ವಿಶ್ವ ಹಿಂದೂ ಪರಿಷತ್ತಿನಿಂದ ಹಿಂದೂ-ಬೌದ್ಧ ಸಮನ್ವಯದ ಉಪಕ್ರಮ !
ಪ್ರಯಾಗರಾಜ್, ಜನವರಿ 21 (ಸುದ್ದಿ.) – ವಿಶ್ವ ಹಿಂದೂ ಪರಿಷತ್ತಿನ ವತಿಯಿಂದ ಮಹಾಕುಂಭ ಕ್ಷೇತ್ರದಲ್ಲಿ ಇದೇ ಪ್ರಥಮ ಬಾರಿಗೆ ‘ಹಿಮಾಲಯ ಬೌದ್ಧ ಸಂಸ್ಕೃತಿ ಸಂರಕ್ಷಣಾ ಸಭೆ’ಯ ಪ್ರತ್ಯೇಕ ಶಿಬಿರವನ್ನು ಸೆಕ್ಟರ್ 18 ರಲ್ಲಿ ಸ್ಥಾಪಿಸಲಾಗಿದೆ. ಹಿಂದೂಗಳು ಮತ್ತು ಬೌದ್ಧರ ನಡುವಿನ ಸಮನ್ವಯಕ್ಕಾಗಿ ಈ ಉಪಕ್ರಮವನ್ನು ಮಾಡಲಾಗುತ್ತಿದೆ. ಕಳೆದ ಕುಂಭಮೇಳದವರೆಗೂ ಈ ಉಪಕ್ರಮ ವಿಶ್ವ ಹಿಂದೂ ಪರಿಷತ್ತಿನ ಅಡಿಯಲ್ಲಿ ನಡೆಯುತ್ತಿತ್ತು. ಶಿಬಿರದ ಪ್ರವೇಶದ್ವಾರದಲ್ಲಿ 20 ಅಡಿ ಎತ್ತರದ ಗೌತಮ ಬುದ್ಧನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಸಂತ ಲಾಮಾ ಜೋಧಪಾಲ್ ಅವರ ಅಧ್ಯಕ್ಷತೆಯಲ್ಲಿ, ಪ್ರತಿದಿನ ಹಿಂದೂ ಮತ್ತು ಬೌದ್ಧ ಸಂತರು ಹಾಗೆಯೇ ಭಕ್ತರ ಸಮ್ಮುಖದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.