ಪ್ರವೇಶದ್ವಾರದಲ್ಲಿ ನಿರ್ಮಿಸಲಾದ ‘ತೇಜಸ್ ವಿಮಾನ’ದ ಪ್ರತಿಕೃತಿ

ಪ್ರಯಾಗರಾಜ್, ಜನವರಿ 21 (ಸುದ್ದಿ) – ಕುಂಭಮೇಳದಲ್ಲಿ ದರಾಗಂಜ್‌ನ ತ್ರಿವೇಣಿ ಅಣೆಕಟ್ಟಿನಲ್ಲಿರುವ ರಮಾನಂದಾಚಾರ್ಯ ಮಠದ ಶಿಬಿರವನ್ನು ಸ್ಥಾಪಿಸಲಾಗಿದೆ. ಈ ಶಿಬಿರದ ಪ್ರವೇಶದ್ವಾರದಲ್ಲಿ ಭಾರತೀಯ ವಾಯುಪಡೆಯ ‘ತೇಜಸ್’ ವಿಮಾನ’ದ 85 ಅಡಿ ಎತ್ತರದ ಪ್ರತಿಕೃತಿಯನ್ನು ನಿರ್ಮಿಸಿದ್ದರಿಂದ, ಈ ಶಿಬಿರವು ಕುಂಭಮೇಳಕ್ಕೆ ಬರುವ ಎಲ್ಲಾ ಭಕ್ತರನ್ನು ಆಕರ್ಷಿಸುತ್ತಿದೆ.
ರಮಾನಂದಾಚಾರ್ಯ ಮಠದ ಮಹಂತ ಬೃಜಭೂಷಣ ದಾಸ ಮಹಾರಾಜ ಇವರನ್ನು ‘ಸನಾತನ ಪ್ರಭಾತ ಭೇಟಿ ಮಾಡಿತು. ಆ ಸಮಯದಲ್ಲಿ ಅವರು, ಧರ್ಮ ಕಾರ್ಯಗಳ ಜೊತೆಗೆ, ಸ್ವತಃ ಒಬ್ಬ ಕಟ್ಟಾ ದೇಶಭಕ್ತರಾಗಿದ್ದರು ಮತ್ತು ತೇಜಸ್ ವಿಮಾನದ ಪ್ರತಿಕೃತಿಯನ್ನು ನಿರ್ಮಿಸುವ ಕಲ್ಪನೆಯನ್ನು ಸಾಕಾರಾಗೊಳಿಸಿದರು. ತೇಜಸ್ ವಿಮಾನವು ಅತ್ಯಂತ ಶಕ್ತಿಶಾಲಿಯಾಗಿದ್ದು, ಭಾರತೀಯ ವಾಯುಪಡೆಯ ಹೆಮ್ಮೆಯಾಗಿದೆ. ಈ ಪ್ರತಿಕೃತಿಯನ್ನು ರಚಿಸಲು ಬಂಗಾಳದ 15 ಕುಶಲಕರ್ಮಿಗಳು ಒಂದೂವರೆ ತಿಂಗಳು ತೆಗೆದುಕೊಂಡರು. ದೇಶ ಮತ್ತು ವಿದೇಶಗಳಿಂದ ಕುಂಭಮೇಳಕ್ಕೆ ಬರುವ ಭಕ್ತರಿಗೆ ತೇಜಸ್ ವಿಮಾನವನ್ನು ಪ್ರಚಾರ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ಶಿಬಿರದಲ್ಲಿ ಅನ್ನದಾನವಾಗುತ್ತದೆ ಮತ್ತು ಪ್ರತಿದಿನ ಭಗವದ್ಗೀತೆಯನ್ನು ಪಠಿಸಲಾಗುತ್ತದೆ.