹೆಚ್ಚಿನ ಪ್ರಯತ್ನ ಮಾಡಿದೆ. ಹೀಗೆ ಮಾಡಿದ ಮೇಲೂ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಪ್ರಯತ್ನ ಮಾಡುತ್ತಿದೆ ! |