ತೀರ್ಥರಾಜ್ ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಕಲ್ಪ ಪೂಜೆ ಮತ್ತು ಪ್ರಾರ್ಥನೆ ! ಸನಾತನ ಸಂಸ್ಥೆಯ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಅವರ ಮಹಾಕುಂಭ ಯಾತ್ರೆ!

ಸನಾತನ ಸಂಸ್ಥೆಯ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಅವರ ಮಹಾಕುಂಭ ಯಾತ್ರೆ!

ತ್ರಿವೇಣಿ ಸಂಗಮದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಂಕಲ್ಪ ಪೂಜೆಯನ್ನು ಮಾಡಿದ ನಂತರ, ಎಡದಿಂದ, ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್

ಪ್ರಯಾಗರಾಜ್, ಜನವರಿ 21 (ಸುದ್ದಿ) – ‘ವಿಶ್ವ ಕಲ್ಯಾಣಕ್ಕಾಗಿ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು’ ಎಂಬ ಧರ್ಮ ಸಂಸ್ಥಾಪನೆಯ ಉದ್ದೇಶದಿಂದ, ತೀರ್ಥರಾಜ ಪ್ರಯಾಗರಾಜ್‌ನಲ್ಲಿರುವ ಮಹಾಕುಂಭ ಮೇಳದಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಡಾ. ಸಚ್ಚಿದಾನಂದ ಪರಬ್ರಹ್ಮ ಜಯಂತ್ ಆಠವಲೆ ಇವರ ವತಿಯಿಂದ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಪವಿತ್ರ ಇವರ ಶುಭ ಹಸ್ತಗಳಿಂದ ಸಂಕಲ್ಪ ಪೂಜೆ ಮತ್ತು ಪ್ರಾರ್ಥನೆಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸನಾತನದ ಸದ್ಗುರು ಡಾ. ಮುಕುಲ್ ಗಾಡಗಿಳ್, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ, ಸಮಿತಿಯ ಧರ್ಮ ಪ್ರಚಾರಕ ಸದ್ಗುರು ನೀಲೇಶ್ ಸಿಂಗಬಾಳ್, ಸನಾತನದ ಧರ್ಮ ಪ್ರಚಾರಕ ಪೂ. ಪ್ರದೀಪ ಖೇಮಕಾ, ಅವರ ಪತ್ನಿ ಪೂ. (ಸೌ.) ಸುನೀತಾ ಖೇಮಕಾ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ದೇಹಧಾರಿ ಅಸ್ತಿತ್ವ ಇರುವುದು ಆವಶ್ಯಕವಾಗಿದೆ ಹಾಗಾಗಿ ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಲಭಿಸಲಿ ಎಂದು ಪ್ರಾರ್ಥಿಸಲಾಯಿತು.

ಪ್ರಾಚೀನ ಅಕ್ಷಯವಟದಕ ಭಾವಪೂರ್ಣ ದರ್ಶನ !

ಇದಾದ ನಂತರ, ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ್ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ್ ಅವರು ಇಲ್ಲಿ ಪ್ರಾಚೀನ ಅಕ್ಷಯವಟದ ಭವಪೂರ್ಣ ದರ್ಶನ ಪಡೆದರು.