ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಸಜೀವದಂತೆಯೆ ನಿರ್ಜೀವ ವಸ್ತುಗಳ ಪರೀಕ್ಷಣೆ ಕೂಡ ಕಲಿಸುವುದು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಸೂಕ್ಷ್ಮಜಗತ್ತಿನ ವಿಷಯದ ಅನುಭವವನ್ನು ಈ ಲೇಖನಮಾಲೆಯಿಂದ ನಾವು ನೋಡುತ್ತಿದ್ದೇವೆ. ಸನಾತನ ಪ್ರಭಾತದ ೨೫/೬ ರ ಸಂಚಿಕೆಯಲ್ಲಿ ಈ ಲೇಖನಮಾಲೆಯ ಕೆಲವು ಭಾಗವನ್ನು ನೋಡಿದೆವು. ಇಂದು ನಾವು ಅದರ ಮುಂದಿನ ಭಾಗವನ್ನು ನೋಡೋಣ.                              (ಭಾಗ ೧೭)

ಈ ಸಂಚಿಕೆಯ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/128455.html
ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ‘ವಾಸ್ತು’ವನ್ನು ಉಪಯೋಗಿಸುವವರ ಮೇಲೆ ಅದರ ಸ್ಪಂದನಗಳು ಅವಲಂಬಿಸಿರುತ್ತವೆ

‘ಗುರುದೇವರು ನಮಗೆ ಹೇಳಿದರು, ”ಹೇಗೆ ನಾವು ಜೀವಂತ ವಿಷಯದ, ಅಂದರೆ ಸಜೀವದ ಪರೀಕ್ಷಣೆ ಮಾಡುತ್ತೇವೋ, ಹಾಗೆಯೇ ನಮಗೆ ನಿರ್ಜೀವ ವಿಷಯಗಳ ಪರೀಕ್ಷಣೆಯನ್ನೂ ಮಾಡಲು ಬರಬೇಕು. ‘ಬಟ್ಟೆ, ಪಾತ್ರೆ, ಗೋಡೆ ಇತ್ಯಾದಿಗಳಲ್ಲಿ ಯಾವ ರೀತಿಯ ಸ್ಪಂದನಗಳಿರುತ್ತವೆ ?’, ಎಂಬುದನ್ನು ಗುರುತಿಸಲು ಸಾಧ್ಯವಾಗಬೇಕು. ಪ್ರತಿಯೊಂದು ವಸ್ತು ಕೂಡ ಸತ್ತ್ವ, ರಜ ಮತ್ತು ತಮ ಈ ತ್ರಿಗುಣಗಳಿಂದ ಆಗಿರುತ್ತದೆ. ‘ಆ ವಸ್ತುವನ್ನು ಯಾರು ಉಪಯೋಗಿಸುತ್ತಾರೆ’, ಎಂಬುದರ ಮೇಲೆ ಅದರಲ್ಲಿರುವ ಸ್ಪಂದನಗಳು ಯಾವ ರೀತಿಯ ಗುಣಗಳನ್ನು ತೋರಿಸುತ್ತವೆ ಎಂಬುದು ಅವಲಂಬಿಸಿರುತ್ತದೆ.”

೨. ವಾಸ್ತುವಿನ ಸ್ಪಂದನಗಳ ವಿಷಯದಲ್ಲಿ ಗುರುದೇವರು ಹೇಳಿದ ಅಂಶಗಳು

ಒಮ್ಮೆ ನಾನು ಒಂದು ವಾಸ್ತುವಿನ ಪರೀಕ್ಷಣೆಗಾಗಿ ಹೋಗಿದ್ದೆ. ಆಗ ನನಗೆ ಆ ವಾಸ್ತು ಕಲುಷಿತಗೊಂಡಿದೆ ಅಂದರೆ ತಾಮಸಿಕವಾಗಿದೆ ಎಂದು ಅನಿಸಿತು; ಆದರೆ ಅದರಲ್ಲಿರುವ ಜನರು ಮಾತ್ರ ಸಾತ್ತ್ವಿಕರಾಗಿದ್ದರು. ‘ಹೀಗೇಕೆ ?’, ಎಂದು ನಾನು ಗುರುದೇವರಲ್ಲಿ ಕೇಳಿದಾಗ ಅವರು ಹೇಳಿದರು, ”ವಾಸ್ತು ನಿರ್ಮಾಣ ಮಾಡುವಾಗ ಅಲ್ಲಿ ಅನೇಕ ಕಾರ್ಮಿಕರು ಕೆಲಸ ಮಾಡುತ್ತಾರೆ. ಅವರ ಸ್ಪಂದನಗಳು ಹಾಗೂ ಮನಸ್ಸಿನಲ್ಲಿರುವ ವಿಚಾರಗಳು ಆ ವಾಸ್ತುವಿನಲ್ಲಿರುತ್ತದೆ, ಅದೇ ರೀತಿ ‘ನಾವು ವಾಸ್ತುವನ್ನು ಕಟ್ಟುವಾಗ ಉಪಯೋಗಿಸುವ ವಸ್ತುಗಳನ್ನು ಯಾವ ಅಂಗಡಿಯಿಂದ ತಂದಿದ್ದೇವೆ’, ಎಂಬುದೂ ಅನ್ವಯವಾಗುತ್ತದೆ. ಅಂಗಡಿಯ ಮಾಲೀಕ ಅಸಾತ್ತ್ವಿಕನಾಗಿದ್ದರೆ, ಅವನ ಅಂಗಡಿಯಲ್ಲಿನ ವಸ್ತುವಿನ ಮೇಲೆ ಆ ಮಾಲೀಕನ ಅಸಾತ್ತ್ವಿಕ ಸ್ಪಂದನದಿಂದ ಪರಿಣಾಮವಾಗಿರುತ್ತದೆ. ‘ವಾಸ್ತು ನಿರ್ಮಿಸುವ ಗುತ್ತಿಗೆದಾರನು ಹೇಗಿದ್ದಾನೆ ? ಅವನ ಕೈಕೆಳಗಿನ ಜನರು ಹೇಗಿದ್ದಾರೆ ?’, ಎಂಬುದು ಸಹ ವಾಸ್ತುವಿನ ಮೇಲೆ ಪರಿಣಾಮ ಬೀರುತ್ತದೆ; ಆದ್ದರಿಂದ ವಾಸ್ತು ನಿರ್ಮಾಣವಾದ ನಂತರ ನಾವು ವಾಸ್ತುಶಾಂತಿ ಮಾಡುತ್ತೇವೆ. ಈ ವಿಧಿಯಿಂದ ದೇವತೆಗಳ ಸ್ಪಂದನಗಳು ವಾಸ್ತುವಿನಲ್ಲಿ ಕಾರ್ಯರತವಾಗುವುದರಿಂದ ವಾಸ್ತುವಿನಲ್ಲಿನ ಮಾಲಿನ್ಯ ನಷ್ಟವಾಗಿ ವಾಸ್ತು ಪವಿತ್ರವಾಗುತ್ತದೆ; ಆದರೆ ‘ವಾಸ್ತುವಿನಲ್ಲಿನ ಪಾವಿತ್ರ್ಯವನ್ನು ಉಳಿಸಿಕೊಳ್ಳುವುದು ಅಲ್ಲಿರುವ ಜನರನ್ನು ಅವಲಂಬಿಸಿರುತ್ತದೆ. ಅಲ್ಲಿ ವಾಸಿಸುವ ಜನರು ಸಾಧನೆ ಮಾಡುವವರಾಗಿದ್ದರೆ, ವಾಸ್ತು ಹೆಚ್ಚೆಚ್ಚು ಸಾತ್ತ್ವಿಕವಾಗುತ್ತಾ ಹೋಗುತ್ತದೆ ಹಾಗೂ ಕೊನೆಗೆ ಅದು ಮಂದಿರವಾಗುತ್ತದೆ. ಹಿಂದೂ ರಾಷ್ಟ್ರದಲ್ಲಿ ಎಲ್ಲರೂ ಸಾಧನೆ ಮಾಡುವುದರಿಂದ ಎಲ್ಲ ವಾಸ್ತುಗಳು ಹಾಗೂ ಪ್ರದೇಶಗಳು ಸಾತ್ತ್ವಿಕವಾಗಿರುತ್ತವೆ; ಆದರೆ ಅದಕ್ಕಾಗಿ ನಾವು ಸಮಾಜದಲ್ಲಿ ಹೆಚ್ಚೆಚ್ಚು ಅಧ್ಯಾತ್ಮ ಪ್ರಸಾರ ಮಾಡಬೇಕು. ಅಂತಿಮವಾಗಿ ಸಮಷ್ಟಿ ಸಾಧನೆಯೇ ಮಹತ್ವದ್ದಾಗಿದೆ ಅಲ್ಲವೆ ?”

೩. ಸರ್ವಜ್ಞತೆಯನ್ನು ಬೋಧಿಸುವ ಶ್ರೇಷ್ಠ ದೇಹಧಾರಿ ಗುರು (ಪರಾತ್ಪರ ಗುರು ಡಾ. ಆಠವಲೆ) ಲಭಿಸಿರುವುದಕ್ಕಾಗಿ ವ್ಯಕ್ತವಾದ ಕೃತಜ್ಞತೆ !

ಗುರುದೇವರು ಅಮೂಲ್ಯ ಮಾರ್ಗದರ್ಶನ ನೀಡಿ ನಮಗೆ ಸಾಧನೆಯ ಮಹತ್ವವನ್ನು ಮನವರಿಕೆ ಮಾಡಿದರು. ಇಂತಹ ವಿವಿಧ ವಿಷಯಗಳ ಅಭ್ಯಾಸ ಮಾಡಲು ಕಲಿಸಿ ಸಾಧನೆಯ ಹೊಸ ದೃಷ್ಟಿಕೋನ ನೀಡುವ ಗುರುಗಳು ಅತಿ ವಿರಳ, ಅಲ್ಲವೇ ? ನಾವು ಈ ವಿಷಯದಲ್ಲಿ ಭಾಗ್ಯವಂತರಾಗಿದ್ದೇವೆ; ಏಕೆಂದರೆ ನಮಗೆ ಸರ್ವಜ್ಞತೆಯನ್ನು ಬೋಧಿಸುವ ದೇಹಧಾರಿ ಗುರು ಲಭಿಸಿದ್ದಾರೆ. ಕಲಿಯುಗದಲ್ಲಿ ಇದು ಅತ್ಯಂತ ದುರ್ಲಭವಾಗಿದೆ. ನಾವು ಇಂತಹ ಗುರುದೇವರ ಆಶ್ರಯದಲ್ಲಿರುವುದರಿಂದ ನಮಗೆ ಆನಂದವೆನಿಸುತ್ತದೆ. ನಮ್ಮಂತೆ ಬೇರೆ ಯಾರಿಲ್ಲ, ನಮಗೆ ನಾವೇ ಸಾಟಿ ! ಎಂಬ ‘ನಮ್ಮ ಈ ಅಭಿಮಾನವು ಸಾರ್ಥಕವಾಗಿದೆ’, ಎಂಬುದರಲ್ಲಿ ಸಂಶಯವಿಲ್ಲ.’      (ಮುಂದುವರಿಯುವುದು)

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಚೆನ್ನೈ ತಮಿಳುನಾಡು. (೧.೩.೨೦೨೨)