ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರಿಂದ ಅಖಾಡ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಂತ ರವೀಂದ್ರ ಪುರಿಜಿ ಅವರ ಭೇಟಿ !

ಪ್ರಯಾಗರಾಜ್ ಕುಂಭಮೇಳ 2025

ಸನಾತನ ಸಂಸ್ಥೆಯ ಸಂತ ಪೂ. ಪ್ರದೀಪ ಖೇಮಕಾ ಅವರು ಶ್ರೀ ಮಹಂತ ರವೀಂದ್ರ ಪುರಿಜಿ ಅವರಿಗೆ ಶಾಲು, ಗ್ರಂಥ, ಪುಷ್ಪಹಾರ ಹಾಕಿ ಗೌರವಿಸಿದರು

ಪ್ರಯಾಗರಾಜ್ (ಉತ್ತರ ಪ್ರದೇಶ), ಜನವರಿ 22 (ಸುದ್ದಿ.) – ಸನಾತನ ಸಂಸ್ಥೆಯ ಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀ ಸತ್‌ಶಕ್ತಿ (ಸೌ.) ಬಿಂದಾ ನಿಲೇಶ್ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗಿಳ ಅವರು ಜನವರಿ 22 ರಂದು ಅಖಿಲ ಭಾರತ ಅಖಾಡಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಾಂತ್ ರವೀಂದ್ರ ಪುರಿಜಿ ಅವರನ್ನು ಭೇಟಿಯಾದರು. ಶ್ರೀ ಮಹಂತ ರವೀಂದ್ರ ಪುರಿಜಿ ಅವರು ನಿರಂಜನಿ ಅಖಾಡಾದ ಅಧ್ಯಕ್ಷರೂ ಆಗಿದ್ದಾರೆ.

ಅಖಾಡ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಹಂತ ರವೀಂದ್ರ ಪುರಿಜಿ ಅವರಿಗೆ ಸನಾತನ ಸಂಸ್ಥೆಯ ಬೆಳ್ಳಿ ಮಹೋತ್ಸವದ ಸ್ಮತಿಚಿಹ್ನೆಯನ್ನು ನೀಡುತ್ತಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

ಈ ಸಂದರ್ಭದಲ್ಲಿ, ಸನಾತನ ಸಂಸ್ಥೆಯ ಸಂತ ಪೂ. ಪ್ರದೀಪ ಖೇಮಕಾ ಅವರು ಶ್ರೀ ಮಹಂತ ರವೀಂದ್ರ ಪುರಿಜಿ ಅವರಿಗೆ ಶಾಲು, ಗ್ರಂಥ, ಪುಷ್ಪಹಾರ ಮತ್ತು ಉಡುಗೊರೆಗಳನ್ನು ನೀಡಿ ಗೌರವಿಸಿದರೇ ಶ್ರೀ ಮಹಂತ ರವೀಂದ್ರ ಪುರಿಜಿ ಅವರು ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರಿಗೆ ಪ್ರಸಾದವಾಗಿ ವಸ್ತ್ರಗಳನ್ನು ಹಾಗೂ ಶ್ರೀ ದತ್ತಾತ್ರೇಯರ ವಿಗ್ರಹದ ಛಾಯಾಚಿತ್ರದೊಂದಿಗೆ ಅವರಿಗೆ ಸನ್ಮಾನ ಮಾಡಿದರು.

ಅಲ್ಲದೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರು ಶ್ರೀ ಮಹಂತ ರವೀಂದ್ರ ಪುರಿಜಿ ಅವರಿಗೆ ಸನಾತನ ಸಂಸ್ಥೆಯ ೨೫ ವರ್ಷ ಪೂರ್ಣವಾದ ನಿಮಿತ್ತದಿಂದ ಸನಾತನ ಸಂಸ್ಥೆಯ ಬೆಳ್ಳಿ ಮಹೋತ್ಸವದ ಸ್ಮತಿಚಿಹ್ನೆಯನ್ನು ನೀಡಿದರು. ಶ್ರೀ ಮಹಂತ ರವೀಂದ್ರ ಪುರಿಜಿ ಅವರು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಇವರಿಗೆ ಪ್ರಸಾದರೂಪದಲ್ಲಿ ವಸ್ತ್ರಗಳನ್ನು ನೀಡಿ ಹಾಗೂ ಶ್ರೀ ದತ್ತಾತ್ರೇಯ ಮತ್ತು ಮಾನಸದೇವಿಯ ಮೂರ್ತಿಯ ಒಟ್ಟಿಗೆ ಇರುವ ಚಿತ್ರವನ್ನು ನೀಡಿದರು.

ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸರು ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಅವರನ್ನು ಪರಿಚಯಿಸುವಾಗ, ‘ಇವರು ಸನಾತನ ಸಂಸ್ಥೆಯ ಎಲ್ಲಾ ಆಶ್ರಮಗಳ ಸಾಧಕರಿಗೆ ಮಾರ್ಗದರ್ಶನ ಮಾಡುತ್ತಾರೆ’, ಎಂದು ಹೇಳಿದರು ಆಗ ಶ್ರೀ ಮಹಂತ ರವೀಂದ್ರ ಪುರಿಜಿ ಅವರು ’ಮಾತಾಜಿ’ ಎಂದು ಸಂಬೋಧನೆ ಮಾಡಿ ನಮಸ್ಕಾರ ಮಾಡಿದರು. ‘ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಅವರು ಕಾಂಚಿ (ತಮಿಳುನಾಡು) ನಲ್ಲಿ ವಾಸಿಸುತ್ತಿದ್ದಾರೆ’ ಎಂದು ಹೇಳಿದರು. ಅದಕ್ಕೆ ಶ್ರೀ ಮಹಂತ ರವೀಂದ್ರ ಪುರಿಜಿಯವರು, “ನಮ್ಮ ಅಖಾಡದ ದೇವರು ‘ಭಗವಾನ ಶ್ರೀ ಕಾರ್ತಿಕೇಯ’ ಎಂದು ಹೇಳಿದರು.

ಈ ಸಂದರ್ಭದಲ್ಲಿ, ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಇವರು ಶ್ರೀ ಮಹಂತ ರವೀಂದ್ರ ಪುರಿಜಿ ಇವರನ್ನು ಆಶ್ರಮಕ್ಕೆ ಬರಲು ಆಹ್ವಾನಿಸಿದರು. ಆಗ ಶ್ರೀ ಮಹಂತ ರವೀಂದ್ರ ಪುರಿಜಿ ಇವರು, ‘ನಾನು ಖಂಡಿತ ಆಶ್ರಮಕ್ಕೆ ಬರುತ್ತೇನೆ’ ಎಂದು ಹೇಳಿದರು.

ಪೂ. ಪ್ರದಿಪ ಖೇಮಕಾ ಮತ್ತು ಅವರ ಧರ್ಮಪತ್ನಿ ಪೂ. ಸೌ. ಸುನೀತಾ ಖೇಮಕಾ, ಸದ್ಗುರು ಡಾ. ಮುಕುಲ ಗಾಡಗೀಳ ಇವರನ್ನು ಶ್ರೀ ಮಹಂತ ರವೀಂದ್ರ ಪುರಿಜಿ ಇವರು ಸಂತಸಮಾಗಮದಲ್ಲಿ ಸನ್ಮಾನ ಮಾಡಿದರು.

ಶ್ರೀ ಮಹಂತ ರವೀಂದ್ರ ಪುರಿಜಿಯವರ ಪರಿಚಯ

ಶ್ರೀ ಮಹಂತ ರವೀಂದ್ರ ಪುರಿಜಿ ಇವರು ಅಖಿಲ ಭಾರತ ಅಖಾಡ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ಈ ಅಖಾಡ ಪರಿಷತ್ತಿನ ಅಡಿಯಲ್ಲಿ ೧೩ ಅಖಾಡಗಳಿವೆ. ಇವುಗಳಲ್ಲಿ ೭ ಶೈವ ಅಖಾಡಗಳು, ೩ ವೈಷ್ಣವ ಅಖಾಡಗಳು, ೨ ಉದಾಸೀನ ಅಖಾಡಗಳು ಮತ್ತು ೧ ನಿರ್ಮಲ ಅಖಾಡಗಳಿವೆ. ಅಖಾಡ ಪರಿಷತ್ತಿನ ಮುಖ್ಯಸ್ಥರಾಗಿ, ಪುರಿಜಿ ಮಹಾಕುಂಭ ಮೇಳವನ್ನು ಆಯೋಜಿಸುವಲ್ಲಿ ಸಾಧುಗಳ ಪರವಾಗಿ ನೇತೃತ್ವ ವಹಿಸುತ್ತಾರೆ. ಅವರು ನಿರಂಜನಿ ಅಖಾಡದ ಅಧ್ಯಕ್ಷರೂ ಆಗಿದ್ದಾರೆ. ಅವರು ೧೯೮೦ ರಲ್ಲಿ ಸನ್ಯಾಸ ಸ್ವೀಕರಿಸಿದರು. ಶ್ರೀ ಮಹಂತ ರವೀಂದ್ರ ಪುರಿಜಿ ಅವರು ಉತ್ತರಾಖಂಡದ ಹರಿದ್ವಾರದ ಮಾನಸದೇವಿ ಟ್ರಸ್ಟ್‌ನ ಅಧ್ಯಕ್ಷರೂ ಆಗಿದ್ದಾರೆ.