ರಾಯ್ಸೇನ್ (ಮಧ್ಯಪ್ರದೇಶ) – ಮಧ್ಯಪ್ರದೇಶದ ರಾಯ್ಸೇನ್ ಜಿಲ್ಲೆಯ ವಕ್ಫ್ ಮಂಡಳಿಯ ನಿರಂಕುಶ ಆಡಳಿತದಿಂದ ಹಿಂದೂಗಳು ತೊಂದರೆಗೀಡಾಗಿದ್ದಾರೆ. ಇಲ್ಲಿನ ಹಿಂದೂ ಬಹುಸಂಖ್ಯಾತ ಮಖಾನಿ ಗ್ರಾಮದ ಭೂಮಿ ವಕ್ಫ್ ಮಂಡಳಿಯ ಆಸ್ತಿ ಎಂದು ವಕ್ಫ್ ಮಂಡಳಿ ಹಕ್ಕು ಸಾಧಿಸಿದೆ. ಅಷ್ಟೇ ಅಲ್ಲ, ಗ್ರಾಮದಲ್ಲಿರುವ ಶಿವಲಿಂಗವನ್ನು ಸಹ ತನ್ನ ಆಸ್ತಿ ಎಂದು ವಕ್ಫ್ ಮಂಡಳಿ ಘೋಷಿಸಿದೆ. ವಕ್ಫ್ ಮಂಡಳಿ ಗ್ರಾಮಸ್ಥರಿಗೆ ನೋಟಿಸ್ ಕಳುಹಿಸಿ, “ನೀವು ವಾಸಿಸುತ್ತಿರುವ ಭೂಮಿ ವಕ್ಫ್ ಮಂಡಳಿಯ ಆಸ್ತಿ. ಗ್ರಾಮಸ್ಥರು ಅದನ್ನು ಶೀಘ್ರದಲ್ಲೇ ಖಾಲಿ ಮಾಡಬೇಕು” ಎಂದು ತಿಳಿಸಿದೆ.
1. ಮಖಾನಿ ಗ್ರಾಮ ಸ್ಮಶಾನಕ್ಕೆ ಸೇರಿದ್ದು ಎಂದು ವಕ್ಫ್ ಮಂಡಳಿ ಹೇಳುತ್ತದೆ; ಆದರೆ ಈ ಭೂಮಿಯ ಮಾಲೀಕತ್ವದ ಬಗ್ಗೆ ಯಾವುದೇ ಪುರಾವೆಗಳನ್ನು ಸಲ್ಲಿಸಿಲ್ಲ.
2. ಗ್ರಾಮಸ್ಥರ ಮನೆಗಳು, ಕೃಷಿ ಭೂಮಿ, ಕಟ್ಟೆ ಮತ್ತು ಶಿವಲಿಂಗವನ್ನು ಸಹ ವಕ್ಫ್ ಮಂಡಳಿಯ ಆಸ್ತಿ ಎಂದು ಘೋಷಿಸಲಾಗಿದೆ.
3. ಆಶ್ಚರ್ಯಕರ ಸಂಗತಿಯೆಂದರೆ, ಸರಕಾರಿ ದಾಖಲೆಗಳಲ್ಲಿ ಈ ಭೂಮಿ ಸರಕಾರದ ಆಸ್ತಿ ಎಂದು ದಾಖಲಿಸಿದ್ದರೂ ವಕ್ಫ್ ಮಂಡಳಿ ಅದನ್ನು ತನ್ನದೆಂದು ಹೇಳಿಕೊಳ್ಳುತ್ತಿದೆ.
4. ಈ ಗ್ರಾಮವು ಖಾದರ್ ಖಾನ್ ಎಂಬ ವ್ಯಕ್ತಿಗೆ ಸೇರಿದ್ದು, ಆತ ಈ ಭೂಮಿಯನ್ನು ತಮಗೆ ದಾನವಾಗಿ ನೀಡಿದ್ದಾನೆ ಎಂದು ವಕ್ಫ್ ಮಂಡಳಿ ಹೇಳಿಕೊಂಡಿದೆ; ಆದರೆ ಖಾದರ್ ಖಾನ್ ಎಂಬ ವ್ಯಕ್ತಿ ಇಲ್ಲಿ ಎಂದಿಗೂ ವಾಸಿಸಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಹಲವು ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿರುವ ಹಿಂದೂ ಕುಟುಂಬಗಳು ತಮ್ಮ ಭೂಮಿಯನ್ನು ಬಿಟ್ಟುಕೊಡದಿರಲು ಮತ್ತು ವಕ್ಫ್‌ನ ಈ ಕೃತ್ಯದ ವಿರುದ್ಧ ಹೋರಾಡಲು ನಿರ್ಧರಿಸಿದ್ದಾರೆ. ತಮ್ಮ ಮನೆಗಳು ಮತ್ತು ತಮ್ಮ ಶ್ರದ್ಧೆಯ ಸಂಕೇತವಾದ ಶಿವಲಿಂಗದ ಮೇಲೆ ಸಹ ಹಕ್ಕು ಸಾಧಿಸುತ್ತಿರುವುದರಿಂದ ಜನರು ಆಕ್ರೋಶಗೊಂಡಿದ್ದಾರೆ.
ಸಂಪಾದಕೀಯ ನಿಲುವುಮುಂದೆ “ಇಡೀ ಭಾರತ ಭೂಮಿ ವಕ್ಫ್ ಮಂಡಳಿಯ ಆಸ್ತಿ, ಔರಂಗಜೇಬನು ಅದನ್ನು ದಾನವಾಗಿ ನೀಡಿದ್ದಾನೆ” ಎಂದು ವಕ್ಫ್ ಮಂಡಳಿ ಹೇಳಿದರೆ ಆಶ್ಚರ್ಯಪಡಬೇಕಾಗಿಲ್ಲ! “ನಂಬುವಂತೆ ಸುಳ್ಳು ಹೇಳು” ಎಂಬ ವೃತ್ತಿಯ ವಕ್ಫ್ ಮಂಡಳಿಯನ್ನು ವಿಸರ್ಜಿಸುವುದೇ ದೇಶದ ಹಿತಾಸಕ್ತಿಯಾಗಿದೆ! |