‘ಪಠಾಣ್’ ಚಿತ್ರದ ‘ಬೇಶರಂ ರಂಗ್’ ನನ್ನ ಹಳೆಯ ಹಾಡಿನಂತೆ !

  • ಪಾಕಿಸ್ತಾನಿ ಗಾಯಕ ಸಜ್ಜಾದ್ ಅಲಿಯ ಪರೋಕ್ಷ ಹೇಳಿಕೆ

  • ಹಾಡನ್ನು ಕದಿಯಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ

ಇಸ್ಲಾಮಾಬಾದ್ (ಪಾಕಿಸ್ತಾನ) – ನಟ ಶಾರುಖ್ ಖಾನ್ ಅವರ ಮುಂಬರುವ ’ಪಠಾಣ್’ ಚಲನಚಿತ್ರದಲ್ಲಿ ಕೇಸರಿ ಬಣ್ಣವನ್ನು ಅವಮಾನ ಮಾಡುವ ‘ಬೇಶರಂ ರಂಗ್’ ಈ ಹಾಡನ್ನು ಈಗ ಪಾಕಿಸ್ತಾನಿ ಗಾಯಕ ಸಜ್ಜಾದ ಅಲಿಯು ಪರೋಕ್ಷವಾಗಿ ಟೀಕಿಸಿದ್ದಾರೆ.

೧. ಸಜ್ಜದ್ ಅಲಿಯು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅಲಿ, ನಾನು ಮುಂಬರುವ ಚಿತ್ರವೊಂದರ ಹಾಡನ್ನು ಕೇಳಿದೆ. ಅದನ್ನು ಕೇಳಿ ನನಗೆ ನನ್ನ ಕೆಲವು ವರ್ಷಗಳ ಹಿಂದೆ ನಾನು ಬರೆದ ಒಂದು ಹಾಡು ನೆನಪಾಯಿತು; ಅಲಿಯು ಅದರಲ್ಲಿ ಹಾಡಿನ ಉಲ್ಲೇಖ ಮಾಡಲಿಲ್ಲ; ಆದರೆ ಈ ಹಾಡನ್ನು ಸಾಮಾಜಿಕ ಮಾಧ್ಯಮದಲ್ಲಿ ’ಬೇಶರಂ ರಂಗ್’ ಎಂದು ಹೇಳಲಾಗುತ್ತದೆ.

೨. ಓರ್ವ ವ್ಯಕ್ತಿಯು, ’ಬೇಶರಂ ರಂಗ್’ ಈ ಹಾಡು ಸಜ್ಜಾದ್ ಅಲಿ ಅವರ ಸಂಗೀತ ಸಂಯೋಜನೆಯನ್ನು ಆಧರಿಸಿದೆ. ಭಾರತದ ಜನರು ಪಾಕಿಸ್ತಾನದ ಹಾಡನ್ನು ಕದಿಯುತ್ತಾರೆ ಮತ್ತು ಅವರಿಗೆ ಅದರ ಮಹತ್ವವೂ ಸಹ ನೀಡುವುದಿಲ್ಲ ಎಂದು ಬರೆದಿದ್ದಾರೆ.