Jagadguru Paramhans Maharaj Statement : ೮ ಅಯೋಧ್ಯೆ ಶಿಬಿರದ ಪ್ರಧಾನ ಅರ್ಚಕ ಜಗದ್ಗುರು ಪರಮಹಂಸ ಮಹಾರಾಜರಿಂದ ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ

ಸರಕಾರವು ಔರಂಗಜೇಬನ ಗೋರಿಯನ್ನು ಕೆಡವದಿದ್ದರೆ, ನಾವು ಬಾಬ್ರಿ ಮಸೀದಿಯನ್ನು ಕೆಡವಿದಂತೆ ಈ ಗೋರಿಯನ್ನು ಕೆಡವುತ್ತೇವೆ !

ಅಯೋಧ್ಯೆ (ಉತ್ತರ ಪ್ರದೇಶ) – ಔರಂಗಜೇಬನ ಗೋರಿಯನ್ನು ಸರಕಾರವು ತೆಗೆದುಹಾಕಬೇಕು, ಇಲ್ಲದಿದ್ದರೆ ಯಾವ ರೀತಿ ಬಾಬ್ರಿ ಮಸೀದಿಯನ್ನು ಕೆಡವಲಾಯಿತೋ ಅದೇ ರೀತಿ ಔರಂಗಜೇಬನ ಗೋರಿಯನ್ನು ಕೆಡವಲಾಗುವುದು ಎಂದು ಅಯೋಧ್ಯೆ ಶಿಬಿರದ ಪ್ರಧಾನ ಅರ್ಚಕ ಜಗದ್ಗುರು ಪರಮಹಂಸ ಮಹಾರಾಜ್ ಮಹಾರಾಷ್ಟ್ರ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪರಮಹಂಸ ಮಹಾರಾಜರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ, ಮಹಾರಾಷ್ಟ್ರಕ್ಕೆ ಔರಂಗಜೇಬನ ಗೋರಿಯೇ ಎಲ್ಲಕ್ಕಿಂತ ದೊಡ್ಡ ಕಳಂಕವಾಗಿದೆ. ಔರಂಗಜೇಬನ ಗೋರಿಯನ್ನು ತೆಗೆದುಹಾಕುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಲ್ಲಿ ಮನವಿ ಮಾಡಲಾಗಿದೆ. ಒಂದು ವೇಳೆ ಸರಕಾರವು ಗೋರಿ ತೆರವು ಮಾಡುವುದಾಗಿ ಭರವಸೆ ನೀಡಿದರೆ ಏನೂ ಸಮಸ್ಯೆ ಇಲ್ಲ. ಇಲ್ಲದಿದ್ದರೆ ಗೋರಿ ತೆಗೆಯಲು ಮೆರವಣಿಗೆ ಮಾಡುತ್ತೇವೆ. ಕೊಟಿಗಟ್ಟಲೆ ಸಂತರು ಪ್ರಯಾಗರಾಜ್‌ಗೆ ಬಂದಿದ್ದಾರೆ. ಕುಂಭ ಮುಗಿಯುತ್ತಿದ್ದಂತೆಯೇ ಸಂತರ ಸಮುದಾಯ ಮಹಾರಾಷ್ಟ್ರಕ್ಕೆ ತೆರಳಲಿದೆ. ಇದಕ್ಕಾಗಿ ನಾವು ಎಲ್ಲಾ ಹಿಂದೂ ಸಂಘಟನೆಗಳೊಂದಿಗೆ ಮಾತನಾಡಲು ಯೋಜನೆ ರೂಪಿಸಿದ್ದೇವೆ. ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಜನರಿಗೆ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರಕಾರ ರಚನೆ ಮಾಡುವಂತೆ ಮನವಿ ಮಾಡಿದ್ದೆವು. ಬಿಜೆಪಿ- ಶಿವಸೇನೆ ಮೈತ್ತಿಯ ಸರಕಾರ ಸ್ಥಾಪನೆ ಆಗಬೇಕು, ಎಂದು ಮಹಾರಾಷ್ಟ್ರದಲ್ಲಿ ಸನಾತನ ಪ್ರೇಮಿಗಳು ಬಿಜೆಪಿ ಸರಕಾರ ರಚಿಸಿದರು. ಹಾಗಾಗಿ ಇಲ್ಲಿಂದ ಔರಂಗಜೇಬನ ಗೋರಿಯನ್ನು ತೆಗೆಯುವುದು ಅವಶ್ಯಕವಾಗಿದೆ ಎಂದು ಹೇಳಿದರು.