ಮನೆಗೆ ಆಹಾರ ತರಿಸುವ ಸೌಲಭ್ಯ ಎಂದರೆ ಸಮಾಜಕ್ಕೆ ತಟ್ಟಿದ ವ್ಯಸನ !

‘ಪದೇ ಪದೇ ಮಾಡುವ ಕೃತಿಗಳಿಂದ ಹಾಗೂ ಅನುಭವಗಳಿಂದ ಅಭ್ಯಾಸಗಳು ಉತ್ಪನ್ನವಾಗುತ್ತವೆ. ಈ ಅಭ್ಯಾಸ ವಿಶಿಷ್ಟ ಸಂಕೇತಗಳನ್ನು ನಿರ್ಮಾಣ ಮಾಡಿ ಆ ವಿಷಯಗಳಿಗೆ ಪ್ರೋತ್ಸಾಹ ನೀಡುವಂತೆ ಮಾಡುತ್ತವೆ ಹಾಗೂ ಅದರಿಂದ ಸ್ವಲ್ಪ ಲಾಭ ಅಥವಾ ಸೌಲಭ್ಯವಾಗುತ್ತಿದ್ದರೆ, ಆ ಅಭ್ಯಾಸ ನಿರ್ಮಾಣವಾಗಲು ಇನ್ನೂ ಸ್ಪೂರ್ತಿ ಸಿಗುತ್ತದೆ. ಸಮಯದ ಜೊತೆಗೆ ವಿಶಿಷ್ಟ ಸಂಕೇತ, ನಿಯಮಿತ ವ್ಯವಹಾರ ಮತ್ತು ಆಗುವ ಲಾಭ ಅಥವಾ ಸೌಲಭ್ಯಗಳಿಂದ ನಮ್ಮ ನಿತ್ಯ ಜೀವನದಲ್ಲಿ ಆ ಅಭ್ಯಾಸ ಪ್ರಬಲವಾಗುತ್ತದೆ. ‘ಝೊಮೇಟೋ’ ಕಂಪನಿ ಮಾನವನಲ್ಲಿ ನಿರ್ಮಾಣವಾಗಿರುವ ಇಂತಹ ಅಭ್ಯಾಸಗಳ ಲಾಭ ಪಡೆದು ಅಂತಹ ಗ್ರಾಹಕರನ್ನು ಗಮನಿಸಿ ಸೂಚನೆಗಳನ್ನು ಕಳುಹಿಸುತ್ತದೆ. (‘ಝೊಮೇಟೋ’ ಇದು ಗ್ರಾಹಕರಿಗೆ ಅವರು ಬೇಡಿಕೆ ಮಾಡಿರುವ ಉಪಹಾರಗೃಹದಿಂದ ಆಹಾರ ಪದಾರ್ಥಗಳನ್ನು ಮನೆಗೆ ತಲಪಿಸುವ ಸಂಸ್ಥೆಯಾಗಿದೆ.) ಗ್ರಾಹಕರನ್ನು ಅದರಲ್ಲಿಯೆ ಸಿಲುಕಿಸಿ ಅವರನ್ನು ಮಧ್ಯದಲ್ಲಿ ಇಟ್ಟು ಸೇವೆಯನ್ನು ಕೊಡುವುದು ಸೇವೆ ಮಾಡುವುದರ ಮೂಲಕ ಪಾರಂಪರಿಕ ಆಹಾರ ಪದಾರ್ಥಗಳ ಮಾರಾಟ ಬೆಲೆಗಿಂತ ಶೇ. ೨೦೦ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತದೆ. ಅದಕ್ಕಾಗಿ ವಿ-ಅಂಚೆಯ ಮೂಲಕ ಪ್ರಚಾರ ಮಾಡುವುದು, ಸಾಮಾಜಿಕ ಮಾಧ್ಯಮಗಳನ್ನು ಉಪಯೋಗಿಸುವುದು ಹೀಗೆ ಮಾರಾಟ ಹೆಚ್ಚಿಸುವ ಕೌಶಲ್ಯದಿಂದ ಅದು ಈ ವ್ಯವಸಾಯದಲ್ಲಿ ದೊಡ್ಡ ಹೆಸರನ್ನು ಗಳಿಸಿದೆ. ಆದ್ದರಿಂದ ಗ್ರಾಹಕರಲ್ಲಿ ಬೇಡಿಕೆ ನೀಡಿ ಪದಾರ್ಥಗಳನ್ನು ತರಿಸಿಕೊಳ್ಳುವ ಅಭ್ಯಾಸಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಇದು ಅಪ್ರತ್ಯಕ್ಷವಾಗಿ ವ್ಯಸನವೇ ನಿರ್ಮಾಣವಾಗಿದೆ.

ಶ್ರೀ. ನಾರಾಯಣ ನಾಡಕರ್ಣಿ

ಮುಂಬಯಿಯ ಒಬ್ಬ ವ್ಯಕ್ತಿ ಒಂದು ಸ್ಥಳೀಯ ಉಪಹಾರಗೃಹದ ಬಿಲ್‌ ತೋರಿಸಿ ಅವರ ಆಹಾರ ಪದಾರ್ಥಗಳ ಬೆಲೆಯನ್ನು ಝೊಮೇಟೋದ ಬೆಲೆಯೊಂದಿಗೆ ತುಲನೆ ಮಾಡಿದನು. ಅದರಲ್ಲಿ ತಿಳಿಯಿತೇನೆಂದರೆ, ಉಪಾಹಾರಗೃಹದಲ್ಲಿ ೪೦ ರೂಪಾಯಿಗೆ ಸಿಗುವ ಇಡ್ಲಿ ಝೊಮೇಟೋ ೧೨೦ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ. ಅದೇ ರೀತಿ ಉಪಹಾರಗೃಹದಲ್ಲಿ ೪೦ ರೂಪಾಯಿ ಬೆಲೆಯಿರುವ ಸಾಮಾನ್ಯ ಉಪ್ಪಿಟ್ಟು ಝೊಮೇಟೋದಲ್ಲಿ ೧೨೦ ರೂಪಾಯಿಗೆ ಮಾರಾಟ ಮಾಡಲಾಗುತ್ತದೆ, ಅಂದರೆ ಕೇವಲ ನಮ್ಮ ಸೌಲಭ್ಯಕ್ಕಾಗಿ ಝೊಮೇಟೋ ತಲುಪಿಸುತ್ತಿರುವ ಪದಾರ್ಥಗಳ ಬೆಲೆ ಸುಮಾರು ಶೇ. ೧೫೦ ರಷ್ಟು ಹೆಚ್ಚಾಗುತ್ತದೆ, ಇದು ಆಶ್ಚರ್ಯಜನಕವಾಗಿದೆ. ಝೊಮೇಟೋದಿಂದ ಗ್ರಾಹಕರಿಗೆ ಸೌಲಭ್ಯ ಸಿಗುತ್ತದೆ; ಆದರೆ ಅದಕ್ಕಾಗಿ ಇಷ್ಟು ದೊಡ್ಡ ಪ್ರಮಾಣದ ಬೆಲೆ ವಸೂಲಿ ಮಾಡುವುದು ಯೋಗ್ಯವಲ್ಲ. ಇದರ ಮೇಲೆ ಯಾರದ್ದೂ ಆಂಕುಶವಿಲ್ಲವೇ ? ಇದರ ಮೇಲೆ ಸರಕಾರ ಏನಾದರೂ ಕ್ರಮ ತೆಗೆದುಕೊಳ್ಳುವುದೇ ಆಥವಾ ಸಾಮಾನ್ಯ ಗ್ರಾಹಕರ ಲೂಟಿ ಹೀಗೆಯೆ ಮುಂದುವರಿಯುವುದೋ ? ಇದು ಪ್ರಶ್ನೆ.’

– ಶ್ರೀ. ನಾರಾಯಣ ನಾಡಕರ್ಣಿ, ಫೋಂಡಾ ಗೋವಾ.