‘ಲ್ಯಾಂಡ್ (ಭೂಮಿ) ಜಿಹಾದ್’ನ ಷಡ್ಯಂತ್ರದಲ್ಲಿ ವಕ್ಫ್ ಬೋರ್ಡ್‌ನ ಸಹಭಾಗ !

೧. ತಮಿಳುನಾಡಿನಲ್ಲಿ ವಕ್ಫ್ ಬೋರ್ಡ್‌ವು ತಿರುಚಿನಾಪ್ಪಳ್ಳಿಯಲ್ಲಿನ ೭ ಗ್ರಾಮಗಳ ಭೂಮಿಯ ಮೇಲೆ ತನ್ನ ಹಕ್ಕನ್ನು (ಅಧಿಕಾರವನ್ನು) ಹೇಳುವುದು  

ನ್ಯಾಯವಾದಿ ಶ್ರೀ.ಅಶ್ವಿನಿ ಉಪಾಧ್ಯಾಯ

‘ತಮಿಳುನಾಡಿನಲ್ಲಿ ವಕ್ಫ್ ಬೋರ್ಡ್‌ವು ತಿರುಚಿನಪಳ್ಳಿಯಲ್ಲಿ ೧ ಸಾವಿರ ೫೦೦ ವರ್ಷಗಳಷ್ಟು ಹಳೆಯ ದೇವಸ್ಥಾನದ ಒಡೆತನದ ಹಾಗೂ ಆ ಪರಿಸರದಲ್ಲಿನ ಹಿಂದೂ ಬಹುಸಂಖ್ಯಾತರಿರುವ ೭ ಮುಖ್ಯ ಗ್ರಾಮಗಳಲ್ಲಿನ ಭೂಮಿಯ ಮೇಲೆ ತನ್ನ ಹಕ್ಕನ್ನು (ಅಧಿಕಾರವನ್ನು) ಹೇಳಿದೆ. ವಕ್ಫ್ ಬೋರ್ಡ್‌ನಿಂದ ನಿಯೋಜನಾ ಬದ್ಧ ರೀತಿಯಲ್ಲಿ ಹಿಂದೂಗಳ ಭೂಮಿಯನ್ನು ಕಬಳಿಸುವುದು ನಡೆದಿದೆ. ವಕ್ಫ್ ಬೋರ್ಡ್ ತಿರುಚಿನಾಪಳ್ಳಿಯ ಸಮೀಪದ ತಿರುಚೆಂದೂರಾಯಿ ಗ್ರಾಮದ ಮೇಲೆ ತನ್ನ ಒಡೆತನದ ಹಕ್ಕನ್ನು ಹೇಳಿದೆ. ಅದರಿಂದ ಅಲ್ಲಿನ ಹಿಂದೂ ಸಹಿತ ಸಂಪೂರ್ಣ ರಾಷ್ಟ್ರಕ್ಕೇ ಆಘಾತವಾಗಿದೆ. ಈ ಊರು ಕಾವೇರಿ ನದಿಯ ದಡದ ಮೇಲಿದೆ. ರಾಜಗೋಪಾಲ ಎಂಬವರು ತಮ್ಮ ಮಗಳ ವಿವಾಹಕ್ಕಾಗಿ ಭೂಮಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದರು. ಅವರು ತಮ್ಮ ಭೂಮಿಯ ಮಾರಾಟದ ಕಾಗದವನ್ನು (sale-deed) ತೆಗೆದುಕೊಂಡು ರಜಿಸ್ಟ್ರಾರರ ಕಚೇರಿಗೆ ಹೋದರು. ಆಗ ಆ ಭೂಮಿಯು ಅವರ ಹೆಸರಿನಲ್ಲಿಲ್ಲ, ಅದು ವಕ್ಫ್ ಬೋರ್ಡ್‌ನ ಹೆಸರಿನಲ್ಲಿದೆ ಎಂಬುದು  ಅವರಿಗೆ ತಿಳಿಯಿತು. ಅಷ್ಟು ಮಾತ್ರವಲ್ಲ, ಅಲ್ಲಿನ ೧ ಸಾವಿರದ ೫೦೦ ವರ್ಷ ಪುರಾತನ, ಅಂದರೆ ಇಸ್ಲಾಮ್ ಅಸ್ತಿತ್ವಕ್ಕೆ ಬರುವ ಮೊದಲೇ ನಿರ್ಮಿಸಿದ ಸುಂದರೇಶ್ವರ ಮಂದಿರದ ಭೂಮಿಯೂ ವಕ್ಫ್ ಬೋರ್ಡ್‌ನ ಹೆಸರಿನಲ್ಲಿದೆ ಎಂಬುದು ಅವರಿಗೆ ತಿಳಿಯಿತು. ಆಗ ಆ ಗುಮಾಸ್ತ (ಕ್ಲರ್ಕ್) ಮುರಲಿ ಇವರು ರಾಜಗೋಪಾಲ ಇವರಿಗೆ, “ನೀವು ಯಾವ ಭೂಮಿಯ ಮಾರಾಟಪತ್ರವನ್ನು (sale-deed) ಮಾಡಲು ಬಂದಿದ್ದೀರೊ, ಆ ಭೂಮಿಯು ವಕ್ಫ್ ಬೋರ್ಡ್‌ನ ಹೆಸರಿನಲ್ಲಿದೆ. ಆದ್ದರಿಂದ ನಿಮಗೆ ಆ ಭೂಮಿಯ ಮಾರಾಟಪತ್ರ (sale-deed) ವನ್ನು, ಅಂದರೆ ಮಾರಾಟ ಮಾಡಲು ಬರುವುದಿಲ್ಲ. ಅದಕ್ಕಾಗಿ ನಿಮಗೆ ಚೆನ್ನೈನಲ್ಲಿನ ವಕ್ಫ್ ಬೋರ್ಡ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು (N.O.C) ಪಡೆದುಕೊಳ್ಳಬೇಕಾಗುವುದು”, ಎಂದರು. ರಾಜಗೋಪಾಲ ಇವರು ಈ ಪ್ರಸಂಗವನ್ನು ಗ್ರಾಮದ ಜನರಿಗೆ ಹೇಳಿದರು. ಗ್ರಾಮದ ಎಲ್ಲ ಜನರಿಗೆ ಸತ್ಯಸ್ಥಿತಿ ತಿಳಿದಾಗ ಅವರಿಗೆ ದೊಡ್ಡ ಆಘಾತವಾಯಿತು. ‘ಗ್ರಾಮದ ಜನರಲ್ಲಿ ಅವರ ಭೂಮಿಯ (ಜಾಗದ) ಹಾಗೂ ಹೊಲಗಳ (ಗದ್ದೆಗಳ) ಎಲ್ಲ ಕಾಗದಪತ್ರಗಳಿರುವಾಗ ಈ ಭೂಮಿಯ ಮೇಲೆ ವಕ್ಫ್ ಬೋರ್ಡ್ ತನ್ನ ಹಕ್ಕನ್ನು (ಅಧಿಕಾರವನ್ನು) ಹೇಗೆ ಹೇಳುತ್ತದೆ?’, ಎಂಬ ಪ್ರಶ್ನೆಯು ಅವರ ಮನಸ್ಸಿನಲ್ಲಿ ನಿರ್ಮಾಣವಾಯಿತು. ಈ ಪ್ರಕರಣವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಅವರು ‘ಈ ವಿಷಯದ ಬಗ್ಗೆ ವಿಚಾರಣೆ ಮಾಡಿ ನಂತರ ಕೃತಿ ಮಾಡಲಾಗುವುದು’, ಎಂದು ಹೇಳಿದರು.

೨. ಗ್ರಾಮಸ್ಥರಿಂದ ತಮಿಳುನಾಡಿನ ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಇವರಿಗೆ ವಕ್ಫ್ ಬೋರ್ಡ್‌ನ ಭೂಮಿ ಕಬಳಿಸುವ ಪ್ರಯತ್ನ ಕೂಡಲೇ ನಿಲ್ಲಿಸಬೇಕೆಂದು ವಿನಂತಿ ಸಲ್ಲಿಕೆ

ವಕ್ಫ್ ಬೋರ್ಡ್‌ವು ತಮ್ಮ ಊರಲ್ಲಿನ ಭೂಮಿಯ ಮೇಲೆ ಮಾಡಿದ ಒಡೆತನ ಹಕ್ಕಿನ ಬಗ್ಗೆ ಆಶ್ಚರ್ಯಚಕಿತರಾದ ಗ್ರಾಮಸ್ಥರು ಜಿಲ್ಲಾಡಳಿತ ಕಾರ್ಯಾಲಯದ ಮುಂದೆ ಒಟ್ಟಾದರು. ಅವರ ಹೇಳಿಕೆಗನುಸಾರ ಈ ಪರಿಸರದಲ್ಲಿ ಮುಸಲ್ಮಾನರು ವಾಸಿಸುವ ಯಾವುದೇ ಪುರಾವೆಗಳಿಲ್ಲ ಹಾಗೂ ಕಾಗದಪತ್ರಗಳನ್ನು ನೋಡಿದರೆ ಈ ಪರಿಸರದಲ್ಲಿ ೧೯೨೭-೨೮ ರಲ್ಲಿ ಪುನರ್ವಸತಿಯಾಗಿದೆ. ಆದರೂ ವಕ್ಫ್ ಬೋರ್ಡ್ ತ್ರಿಚಿಯಲ್ಲಿನ ೧೨ ಭೂಮಿ ನೊಂದಣಿ ಕಾರ್ಯಾಲಯಗಳಿಗೆ ೨೦ ಪುಟಗಳ ಪತ್ರವನ್ನು ಕಳುಹಿಸಿ ವಿವಿಧ ಜಿಲ್ಲೆಗಳಲ್ಲಿರುವ ಭೂಮಿಯು ಅದರ ಒಡೆತನದಲ್ಲಿದೆ ಎಂದು ಹೇಳಿದೆ. ವಕ್ಫ ಬೋರ್ಡನ ಈ ಒಡೆತನದ ಹಕ್ಕಿಗೆ ಉತ್ತರ ಕೊಡಲು ಊರಲ್ಲಿನ ಜನರು ಅವರಲ್ಲಿರುವ ಭೂಮಿಯ ದಸ್ತಾವೇಜಗಳನ್ನು (ಕಾಗದಪತ್ರಗಳನ್ನು) ತೋರಿಸಿ ಅವರ ಭೂಮಿಯು ಎಷ್ಟೋ ಶತಕಗಳಿಂದ ಅವರ ಒಡೆತನದ್ದಾಗಿರುವ ಬಗ್ಗೆ ಸಿದ್ಧಮಾಡಿದ್ದಾರೆ. ಅವರು ತಮಿಳುನಾಡಿನ ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಇವರಿಗೆ ಹಸ್ತಕ್ಷೇಪಮಾಡಿ ವಕ್ಫ್ ಬೋರ್ಡ್‌ನ ಭೂಮಿ ಕಬಳಿಸುವ ಈ ಕುಕೃತ್ಯವನ್ನು ನಿಲ್ಲಿಸಬೇಕೆಂದು ವಿನಂತಿಸಿದ್ದಾರೆ.

೩. ೨೦೧೪ ರ ಲೋಕಸಭಾ ಚುನಾವಣೆಯ ಮೊದಲು ಕಾಂಗ್ರೆಸ್ ಪುರಸ್ಕೃತ ಮೈತ್ರಿ ಸರಕಾರವು ದೆಹಲಿಯ ೧೨೩ ಸರಕಾರಿ ಆಸ್ತಿಗಳನ್ನು ಉಡುಗೊರೆ ಎಂದು ವಕ್ಫ್ ಬೋರ್ಡ್‌ಗೆ ಕೊಡುವುದು

ತಮಿಳುನಾಡಿನಲ್ಲಿ ಈ ಭೂಮಿ ಹಗರಣ ಬೆಳಕಿಗೆ ಬಂದ ನಂತರ ಇಂತಹ ಇನ್ನೂ ಕೆಲವು ಪ್ರಕರಣಗಳೂ ಪ್ರಸಾರ ಮಾಧ್ಯಮಗಳಿಗೆ ತಿಳಿದವು. ೨೦೧೪ ನೇ ಇಸವಿಯಲ್ಲಿ ಚುನಾ ವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಅಂದಿನ ಕಾಂಗ್ರೆಸ್ಸಿನ ಸಂಯುಕ್ತ ಪ್ರಗತಿಪರ ಸರಕಾರವು ದೆಹಲಿಯಲ್ಲಿ ೧೨೩ ಸರಕಾರಿ ಆಸ್ತಿಯನ್ನು ವಕ್ಫ್ ಬೋರ್ಡ್‌ಕ್ಕೆ ಉಡುಗೊರೆ ಎಂದು ಕೊಟ್ಟಿತು. ತಮಿಳುನಾಡಿನಲ್ಲಿನ ವಕ್ಫ್ ಬೋರ್ಡ್‌ನ ಪ್ರಕರಣವಾಗಿ ಕೆಲವೇ ದಿನಗಳ ನಂತರ ಈ ಪ್ರಕರಣವೂ ಬೆಳಕಿಗೆ ಬಂದಿತು. ಮಾಧ್ಯಮಗಳಿಂದ ಲಭಿಸಿದ ಮಾಹಿತಿಗನುಸಾರ ಕೇಂದ್ರೀಯ ಮಂತ್ರಿ ಮಂಡಳವು ೨೦೧೪ ರ ಚುನಾವಣೆಯ ಮೊದಲು ಗುಪ್ತ ರೀತಿಯಲ್ಲಿ ಈ ನಿರ್ಣಯವನ್ನು ತೆಗೆದುಕೊಂಡು ಅದಕ್ಕೆ ಸಮ್ಮತಿಯನ್ನು ನೀಡಿತು. ದೆಹಲಿಯಲ್ಲಿ ಕಾನಾಟ್ ಪ್ಲೇಸ್, ಅಶೋಕ ರಸ್ತೆ, ಮಥುರಾ ರಸ್ತೆ, ಲೋಧಿ ರಸ್ತೆ ಮತ್ತು ಇತರ ಪ್ರಮುಖ ಸ್ಥಳಗಳನ್ನು ಒಂದು ಗುಪ್ತ ಪತ್ರದ ಮೂಲಕ ೫ ಮಾರ್ಚ್ ೨೦೧೪ ರಂದು ವಕ್ಫ್ ಬೋರ್ಡ್‌ಗೆ ಒಪ್ಪಿಸಲಾಯಿತು. ಸರಕಾರದ ಈ ಪತ್ರದ ಮೇಲೆ ಅಪರ ಕಾರ್ಯದರ್ಶಿ ಜೆ.ಪಿ. ಪ್ರಕಾಶ ಇವರ ಸಹಿ ಇದೆ.

೪. ಅಂದಿನ ಮನಮೋಹನ ಸಿಂಹ ಸರಕಾರದ ಮಂತ್ರಿ ಸಲ್ಮಾನ ಖುರ್ಶೀದ ಇವರು ಕಾರ್ಯಾಲಯವನ್ನು ಬಿಡುವಾಗ ವಕ್ಫ್ ಬೋರ್ಡ್‌ಗೆ ಆಸ್ತಿಯನ್ನು ಹಸ್ತಾಂತರಿಸುವುದು

ಭಾಜಪ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ನಂತರ ಈ ವ್ಯವಹಾರದ ವಿಚಾರಣೆ ಆರಂಭವಾಯಿತು. ಮನಮೋಹನ ಸಿಂಹ ಸರಕಾರದ ಈ ನಿರ್ಣಯಕ್ಕೆ ಸವಾಲೊಡ್ಡುತ್ತಾ ವಿಶ್ವ ಹಿಂದೂ ಪರಿಷತ್ತು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿತು. ಅದರಲ್ಲಿ ‘ಲ್ಯಾಂಡ್ ಎಕ್ವಿಝಿಶನ್ ಎಕ್ಟ್’ ಈ ಕಾನೂನಿಗನುಸಾರ ಈ ರೀತಿ ದೆಹಲಿಯ ಪ್ರಮುಖ ಸ್ಥಳಗಳನ್ನು ಬೇರೆಯವರಿಗೆ ಕೊಡಲು ಬರುವುದಿಲ್ಲ ಎಂದು ಹೇಳಿದೆ. ಈ ವಿಷಯದಲ್ಲಿ ಅಂದಿನ ನಗರಾಭಿವೃದ್ಧಿ ಸಚಿವ ವೆಂಕಯ್ಯಾ ನಾಯ್ಡು ಇವರು, “ನನ್ನ ಬಳಿ ಸಲ್ಮಾನ ಕುರ್ಶೀದರ ವಿರುದ್ಧ ದೂರು ಬಂದಿದೆ. ಕಳೆದ ವರ್ಷ ಅವರು ತಮ್ಮ ಕಾರ್ಯಾಲಯವನ್ನು ಬಿಡುವಾಗ ಮತಪೆಟ್ಟಿಗೆಗಳ ರಾಜಕಾರಣವನ್ನು ಮುಂದಿಟ್ಟು ಈ ಆಸ್ತಿಗಳನ್ನು ಹಸ್ತಾಂತರಿಸಿದ್ದಾರೆ”, ಎಂದರು. ಸಚಿವಾಲಯದ ಓರ್ವ ಹಿರಿಯ ಅಧಿಕಾರಿಗಳು ನೀಡಿರುವ ಮಾಹಿತಿಗನುಸಾರ ಈ ಪ್ರಕ್ರಿಯೆಯನ್ನು ತುಂಬಾ ಗಡಿಬಿಡಿಯಿಂದ ಮಾಡಲಾಗಿತ್ತು ಎಂದು ಹೇಳಿದರು. (ಆಚಾರಸಂಹಿತೆ ಅನ್ವಯವಾಗುವ ಒಂದು ದಿನ ಮೊದಲು)

೫. ದೆಹಲಿಯಲ್ಲಿ ಆಂದೋಲನ ಪಾರ್ಕ್‌ದ ಮೇಲೆ ಮತಾಂಧರು, ಪೊಲೀಸ್‌ರು ಮತ್ತು ‘ಆಪ್’ನ ನೇತಾರರ ಸಹಾಯದಿಂದ ಅತಿಕ್ರಮಣ ಮಾಡುವುದು

ಈ ೧೨೩ ಆಸ್ತಿಗಳಲ್ಲಿ ೬೧ ಆಸ್ತಿಗಳು ಎಲ್.ಎನ್.ಡಿ.ಒ. (ಲ್ಯಾಂಡ್ ಎಂಡ್ ಡೆವಲಪ್‌ಮೆಂಟ್ ಆಫೀಸ್ ಆಫ್ ಮಿನಿಸ್ಟ್ರಿ ಆಫ್ ಹೌಸಿಂಗ್ ಎಂಡ್ ಅರ್ಬನ್ ಅಫೇರ್ಸ್) ಮತ್ತು ಬಾಕಿ ಉಳಿದ ೬೨ ಆಸ್ತಿಗಳು ದೆಹಲಿ ಅಭಿವೃದ್ಧಿ ಖಾತೆಯ ಒಡೆತನದವುಗಳಾಗಿವೆ. ದೆಹಲಿಯಲ್ಲಿನ ಸಾವಿತ್ರಿ ನಗರದಲ್ಲಿನ ಆಂದೋಲನ ಪಾರ್ಕ್, ಈ ಪ್ರಮುಖ ಪಾರ್ಕ್‌ದ ಮೇಲೆ ಮತಾಂಧರು ನಿಯೋಜನಾಬದ್ಧ ರೀತಿಯಲ್ಲಿ ಅತಿಕ್ರಮಣವನ್ನು ಮಾಡಿದ್ದಾರೆ. ಈ ಪರಿಸರದಲ್ಲಿನ ಒಂದು ಎಕರೆ ಭೂಮಿಯ ಮೇಲೆ ಪೊಲೀಸರ ಮತ್ತು ಆಮ್ ಆದಮೀ ಪಕ್ಷದ ಓರ್ವ ನೇತಾರರ ಸಹಾಯದಿಂದ ಮತಾಂಧರು ಅನಧಿಕೃತವಾಗಿ ಮನೆ ಮತ್ತು ಅಂಗಡಿಗಳನ್ನು ಕಟ್ಟಿದ್ದಾರೆ. ಈ ಅನಧಿಕೃತ ಮನೆ ಮತ್ತು ಅಂಗಡಿಗಳನ್ನು ರೋಹಿಂಗ್ಯಾ ಮುಸಲ್ಮಾನರಿಗೆ ಕೊಡುವ ನಿಯೋಜನೆಯಿದೆ ಎಂಬ ಸಂಶಯವಿದೆ. ಈ ಎಲ್ಲ ಪ್ರದೇಶವು (ಭಾಗವು) ಗ್ರೇಟರ್ ಕೈಲಾಸ ವಿಧಾನಸಭಾ ಮತದಾರ ಕ್ಷೇತ್ರದಲ್ಲಿ ಬರುತ್ತದೆ. ಇದಲ್ಲದೆ ಕಸದ ವಿಲೇವಾರಿ ಮಾಡುವ ಸ್ಥಳದ ಮೇಲೆಯೂ ಅವರು ಅತಿಕ್ರಮಣ ಮಾಡಿದ್ದಾರೆ. ಆ ಸಮಯದಲ್ಲಿ ಸ್ಥಳೀಯರು ಈ ಸ್ಥಳದಲ್ಲಿ ಆಗಿರುವ ಅತಿಕ್ರಮಣದಿಂದ ಅವರ ಸುರಕ್ಷತೆಗೆ ಅಪಾಯ ನಿರ್ಮಾಣವಾಗಿದೆ ಎಂದು ದೆಹಲಿ ನಗರಾಭಿವೃದ್ಧಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಇದೆಲ್ಲವನ್ನು ಗುಪ್ತ ರೀತಿಯಲ್ಲಿ ಮಾಡಲಾಗುತ್ತದೆ ಹಾಗೂ ಈ ಪರಿಸರದಲ್ಲಿನ ಯಾರನ್ನೂ ಭೇಟಿಯಾಗಲು ಬಿಡುವುದಿಲ್ಲ, ಎಂದು ಅಲ್ಲಿನ ಸ್ಥಳೀಯ ನಿವಾಸಿ ಶಂತನು ಸಿಂಹ ಹೇಳಿದ್ದಾರೆ. ಸಿಂಹ ಇವರ ಹೇಳಿಕೆಗನುಸಾರ ಅಲ್ಲಿನ ಅಧಿಕಾರಿಗಳು ಭೂಮಿ ಕಬಳಿಸುವವರ ಜೊತೆಗೆ ಕೈಜೋಡಿಸಿದ್ದಾರೆ. ಪಕ್ಷಕ್ಕೆ ಬೆಂಬಲ ಸಿಗಬೇಕೆಂದು ಆಮ್ ಆದಮಿ ಪಕ್ಷ ಈ ಅತಿಕ್ರಮಣ ಮಾಡುವವರಿಗೆ ಸಹಾಯ ಮಾಡುತ್ತಿದೆ.

೬. ಸ್ಮಶಾನಭೂಮಿಯ ಮೇಲೆ ಅತಿಕ್ರಮಿಸುವ ‘ಆಪ್’ ಸಮರ್ಥಕ ಕಟ್ಟಡ ಗುತ್ತಿಗೆದಾರರ (Building Contractor) ಕಡೆಗೆ ನಗರಪಾಲಿಕೆ ದುರ್ಲಕ್ಷ ಮಾಡುವುದು

ಕೆಲವು ಪತ್ರಕರ್ತರು ಈ ಸ್ಥಳದ ಛಾಯಾಚಿತ್ರಗಳನ್ನು ತೆಗೆಯಲು ಪ್ರಯತ್ನಿಸಿದಾಗ ಕೆಲವರು ಅವರಿಗೆ ಬೆದರಿಕೆಯೊಡ್ಡಿದರು. ಶಂತನು ಸಿಂಹ ಇವರ ಹೇಳಿಕೆಗನುಸಾರ ಮಹಮ್ಮದ ಅನ್ವರ ಎಂಬ ಕಾಂಗ್ರೆಸ್ಸಿನ ಮಾಜಿ ಶಾಸಕ ಈ ಅತಿಕ್ರಮಣಕ್ಕೆ ಅನುಮತಿಯನ್ನು ನೀಡಿದ್ದನು. ಈಗ ಅನ್ವರ ‘ಆಪ್’ ಪಕ್ಷದಲ್ಲಿದ್ದಾನೆ. ಇನ್ನೋರ್ವ ಸ್ಥಳೀಯ ನಾಗರಿಕ ಶೈಲೇಂದ್ರ ಸಿಂಹ ಇವರ ಹೇಳಿಕೆಯಂತೆ, ‘ಆಪ್’ನ ಶಾಸಕ ಸೋಮನಾಥ ಭಾರತಿ ಇವರ ಬೆಂಬಲವಿರುವ ಲಿಯಾಕತ ಅಲೀ ಎಂಬ ಮುಸಲ್ಮಾನ ಕಟ್ಟಡ ಗುತ್ತಿಗೆದಾರನು (Building Contractor) ಅಲ್ಲಿನ ಸ್ಮಶಾನಭೂಮಿಯನ್ನು ವಶಪಡಿಸಿ ಅಲ್ಲಿ ಕಟ್ಟಡಗಳನ್ನು ಕಟ್ಟಿದ್ದಾನೆ ಹಾಗೂ ಅವನು ಲಕ್ಷಾವಧಿ ರೂಪಾಯಿಗಳನ್ನು ಗಳಿಸುತ್ತಿದ್ದಾನೆ. ಈಗ ಅವನು ಅಲ್ಲಿನ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಲು ಜನರನ್ನು ಪ್ರೋತ್ಸಾಹಿಸುತ್ತಿದ್ದಾನೆ. ಈ ಪಾರ್ಕ್‌ನಲ್ಲಿ ಇದುವರೆಗೆ ೩ ಕಟ್ಟಡಗಳು ನಿರ್ಮಾಣವಾಗಿವೆ. ಅದೇ ರೀತಿ ಈ ಪರಿಸರದಲ್ಲಿ ಬಹಳಷ್ಟು ಅಂಗಡಿಗಳನ್ನು ಪ್ರಾರಂಭಿಸಲಾಗಿದೆ. ನಿಧಾನವಾಗಿ ಇಲ್ಲಿ ಇನ್ನೂ ಮನೆಗಳನ್ನು ಕಟ್ಟಬಹುದು, ಹಾಗೆಯೇ ಸಮ್ಮತಿಯಿಲ್ಲದೇ ಅನಧಿಕೃತ ಮಸೀದಿಯನ್ನೂ ಕಟ್ಟಲಾಗಿದೆ. ಈ ಮಸೀದಿಯಲ್ಲಿ ಕಾನೂನುಬಾಹಿರ ವ್ಯವಹಾರಗಳಾಗುತ್ತವೆ ಎಂದು ಸ್ಥಳೀಯರು ದೂರು ನೀಡಿದ್ದರೂ ದೆಹಲಿ ನಗರಪಾಲಿಕೆಯು ಕಣ್ಣುಮುಚ್ಚಿಕೊಂಡಿದೆ.

೭. ವಕ್ಫ್ ಬೋರ್ಡ್ ಡಿಅರ್ ಪಾರ್ಕ್‌ನ ಭೂಮಿಯನ್ನು ವಶಪಡಿಸಿ ದಫನಭೂಮಿಯನ್ನಾಗಿ ಮಾಡುವುದು

ದೆಹಲಿಯಲ್ಲಿನ ಆಮ್ ಆದಮಿ ಪಕ್ಷದ ಸರಕಾರ ಮತಾಂಧರಿಗೆ ಅತಿಕ್ರಮಣ ಮಾಡಲು ಪ್ರೋತ್ಸಾಹಿಸುತ್ತಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಅಲ್ಲಿನ ಡಿಅರ್ ಪಾರ್ಕ್ ಪರಿಸರದಲ್ಲಿನ ಭೂಮಿಯ ಮೇಲೆ ಅತಿಕ್ರಮಣ ಮಾಡಿ ಅಲ್ಲಿ ದಫನಭೂಮಿಯನ್ನು (ಮುಸಲ್ಮಾನರು ಶವಗಳನ್ನು ಭೂಮಿಯಲ್ಲಿ ಹೂಳಲು ಉಪಯೋಗಿಸುವ ಭೂಮಿಗೆ ದಫನಭೂಮಿ ಎನ್ನುತ್ತಾರೆ) ತಯಾರಿಸಲಾಗಿದೆ ಎಂದು ಹೌಜ ಖಾಸದಲ್ಲಿನ ಸ್ಥಳೀಯರ ದೂರಿದೆ. ‘ಈ ಪಾರ್ಕ್‌ನಲ್ಲಿ ಶವಗಳನ್ನು ಹುಗಿಯುವುದು ನೋಡಿ ನಮಗೆ ಆಘಾತವಾಯಿತು’, ಎಂದು ಅಲ್ಲಿನ ಓರ್ವ ಸ್ಥಳೀಯ ನಿವಾಸಿಗಳಾದ ಶೈಲೇಂದ್ರ ಸಿಂಹ ಇವರು ಹೇಳಿದರು. ‘ಆಪ್’ ಪಕ್ಷದ ಶಾಸಕ ಸೋಮನಾಥ ಭಾರತಿ ಇವರು ‘ಈ ಭೂಮಿ ವಕ್ಫ್ ಬೋರ್ಡ್‌ನದಾಗಿದ್ದು ಇದು ಮುಸಲ್ಮಾನರ ಸ್ಮಶಾನವಾಗಿದೆ’, ಎಂಬ ಫಲಕವನ್ನು ಹಾಕಿದ್ದಾರೆ ಎಂದು ಸ್ಥಳೀಯರು ದೂರು ನೀಡಿದ್ದಾರೆ.

೮. ವಕ್ಫ್ ಬೋರ್ಡ್‌ನ ಕರಾಳ ಮುಖ

ಅ. ೨೦೦೬ ರ ಸಚ್ಚರ ಸಮಿತಿಯ ಅಂದಾಜಿಗನುಸಾರ ಭಾರತದಲ್ಲಿ ವಕ್ಫ್ ಬೋರ್ಡ್‌ನ ವಶದಲ್ಲಿ ಒಟ್ಟಿಗೆ ೬ ಲಕ್ಷ ಎಕರೆ ಭೂಮಿಯಿದೆ. ಅದರಲ್ಲಿನ ೪ ಲಕ್ಷ ೯೦ ಸಾವಿರ ಭೂಮಿಯು ವಕ್ಫ್‌ನ ಆಸ್ತಿಯೆಂದು ನೊಂದಣಿಯಾಗಿದ್ದು, ಈ ಭೂಮಿಯ ಮಾರುಕಟ್ಟೆಯ ಬೆಲೆ ೧ ಕೋಟಿ ೨೦ ಲಕ್ಷ ಕೋಟಿ ರೂಪಾಯಿಗಳಷ್ಟಿದೆ. ಮಹಾರಾಷ್ಟ್ರದಲ್ಲಿ ೯೨ ಸಾವಿರ ಎಕರೆ ಭೂಮಿ ವಕ್ಫ್ ಬೋರ್ಡ್‌ನ ವಶದಲ್ಲಿದೆ.

ಆ. ಭಾರತೀಯ ರೈಲ್ವೆ ಮತ್ತು ರಕ್ಷಣಾ ಇಲಾಖೆಯ ಭೂಮಿಯ ಒಡೆತನದ ನಂತರ ೩ ನೇ ಕ್ರಮಾಂಕ ವಕ್ಫ್ ಬೋರ್ಡ್‌ದ್ದಾಗಿದೆ.

೯. ಕೇಂದ್ರದ ವಕ್ಫ್ ಬೋರ್ಡ್‌ನ ಸಂಕ್ಷಿಪ್ತ ಮಾಹಿತಿ 

ಅ. ೧೯೬೪ ರಲ್ಲಿ ಭಾರತದಲ್ಲಿನ ವಕ್ಫ್‌ನ (ಮುಸಲ್ಮಾನ ಧರ್ಮೀಯರ ಮಂಡಳದ) ವ್ಯವಸ್ಥಾಪನೆ ಮತ್ತು ವಿಕಾಸವನ್ನು ಮಾಡಲು ಕೇಂದ್ರೀಯ ವಕ್ಫ್ ಬೋರ್ಡ್‌ನ ಸ್ಥಾಪನೆಯನ್ನು ಮಾಡಲಾಯಿತು. ಇಸ್ಲಾಮ್‌ನಲ್ಲಿ ವಕ್ಫ್ ಈ ಶಬ್ದದ ಅರ್ಥ ಧಾರ್ಮಿಕ ಕಾರ್ಯಕ್ಕಾಗಿ ದಾನ ಅಥವಾ ಖರೀದಿಸಿದ ಆಸ್ತಿ ಎಂದಾಗುತ್ತದೆ.

ಆ. ವಕ್ಫ್ ಬೋರ್ಡ್‌ನ ಅಧಿಕಾರದಲ್ಲಿರುವ ಎಲ್ಲ ಆಸ್ತಿಗಳ ಆಡಳಿತವು ಕೇಂದ್ರೀಯ ವಕ್ಫ್ ಬೋರ್ಡ್‌ನ ಅಧಿಕಾರದಲ್ಲಿ ಬರುತ್ತದೆ. ಅದಲ್ಲದೆ ರಾಜ್ಯಗಳಲ್ಲಿನ ವಕ್ಫ್ ಬೋರ್ಡ್‌ನ ಆಸ್ತಿಗಳ ವ್ಯವಸ್ಥೆಯನ್ನು ನೋಡಲು ಎಲ್ಲ ರಾಜ್ಯದಲ್ಲಿ ವಕ್ಫ್ ಬೋರ್ಡ್‌ಗಳಿವೆ. ಸಂವಿಧಾನದ ಕಲಮ್ ೩೦ ಕ್ಕನುಸಾರ ಅಲ್ಪಸಂಖ್ಯಾಕರ ಸಬಲೀಕರಣಕ್ಕಾಗಿ ವಕ್ಫ್ ಬೋರ್ಡ್‌ನ್ನು ನಿರ್ಮಾಣಮಾಲಾಗಿದೆ.

೧೦. ವಕ್ಫ್ ಬೋರ್ಡ್‌ನ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಭೂಮಿಯ ಮೇಲಿನ ಅತಿಕ್ರಮಣ

ಅ. ಯಾವುದಾದರೊಂದು ಸ್ಥಳವನ್ನು ಮುಸಲ್ಮಾನ ಧರ್ಮದ ಕೆಲಸಕ್ಕಾಗಿ  ತುಂಬಾ ಸಮಯದ ವರೆಗೆ ಉಪಯೋಗಿಸುತ್ತಿದ್ದರೆ, ಅದನ್ನು ವಕ್ಫ್‌ನ ಆಸ್ತಿಯೆಂದು ಘೋಷಿಸಲಾಗುತ್ತದೆ. ಒಮ್ಮೆ ಆ ಜಾಗವು ವಕ್ಫ್‌ನ ಜಾಗವೆಂದು ನಾಮಕರಣವಾದರೆ, ಆ ಜಾಗ ವಕ್ಫ್ ಬೋರ್ಡ್‌ನ ಅಧಿಕಾರದಲ್ಲಿ ಬರುತ್ತದೆ.

ಆ. ವಕ್ಫ್ ಬೋರ್ಡ್ ಅನೇಕ ಭೂಮಿಗಳ ಮೇಲೆ ತನ್ನ ಅಧಿಕಾರವನ್ನು ಹೇಳಿ ಅವುಗಳನ್ನು ಕಬಳಿಸಿದೆ, ಎಂಬ ಆರೋಪವಿದೆ. ಯಾವುದಾದರೊಂದು ಜಾಗದಲ್ಲಿ ಯಾರಾದರೂ ಮಜಾರ್ (ಧಾರ್ಮಿಕ ಸ್ಥಳ) ಅಥವಾ ಮಸೀದಿಯನ್ನು (ನಮಾಜು ಮಾಡುವ ಸ್ಥಳವನ್ನು) ಕಟ್ಟಿದರೆ, ಆ ಜಾಗ ಮುಸಲ್ಮಾನರಿಗೆ ಧಾರ್ಮಿಕವಾಗುತ್ತದೆ ಹಾಗೂ ಅನಂತರ ವಕ್ಫ್ ಬೋರ್ಡ್ ಅದನ್ನು ವಕ್ಫ್‌ನ ಜಾಗವೆಂದು ಘೋಷಣೆ ಮಾಡುತ್ತದೆ.

– ಯಥಾರ್ಥ ಸಿಕ್ಕಾ (ಆಧಾರ : ಸಾಪ್ತಾಹಿಕ ಆರ್ಗನೈಸರ್)

ವಕ್ಫ್ ಕಾನೂನಿನ ಮೂಲಕ ಸರಕಾರ ಭೇದಭಾವ ಮಾಡುತ್ತಿದೆ ! – ನ್ಯಾಯವಾದಿ ಶ್ರೀ.ಅಶ್ವಿನಿ ಉಪಾಧ್ಯಾಯ

೧೯೯೫ ರಲ್ಲಿ ಮಾಡಿರುವ ವಕ್ಫ್ ಕಾನೂನು ಭೇದಭಾವ ಮಾಡುವುದಾಗಿದ್ದು ಅದು ಸಂವಿಧಾನದ ವಿರುದ್ಧವಾಗಿದೆ. ಈ ಕಾನೂನಿನಿಂದ ಹಿಂದೂಗಳ ನ್ಯಾಸ (ಸಂಸ್ಥೆಗಳು), ಆಖಾಡಾ ಇತ್ಯಾದಿಗಳನ್ನು ಬದಿಗಿಟ್ಟು ವಕ್ಫ್ ಬೋರ್ಡ್‌ಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಈ ಕಾನೂನಿಗನುಸಾರ ವಕ್ಫ್ ಬೋರ್ಡ್‌ಕ್ಕೆ ಯಾವುದೇ ಆಸ್ತಿಯ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸುವ ಅಧಿಕಾರವನ್ನು ನೀಡಲಾಗಿದೆ. ಆದ್ದರಿಂದ ಹಿಂದೂ, ಜೈನ, ಬೌದ್ಧ, ಸಿಕ್ಖ್ ಮತ್ತು ಇತರ ಪಂಗಡಗಳ ಆಸ್ತಿಯು ವಕ್ಫ್ ಬೋರ್ಡ್‌ನ ಪಟ್ಟಿಯಲ್ಲಿ ಸೇರಿಸಿಕೊಂಡರೆ ಅವುಗಳಿಗೆ ಸುರಕ್ಷತತೆ ಉಳಿಯುವುದಿಲ್ಲ. ಇದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಲಾಗಿದೆ.

ಅದರಲ್ಲಿ, ‘ಈ ಕಾನೂನಿನಿಂದ ಹಿಂದೂ, ಜೈನ, ಬೌದ್ಧ, ಸಿಕ್ಖ್, ಬಹಾಯಿ, ಕ್ರೈಸ್ತ ಮತ್ತು ಝೆರೋಸ್ಟ್ರಿಯನ್ ಇವರ ಸಂದರ್ಭದಲ್ಲಿ ಬೇಧಭಾವ ಆಗುತ್ತಿದೆ’ ಎಂದು ಹೇಳಲಾಗಿದೆ. ಸಂವಿಧಾನದ ಕಲಮ್ ೧೪-೧೫ ರ ಉಲ್ಲಂಘನೆಯಾಗುತ್ತಿದೆ. ನ್ಯಾಸ ಮತ್ತು ನ್ಯಾಸದ ವಿಶ್ವಸ್ಥರು, ಹಾಗೆಯೇ ಧರ್ಮದಾಯ ಸಂಸ್ಥೆಗಳಿಗೆ ಸಮಾನ ಕಾನೂನುಗಳು ಇರಬೇಕು ಹಾಗೂ ವಕ್ಫ್ ಮತ್ತು ಅದರ ಆಸ್ತಿಗಳಿಗೆ ಬೇರೆ ಕಾನೂನು ಇರಬಾರದು. ೧೯೯೫ ರ ವಕ್ಫ್ ಕಾನೂನಿಂದಾಗಿ ವಕ್ಫ್ ಬೋರ್ಡ್‌ಗೆ ಇತರರ ಆಸ್ತಿಗಳನ್ನು ಕಬಳಿಸಲು ಸಹಾಯವಾಗುತ್ತಿದ್ದು ಹಿಂದೂ, ಬೌದ್ಧ, ಜೈನ, ಸಿಕ್ಖ್, ಜ್ಯೂ, ಬಹಾಯಿ, ಮುಂತಾದವರಿಗೆ ಸಮಾನ ದರ್ಜೆಯ ಕಾನೂನು ಇಲ್ಲ. ಇದು ರಾಷ್ಟ್ರದ ನಿಧರ್ಮಿವಾದ, ಐಕ್ಯ ಹಾಗೂ ಏಕಾತ್ಮತೆಯ ವಿರೋಧದಲ್ಲಿದೆ. ವಕ್ಫ್ ಬೋರ್ಡ್‌ಗೆ ಅನಿಯಂತ್ರಿತ ಅಧಿಕಾರವನ್ನು ನೀಡಿ ಅದಕ್ಕೆ ಹಿಂದೂ ಮತ್ತು ಇತರ ಧರ್ಮಸಂಸ್ಥೆಗಳಿಗಿಂತ ಉಚ್ಚ ದರ್ಜೆಯನ್ನು ನೀಡಲಾಗಿದೆ. ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಆಸ್ತಿಗಳ ವಾದವಿವಾದದವನ್ನು ವಕ್ಫ್ ಬೋರ್ಡ್ ಮಾಡದೆ ದಿವಾಣಿ ನ್ಯಾಯಾಲಯಗಳು ಮಾಡಬೇಕು. ಸಂವಿಧಾನದ ೧೪-೧೫ ಕಲಮ್‌ಗಳಿಗನುಸಾರ ಭಾರತದಲ್ಲಿನ ಕಾನೂನು ಮಂಡಳಿಯು ಧಾರ್ಮಿಕದತ್ತಿ ಸಂಸ್ಥೆ ಮತ್ತು ಅವುಗಳ ವಿಶ್ವಸ್ಥರಿಗೆ ಸಮಾನ ಕಾನೂನುಗಳನ್ನು ಮಾಡಬೇಕು ಹಾಗೂ ಅದರ ಮೇಲೆ ಸಾರ್ವಜನಿಕ ಚರ್ಚೆಯನ್ನು ಮಾಡಿ ಜನತೆಯ ಅಭಿಪ್ರಾಯವನ್ನು ಕೇಳಬೇಕು.