೧. ಜಗತ್ತಿನ ಸಾರವು ಧರ್ಮವೇ ಆಗಿದೆ
ಧರ್ಮಾದರ್ಥಃ ಪ್ರಭವತಿ ಧರ್ಮಾತ್ಪ್ರಭವತೇ ಸುಖಮ್ |
ಧರ್ಮೇಣ ಲಭತೇ ಸರ್ವಂ ಧರ್ಮಸಾರಮಿದಂ ಜಗತ್ ||
– ವಾಲ್ಮೀಕಿರಾಮಾಯಣ, ಅರಣ್ಯಕಾಂಡ, ಸರ್ಗ ೮, ಶ್ಲೋಕ ೨೬
ಅರ್ಥ : ಧರ್ಮದಿಂದ ಸಂಪತ್ತು ಪ್ರಾಪ್ತವಾಗುತ್ತದೆ. ಧರ್ಮದಿಂದ ಸುಖ ಉತ್ಪನ್ನವಾಗುತ್ತದೆ. ಧರ್ಮದಿಂದ ಎಲ್ಲವೂ ಪ್ರಾಪ್ತವಾಗುತ್ತದೆ. ಧರ್ಮವೇ ಎಲ್ಲ ಜಗತ್ತಿನ ಸಾರವಾಗಿದೆ.
೨. ಮನುಷ್ಯನನ್ನು ಮನುಷ್ಯನನ್ನಾಗಿಸುವ ಧರ್ಮಕ್ಕೆ ‘ಧರ್ಮ’ ಮತ್ತು ರಾಕ್ಷಸನನ್ನಾಗಿಸುವ ಧರ್ಮಕ್ಕೆ ‘ಅಧರ್ಮ’ ಎಂದು ಸಂಬೋಧಿಸಬೇಕು !
ಪ್ರಾಣಿಗಳಲ್ಲಿ ದಯೆ, ಸತ್ಯ, ಸಹೋದರ ಪ್ರೇಮ ಮತ್ತು ತಾಯಿ-ಸಹೋದರಿ, ಮಗಳ ಪವಿತ್ರ ಸಂಬಂಧ ಎಲ್ಲಿದೆ ? ಅದು ಕೇವಲ ಮನುಷ್ಯರಲ್ಲಿದೆ; ಏಕೆಂದರೆ ಮನುಷ್ಯರಿಗೆ ಧರ್ಮವಿದೆ. ಧರ್ಮದಿಂದ ಮನುಷ್ಯನು ‘ಮನುಷ್ಯ’ನಾದನು. ಯಾವ ಧರ್ಮದಿಂದ ಮನುಷ್ಯನು ರಾಕ್ಷಸನಾಗುತ್ತಾನೆಯೋ, ಅದು ಧರ್ಮವಾಗಿರದೇ ಅಧರ್ಮವಾಗಿದೆ; ಆದುದರಿಂದ ಮನುಷ್ಯನು ಧರ್ಮದಿಂದ ನಡೆದುಕೊಳ್ಳಬೇಕು. ‘ಧರ್ಮಂ ಚರ’ ಇದು ಭಾರತೀಯ ಸಂಸ್ಕೃತಿಯ ಸಂದೇಶವಾಗಿದೆ.
೩. ಅಧರ್ಮದ ಫಲ ವಿನಾಶವಾಗಿದೆ
ವ್ಯಾಸಮುನಿಗಳು ಹೇಳುತ್ತಾರೆ, ‘ನಾನು ಎರಡೂ ಕೈಗಳನ್ನು ಮೇಲೆತ್ತಿ ಹೇಳುತ್ತೇನೆ, ಯಾವ ಧರ್ಮದಿಂದ ಅರ್ಥ ಮತ್ತು ಕಾಮ ಪ್ರಾಪ್ತವಾಗುತ್ತದೆಯೋ, ಆ ಧರ್ಮವನ್ನು ಏಕೆ ಪಾಲಿಸುವುದಿಲ್ಲ; ಆದರೆ ನನ್ನ ಮಾತುಗಳನ್ನು ಯಾರೂ ಕೇಳುವುದಿಲ್ಲ.’ ವ್ಯವಹಾರದಲ್ಲಿ ಮನುಷ್ಯನಿಗೆ ಇದರ ವಿರುದ್ಧ ಅನುಭವ ಬರುತ್ತದೆ. ಅಧರ್ಮದಿಂದ ಧನ ಮತ್ತು ಕಾಮ ಪ್ರಾಪ್ತವಾಗುತ್ತದೆ, ಇದು ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ ಅಧರ್ಮದ ಫಲ ವಿನಾಶವೇ ಆಗಿದೆ.
೪. ಧರ್ಮ ಅಂದರೆನೇ ಅಸ್ತಿತ್ವ
ಧರ್ಮದಿಂದ ಮನುಷ್ಯನಿಗೆ ಅಸ್ತಿತ್ವವಿದೆ; ಆದುದರಿಂದ ಸ್ವಾಮಿ ಚಿನ್ಮಯಾನಂದರು ಹೇಳುತ್ತಾರೆ, ಧರ್ಮವೆಂದರೆ ಅಸ್ತಿತ್ವ. ಅಗ್ನಿಯ ಧರ್ಮ ಸುಡುವುದು, ನೀರಿನ ಧರ್ಮ ಒದ್ದೆ ಮಾಡುವುದು. ಅದರಲ್ಲಿಯೇ ಅವುಗಳ ಅಸ್ತಿತ್ವವಿರುತ್ತದೆ; ಆದುದರಿಂದ ಮಾನವನ ಅಸ್ತಿತ್ವ ಯಾವುದರಲ್ಲಿದೆಯೋ ಅದು ಅವನ ಧರ್ಮವಾಗಿದೆ. ಇದನ್ನು ನೋಡಿದರೆ ಇತರ ಧರ್ಮಗಳು ಅಂದರೆ ಪಂಥ, ಸಂಪ್ರದಾಯಗಳಾಗಿವೆ. ಹಿಂದೂ ಧರ್ಮವೇ ‘ಧರ್ಮ’ ಎಂಬ ಪದಕ್ಕೆ ಅರ್ಹವಾಗಿದೆ.