ಬಾಂಗ್ಲಾದೇಶದ ವಿಜಯ ದಿನದಂದು ಪ್ರಧಾನಿ ಮೋದಿಯವರ ಪೋಸ್ಟ್ ಕುರಿತು ಬಾಂಗ್ಲಾದೇಶದ ಸಚಿವರೊಬ್ಬರ ಖೇದಕರ ಮತ್ತು ಕೃತಘ್ನತೆಯ ಪೋಸ್ಟ
ಢಾಕಾ (ಬಾಂಗ್ಲಾದೇಶ) – ಡಿಸೆಂಬರ್ 16 ಬಾಂಗ್ಲಾದೇಶದ ನಿರ್ಮಾಣದ ಅಂದರೆ ಭಾರತವು ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ದಿನವಾಗಿತ್ತು. ಪ್ರತಿವರ್ಷ ಈ ದಿನವನ್ನು ಭಾರತ ಮತ್ತು ಬಾಂಗ್ಲಾದೇಶ ಆಚರಿಸುತ್ತವೆ. ಈ ಸಂದರ್ಭದ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ಸೈನಿಕರ ತ್ಯಾಗವನ್ನು ಗೌರವಿಸಿದರು ಮತ್ತು ಭಾರತದ ಗೆಲುವಿಗೆ ಅವರ ಕೊಡುಗೆ ನಿರ್ಣಾಯಕ ಎಂದು ಬಣ್ಣಿಸಿದ್ದರು. ಅದಕ್ಕೆ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಕಾನೂನು ಸಚಿವ ಆಸಿಫ್ ನಜ್ರುಲ್ ಪೋಸ್ಟ್ ಮಾಡಿ, ‘ಇದು ಸುಳ್ಳಾಗಿದೆ. 1971 ರ ವಿಜಯವು ಬಾಂಗ್ಲಾದೇಶದ ವಿಜಯವಾಗಿದೆ, ಭಾರತವು ಕೇವಲ ಮಿತ್ರ ದೇಶವಾಗಿತ್ತು.’ ಎಂದು ಹೇಳಿದ್ದು, ಅವರ ಪೋಸ್ಟನೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪೋಸ್ಟನ ಸ್ಕ್ರೀನ ಶಾಟ್ ಜೋಡಿಸಿದ್ದಾರೆ.
‘ಭಾರತದಿಂದ ಬರುವ ಈ ಅಪಾಯದ ವಿರುದ್ಧದ ಹೋರಾಟವನ್ನು ನಾವು ಮುಂದುವರಿಸಬೇಕಾಗಿದೆಯಂತೆ!’
ನಜ್ರುಲ್ ಅವರಂತೆಯೇ ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಹಸ್ನತ್ ಅಬ್ದುಲ್ಲಾ ಕೂಡ ಟೀಕಿಸಿದ್ದಾರೆ. ಅವರು, ಪಾಕಿಸ್ತಾನದಿಂದ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ ಯುದ್ಧವಾಗಿತ್ತು; ಆದರೆ ‘ಈ ಯುದ್ಧ ಭಾರತದ್ದು ಮಾತ್ರವಾಗಿತ್ತು ಮತ್ತು ಅದು ಅದರ ಯಶಸ್ಸು ಆಗಿತ್ತು’ ಎಂದು ಮೋದಿ ಹೇಳಿಕೊಂಡಿದ್ದಾರೆ. ಬಾಂಗ್ಲಾದೇಶದ ಅಸ್ತಿತ್ವಕ್ಕೆ ಮೋದಿಯವರು ಸವಾಲು ಹಾಕಿದ್ದಾರೆ. ಭಾರತದ ಈ ಬೆದರಿಕೆಯ ವಿರುದ್ಧ ನಾವು ಹೋರಾಟವನ್ನು ಮುಂದುವರಿಸಬೇಕು’, ಎಂದು ಹೇಳಿದ್ದಾರೆ.
🇮🇳 “The 1971 war was our victory, India was just a friendly country then.” – Bangladesh Minister Asif Nazrul’s provocative and ungrateful remark on PM Modi’s #VijayDiwas post.
The unthankful Bangladesh should be responded in a way it understands. If India sticks to ‘Resolution… pic.twitter.com/9LjVgAm7u1
— Sanatan Prabhat (@SanatanPrabhat) December 17, 2024
ವಿಜಯ ದಿನದಂದು ಭಾರತ ವಿರೋಧಿ ಘೋಷಣೆಗಳು
ಶೇಖ್ ಹಸೀನಾ ಅವರ ಸರಕಾರದ ಪತನದ ನಂತರ, ಬಾಂಗ್ಲಾದೇಶದಲ್ಲಿ ಡಿಸೆಂಬರ್ 16 ರಂದು ಮೊದಲ ವಿಜಯ ದಿನವನ್ನು ಆಚರಿಸಲಾಯಿತು. ಈ ವೇಳೆ ಢಾಕಾದ ಬೀದಿಗಳಲ್ಲಿ ಸಂತೋಷಕ್ಕಿಂತ ಭಾರತದ ವಿರೋಧ ಹೆಚ್ಚು ಕಂಡು ಬರುತ್ತಿತ್ತು. ಭಾರತೀಯ ಸೈನಿಕರ ಸ್ಮರಣಾರ್ಥ ಬಾಂಗ್ಲಾದೇಶದಲ್ಲಿ ನಿರ್ಮಿಸಲಾದ ಅಶುಪುರ್ ಯುದ್ಧ ಸ್ಮಾರಕ ವಿಜಯ ದಿನದಂದು ನಿರ್ಜನವಾಗಿತ್ತು. ಢಾಕಾದ ಬೀದಿಗಳಲ್ಲಿ ಭಾರತ ಮತ್ತು ಪ್ರಧಾನಿ ಮೋದಿ ವಿರುದ್ಧ ಬಹಿರಂಗವಾಗಿ ಘೋಷಣೆಗಳು ಕೂಗಿದವು.
ಮಹಮ್ಮದ್ ಯೂನಸ್ ‘ಫ್ಯಾಸಿಸ್ಟ್’ (ಮೂಲಭೂತವಾದಿ) ! – ಶೇಖ್ ಹಸೀನಾ
ಬಾಂಗ್ಲಾದೇಶದ ವಿಜಯ ದಿನದ ಹಿಂದಿನ ದಿನ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ನೀಡಿದ ಹೇಳಿಕೆಯಲ್ಲಿ, ‘ಫ್ಯಾಸಿಸ್ಟ್’ ಮಹಮ್ಮದ್ ಯೂನಸ್ ಸರಕಾರವು ಜನರಿಗಾಗಿ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಈ ಸರಕಾರ ಸ್ವಾತಂತ್ರ್ಯ ವಿರೋಧಿ ಮತ್ತು ಕಟ್ಟರವಾದಿಗಳ ಪರವಾಗಿದೆ. ದೇಶೀಯ ಮತ್ತು ವಿದೇಶಿ ಷಡ್ಯಂತ್ರಗಳ ಮೂಲಕ ದೇಶವಿರೋಧಿ ಶಕ್ತಿಗಳು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಕೃತ್ಯಗಳನ್ನು ಮಾಡುವ ಮೂಲಕ ಅಧಿಕಾರವನ್ನು ವಶಪಡಿಸಿಕೊಂಡರು. ಅಧಿಕಾರ ಕಬಳಿಸಿ, ಜನಕಲ್ಯಾಣ ಕಾರ್ಯಗಳನ್ನು ಮಾಡಲು ಅಡೆತಡೆಯೊಡ್ಡುತ್ತಿದ್ದಾರೆ. ಹಣದುಬ್ಬರದಿಂದ ಜನರು ಬಳಲುತ್ತಿದ್ದಾರೆ. ಹಸಿದ ಜನರು ಕಸದ ತೊಟ್ಟಿಗಳಿಂದಲೂ ಆಹಾರ ಸಂಗ್ರಹಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಜನರಲ್ಲಿ ಆಕ್ರೋಶ ಮೂಡಿಸುವುದು ಯೂನಸ್ ಸರಕಾರದ ಉದ್ದೇಶವಾಗಿದೆ. ಈ ಸರಕಾರ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಮತ್ತು ಆತ್ಮವನ್ನು ಅಳಿಸಲು ಪ್ರಯತ್ನಿಸುತ್ತಿದೆ. ಈ ಜನರು ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದ ಭಾವನೆಗಳನ್ನು ನಾಶಮಾಡಲು ಕಟ್ಟು ಕಥೆಗಳನ್ನು ಹರಡುತ್ತಿದ್ದಾರೆ. ಹಾಗೆ ಮಾಡಿದರೆ ಅದು ಬಂಗಾಳಿಗಳ ಮಹಾನ್ ಸಾಧನೆಗೆ ಕಳಂಕ ತರುತ್ತದೆ. ಮಹಮ್ಮದ್ ಯೂನಸ್ ‘ಫ್ಯಾಸಿಸ್ಟ್’ ಸರಕಾರವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಇಂತಹ ಕೃತಘ್ನ ಬಾಂಗ್ಲಾದೇಶಕ್ಕೆ ತಕ್ಕ ಪಾಠ ಕಲಿಸುವುದು ಈಗ ಅಗತ್ಯವಾಗಿದೆ. ಒಂದು ವೇಳೆ ಭಾರತ ಇಷ್ಟಾದರೂ ಸುಮ್ಮನಿದ್ದರೆ, ಅದು ಗಾಂಧಿಗಿರಿಯಾಗುವುದು ಮತ್ತು ಅದರ ಪರಿಣಾಮವನ್ನು ಭವಿಷ್ಯದಲ್ಲಿ ಭಾರತವೇ ಅನುಭವಿಸಬೇಕಾಗುತ್ತದೆ ! |