ಶಸ್ತ್ರಾಸ್ತ್ರಗಳು ಮತ್ತು ೩೦೦ ಕೋಟಿ ರೂಪಾಯಿಯ ಮಾದಕ ವಸ್ತುಗಳ ಸಾಗಾಣಿಕೆ ಮಾಡುವ ಪಾಕಿಸ್ತಾನದ ನೌಕೆ ವಶಕ್ಕೆ !

ಭಾರತೀಯ ಕರಾವಳಿ ರಕ್ಷಣಾ ಪಡೆಯ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ

ಕರ್ಣಾವತಿ (ಗುಜರಾತ) – ಭಾರತೀಯ ಕರಾವಳಿ ರಕ್ಷಣಾ ಪಡೆಯಿಂದ ಗುಜರಾತ್ ನ ಸಮುದ್ರದಲ್ಲಿ ನಡೆಸಲಾದ ದೊಡ್ಡ ಕಾರ್ಯಾಚರಣೆಗೆ ಯಶಸ್ಸು ದೊರೆತಿದೆ. ಗುಜರಾತ ಉಗ್ರ ನಿಗ್ರಹ ದಳದ ಸಹಾಯದಿಂದ ನಡೆಸಲಾದ ಒಂದು ಜಂಟಿ ಕಾರ್ಯಾಚರಣೆಯಲ್ಲಿ ಭಾರತೀಯ ಕರಾವಳಿ ರಕ್ಷಣಾ ಪಡೆಯು ಶಸ್ತ್ರಾಸ್ತ್ರಗಳು ಮತ್ತು ೩೦೦ ಕೋಟಿ ರೂಪಾಯಿಯ ೪೦ ಕೇಜಿ ಮಾದಕ ವಸ್ತುಗಳು ಸಾಗಾಣಿಕೆ ಮಾಡಲು ಬಂದಿದ್ದ ಪಾಕಿಸ್ತಾನದ ನೌಕೆಯನ್ನು ಗುಜರಾತ್ ನ ತೀರದಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ೧೦ ಪಾಕಿಸ್ತಾನಿ ನುಸಳುಕೋರರನ್ನು ಬಂಧಿಸಲಾಗಿದೆ. ಗುಜರಾತ್ ನ ಉಗ್ರ ನಿಗ್ರಹ ದಳಕ್ಕೆ ಈ ಕುರಿತು ಗೌಪ್ಯವಾದ ಮಾಹಿತಿ ಸಿಕ್ಕಿತ್ತು. ಪಾಕಿಸ್ತಾನಿ ನುಸುಳುಕೋರರು ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳು ತೆಗೆದುಕೊಂಡು ಸಮುದ್ರ ತೀರದಿಂದ ಗುಜರಾತ್ ನ ಸಮುದ್ರದಲ್ಲಿ ಪ್ರವೇಶಿಸಲು ಪ್ರಯತ್ನಿಸಿದರು. ಭಾರತದ ಅಂತರರಾಷ್ಟ್ರೀಯ ಸಮುದ್ರ ಗಡಿಯಲ್ಲಿ ಕಾಯುತ್ತಿದ್ದ ಭಾರತೀಯ ಕರಾವಳಿ ರಕ್ಷಣಾ ಪಡೆಯ ಸೈನಿಕರು ಪಾಕಿಸ್ತಾನದ `ಅಲ್ ಸೊಹೇಲಿ’ ಎಂಬ ನೌಕೆಯು ಭಾರತೀಯ ಸಮುದ್ರ ಗಡಿಯ ಓಖಾದಿಂದ ವಶಕ್ಕೆ ಪಡೆದಿದ್ದಾರೆ. ನಂತರ ಕರಾವಳಿ ರಕ್ಷಣಾ ಪಡೆಯ ಸೈನಿಕರು ನೌಕೆಯಲ್ಲಿನ ಎಲ್ಲಾ ನುಸುಕೋರರನ್ನು ಓಖಾ ಬಂದರರಿಗೆ ಕರೆತಂದರು. ಕಳೆದ ೧೮ ತಿಂಗಳಲ್ಲಿ ಗುಜರಾತ ಉಗ್ರ ನಿಗ್ರಹ ದಳ ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆಯು ಜಂಟಿಯಾಗಿ ನಡೆಸಿರುವ ಇದು ೭ ನೇ ಕಾರ್ಯಾಚರಣೆ ಆಗಿದೆ. ಸಮುದ್ರ ತೀರದಲ್ಲಿ ಇಷ್ಟು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮಾದಕ ವಸ್ತುಗಳು ವಶಪಡಿಸಿಕೊಂಡಿರುವುದು ಇದೇ ಮೊದಲ ಬಾರಿಯಾಗಿದೆ.

ಭಾರತದಲ್ಲಿ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮಾಡುವುದಕ್ಕಾಗಿ ಪಾಕಿಸ್ತಾನ ಬೇರೆ ಬೇರೆ ಪರ್ಯಾಯಗಳನ್ನು ಉಪಯೋಗಿಸುತ್ತದೆ. ಆದ್ದರಿಂದ ಭಾರತದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ ಮಾಡುವ ಜಾಲ ನಾಶ ಮಾಡುವುದಕ್ಕಾಗಿ ಪಾಕಿಸ್ತಾನದ ನಾಶ ಮಾಡುವುದು ಅವಶ್ಯಕ ! – ಸಂಪಾದಕರು