ಕೇವಲ ೨ ಸಲ ಆಹಾರವನ್ನು ಸೇವಿಸುವ ಆರೋಗ್ಯದಾಯಕ ಅಭ್ಯಾಸವನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುವವರನ್ನು ನಿರುತ್ಸಾಹಗೊಳಿಸದೇ, ಪ್ರೋತ್ಸಾಹ ನೀಡಿ !

ವೈದ್ಯ ಮೇಘರಾಜ ಪರಾಡಕರ್

೧. ಕೇವಲ ೨ ಸಲ ಆಹಾರವನ್ನು ಸೇವಿಸುವ ವಿಷಯದಲ್ಲಿ ಕೆಲವು ತಪ್ಪು ತಿಳುವಳಿಕೆಗಳು

‘ಓರ್ವ ಸಾಧಕರ ಮನೆಯಲ್ಲಿ ಬೆಳಗಿನ ತಿಂಡಿ ೮ ಗಂಟೆಗೆ, ಮಧ್ಯಾಹ್ನದ ಊಟ ೧೨ ಗಂಟೆಗೆ, ಸಾಯಂಕಾಲದ ಚಹಾ-ತಿಂಡಿ ೪ ಗಂಟೆಗೆ ಮತ್ತು ರಾತ್ರಿಯ ಊಟ ೮ ಗಂಟೆಗೆ ಇದೆ. ಆ ಸಾಧಕನು ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡಿ ‘ಕೇವಲ ಮಧ್ಯಾಹ್ನ ಮತ್ತು ರಾತ್ರಿ ಊಟ ಮಾಡುವೆನು. ಬೆಳಗ್ಗೆ ಮತ್ತು ಸಾಯಂಕಾಲದ ತಿಂಡಿಯನ್ನು ತಿನ್ನುವುದಿಲ್ಲ’, ಎಂದು ನಿಶ್ಚಯಿಸಿದನು. ಹೀಗೆ ಮಾಡಿದಾಗ ಅವನಿಗೆ ಅದು ಸಹಜವಾಗಿ ಸಾಧ್ಯವಾಗತೊಡಗಿತು. ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಅವನಿಗೆ ಮಧ್ಯಾಹ್ನದ ಊಟದ ಸಮಯದಲ್ಲಿ ಚೆನ್ನಾಗಿ ಹಸಿವಾಗತೊಡಗಿತು ಮತ್ತು ಊಟವೂ ಚೆನ್ನಾಗಿ ಹೋಗತೊಡಗಿತು. ಆ ಮನೆಯಲ್ಲಿನ ಇತರ ಜನರು ಮಾತ್ರ ೪-೪ ಸಲ ತಿನ್ನುತ್ತಾರೆ. ೨ ಸಲ ಆಹಾರವನ್ನು ಸೇವಿಸುವುದೇ ಯೋಗ್ಯವಿದೆ ಎಂದು ಅವರಿಗೆ ಇನ್ನೂ ಗಮನಕ್ಕೆ ಬಂದಿಲ್ಲ. ಆದುದರಿಂದ ಅವರು ಈ ಸಾಧಕನಿಗೆ ರಾತ್ರಿ ೮ ರಿಂದ ಮರುದಿನ ಮಧ್ಯಾಹ್ನ ೧೨ ಗಂಟೆಯ ವರೆಗೆ ನೀನು ಏನೂ ತಿನ್ನದಿದ್ದರೆ ನಿನಗೆ ಪಿತ್ತದ ತೊಂದರೆಯಾಗುತ್ತದೆ. ಇಷ್ಟು ಸಮಯ ಉಪವಾಸವಿರುವುದು ಒಳ್ಳೆಯದಲ್ಲ. ಈಗ ನಿನಗೆ ೨ ಸಲ ಆಹಾರ ತೆಗೆದುಕೊಳ್ಳುವುದು ಸಾಧ್ಯವಾಗುತ್ತಿದ್ದರೂ; ಕೆಲವು ತಿಂಗಳುಗಳ ನಂತರ ನಿನ್ನ ಪಿತ್ತವು ಬಹಳ ಹೆಚ್ಚಾಗುವುದು ಮತ್ತು ನಿನಗೆ ತೊಂದರೆಯಾಗುತ್ತದೆ. ನಿನ್ನ ತೂಕವು ಕಡಿಮೆಯಾಗುತ್ತದೆ. ಮೊದಲೇ ತೆಳ್ಳಗಿದ್ದಿ. ಆದುದರಿಂದ ನೀನು ಹೆಚ್ಚು ಸಲ ತಿನ್ನಬೇಕು. ನೀನು ವೈದ್ಯರ ಸಲಹೆ ಪಡೆಯಬೇಕು ಎಂದು ಹೇಳಿದರು.

೨. ಕೇವಲ ೨ ಸಲ ಸಾಕಾಗುವಷ್ಟು ಆಹಾರವನ್ನು ತೆಗೆದುಕೊಳ್ಳುವುದರಿಂದ ಲಾಭವೇ ಆಗುವುದರಿಂದ ಅದನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿ !

ನಾವು ಶರೀರಕ್ಕೆ ಯಾವ ರೀತಿ ಅಭ್ಯಾಸ ಮಾಡಿಸುವೆವೋ ಆ ರೀತಿ ಅಭ್ಯಾಸವಾಗುತ್ತದೆ. ಯಾರೊಬ್ಬರಿಗೆ ೨ ಸಲ ಆಹಾರ ತೆಗೆದುಕೊಳ್ಳುವುದು ಸರಿಹೋಗುತ್ತಿದ್ದರೆ, ರಾತ್ರಿ ೮ ರಿಂದ ಮರುದಿನ ಮಧ್ಯಾಹ್ನ ೧೨ ಗಂಟೆಯ ವರೆಗೆ ಏನೂ ತಿನ್ನದಿದ್ದರೆ ಅವನ ಪಿತ್ತವು ಹೆಚ್ಚಾಗುವುದಿಲ್ಲ. ತದ್ವಿರುದ್ಧ ಉಪವಾಸವಾಗುವುದರಿಂದ ಆಹಾರವು ಸಂಪೂರ್ಣವಾಗಿ ಪಚನವಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಯಾರಿಗೆ ಕೇವಲ ೨ ಸಲ ಊಟ ಮಾಡುವ ಅಭ್ಯಾಸವಿದೆಯೋ, ಅವರಿಗೆ ಶೀತ, ಕೆಮ್ಮು, ಇವುಗಳಂತಹ ತೊಂದರೆಗಳು ಮೇಲಿಂದ ಮೇಲೆ ಆಗುವುದಿಲ್ಲ. ಮೊದಲಿನ ೪ ಸಲ ತಿನ್ನುವ ಅಭ್ಯಾಸವಿರುವಾಗ ಮನಸ್ಸಿನಲ್ಲಿ ದೃಢ ನಿಶ್ಚಯ ಮಾಡಿ ೨ ಸಲ ತಿನ್ನುವ ಅಭ್ಯಾಸವನ್ನು ಮೈಗೂಡಿಸಿಕೊಂಡರೆ ಅಯೋಗ್ಯ ಸಮಯದಲ್ಲಿ ಪಿತ್ತ ತಯಾರಾಗುವುದೂ ನಿಲ್ಲುತ್ತದೆ. ಆದುದರಿಂದ ಕಾಲಾಂತರದಲ್ಲಿ ಪಿತ್ತವು ಹೆಚ್ಚಾಗುವ ಪ್ರಶ್ನೆಯೇ ಬರುವುದಿಲ್ಲ. ೨ ಸಲ ಆಹಾರ ಸೇವಿಸುವ ಅಭ್ಯಾಸವಾದರೆ ಚೆನ್ನಾಗಿ ಹಸಿವಾಗುತ್ತದೆ ಮತ್ತು ಆಹಾರದಲ್ಲಿ ಹೆಚ್ಚಳವಾಗುತ್ತದೆ. ದಿನವಿಡಿಯ ಒಟ್ಟು ಆಹಾರದ ಪ್ರಮಾಣವು ಕಡಿಮೆಯಾಗುವುದಿಲ್ಲ. ವ್ಯಕ್ತಿ ತೆಳ್ಳಗಿದ್ದರೂ ತೂಕವು ಕಡಿಮೆಯಾಗುವುದಿಲ್ಲ. ದಪ್ಪಗಿರುವ ವ್ಯಕ್ತಿಗಳು ತಮ್ಮ ಆಹಾರದ ಮೇಲೆ ನಿಯಂತ್ರಣವನ್ನಿಟ್ಟುಕೊಂಡರೆ ಅವರ ಅನಾವಶ್ಯಕವಾಗಿ ಬೆಳೆದ ಕೊಬ್ಬು ಖಂಡಿತ ಕಡಿಮೆಯಾಗುತ್ತದೆ. ತೂಕವನ್ನು ಹೆಚ್ಚಿಸಲು ಹೆಚ್ಚು ಬಾರಿ ತಿನ್ನುವ ಆವಶ್ಯಕತೆ ಇರುವುದಿಲ್ಲ. ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳುವುದು ಮತ್ತು ಅದನ್ನು ಚೆನ್ನಾಗಿ ಪಚನ ಮಾಡುವುದು ಆವಶ್ಯಕವಾಗಿರುತ್ತದೆ. ಆಹಾರವು ಚೆನ್ನಾಗಿ ಪಚನವಾಗಲು ಪಚನಶಕ್ತಿಯು ಚೆನ್ನಾಗಿರಬೇಕು. ಕೇವಲ ೨ ಸಲ ಆಹಾರವನ್ನು ಸೇವಿಸುವ ಅಭ್ಯಾಸವನ್ನು ಮೈಗೂಡಿಸಿಕೊಂಡರೆ ಪಚನಶಕ್ತಿಯು ಚೆನ್ನಾಗಿರುತ್ತದೆ. ಯಾರಾದರೊಬ್ಬರಿಗೆ ೨ ಸಲ ಆಹಾರವನ್ನು ಸೇವಿಸುವುದು ಸಹಜವಾಗಿ ಸಾಧ್ಯವಾಗುತ್ತಿದ್ದರೆ ಅವರು ವೈದ್ಯರ ಸಲಹೆ ಪಡೆಯುವ ಆವಶ್ಯಕತೆ ಇಲ್ಲ. ತದ್ವಿರುದ್ಧ ಯಾರಿಗೆ ೨ ಸಲ ಆಹಾರವನ್ನು ಸೇವಿಸಲು ಆಗದಿದ್ದರೆ ಅಥವಾ ಹಾಗೆ ಮಾಡಿದಾಗ ತೊಂದರೆಯಾಗುತ್ತಿದ್ದರೆ ಅವರು ೨ ಸಲ ಆಹಾರ ಸೇವಿಸುವುದು ತಮ್ಮಿಂದ ಹೇಗೆ ಸಾಧ್ಯವಾಗುವುದು’, ಎಂದು ತಿಳಿದುಕೊಳ್ಳಲು ವೈದ್ಯರ ಸಲಹೆಯನ್ನು ಖಂಡಿತ ಪಡೆಯಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೧೦.೨೦೨೨)