ಸನಾತನ ನಿರ್ಮಿತ ದೇವರ ಸಾತ್ತ್ವಿಕ ಚಿತ್ರಗಳಲ್ಲಿ ಬಹಳ ಚೈತನ್ಯವಿದೆ ಮತ್ತು ಚಿತ್ರಗಳ ಆಕಾರದಂತೆ ಅವುಗಳ ಸಕಾರಾತ್ಮಕ ಊರ್ಜೆ ಹೆಚ್ಚುತ್ತಿರುವುದು !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವು ‘ಯು.ಎ.ಎಸ್. (ಯುನಿವರ್ಸಲ್‌ ಔರಾ ಸ್ಕ್ಯಾನರ್‌)’ ಈ ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

‘ಉಪಾಸನೆ ಮಾಡುವಾಗ ಉಪಾಸಕನಿಗೆ ಆನಂದ ಮತ್ತು ಶಾಂತಿಯ ಅನುಭೂತಿ ಬರಲು ತನ್ನ ಉಪಾಸ್ಯದೇವತೆಯ ಬಗ್ಗೆ ಭಾವಜಾಗೃತವಾಗುವುದು ಮಹತ್ವದ್ದಾಗಿರುತ್ತದೆ. ಉಪಾಸನೆಯಲ್ಲಿನ ಉಪಾಸ್ಯ ದೇವತೆಯ ಚಿತ್ರದಲ್ಲಿ ದೇವತೆಯ ತತ್ತ್ವವು (ತಾರಕ ರೂಪವಿದ್ದರೆ ಸಾತ್ತ್ವಿಕತೆ) ಎಷ್ಟು ಹೆಚ್ಚು ಪ್ರಮಾಣದಲ್ಲಿರುತ್ತದೆಯೋ, ಅಷ್ಟು ಆ ಚಿತ್ರವು ಉಪಾಸಕನಿಗೆ ಆ ದೇವತೆಯ ತತ್ತ್ವವನ್ನು ಗ್ರಹಿಸಲು ಹೆಚ್ಚು ಉಪಯುಕ್ತವಾಗುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಸಾಧಕ-ಚಿತ್ರಕಾರರು ಚಿತ್ರಿಸಿದ ಶ್ರೀ ಗಣಪತಿ, ಶ್ರೀರಾಮ, ಶ್ರೀಕೃಷ್ಣ, ಹನುಮಂತ, ಶ್ರೀ ದತ್ತ, ಶಿವ, ಶ್ರೀ ಲಕ್ಷ್ಮಿ ಮತ್ತು ಶ್ರೀ ದುರ್ಗಾ ಈ ದೇವತೆಗಳ ಚಿತ್ರಗಳನ್ನು ಸನಾತನ ಸಂಸ್ಥೆಯು ಪ್ರಕಾಶನ ಮಾಡಿದೆ. ಈ ಚಿತ್ರಗಳಲ್ಲಿ ಆಯಾ ದೇವತೆಗಳ ತತ್ತ್ವಗಳು ಬಂದಿವೆ. ೨೦೦೦ ದಿಂದ ೨೦೧೯ ರ ಅವಧಿಯಲ್ಲಿ ದೇವತೆಗಳ ಚಿತ್ರಗಳಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಕಾಲಕ್ಕನುಸಾರ ಹೇಳಿದ್ದ ಬದಲಾವಣೆಗಳನ್ನು ಸಹ ಮಾಡಲಾಯಿತು. ೨೦೧೯ ರಲ್ಲಿ ಸನಾತನ-ನಿರ್ಮಿತ ದೇವತೆಗಳ ೮ ಸಾತ್ತ್ವಿಕ ಚಿತ್ರಗಳಲ್ಲಿನ ಸರಾಸರಿ ಸಾತ್ತ್ವಿಕತೆಯ ಪ್ರಮಾಣ ಶೇ. ೩೧ ರಷ್ಟಿದೆ. ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳು ವಿವಿಧ ಆಕಾರದಲ್ಲಿ ಲಭ್ಯವಿವೆ. ಸನಾತನ ನಿರ್ಮಿತ ಶ್ರೀಕೃಷ್ಣನ ವಿವಿಧ ಆಕಾರದಲ್ಲಿನ ಚಿತ್ರಗಳಿಂದ ಪ್ರಕ್ಷೇಪಿಸುವ ಸ್ಪಂದನಗಳನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ಜನವರಿ ೨೦೨೦ ರಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯುನಿವರ್ಸಲ್‌ ಔರಾ ಸ್ಕ್ಯಾನರ್’ ಉಪಕರಣವನ್ನು ಉಪಯೋಗಿಸಲಾಯಿತು. ಈ ಉಪಕರಣದಿಂದ ವಾಸ್ತು, ವಸ್ತು ಮತ್ತು ವ್ಯಕ್ತಿಯಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಯನ್ನು ಅಳೆಯಬಹುದು.

೧. ಸನಾತನ-ನಿರ್ಮಿತ ಶ್ರೀಕೃಷ್ಣನ ವಿವಿಧ ಆಕಾರಗಳಲ್ಲಿನ ಸಾತ್ತ್ವಿಕ ಚಿತ್ರಗಳು

ಶ್ರೀಕೃಷ್ಣನ ಸಾತ್ತ್ವಿಕ ಚಿತ್ರಗಳ ವಿವಿಧ ಆಕಾರಗಳನ್ನು ಮುಂದೆ ಕೊಡಲಾಗಿದೆ. ಈ ಎಲ್ಲ ಚಿತ್ರಗಳಲ್ಲಿ ಶೇ. ೩೧ ರಷ್ಟು ಸಾತ್ತ್ವಿಕತೆಯಿದೆ.

ಅ. ಚಿಕ್ಕ ಆಕಾರದ ಚಿತ್ರ (೨ * ೩ ಅಂಗುಲ) : ಈ ಚಿತ್ರವು ಆಕಾರದಿಂದ ಚಿಕ್ಕದಾಗಿರುವುದರಿಂದ ವ್ಯಕ್ತಿಯು ತನ್ನ ಹತ್ತಿರ (ಕಿಸೆಯಲ್ಲಿ ಅಥವಾ ಪಾಕೀಟಿನಲ್ಲಿ) ಇಡಬಹುದು. (ಅಂಗುಲ ಅಂದರೆ ಒಂದು ಇಂಚು)

ಆ. ಮಧ್ಯಮ ಆಕಾರದ ಚಿತ್ರ (೫ * ೭ ಅಂಗುಲ) : ಮಧ್ಯಮ ಆಕಾರದ ಚಿತ್ರವನ್ನು ವ್ಯಕ್ತಿಯು ತನ್ನ ಮನೆಯಲ್ಲಿನ ದೇವರಕೋಣೆಯಲ್ಲಿಡಬಹುದು. (ಅಂಗುಲ ಅಂದರೆ ಒಂದು ಇಂಚು)

ಇ. ದೊಡ್ಡ ಆಕಾರದ ಚಿತ್ರ (೮ * ೧೦ ಅಂಗುಲ) : ದೊಡ್ಡ ಆಕಾರದ ಚಿತ್ರವನ್ನು ವ್ಯಕ್ತಿಯು ತನ್ನ ಮನೆಯಲ್ಲಿ, ದೇವರಕೋಣೆಯಲ್ಲಿ, ಹಾಗೆಯೇ ಧ್ಯಾನಮಂದಿರದಲ್ಲಿಡಬಹುದು.

ಈ. ೧೪ * ೧೯ ಅಂಗುಲ ಆಕಾರದ ದೊಡ್ಡ ಚಿತ್ರ : ಈ ಚಿತ್ರವನ್ನು ಸತ್ಸಂಗ ಅಥವಾ ಪ್ರವಚನಗಳನ್ನು ಆಯೋಜಿಸಿದ ಸ್ಥಳದಲ್ಲಿಡಬಹುದು.

ಉ. ೨೦ * ೨೭ ಅಂಗುಲ ಆಕಾರದ ದೊಡ್ಡ ಚಿತ್ರ : ಸಮಷ್ಟಿಯಲ್ಲಿನ ಧರ್ಮಸಭೆ ಇತ್ಯಾದಿಗಳ ದೊಡ್ಡ ಉಪಕ್ರಮಗಳ ಸ್ಥಳದಲ್ಲಿ ಇಡಬಹುದು.

೨. ಪರೀಕ್ಷಣೆಯಲ್ಲಿನ ನೊಂದಣಿಯ ವಿವೇಚನೆ

ಸನಾತನ-ನಿರ್ಮಿತ ಶ್ರೀಕೃಷ್ಣನ ವಿವಿಧ ಆಕಾರದಲ್ಲಿನ ಸಾತ್ತ್ವಿಕ ಚಿತ್ರಗಳ ‘ಯುನಿವರ್ಸಲ್‌ ಔರಾ ಸ್ಕ್ಯಾನರ್’ ಈ ಉಪಕರಣದ ಮೂಲಕ ಪರೀಕ್ಷಣೆಯನ್ನು ಮಾಡಲಾಯಿತು. ಈ ನೋಂದಣಿಯನ್ನು ಮುಂದೆ ಕೊಡಲಾಗಿದೆ.

೨ ಅ. ಸನಾತನ-ನಿರ್ಮಿತ ಶ್ರೀಕೃಷ್ಣನ ವಿವಿಧ ಆಕಾರದಲ್ಲಿನ ಸಾತ್ತ್ವಿಕ ಚಿತ್ರಗಳಲ್ಲಿ ತುಂಬಾ ಸಕಾರಾತ್ಮಕ ಊರ್ಜೆ (ಚೈತನ್ಯ) ಇದೆ : ವಿವಿಧ ಆಕಾರಗಳಲ್ಲಿ ಸನಾತನ ನಿರ್ಮಿತ ಶ್ರೀಕೃಷ್ಣನ ಐದು ಚಿತ್ರಗಳಲ್ಲಿಯೂ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ. ಚಿತ್ರಗಳ ಆಕಾರಕ್ಕನುಸಾರ ಅವುಗಳಲ್ಲಿನ ಸಕಾರಾತ್ಮಕ ಊರ್ಜೆ ಉತ್ತರೋತ್ತರ ಹೆಚ್ಚಾಯಿತು. ೨೦ * ೨೭ ಅಂಗುಲದ ದೊಡ್ಡ ಚಿತ್ರದಲ್ಲಿ ಅತ್ಯಧಿಕ ಸಕಾರಾತ್ಮಕ ಊರ್ಜೆ ಇದೆ. ಇದು ಮುಂದೆ ಕೊಟ್ಟಿರುವ ನೋಂದಣಿಯಿಂದ ಗಮನಕ್ಕೆ ಬರುತ್ತದೆ.

೩. ಪರೀಕ್ಷಣೆಯಲ್ಲಿನ ನೋಂದಣಿಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

ಅ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕ-ಚಿತ್ರಕಾರರಿಗೆ ಕಾಲಕ್ಕನುಸಾರ ಮಾಡಿದ ಮಾರ್ಗದರ್ಶನದಿಂದ ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳಲ್ಲಿ ಸರಾಸರಿ ಶೇ. ೩೧ ರಷ್ಟು ಸಾತ್ತ್ವಿಕತೆ ಬಂದಿದೆ : ಸ್ಪಂದನ ಶಾಸ್ತ್ರಕ್ಕನುಸಾರ ಯಾವುದಾದರೊಂದು ದೇವತೆಯ ಚಿತ್ರ ಅಥವಾ ಮೂರ್ತಿ ಅದರ ಮೂಲ ರೂಪದೊಂದಿಗೆ ಎಷ್ಟು ಹೆಚ್ಚು ಹೋಲುತ್ತದೆಯೋ, ಅಷ್ಟು ಆ ಚಿತ್ರದಲ್ಲಿ ಅಥವಾ ಮೂರ್ತಿಯಲ್ಲಿ ಆ ದೇವತೆಯ ಸ್ಪಂದನಗಳು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಚಿತ್ರದಲ್ಲಿ ದೇವತೆಯ ಆಕಾರ, ಅವಳ ಅವಯವ, ಅವಳ ಆಭರಣಗಳು, ಅವಳ ಶಸ್ತ್ರಗಳು ಇತ್ಯಾದಿ ಘಟಕಗಳು ದೇವತೆಯ ಪ್ರತ್ಯಕ್ಷದಲ್ಲಿ ಆಯಾ ಘಟಕಗಳೊಂದಿಗೆ ಎಷ್ಟು ಪ್ರಮಾಣದಲ್ಲಿ ಹೋಲುತ್ತದೆಯೋ, ಅದರ ಮೇಲಿನಿಂದ ಆ ಚಿತ್ರದ ಒಟ್ಟು ಸತ್ಯತೆಯನ್ನು ನಿರ್ಧರಿಸಲಾಗುತ್ತದೆ.

ದೇವತೆಯ ಚಿತ್ರವನ್ನು ಬಿಡಿಸಿದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ಆ ಚಿತ್ರದ ಸಾತ್ತ್ವಿಕತೆಯನ್ನು ಸೂಕ್ಷ್ಮದಿಂದ ಅರಿತು ಅದನ್ನು ಶೇಕಡಾವಾರುಗಳ ಪ್ರಮಾಣದಲ್ಲಿ ಹೇಳಿದ್ದಾರೆ. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕ-ಚಿತ್ರಕಾರರಿಗೆ ಕಾಲಾನುಸಾರ ಮಾಡಿದ ಮಾರ್ಗದರ್ಶನದ ಫಲವೆಂದರೆ ದೇವತೆಯ ಚಿತ್ರದಲ್ಲಿನ ಸಾತ್ತ್ವಿಕತೆಯ ಪ್ರಮಾಣ ಉತ್ತರೋತ್ತರ ಹೆಚ್ಚುತ್ತಾ ಹೋಯಿತು. ಈ ಕಲಿಯುಗದಲ್ಲಿ ಸಾಮಾನ್ಯ ಮನುಷ್ಯನು ನಿರ್ಮಿಸಿದ ದೇವತೆಯ ಯಾವುದಾದರೊಂದು ಕಲಾಕೃತಿಯಲ್ಲಿ, ಅಂದರೆ ಚಿತ್ರ ಅಥವಾ ಮೂರ್ತಿಯಲ್ಲಿ ಹೆಚ್ಚೆಂದರೆ ಶೇ. ೩೦ ರಷ್ಟು ಸಾತ್ತ್ವಿಕತೆ ಅಂದರೆ ಸತ್ಯತೆ ಬರುತ್ತದೆ. ೨೦೧೯ ರಲ್ಲಿನ ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳಲ್ಲಿ ಅದಕ್ಕಿಂತಲೂ ಹೆಚ್ಚು (ಶೇ. ೩೧ ರಷ್ಟು) ಸಾತ್ತ್ವಿಕತೆ ಬರುವುದು, ಇದು ಸನಾತನದ ಸಾಧಕ-ಚಿತ್ರಕಾರರ ಉಚ್ಚ ಭಾವಾವಸ್ಥೆಯ ಪರಿಣಾಮವಾಗಿದೆ.

೩ ಆ. ಸನಾತನ-ನಿರ್ಮಿತ ಶ್ರೀಕೃಷ್ಣನ ಸಾತ್ತ್ವಿಕ ಚಿತ್ರಗಳ ಆಕಾರಕ್ಕನುಸಾರ ಅವುಗಳಲ್ಲಿನ ಸಕಾರಾತ್ಮಕ ಊರ್ಜೆ ಉತ್ತರೋತ್ತರ ಹೆಚ್ಚುತ್ತಿದೆ : ದೇವತೆಯ ಚಿತ್ರದ ಆಕಾರಕ್ಕನುಸಾರ ಅದರಿಂದ ಪ್ರಕ್ಷೇಪಿಸುವ ಸ್ಪಂದನಗಳು ಎಷ್ಟು ದೂರದ ವರೆಗೆ ಪ್ರಕ್ಷೇಪಿಸುತ್ತವೆ, ಎಂಬುದು ನಿರ್ಧಾರವಾಗುತ್ತದೆ. ಆದ್ದರಿಂದ ಚಿತ್ರದ ಆಕಾರವು ಎಷ್ಟು ಚಿಕ್ಕದು ಅಥವಾ ದೊಡ್ಡದಾಗಿದ್ದರೆ ಆ ಪ್ರಮಾಣದಲ್ಲಿ ಅದರಿಂದ ಪ್ರಕ್ಷೇಪಿಸುವ ಸ್ಪಂದನಗಳು ಕಡಿಮೆ ಅಥವಾ ಹೆಚ್ಚು ದೂರದ ವರೆಗೆ ಪ್ರಕ್ಷೇಪಿಸುತ್ತವೆ. ಸನಾತನ-ನಿರ್ಮಿತ ಶ್ರೀಕೃಷ್ಣನ ಸಾತ್ತ್ವಿಕ ಚಿತ್ರಗಳಲ್ಲಿ ಸಾತ್ತ್ವಿಕತೆ ಸರಾಸರಿ ಶೇ. ೩೧ ರಷ್ಟಿದೆ. ಆದ್ದರಿಂದ ಶ್ರೀಕೃಷ್ಣನ ಐದು ಆಕಾರಗಳಲ್ಲಿನ ಚಿತ್ರಗಳಲ್ಲಿಯೂ ತುಂಬಾ ಸಕಾರಾತ್ಮಕ ಊರ್ಜೆ ಕಂಡುಬಂದಿತು ಮತ್ತು ಅವುಗಳ ಪ್ರಮಾಣವು ಚಿತ್ರಗಳ ಆಕಾರಕ್ಕನುಸಾರವಾಗಿ ಉತ್ತರೋತ್ತರ ಹೆಚ್ಚುತ್ತಾ ಇದೆ.

೩ ಇ. ಸನಾತನ-ನಿರ್ಮಿತ ಶ್ರೀಕೃಷ್ಣನ ೨೦ * ೨೭ ಅಂಗುಲ (ಇಂಚು) ಆಕಾರದ ದೊಡ್ಡ ಚಿತ್ರದಲ್ಲಿ ಎಲ್ಲಕ್ಕಿಂತ ಹೆಚ್ಚು ಸಕಾರಾತ್ಮಕ ಊರ್ಜೆ ಇರುವುದರ ಕಾರಣ : ಪರೀಕ್ಷಣೆಯಲ್ಲಿನ ಶ್ರೀಕೃಷ್ಣನ ಒಟ್ಟು ೫ ಚಿತ್ರಗಳ ಪೈಕಿ ಮೊದಲನೇ ೪ ಚಿತ್ರಗಳಲ್ಲಿ ಶ್ರೀಕೃಷ್ಣನ ಚಿತ್ರವು ಮೊಣಕಾಲುಗಳ ವರೆಗೆ ಇರುವುದರಿಂದ ಅವನ ಚರಣಗಳು ಕಾಣಿಸುವುದಿಲ್ಲ, ೨೦ * ೨೭ ಅಂಗುಲ ಆಕಾರದ ಚಿತ್ರದಲ್ಲಿ ಶ್ರೀಕೃಷ್ಣನ ಚರಣಗಳ ವರೆಗೆ ಅಂದರೆ ಪೂರ್ಣ ರೂಪ ಕಾಣಿಸುತ್ತದೆ. ೨೦ * ೨೭ ಅಂಗುಲ ಆಕಾರದ ಚಿತ್ರದ ಆಕಾರವು ತುಂಬಾ ದೊಡ್ಡದಾಗಿರುವುದರಿಂದ ಮತ್ತು ಅದರಲ್ಲಿ ದೇವತೆಯ ಚರಣಗಳೂ ಕಾಣಿಸುತ್ತಿರುವುದರಿಂದ ಇತರ ಚಿತ್ರಗಳ ತುಲನೆಯಲ್ಲಿ ಈ ಚಿತ್ರದಿಂದ ಅತ್ಯಧಿಕ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಪ್ರಕ್ಷೇಪಿಸಿತು.

೩ ಈ. ಸನಾತನ-ನಿರ್ಮಿತ ಶ್ರೀಕೃಷ್ಣನ ಸಾತ್ತ್ವಿಕ ಚಿತ್ರಗಳು ಶ್ರೀಕೃಷ್ಣತತ್ತ್ವದ ಆಕರ್ಷಣೆಯೊಂದಿಗೆ ಉಪಾಸಕನಲ್ಲಿ ಭಾವನಿರ್ಮಿತಿಯ ದೃಷ್ಟಿಯಿಂದ ಅತ್ಯಂತ ಪೂರಕವಾಗಿವೆ : ಪರಾತ್ಪರ ಗುರು ಡಾಕ್ಟರರ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ತಯಾರಿಸುವುದರ ಉದ್ದೇಶವು ಮುಂದಿನಂತಿತ್ತು – ‘ದೇವತೆಗಳ ಚಿತ್ರಗಳಲ್ಲಿ ಅವರ ತತ್ತ್ವವು ಹೆಚ್ಚೆಚ್ಚು ಆಕರ್ಷಿತವಾಗಿ ಸಮಾಜಕ್ಕೆ (ಉಪಾಸಕನಿಗೆ) ಅದರ ಲಾಭವಾಗಬೇಕು. ಹಾಗೆಯೇ ದೇವತೆಯ ಬಗ್ಗೆ ಉಪಾಸಕನಲ್ಲಿ ಭಾವ ಉತ್ಪನ್ನವಾಗಬೇಕು.’ ದೇವತೆಯ ಚಿತ್ರದಿಂದ, ಅಂದರೆ ಅವರ ಸಗುಣ ರೂಪದಿಂದ ಉಪಾಸಕನಿಗೆ ಉಪಾಸ್ಯ ದೇವತೆಯೊಂದಿಗೆ ಅನುಸಂಧಾನವಿಡಲು ಸುಲಭವಾಗುತ್ತದೆ ಮತ್ತು ದೇವತೆಯ ಬಗ್ಗೆ ಅವರಲ್ಲಿ ಭಾವ ಮೂಡಲು ಸಹಾಯವಾಗುತ್ತದೆ. ಮುಂದೆ ಉಪಾಸಕನ ಭಾವವು ಹೆಚ್ಚಾಗುತ್ತಾ ಹೋದಂತೆ ಅವನ ಭಾವದಿಂದ ದೇವತೆಯ ಚಿತ್ರದಲ್ಲಿ ಒಳ್ಳೆಯ ಬದಲಾವಣೆ ಆಗತೊಡಗುತ್ತದೆ. ಉಪಾಸಕನ ಭಾವದಿಂದ ದೇವತೆಯ ಚಿತ್ರದ ಸಾತ್ತ್ವಿಕತೆಯಲ್ಲಿ ಹೆಚ್ಚಳವಾಗಿರುವುದರಿಂದ ಉಪಾಸಕನಿಗೆ ಆಧ್ಯಾತ್ಮಿಕದೃಷ್ಟಿಯಲ್ಲಿ ಲಾಭವಾಗುವುದು. ಅದಕ್ಕಾಗಿ ಪರಾತ್ಪರ ಗುರು ಡಾಕ್ಟರರು ಸಾಧಕ-ಚಿತ್ರಕಾರರಿಗೆ ಶ್ರೀಕೃಷ್ಣನ ಚಿತ್ರವನ್ನು ವಿವಿಧ ಆಕಾರಗಳಲ್ಲಿ ತಯಾರಿಸುವಾಗ ‘ಶ್ರೀಕೃಷ್ಣನ ಮುಖ ಸ್ಪಷ್ಟವಾಗಿ ಕಾಣಿಸುವಂತೆ ತೆಗೆದುಕೊಳ್ಳಲು ಹೇಳಿದರು.’ (ಚಿಕ್ಕ ಮತ್ತು ಮಧ್ಯಮ ಆಕಾರಗಳ ಚಿತ್ರಗಳಲ್ಲಿ ಶ್ರೀಕೃಷ್ಣನ ಸಂಪೂರ್ಣ ರೂಪ ಎಂದರೆ ಚರಣಗಳ ವರೆಗೆ ತೆಗೆದುಕೊಂಡರೆ ದೇವರ ಮುಖ ಚಿಕ್ಕ ಮತ್ತು ಅಸ್ಪಷ್ಟವಾಗಿ ಕಾಣಿಸುತ್ತದೆ. ಆದ್ದರಿಂದ ಶ್ರೀಕೃಷ್ಣನ ಮೊಣಕಾಲುಗಳ ವರೆಗೆ ಚಿತ್ರಗಳನ್ನು ತೆಗೆದುಕೊಳ್ಳಲಾಯಿತು. ಇದರಲ್ಲಿ ದೇವತೆಯ ಚರಣಗಳು ಕಾಣಿಸುವುದಿಲ್ಲ; ಆದರೆ ಮುಖವು ಸ್ಪಷ್ಟವಾಗಿ ಕಾಣಿಸುತ್ತದೆ.)  ಸಂಕ್ಷಿಪ್ತವಾಗಿ ಹೇಳುವುದಾದರೆ, ಸನಾತನ-ನಿರ್ಮಿತ ಶ್ರೀಕೃಷ್ಣನ ವಿವಿಧ ಆಕಾರಗಳಲ್ಲಿನ (ಪರೀಕ್ಷಣೆಯಲ್ಲಿನ ಮೊದಲ ನಾಲ್ಕು ಆಕಾರಗಳಲ್ಲಿನ) ಸಾತ್ತ್ವಿಕ ಚಿತ್ರಗಳು ‘ಶ್ರೀಕೃಷ್ಣತತ್ತ್ವ’ವನ್ನು ಆಕರ್ಷಿಸಿಕೊಳ್ಳುವುದರೊಂದಿಗೆ ಉಪಾಸಕನಲ್ಲಿ ಭಾವ ಮೂಡುವ ದೃಷ್ಟಿಯಿಂದ ಅತ್ಯಂತ ಪೂರಕವಾಗಿವೆ.

ಟಿಪ್ಪಣಿ – ಭಗವಾನ ಶ್ರೀಕೃಷ್ಣನು ಪೂರ್ಣಾವತಾರನಾಗಿದ್ದಾನೆ. ಆದ್ದರಿಂದ ಅವನ ಚಿತ್ರವನ್ನು ಸಂಪೂರ್ಣವಾಗಿ (ಅಂದರೆ ಚರಣಗಳ ವರೆಗೆ) ತೆಗೆದುಕೊಳ್ಳದೇ ಮೊಳಕಾಲುಗಳ ವರೆಗೆ ತೆಗೆದುಕೊಂಡಿದ್ದರೂ ಅದರಿಂದ ಶ್ರೀಕೃಷ್ಣತತ್ತ್ವದ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಇತರ ದೇವತೆಗಳ ಚಿತ್ರಗಳನ್ನು ಮಾತ್ರ ಪೂರ್ಣ (ಅಂದರೆ ಚರಣಗಳ ವರೆಗೆ) ತೆಗೆದುಕೊಳ್ಳುವುದು ಆವಶ್ಯಕವಾಗಿರುತ್ತದೆ.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೦.೩.೨೦೨೦)

ವಿ-ಅಂಚೆ : [email protected]