Traffic Jam : ಕುಂಭ ಕ್ಷೇತ್ರದಲ್ಲಿ ಟ್ರಾಫಿಕ್ ಜಾಮ್‌ನದೃಶ್ಯ

ಮಹಾಕುಂಭಮೇಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಟ್ರಾಫಿಕ್ ಜಾಮ್ ನಿಂದ ಭಕ್ತರಿಗೆ ಅಡಚಣೆ!

 

– ಶ್ರೀ. ಪ್ರೀತಮ ನಾಚಣಕರ, ವಿಶೇಷ ವರದಿಗಾರ, ’ಸನಾತನ ಪ್ರಭಾತ್’, ಪ್ರಯಾಗರಾಜ

ಪ್ರಯಾಗರಾಜ ಜನವರಿ ೨೧ (ಸುದ್ಧಿ.) – ಕುಂಭಮೇಳದಲ್ಲಿ ವಿವಿಧ ಮಾರ್ಗಗಳಿಂದ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಭಕ್ತರು ನಿತ್ಯ ಟ್ರಾಫಿಕ್ ಜಾಮ್ಅನ್ನು ಎದುರಿಸುತ್ತಿದ್ದಾರೆ. ಈ ನಿರಂತರ ಟ್ರಾಫಿಕ್ ಜಾಮ್‌ನಿಂದ ಭಕ್ತರು ತುಂಬಾ ಪರದಾಡುತ್ತಿದ್ದಾರೆ.

೧. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಮತ್ತು ಇತರ ಸಚಿವರು, ವಿವಿಧ ಕ್ಷೇತ್ರಗಳ ಗಣ್ಯರು, ಹಾಗೆಯೇ ವಿವಿಧ ಅಖಾಡಗಳ ಮುಖ್ಯಸ್ಥರು ಕುಂಭ ಕ್ಷೇತ್ರಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ.ಮಹಾಕುಂಭಮೇಳಕ್ಕೆ ಗಣ್ಯರು ಹಾಜರಾಗುವುದು ಸಹಜವಾಗಿದೆ. ಇದರ ಪೂರ್ವಕಲ್ಪನೆಯನ್ನು ಆಡಳಿತ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರಿಗೆ ನೀಡಿರುತ್ತಾರೆ; ಆದರೆ, ಆ ತುಲನೆಯಲ್ಲಿ, ಸಂಚಾರ ನಿಯಂತ್ರಣ ವ್ಯವಸ್ಥೆಯು ಹೇಗೆ ವ್ಯವಸ್ಥೆ ಆಗಬೇಕಿತ್ತೋ ಹಾಗೆ ಆಗುತ್ತಿಲ್ಲ.

೨. ಒಬ್ಬ ಪ್ರಮುಖ ವ್ಯಕ್ತಿ ಬರುತ್ತಿದ್ದರೆ ಪೊಲೀಸರು ಇದ್ದಕ್ಕಿದ್ದಂತೆ ರಸ್ತೆಯನ್ನು ಬಂದ್‌ ಮಾಡುತ್ತಾರೆ. ಇದರಿಂದ ಆ ಮಾರ್ಗದಿಂದ ಬರುವ ನೂರಾರು ಭಕ್ತರು ಮತ್ತು ವಾಹನಗಳು ತಮ್ಮ ಮಾರ್ಗಗಳನ್ನು ಬೇರೆಡೆಗೆ ಬದಲಾಯಿಸಬೇಕಾಗುತ್ತದೆ. ಕುಂಭಮೇಳದ ಸಮಯದಲ್ಲಿ ರಸ್ತೆಗಳಲ್ಲಿ ನಿರಂತರ ಸಂಚಾರ ದಟ್ಟಣೆ ಇರುವುದರಿಂದ, ಜನಸಂದಣಿಯ ನಡುವೆ ಮಾರ್ಗ ಬದಲಾಯಿಸುವುದು ಕಠಿಣವಾಗುತ್ತಿದೆ.

೩. ಕುಂಭ ಕ್ಷೇತ್ರದ ವಿವಿಧ ಸ್ಥಳಗಳಲ್ಲಿ ಚೌಕಗಳಿವೆ. ಅವುಗಳ ಮೇಲೆ ಸಂಚಾರ ಬಂದ ಮಾಡಿದರೆ, ನಾಲ್ಕು ದಿಕ್ಕುಗಳಿಂದ ಬರುವ ವಾಹನಗಳ ಜನಸಂದಣಿ ಆಗತ್ತದೆ. ಚೌಕದಲ್ಲಿ ಟ್ರಾಫಿಕ್ ಜಾಮ್ ಆದರೆ ಅದನ್ನು ತೆರವುಗೊಳಿಸಲು ಅರ್ಧ ಗಂಟೆ ಬೇಕಾಗುತ್ತದೆ. ಇಡೀ ಕುಂಭಮೇಳದ ಈ ರೀತಿ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ನಿಯಮಿತವಾಗಿ ಆಗುತ್ತಿರುತ್ತದೆ.

ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕ!

ಕುಂಭಮೇಳದ ಸಮಯದಲ್ಲಿ ಒಂದೇ ಸಮಯದಲ್ಲಿ ನೂರಾರು ಭಕ್ತರು ಮತ್ತು ಅನೇಕ ರಸ್ತೆಗಳಲ್ಲಿ ಹಾದುಹೋಗುವ ಅನೇಕ ವಾಹನಗಳಿಂದ ಸಂಚಾರ ವ್ಯವಸ್ಥೆಯ ಮೇಲೆ ಒತ್ತಡ ಬೀಳುತ್ತದೆ; ಆದರೆ ಇದಕ್ಕೆ ಪರಿಹಾರ ಹುಡುಕುವುದು ಕೂಡ ಅಷ್ಟೇ ಮಹತ್ವದ್ದಾಗಿದೆ. ಯಾವ ಮಾರ್ಗದಲ್ಲಿ ಗಣ್ಯರು ಹಾದುಹೋಗುವವರಿದ್ದಾರೆ ಆ ಮಾರ್ಗದ ಆರಂಭದಲ್ಲಿ ಒಂದು ಫಲಕವನ್ನು ಇಡುವುದರಿಂದ ಅಥವಾ ಪ್ರಕಟಣೆಗಳ ಮೂಲಕ ನಾಗರಿಕರನ್ನು ಆಹ್ವಾನ ಮಾಡಿದರೆ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ನೂರಾರು ಭಕ್ತರು ನಿಯಮಿತ ಎದುರಿಸುತ್ತಿರುವ ಅಡಚಣೆಯನ್ನು ಪರಿಗಣಿಸಿ, ಪೊಲೀಸರು ಮತ್ತು ಆಡಳಿತವು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಬೇಕು.

ಪಾಂಟೂನ್ ಸೇತುವೆಗಳ ಪರಿಸ್ಥಿತಿಯೂ ಇದೇ ಆಗಿದೆ!

ಕುಂಭಕ್ಷೇತ್ರದಲ್ಲಿ ಗಂಗಾ ನದಿಯ ಮೇಲಿನ ಪಾಂಟೂನ್ ಸೇತುವೆ ಬರಲು ಮತ್ತು ಹೋಗಲಿಕ್ಕಾಗಿ ಇದೆ. ಕೆಲವು ಪಾಂಟೂನ್ ಸೇತುವೆಗಳು ಗಣ್ಯ ವ್ಯಕ್ತಿಗಳಿಗೆ ಮಾತ್ರ ಮೀಸಲಾಗಿರುತ್ತವೆ. ಈ ವ್ಯವಸ್ಥೆಯು ನಿರಂತರವಾಗಿ ಬದಲಾಗುತ್ತಿದೆ. ಹಾಗಾಗಿ, ಒಂದು ಸಮಯದಲ್ಲಿ ಸೇತುವೆಯಲ್ಲಿ ಹೋಗುವುದು ಮತ್ತು ಬರುವುದು ಇದ್ದರೆ, ಇನ್ನೊಂದು ಸಮಯದಲ್ಲಿ ಅದು ಮುಚ್ಚಿರುತ್ತದೆ. ಅದರ ಬಗ್ಗೆ ಯಾವುದೇ ತಾತ್ಕಾಲಿಕ ಸೂಚನೆ ಸೇತುವೆಯ ಆರಂಭದಲ್ಲಿ ಇರುವುದಿಲ್ಲ ಮತ್ತು ಅದರ ಬಗ್ಗೆ ಯಾವುದೇ ಘೋಷಣೆಯನ್ನು ಮಾಡುವುದಿಲ್ಲ. ಪಾದಚಾರಿಗಳು ಮತ್ತು ಚಾಲಕರು ಸೇತುವೆಯನ್ನು ದಾಟಲು ಸಮೀಪಿಸುವಾಗ ಪೊಲೀಸರು ಸೇತುವೆಯ ಮೇಲೆ ಕಾವಲು ಕಾಯುತ್ತಿರುವುದನ್ನು ನೋಡಿದಾಗ ಮಾತ್ರ ಪ್ರಯಾಣಿಕರಿಗೆ ಇದು ಗಮನಕ್ಕೆ ಬರುತ್ತದೆ. ಸೇತುವೆಯನ್ನು ಸಮೀಪಿಸುವಾಗ, ಪೊಲೀಸರು ಪ್ರಯಾಣಿಕರಿಗೆ ಹೋಗಲು ನಿಷೇಧಿಸುತ್ತಾರೆ. ಇಂತಹ ಘಟನೆಗಳು ನಿರಂತರವಾಗಿ ಸಂಭವಿಸುವುದರಿಂದ ಪ್ರಯಾಣಿಕರು ಮತ್ತು ಪೊಲೀಸರ ನಡುವೆ ವಾಗ್ವಾದಗಳು ನಡೆಯುತ್ತಿವೆ.

ಅಮೃತಸ್ನಾನದ ದಿನವಲ್ಲದಿದ್ದರೂ, ಮಹಾಕುಂಭಮೇಳಕ್ಕೆ ಸಾವಿರಾರು ಭಕ್ತರು ನಿಯಮಿತವಾಗಿ ಬರುತ್ತಿದ್ದಾರೆ. ಆದ್ದರಿಂದ, ಹೊಸ ಭಕ್ತರಿಗೆ ರಸ್ತೆ ಇದ್ದಕ್ಕಿದ್ದಂತೆ ಮುಚ್ಚಲ್ಪಟ್ಟರೆ, ಅವರಿಗೆ ಪರ್ಯಾಯ ಮಾರ್ಗ ಯಾವುದೆಂದು ತಿಳಿದಿರುವುದಿಲ್ಲ. ಇದರಿಂದಾಗಿ ಅವರು ತಮ್ಮ ದೊಡ್ಡ ಬ್ಯಾಗ್‌ಗಳು ಮತ್ತು ಇತರ ವಸ್ತುಗಳನ್ನು ಹೊತ್ತುಕೊಂಡು ಜನಸಂದಣಿಯ ಮೂಲಕ ಬೇರೆ ದಾರಿಗಳನ್ನು ಕಂಡುಕೊಳ್ಳುವುದು ಕಷ್ಟಕರವಾಗುತ್ತದೆ. ಇದನ್ನೆಲ್ಲಾ ಪರಿಗಣಿಸಿ, ಪೊಲೀಸರು ಮತ್ತು ಆಡಳಿತವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.