ಪ್ರಯಾಗರಾಜ್ ಕುಂಭಮೇಳ 2025
ಕುಂಭಮೇಳದಲ್ಲಿ ಮೊಳಗಿತು ‘ಹಿಂದೂ ರಾಷ್ಟ್ರ’ದ ಜಯಘೋಷ !

ಪ್ರಯಾಗರಾಜ – ಜನವರಿ 22, 2025 ಕ್ಕೆ ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲನ ಪ್ರಾಣಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರ್ಣವಾಯಿತು. ಈ ಶುಭ ಸಂದರ್ಭದಲ್ಲಿ, ಹಿಂದೂ ಜನಜಾಗೃತಿ ಸಮಿತಿಯು ಕುಂಭ ಕ್ಷೇತ್ರದಲ್ಲಿ ಭವ್ಯವಾದ ‘ಹಿಂದೂ ಏಕತಾ ಪಾದಯಾತ್ರೆ’ಯನ್ನು ಆಯೋಜಿಸಿತ್ತು.
🚩 @HinduJagrutiOrg organised a grand ‘Hindu Rashtra Padayatra’ at Prayagraj Mahakumbh, marking the completion of one year of the consecration of Shri Ram Lalla at the grand Shriram Mandir in Ayodhya. 🛕
The key points of this event include:
-Demand for Hindu Rashtra: The march… pic.twitter.com/l5KRvdWXM1— Sanatan Prabhat (@SanatanPrabhat) January 22, 2025
ಮಹಾಕುಂಭ ಕ್ಷೇತ್ರದಿಂದ ವಿಶ್ವಕಲ್ಯಾಣಕ್ಕಾಗಿ ರಾಮರಾಜ್ಯ, ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ವನಿಯನ್ನು ಎತ್ತಲು ಈ ಪಾದಯಾತ್ರೆಯ ಮೂಲಕ ಸಂದೇಶ ನೀಡಲಾಯಿತು.

ಈ ಪಾದಯಾತ್ರೆಯಲ್ಲಿ, ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರೇರಣಾಸ್ಥಾನ ಮತ್ತು ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀ ಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗೀಳ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಮತ್ತು ಈಶಾನ್ಯ ಭಾರತದ ಹಿಂದೂ ಜನಜಾಗೃತಿ ಸಮಿತಿಯ ಮಾರ್ಗದರ್ಶಕರಾದ ಸದ್ಗುರು ನೀಲೇಶ ಸಿಂಗಬಾಳ ಅವರ ವಂದನೀಯ ಉಪಸ್ಥಿತಿ ಇತ್ತು. ಅಲ್ಲದೆ, ಆಧ್ಯಾತ್ಮಿಕ ಸಂಸ್ಥೆಗಳು, ಹಿಂದೂ ಸಂಘಟನೆಗಳು, ಅಲಹಾಬಾದ್ ಹೈಕೋರ್ಟ್‌ನ ವಕೀಲರು, ಹಿಂದುತ್ವನಿಷ್ಠರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಪಾದಯಾತ್ರೆ ಪ್ರಯಾಗರಾಜ್ ಕುಂಭ ಕ್ಷೇತ್ರದ ಸೆಕ್ಟರ್ 19 ರ ಮುಕ್ತಿ-ಮೋರಿ ಮಾರ್ಗ ಚೌಕದಿಂದ ಪ್ರಾರಂಭವಾಯಿತು. ಅಲ್ಲಿಂದ, ಸಂಗಮ ಲೋವರ್, ಕಾಲಿ ರಸ್ತೆ ಮತ್ತು ನಂತರ ಪುನಃ ಮೋರಿ ಮುಕ್ತಿ ರಸ್ತೆಯ ಮೂಲಕ ಸೆಕ್ಟರ್ 19 (ಕುಂಭ ಕ್ಷೇತ್ರ) ಗೆ ಬಂದು ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ಶ್ರೀ. ಸುನೀಲ ಘನವಟ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ ಸಮನ್ವಯಕರಾದ ಶ್ರೀ. ವಿಶ್ವನಾಥ ಕುಲಕರ್ಣಿ ಭಾಗವಹಿಸಿದ್ದರು.
ಭಗವಾಮಯವಾದ ಕುಂಭ ಕ್ಷೇತ್ರ : ಪುಷ್ಪಾಲಂಕೃತ ವಾಹನದಲ್ಲಿ ಹಿಂದೂ ರಾಷ್ಟ್ರದ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಭಾವಚಿತ್ರ ಇರಿಸಲಾಗಿತ್ತು. ಪಾದಯಾತ್ರೆಯಲ್ಲಿ, ಸಂತರು, ಮಹಂತರು, ಹಿಂದುತ್ವನಿಷ್ಠರು ಮತ್ತು ಧರ್ಮಪ್ರೇಮಿಗಳು ಭಗವಾ ಧರಿಸಿ ಕೈಯಲ್ಲಿ ಧ್ವಜಗಳನ್ನು ಹಿಡಿದುಕೊಂಡಿದ್ದರು. ಇದರಿಂದಾಗಿ ಕುಂಭ ಕ್ಷೇತ್ರದ ಇಡೀ ಪ್ರದೇಶ ಕೇಸರಿಮಯವಾಗಿತ್ತು. ಈ ಸಂದರ್ಭದಲ್ಲಿ, ‘ಜಯ ಶ್ರೀ ರಾಮ್, ಹಿಂದೂ ರಾಷ್ಟ್ರಕ್ಕೆ ವಿಜಯವಾಗಲಿ’, ‘ಲಾನಾ ಹೋಗಾ, ಲಾನಾ ಹೋಗಾ, ಹಿಂದೂ ರಾಷ್ಟ್ರ ಲಾನಾಹೋಗಾ’, ‘ಜೋ ಹಿಂದೂ ಹಿತ್ ಕೀ ಬಾತ್ ಕರೆಗಾ ವಹೀ ದೇಶಪರ ರಾಜ್ ಕರೆಗಾ’, ‘ಹರ್ ಹರ್ ಮಹಾದೇವ, ಗಂಗಾ ಮಾತಾ ಕಿ ಜಯ ಹೋ’, ಎಂಬ ಘೋಷಣೆಯಿಂದ ಕುಂಭ ಕ್ಷೇತ್ರವು ಝೇಂಕರಿಸಿತು.
ಈ ಸಂದರ್ಭದಲ್ಲಿ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಇವರು, ಹಿಂದೂ ಧರ್ಮವು ‘ವಸುಧೈವ ಕುಟುಂಬಕಂ’ ಎಂದು ಬೋಧಿಸುತ್ತದೆ. ಅಂತಹ ಧರ್ಮವು ಸಂವಿಧಾನದ ಮೂಲಕ ಅಧಿಕೃತ ರಕ್ಷಣೆ ಪಡೆಯಬೇಕಾದರೆ, ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅವಶ್ಯಕವಾಗಿದೆ. ವಿಶ್ವಕಲ್ಯಾಣಕ್ಕಾಗಿ ಕಾರ್ಯ ಮಾಡುವ ಹಿಂದೂ ಸಂಸ್ಕೃತಿಯನ್ನು ಜೀವಂತವಾಗಿಡಲು ಈ ಬೇಡಿಕೆಯಾಗಿದೆ. ಇಡೀ ಜಗತ್ತು ಮಹಾಕುಂಭ ಕ್ಷೇತ್ರದತ್ತ ಗಮನ ಹರಿಸಿದೆ. ಆದ್ದರಿಂದ, ಈ ಪಾದಯಾತ್ರೆಯ ಮೂಲಕ, ಪ್ರಯಾಗರಾಜ್ ನ ಕುಂಭಮೇಳದಲ್ಲಿ ಹಿಂದೂ ಸಂತರು, ಮಹಂತರು ಮತ್ತು ದೇಶ-ವಿದೇಶಗಳಲ್ಲಿರುವ ಹಿಂದೂ ಸಮಾಜದ ಮನಗಳಲ್ಲಿನ ಹಿಂದೂ ರಾಷ್ಟ್ರದ ಬೇಡಿಕೆಯನ್ನು ನಾವು ಸರಕಾರಕ್ಕೆ ಮುಟ್ಟಿಸಲು ಪ್ರಯತ್ನಿಸುತ್ತಿದ್ದೇವೆ. ಸಂತರ ಸಾನ್ನಿಧ್ಯದಲ್ಲಿ ಮಾಡಲಾದ ಹಿಂದೂ ರಾಷ್ಟ್ರದ ಬೇಡಿಕೆ ಶೀಘ್ರದಲ್ಲೇ ಈಡೇರುತ್ತದೆ ಎಂದು ನಮ್ಮ ಶ್ರದ್ಧೆಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ, ‘ವಿಶ್ವ ಕಲ್ಯಾಣಕ್ಕಾಗಿ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು’, ಇದಕ್ಕಾಗಿ ಪಾದಯಾತ್ರೆಯ ಕೊನೆಯಲ್ಲಿ ಕುಂಭದಲ್ಲಿ ದೇವರು ಮತ್ತು ಋಷಿಗಳ ಚರಣಗಳಿಗೆ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.