ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅಖಾಡ ಪರಿಷತ್ತಿನ ಅಧ್ಯಕ್ಷ ಶ್ರೀ ಮಹಂತ್ ರವೀಂದ್ರ ಪುರಿಜಿ ಅವರ ಸನ್ಮಾನ !

ಹಿಂದೂ ಜನಜಾಗೃತಿ ಸಮಿತಿಯಿಂದ ಅಖಾಡ ಪರಿಷತ್ ಅಧ್ಯಕ್ಷ ಶ್ರೀ ಮಹಂತ್ ರವೀಂದ್ರ ಪುರಿಜಿ ಅವರ ಸನ್ಮಾನ !

ಪ್ರಯಾಗರಾಜ (ಉತ್ತರ ಪ್ರದೇಶ) – ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಇತ್ತೀಚೆಗೆ ಮಹಾಕುಂಭ ಕ್ಷೇತ್ರದಲ್ಲಿ ’ಅಖಿಲ ಭಾರತ ಅಖಾಡ ಪರಿಷತ್’ನ ಅಧ್ಯಕ್ಷರಾದ ಶ್ರೀ ಮಹಾಂತ ರವೀಂದ್ರ ಪುರಿಜಿ ಅವರನ್ನು ಭೇಟಿಯಾದರು. ಈ ಶುಭ ಸಂದರ್ಭದಲ್ಲಿ, ಸದ್ಗುರು ಡಾ. ಪಿಂಗಳೆ ಇವರು ಶ್ರೀ ಮಹಂತ ರವೀಂದ್ರ ಪುರಿಜಿ ಅವರನ್ನು ಪುಪ್ಪಾರ್ಪಣೆ ಮತ್ತು ಉಡುಗೊರೆ ನೀಡಿ ಸನ್ಮಾನಿಸಿದರು. ಶ್ರೀ ಮಹಂತ ರವೀಂದ್ರ ಪುರಿಜಿ ಇವರು ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಸಾರಕ ಸದ್ಗುರು ನೀಲೇಶ ಸಿಂಗಬಾಳಾ ಇವರಿಗೆ ಪ್ರಸಾದ ರೂಪದಲ್ಲಿ ವಸ್ತ್ರ ಮತ್ತು ಶ್ರೀ ದತ್ತಾತ್ರೇಯರ ಮೂರ್ತಿಯ ಛಾಯಾಚಿತ್ರವನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸದ್ಗುರು ಡಾ. ಪಿಂಗಳೆ ಇವರು ಸಮಿತಿಯ ಪರವಾಗಿ ಗೋವಾ ರಾಜ್ಯದಲ್ಲಿ ಪ್ರತಿವರ್ಷ ನಡೆಯುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ಭಾಗಿಯಾಗಲು ಆಹ್ವಾನಿಸಿದರು.

ಶ್ರೀ ಮಹಂತ್ ರವೀಂದ್ರ ಪುರಿಜಿ ಅವರು ಸದ್ಗುರು ಡಾ. ಚಾರುದತ್ತ ಪಿಂಗಳೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕರಾದ ಸದ್ಗುರು ನೀಲೇಶ್ ಸಿಂಗಬಾಳ ಅವರಿಗೂ ಶ್ರೀ ದತ್ತಾತ್ರೇಯರ ಮೂರ್ತಿಯ ಭಾವಚಿತ್ರವನ್ನು ಉಡುಗೊರೆಯಾಗಿ ನೀಡಿ ಸನ್ಮಾನ ಮಾಡಿದರು.

ಈ ಶುಭ ಸಂದರ್ಭದಲ್ಲಿ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯಗಳ ಸಮಿತಿಯ ಸಂಘಟಕರಾದ ಶ್ರೀ. ಸುನಿಲ ಘನವಟ್ ಕೂಡ ಉಪಸ್ಥಿತರಿದ್ದರು. ಶ್ರೀ ಮಹಂತ ರವೀಂದ್ರ ಪುರಿಜಿ ಅವರು, ’ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಬಗ್ಗೆ ನಮಗೆ ತಿಳಿದಿದೆ’ ಎಂದು ಹೇಳಿದರು.