ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಈ ವರ್ಷದ ಫೆಬ್ರವರಿ 26 ರಂದು ಮಹಾಶಿವರಾತ್ರಿಯಂದು 56 ವರ್ಷಗಳ ನಂತರ ಸಂಭಲ್‌ನ ಮುಚ್ಚಿದ್ದ ಶಿವಮಂದಿರದಲ್ಲಿ ಜಲಾಭಿಷೇಕ ಕಾರ್ಯಕ್ರಮ ನಡೆಯಿತು. ಒಂದು ದುರುದ್ದೇಶಪೂರಿತ ಪಿತೂರಿಯ ಭಾಗವಾಗಿ ಸಂಭಲ್‌ನ 68 ತೀರ್ಥಕ್ಷೇತ್ರಗಳು ಮತ್ತು 19 ಬಾವಿಗಳ ಗುರುತುಗಳನ್ನು ಅಳಿಸುವ ಪ್ರಯತ್ನ ಮಾಡಲಾಗಿತ್ತು.
ಇಲ್ಲಿ ಈಗ 68 ತೀರ್ಥಕ್ಷೇತ್ರಗಳಲ್ಲಿ 54 ತೀರ್ಥಕ್ಷೇತ್ರಗಳು ಮತ್ತು 19 ಬಾವಿಗಳನ್ನು ಪತ್ತೆ ಮಾಡಲಾಗಿದೆ. ಅನೇಕ ವರ್ಷಗಳಲ್ಲಿ ಇವುಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿತ್ತು. ನಮಗೆ ಸೇರಿದ್ದು ನಮಗೆ ಸಿಗಲೇಬೇಕು. ಇದಲ್ಲದೆ ಬೇರೇನೂ ಇಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಧಾನಸಭೆಯಲ್ಲಿ ಗುಡುಗಿದರು.
संभल में 56 वर्षों के बाद शिव मंदिर में जलाभिषेक का कार्यक्रम भी हुआ…
हमने तो वही कहा है कि जो हमारा है, वह हमें मिल जाना चाहिए… pic.twitter.com/7lzDAuyJgH
— Yogi Adityanath (@myogiadityanath) March 4, 2025
ಸಂಭಲ್‌ನಲ್ಲಿ ಕಲಿಯುಗದಲ್ಲಿ ವಿಷ್ಣುವಿನ ಕಲ್ಕಿ ಅವತಾರವಾಗಲಿದೆ. ಇಲ್ಲಿ ಪೃಥ್ವಿರಾಜ್ ಚೌಹಾಣ್ ಅವರ ಕಾಲದಲ್ಲಿ ಶ್ರೀ ಹರಿಹರ ದೇವಸ್ಥಾನವನ್ನು ನಿರ್ಮಿಸಲಾಗಿತ್ತು. ಈ ದೇವಾಲಯದ ಆವರಣದಲ್ಲಿ ಪ್ರಾಚೀನ ನಕ್ಷೆಯ ಪ್ರಕಾರ 68 ತೀರ್ಥಕ್ಷೇತ್ರಗಳು ಮತ್ತು 19 ಬಾವಿಗಳಿವೆ. ಅವುಗಳನ್ನು ಪತ್ತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ದೇವಾಲಯವನ್ನು ಮಸೀದಿಯನ್ನಾಗಿ ಪರಿವರ್ತಿಸಲಾಗಿದ್ದು, ಅದನ್ನು ಮರಳಿ ಪಡೆಯಲು ಹಿಂದೂಗಳು ನ್ಯಾಯಾಲಯದ ಮೂಲಕ ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಈ ಹೇಳಿಕೆ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.
https://twitter.com/SanatanPrabhat/status/1897334702073372937
ಯೋಗಿ ಆದಿತ್ಯನಾಥ್ ಅವರು ಮಾತು ಮುಂದುವರೆಸಿ,
1. 46 ವರ್ಷಗಳಿಂದ ಮುಚ್ಚಿದ್ದ ಖಗ್ಗು ಸರಾಯ್‌ನ ಕಾರ್ತಿಕೇಶ್ವರ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಅದೇ ರೀತಿ ಸರಯಾತ್ರಿಯಲ್ಲಿ ವರ್ಷಗಳಿಂದ ಮುಚ್ಚಿದ್ದ ರಾಧಾಕೃಷ್ಣ ದೇವಸ್ಥಾನದ ಬಾಗಿಲು ತೆರೆಯಲಾಯಿತು. ಮೆಟ್ಟಿಲುಗಳಿರುವ ಒಂದು ದೊಡ್ಡ ಬಾವಿ ಪತ್ತೆಯಾಗಿದೆ.
2. ಅಡ್ವೊಕೇಟ್ ಕಮಿಷನರ್ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸಮೀಕ್ಷಾ ವರದಿಗಳಿಂದಲೂ ಇಲ್ಲಿನ ಶಾಹಿ ಜಾಮಾ ಮಸೀದಿಯ ಸತ್ಯ ಬಹಿರಂಗವಾಗಿದೆ. ವಕ್ಫ್ ಆಸ್ತಿಯ ಹೆಸರಿನಲ್ಲಿ ನಡೆಯುವ ಆಟ ಬಯಲಾಗಿದೆ.
3. ಸಂಭಲ್ ಅನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ದೊಡ್ಡ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇದು ಸ್ಥಳೀಯ ವ್ಯವಹಾರಕ್ಕೆ ಉತ್ತೇಜನ ನೀಡುತ್ತದೆ.