Dharmasansad at Mahakumbh : ಮಹಾಕುಂಭ: ‘ಸನಾತನ ಬೋರ್ಡ್’ನ ‘ನೀಲನಕ್ಷೆ’ಯನ್ನು ಜನವರಿ 27 ರಂದು ನಡೆಯಲಿರುವ ಧರ್ಮ ಸಂಸತ್ತಿನಲ್ಲಿ ಅಂತಿಮಗೊಳಿಸಲಾಗುವುದು !

(ನೀಲಿ ಮುದ್ರಣ ಎಂದರೆ ಕಾರ್ಯ ವಿಧಾನ)

ಪ್ರಯಾಗರಾಜ್ (ಉತ್ತರ ಪ್ರದೇಶ) – ಪ್ರಸಿದ್ಧ ಕಥೆಗಾರ ಪೂ. ದೇವಕಿನಂದನ್ ಠಾಕೂರ್ ಅವರ ನೇತೃತ್ವದಲ್ಲಿ ‘ಸನಾತನ ಬೋರ್ಡ್’ನ ನೀಲನಕ್ಷೆ ಜನವರಿ 27 ರಂದು ಮಹಾಕುಂಭ ಮೇಳದ ಸಮಯದಲ್ಲಿ ನಡೆಯಲಿರುವ ಧರ್ಮಗಳ ಸಂಸತ್ತಿನಲ್ಲಿ ನಿರ್ಧರಿಸಲಾಗುವುದು. ಈ ಧರ್ಮ ಸಂಸತ್ತಿನಲ್ಲಿ ಸನಾತನ ಹಿಂದೂ ಧರ್ಮದ ಸಂತರು, ಮಹಂತರು, ಮಹಾಮಂಡಲೇಶ್ವರರು ಮತ್ತು ಆಧ್ಯಾತ್ಮಿಕ ಗುರುಗಳು ಉಪಸ್ಥಿತರಿರುತ್ತಾರೆ. ಇದಕ್ಕಾಗಿ ಸಂಪರ್ಕ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಸನಾತನ ಹಿಂದೂ ಧರ್ಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಸಾರ ಮಾಡಲು ಒಂದು ನಿರ್ದಿಷ್ಟ ಮತ್ತು ಪರಿಣಾಮಕಾರಿ ನೀತಿಯನ್ನು ಸಿದ್ಧಪಡಿಸುವುದು, ಮಥುರಾದ ಶ್ರೀ ಕೃಷ್ಣ ಜನ್ಮಭೂಮಿಯ ವಿಮೋಚನೆ, ತಿರುಪತಿ ಬಾಲಾಜಿ ದೇವಸ್ಥಾನದ ಲಡ್ಡು ಪ್ರಸಾದ ಕಲಬೆರಕೆ ಪ್ರಕರಣ ಮತ್ತು ಇತರ ಹಲವು ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.

ಈ ಧರ್ಮ ಸಂಸತ್ತು ಇಡೀ ಸನಾತನ ಮಂಡಳಿಯ ರಚನೆ ಮತ್ತು ಅದರ ಉದ್ದೇಶಗಳೇನು ಎಂಬುದರ ಕುರಿತು ಚರ್ಚಿಸುತ್ತದೆ. ವಿಶೇಷವಾಗಿ ಸಂಪ್ರದಾಯಗಳು, ಧಾರ್ಮಿಕ ನಿರ್ವಹಣೆ ಮತ್ತು ಆಧ್ಯಾತ್ಮಿಕ ಕಾರ್ಯದ ಸಂದರ್ಭದಲ್ಲಿ ಸುಸಂಬದ್ಧವಾದ ಕಾರ್ಯ ವ್ಯವಸ್ಥೆಯನ್ನು ಸಿದ್ಧಪಡಿಸುವುದು ಗುರಿಯಾಗಿದೆ. ಇದರೊಂದಿಗೆ, ಈ ಧರ್ಮ ಸಂಸತ್ತು ಸನಾತನ ಹಿಂದೂ ಧರ್ಮದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಪಾತ್ರಗಳು ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸುತ್ತದೆ. ಧರ್ಮ ಸಂಸತ್ತಿನಲ್ಲಿ, ಪೂ. ದೇವಕಿನಂದನ್ ಠಾಕೂರ್ ಸಹಿತ ಧರ್ಮ ಗುರು, ಮಹಾಮಂಡಲೇಶ್ವರರು ಮತ್ತು ವಿಚಾರವಂತರ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.