ಕುಂಭ ಕ್ಷೇತ್ರದಲ್ಲಿ ಸನಾತನ ಧರ್ಮ ಶಿಕ್ಷಣ ಮತ್ತು ಗ್ರಂಥ ಪ್ರದರ್ಶನಕ್ಕೆ ಜಿಜ್ಞಾಸುಗಳಿಂದ ಉತ್ಸಹಭರಿತ ಪ್ರತಿಕ್ರಿಯೆ !

  • ವಿವಿಧ ರಾಜ್ಯಗಳು ಮತ್ತು ಹಳ್ಳಿಗಳಲ್ಲಿ ಪ್ರದರ್ಶನಗಳನ್ನು ಆಯೋಜಿಸಲು ಸಂತರು ಮತ್ತು ಜಿಜ್ಞಾಸುಗಳಿಂದ ಬೇಡಿಕೆ !

  • ಸನಾತನದ ಧರ್ಮ ಕಾರ್ಯಗಳಲ್ಲಿ ಭಾಗವಹಿಸಲು ಅನೇಕ ಜಿಜ್ಞಾಸುಗಳ ಸಿದ್ಧತೆ !

– ಶ್ರೀ. ಸಚಿನ್ ಕೌಲಕರ್, ವಿಶೇಷ ವರದಿಗಾರ, ಪ್ರಯಾಗರಾಜ್

ಪ್ರಯಾಗರಾಜ್ (ಉತ್ತರ ಪ್ರದೇಶ) – ಕುಂಭ ಮೇಳದಲ್ಲಿ ಸನಾತನ ಸಂಸ್ಥೆಯು ಆಯೋಜಿಸಿರುವ ಧರ್ಮ ಶಿಕ್ಷಣ ಪ್ರದರ್ಶನಕ್ಕೆ ಶ್ರದ್ಧಾವಂತರು, ಭಕ್ತರು, ಸಂತರು-ಮಹಂತರಿಂದ ಉತ್ಸಾಹಭರಿತ ಪ್ರತಿಕ್ರಿಯೆ ಸಿಗುತ್ತಿದೆ. ನಮ್ಮ ಪ್ರದೇಶದಲ್ಲೂ ಇದೇ ರೀತಿಯ ಪ್ರದರ್ಶನ ನಡೆಯಬೇಕೆಂದು ಸಂತರು ಮತ್ತು ಅನೇಕ ಜಿಜ್ಞಾಸುಗಳು ಒತ್ತಾಯಿಸಿದ್ದಾರೆ. ಪ್ರದರ್ಶನವನ್ನು ನೋಡಿದ ನಂತರ, ಅನೇಕ ಜಿಜ್ಞಾಸುಗಳು ಸನಾತನದ ಧರ್ಮ ಕಾರ್ಯಗಳಲ್ಲಿ ಭಾಗವಹಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಈ ಪ್ರದರ್ಶನ ಜನವರಿ 11 ರಿಂದ ಪ್ರಾರಂಭವಾಗಿದೆ. ಈ ಪ್ರದರ್ಶನ ಫೆಬ್ರವರಿ 15 ರವರೆಗೆ ಆಯೋಜಿಸಲಾಗಿದೆ. ಜನವರಿ 11 ರಿಂದ 21 ರವರೆಗೆ ನಡೆದ ಪ್ರದರ್ಶನವನ್ನು ಸಾವಿರಾರು ಜಿಜ್ಞಾಸುಗಳು ಲಾಭ ಪಡೆದರು.

ಸನಾತನ_ಪ್ರದರ್ಶನಿ_ಮಹಾಕುಂಭ_1 – ಸನಾತನದ ಗ್ರಂಥ ಪ್ರದರ್ಶನವನ್ನು ವೀಕ್ಷಿಸುತ್ತಿರುವಾಗ ಜಿಜ್ಞಾಸುಗಳು (ಎಡಗಡೆ) ಕಾಲಿ ಸೇನೆಯ ಮುಖ್ಯಸ್ಥ ಪ.ಪೂ. ಆನಂದ ಸ್ವರೂಪ್ ಮಹಾರಾಜ ಹಾಗೂ ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಶ್ರೀ. ಚೇತನ ರಾಜಹಂಸ್

ಆಚಾರಧರ್ಮ, ಸಾಧನೆ, ತೀರ್ಥಕ್ಷೇತ್ರಗಳ ಮಹಿಮೆ, ಸನಾತನ ಸಂಸ್ಥೆಯ ಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ವೈವಿಧ್ಯಮಯ ಕಾರ್ಯಗಳು, ವಿವಿಧ ಭಾಷೆಗಳಲ್ಲಿ ಗ್ರಂಥಗಳ ಸಂಗ್ರಹ ಮತ್ತು ಸನಾತನ ಸಂಸ್ಥೆಯಿಂದ ನಿರ್ಮಿತ ಸಾತ್ವಿಕ ಉತ್ಪನ್ನಗಳು ಈ ಪ್ರದರ್ಶನದಲ್ಲಿ ಸೇರಿವೆ. ‘ಸನಾತನ ಧರ್ಮ ಎಂದರೇನು?’, ‘ಧರ್ಮಾಚರಣೆಯನ್ನು ಹೇಗೆ ಮಾಡಬೇಕು ?’, ‘ಧಾರ್ಮಿಕ ಕೃತಿಗಳನ್ನು ಶ್ರದ್ಧೆಯಿಂದ ಮತ್ತು ಯೋಗ್ಯ ರೀತಿಯಲ್ಲಿ ಮಾಡಿದರೆ, ಅವುಗಳ ಆಧ್ಯಾತ್ಮಿಕ ಲಾಭ ಹೆಚ್ಚು ಸಿಗುತ್ತದೆ!’, ಮತ್ತು ಭಾರತವು ಸ್ವಾಭಾವಿಕವಾಗಿಯೇ ಹಿಂದೂ ರಾಷ್ಟ್ರವಾಗಿದೆ. ಈ ಪ್ರದರ್ಶನದಲ್ಲಿ ಸನಾತನ ಧರ್ಮದವರ ಹಿಂದೂ ರಾಷ್ಟ್ರದ ಕಲ್ಪನೆಯು ವಿಶ್ವ ಕಲ್ಯಾಣಕ್ಕಾಗಿ ಇದೆ ಇತ್ಯಾದಿ ಮಾಹಿತಿಗಳ ಫಲಕಗಳನ್ನು ಈ ಪ್ರದರ್ಶನದಲ್ಲಿ ಇರಿಸಲಾಗಿದೆ.

ಸನಾತನ ಪ್ರದರ್ಶನವನ್ನು ಜಿಜ್ಞಾಸೆಯಿಂದ ನೋಡುತ್ತಿರುವ ಜನರು ಗುಂಪು

ಸನಾತನದ ಪ್ರದರ್ಶನವನ್ನು ನೋಡಿದ ಜಿಜ್ಞಾಸುಗಳ ಅಭಿಪ್ರಾಯ…!

1. ಆಚಾರ್ಯ ಡಾ. ತನ್ಮಯಾನಂದ, ಶ್ರೀ ಶಕ್ತಿನ್ಯಾಸ, ಶಕ್ತಿ ವಿಹಾರ್, ಶ್ರೀಕೋಣ ಬಾಲೇಶ್ವರ, ಒಡಿಶಾ – ಸನಾತನ ಧರ್ಮ ಸಂಸ್ಕೃತಿಯ ಶಾಸ್ತ್ರೀಯ ಪರಿಭಾಷೆಯಲ್ಲಿ ಈ ಪ್ರದರ್ಶನವು ಸನಾತನ ಧರ್ಮಕ್ಕೆ ರಕ್ಷಣಾ ಕವಚವನ್ನು ಒದಗಿಸುತ್ತಿದೆ. ನಮ್ಮ ಒಡಿಶಾದಲ್ಲಿರುವ ಆಶ್ರಮದಲ್ಲಿ ಇದರ ಬಗ್ಗೆ ಒಂದು ಶಿಬಿರವನ್ನು ಆಯೋಜಿಸಬಹುದು. ನಮ್ಮ ಪ್ರದೇಶದಲ್ಲಿ ಮತಾಂತರದ ಸಮಸ್ಯೆಗಳ ವಿರುದ್ಧ ನಾವು ಒಟ್ಟಾಗಿ ಕೆಲಸ ಮಾಡಬಹುದು.

2. ಶ್ರೀ. ವಿಶಾಲ್ ದುಬೆ, ನವೀನ್ ಝುಸಿ, ಪ್ರಯಾಗರಾಜ್, ಉತ್ತರ ಪ್ರದೇಶ – ಈ ಪ್ರದರ್ಶನವನ್ನು ನೋಡಿದ ನಂತರ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಇದರಲ್ಲಿ ಬಹಳಷ್ಟು ಒಳ್ಳೆಯ ಮಾಹಿತಿ ಇದೆ. ನಾನು ಕೂಡ ಒಬ್ಬ ಸನಾತನ ವ್ಯಕ್ತಿಯಾಗಿದ್ದೂ ನಿಮ್ಮ ಕಾರ್ಯದಲ್ಲಿ ಭಾಗವಹಿಸಲು ಇಷ್ಟಪಡುತ್ತೇನೆ.

3. ಶ್ರೀ. ದಿವಾಕರ್ ಪಾಂಡೆ, ವಾರಣಾಸಿ, ಉತ್ತರ ಪ್ರದೇಶ – ಹಿಂದೂಗಳನ್ನು ಜಾಗೃತಗೊಳಿಸಲು ಅಗತ್ಯವಾದ ಈ ಪ್ರದರ್ಶನವನ್ನು ನೋಡಿ ನನಗೆ ಆಶ್ಚರ್ಯವಾಯಿತು. ನನ್ನ ದೇಹ, ಮನಸ್ಸು ಮತ್ತು ಸಂಪತ್ತನ್ನು ಅರ್ಪಿಸುವ ಮೂಲಕ ನಿಮ್ಮ ಕಾರ್ಯದಲ್ಲಿ ಭಾಗವಹಿಸಲು ನಾನು ಬಯಸುತ್ತೇನೆ.

4. ಶ್ರೀ ಆನಂದ್ ಮಹಾರಾಜ್ ಹಾಳೆ, ಶಿವಭಕ್ತಿ ಪಾರಾಯಣ, ನಾಂದೇಡ್, ಮಹಾರಾಷ್ಟ್ರ – ಸನಾತನ ಸಂಸ್ಥೆಯ ಗ್ರಂಥ ಸಂಗ್ರಹವು ಸಾಮಾನ್ಯ ಜನರಿಗೆ ಅತ್ಯಗತ್ಯವಾಗಿದೆ. ಈ ಗ್ರಂಥಗಳು ಪ್ರತಿಯೊಂದು ತಾಲೂ ಮಟ್ಟವನ್ನು ತಲುಪಬೇಕು.