Russia Ukraine War : ಉಕ್ರೇನ್ ಯುದ್ಧದಲ್ಲಿ ರಷ್ಯಾದ ಪರವಾಗಿ ಹೋರಾಡುತ್ತಿದ್ದ 12 ಭಾರತೀಯರ ಸಾವು

16 ಜನರು ಇನ್ನೂ ನಾಪತ್ತೆ

ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್

ನವ ದೆಹಲಿ – ಇದುವರೆಗೆ 126 ಭಾರತೀಯ ನಾಗರಿಕರು ರಷ್ಯಾದ ಸೈನ್ಯದಲ್ಲಿ ಸೇರ್ಪಡೆಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ 96 ಜನರು ಭಾರತಕ್ಕೆ ಮರಳಿದ್ದಾರೆ. ಉಕ್ರೇನ್ ನಲ್ಲಿ ಇದುವರೆಗೆ ರಷ್ಯಾದ ಪರವಾಗಿ ಹೋರಾಡುತ್ತಿರುವ 12 ಭಾರತೀಯರು ಸಾವನ್ನಪ್ಪಿದ್ದಾರೆ. 18 ಭಾರತೀಯ ಪ್ರಜೆಗಳು ಇನ್ನೂ ರಷ್ಯಾದಲ್ಲಿ ಸಿಲುಕಿಕೊಂಡಿದ್ದು ಅವರಲ್ಲಿ 16 ಜನರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅವರನ್ನು ತಾಯ್ನಾಡಿಗೆ ಮರಳಿ ತರುವುದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ರಷ್ಯಾದ ಸೈನ್ಯವು ಅನೇಕ ಬಾಡಿಗೆ ಸೈನಿಕರನ್ನು ಮತ್ತು ಇತರ ದೇಶಗಳ ಜನರನ್ನು ಬಲವಂತವಾಗಿ ಉಕ್ರೇನ್ ಯುದ್ಧಕ್ಕೆ ಕಳುಹಿಸಿದೆ ಎಂದು ಆರೋಪಿಸಲಾಗಿದೆ. ಇದರಲ್ಲಿ ಅನೇಕ ಭಾರತೀಯರು ಸೇರಿದ್ದಾರೆ.  ಅನೇಕ ಜನರು ಕೆಲಸ ಹುಡುಕಿಕೊಂಡು ರಷ್ಯಾಕ್ಕೆ ಹೋಗಿ ಅಲ್ಲಿ ಸಿಲುಕಿಕೊಂಡಿದ್ದಾರೆ.

ಸಂಪಾದಕೀಯ ನಿಲುವು

ರಷ್ಯಾವು ತನ್ನ ಸೈನ್ಯದಲ್ಲಿ ಬಲವಂತವಾಗಿ ನೇಮಕ ಮಾಡಿಕೊಂಡ ಭಾರತೀಯರನ್ನು ಮಾತೃಭೂಮಿಗೆ ಕಳುಹಿಸುವುದಾಗಿ ಭರವಸೆ ನೀಡಿರುವಾಗ, ಅದನ್ನು ಏಕೆ ಮಾಡಲಿಲ್ಲ. ಇದರ ಉತ್ತರವನ್ನು ಯಾರು  ವಿಚಾರಿಸುತ್ತಾರೆ ?