ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ `ವಕ್ಫ್ ಬೋರ್ಡ್ನ ಲ್ಯಾಂಡ್ ಜಿಹಾದ್?’ ಕುರಿತು ಆನ್‌ಲೈನ್ ವಿಚಾರ ಸಂಕಿರಣ !

ಹಿಂದೂಗಳ ಭೂಮಿಯನ್ನು ಕಬಳಿಸುವ `ವಕ್ಫ್ ಬೋರ್ಡ್ ಕಾಯ್ದೆ’ಯಮೂಲಕ್ಕೆ ಪ್ರಹಾರ ಮಾಡಿ ! – ನ್ಯಾಯವಾದಿ ವಿಷ್ಣು ಜೈನ್, ಸರ್ವೋಚ್ಚ ನ್ಯಾಯಾಲಯ

ನ್ಯಾಯವಾದಿ ವಿಷ್ಣು ಜೈನ್

ಅಂದಿನ ಕಾಂಗ್ರೆಸ್ ಸರಕಾರವು `ವಕ್ಫ್ ಬೋರ್ಡ್ ಅಧಿನಿಯಮ ೧೯೯೫’ ಮೂಲಕ ಮುಸಲ್ಮಾನರಿಗೆ ಪೈಶಾಚಿಕ ಅಧಿಕಾರ ನೀಡಿದೆ. ಇದರಿಂದ ಕೇವಲ ಮುಸಲ್ಮಾನರದ್ದು ಮಾತ್ರವಲ್ಲದೆ ಹಿಂದೂಗಳು, ಕ್ರೈಸ್ತರು ಮತ್ತು ಇತರ ಪಂಥದವರ ಯಾವುದೇ ಆಸ್ತಿಯನ್ನು ವಕ್ಫ್ ಬೋರ್ಡ್ನ ಆಸ್ತಿ ಎಂದು ಘೋಷಿಸಲು ಅಧಿಕಾರ ಸಿಕ್ಕಿದೆ. ಈ ಕಾನೂನನ್ನು ದುರುಪಯೋಗಿಸಿಕೊಂಡು ದೇಶಾದ್ಯಂತ ಬಲವಂತವಾಗಿ ಭೂಮಿ ಕಬಳಿಸಿ `ಲ್ಯಾಂಡ್ ಜಿಹಾದ್’ ನಡೆಸಲಾಗುತ್ತಿದೆ. ಇದರಿಂದಾಗಿ ರೈಲ್ವೇ ಮತ್ತು ರಕ್ಷಣಾ ಪಡೆಗಳ ನಂತರ ದೇಶಾದ್ಯಂತ ೮ ಲಕ್ಷ ಎಕರೆಗೂ ಹೆಚ್ಚು ಭೂಮಿ ವಕ್ಫ್ ಬೋರ್ಡ್ನ ಒಡೆತನದಲ್ಲಿದೆ. ಕಾಂಗ್ರೆಸ್ ಮುಸಲ್ಮಾನರಿಗೆ ನೀಡಿರುವ ಶಕ್ತಿ ಹಾಗೂ ಕಾನೂನು ಅಧಿಕಾರವು ಹಿಂದೂಗಳು, ಕ್ರೈಸ್ತರು ಅಥವಾ ಇತರ ಯಾವುದೇ ಪಂಥದವರ ಬಳಿ ಇಲ್ಲ. ಈ ತಾರತಮ್ಯದ ಕಾನೂನಿನ ವಿರುದ್ಧ ಎಲ್ಲಾ ಹಿಂದೂಗಳು ಒಗ್ಗೂಡಿ ಈ ಕಾನೂನಿನ ಮೂಲಕ್ಕೇ ಪ್ರಹಾರ ಮಾಡಬೇಕು ಮತ್ತು ಈ ಕಾನೂನನ್ನು ಬದಲಾಯಿಸಲು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರು ಕರೆ ನೀಡಿದರು. ತಮಿಳುನಾಡಿನ ತಿರುಚಿರಾಪಲ್ಲಿಯ ತಿರುಚೆತುರೈ ಈ ಪೂರ್ಣ ಗ್ರಾಮವನ್ನು ವಕ್ಫ್ ಬೋರ್ಡ್ನ ಆಸ್ತಿ ಎಂದು ಘೋಷಿಸಿರುವ ಆಘಾತಕಾರಿ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಈ ಕುರಿತು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ `ವಕ್ಫ್ ಬೋರ್ಡ್ನ ಲ್ಯಾಂಡ್ ಜಿಹಾದ್?’ ಎಂಬ ವಿಶೇಷ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.

ನ್ಯಾಯವಾದಿ ವಿಷ್ಣು ಜೈನ್ ತಮ್ಮ ಮಾತನ್ನು ಮುಂದುವರೆ ಸುತ್ತಾ, ಈ ಕಾನೂನಿನಿಂದಾಗಿ ಗುಜರಾತಿನ ಹಿಂದೂಗಳ ದ್ವಾರಕಾ ದ್ವೀಪ, ಸೂರತ್ ಮಹಾನಗರಪಾಲಿಕೆ, ಪ್ರಯಾಗರಾಜನಲ್ಲಿರುವ ಚಂದ್ರಶೇಖರ ಆಜಾದ್ ಪಾರ್ಕ್, ಜ್ಞಾನವಾಪಿ, ಮಥುರಾ ಇತ್ಯಾದಿ ಅನೇಕ ಜಾಗಗಳನ್ನು ವಕ್ಫ್ ಬೋರ್ಡ್ನ ಆಸ್ತಿ ಎಂದು ಘೋಷಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ವಕ್ಫ್ ಬೋರ್ಡ ಕಾನೂನಿನಿಂದಾಗಿ ಹಿಂದೂಗಳಿಗೆ ಯಾವುದೇ ಅಧಿಕಾರ ಉಳಿದಿಲ್ಲ ! – ಗಾಯತ್ರಿ ಎನ್., ಸಂಸ್ಥಾಪಕಿ, `ಭಾರತ್ ವಾಯ್ಸ್’

ಗಾಯತ್ರಿ ಎನ್

ತಮಿಳುನಾಡಿನ ತಿರುಚೆತುರೈ ಗ್ರಾಮದಲ್ಲಿರುವ ಹಿಂದೂಗಳ ೧೫೦೦ ವರ್ಷಗಳಷ್ಟು ಹಿಂದಿನ ಶ್ರೀ ಚಂದ್ರಶೇಖರ ಸ್ವಾಮಿಯ ದೇವಾಲಯವು ವಕ್ಫ್ ಬೋರ್ಡ್ನ ಆಸ್ತಿಯಾಗುವುದು ಹೇಗೆ ? ಲ್ಯಾಂಡ್ ಜಿಹಾದ್‌ಗಾಗಿ ಸಂಸತ್ತು ಅಂಗೀಕರಿಸಿದ ಕಾನೂನಿ ನಿಂದ ಹಿಂದೂಗಳ ಮನೆ, ಅಂಗಡಿ, ಹೊಲ, ಜಮೀನು ಮತ್ತು ದೇವಸ್ಥಾನಗಳು ಕೂಡ ಸುರಕ್ಷಿತವಾಗಿಲ್ಲ. ಹಿಂದೂಗಳಿಗೆ ಯಾವುದೇ ಹಕ್ಕಿಲ್ಲ. ಹಿಂದೂಗಳ ಸ್ಥಿತಿಯನ್ನು ಹದಗೆಡಿಸಿದ್ದಾರೆ.

ಹಿಂದೂಗಳು ಸಂಘಟಿತರಾಗದಿದ್ದರೆ ಪುನಃ ಔರಂಗಜೇಬನ ಕಾಲ ಬರಬಹುದು ! – ಶ್ರೀ. ನೀರಜ ಅತ್ರಿ, ಅಧ್ಯಕ್ಷರು, `ವಿವೇಕಾನಂದ ಕಾರ್ಯ ಸಮಿತಿ’

ಶ್ರೀ. ನೀರಜ ಅತ್ರಿ

ಆಗಿನ ಪ್ರಧಾನಮಂತ್ರಿ ಮನಮೋಹನ ಸಿಂಗ ಇವರು ಭಾರತದ ಸಂಪನ್ಮೂಲಗಳ ಮೇಲೆ ಮುಸಲ್ಮಾನರಿಗೇ ಮೊದಲ ಹಕ್ಕಿದೆ ಎಂದು ಹೇಳಿದ್ದರು. ಈ ಕಾಯ್ದೆಯ ಮೂಲಕವೂ ಅದನ್ನೇ ಜಾರಿಗೊಳಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಹಿಂದೂಗಳು ಈ ಕಾನೂನಿನ ಬಲೆಗೆ ಬೀಳುತ್ತಿದ್ದಾರೆ. ಈಗ ಹಿಂದೂಗಳು ಸಂಘಟಿತರಾಗದಿದ್ದರೆ ಹಿಂದೂಗಳ ಸ್ಥಿತಿ ಪುನಃ ಔರಂಗಜೇಬನ ಕಾಲದಲ್ಲಿದ್ದಂತೆ ಆಗುತ್ತದೆ.

ಲ್ಯಾಂಡ್ ಜಿಹಾದ್‌ಗೆ ಉತ್ತೇಜನ ನೀಡುವ ಕಾನೂನು ರದ್ದುಪಡಿಸಲು ಹಿಂದೂಗಳು ಹೋರಾಟ ನಡೆಸಬೇಕು- ಶ್ರೀ. ನರೇಂದ್ರ ಸುರ್ವೆ, ದೆಹಲಿ ರಾಜ್ಯ ವಕ್ತಾರರು,

ಶ್ರೀ. ನರೇಂದ್ರ ಸುರ್ವೆ

ಹಿಂದೂ ಜನಜಾಗೃತಿ ಸಮಿತಿ ಹಿಂದೂಗಳ ದೊಡ್ಡ ದೇವಾಲಯ ಗಳು ಮತ್ತು ಆಸ್ತಿಯನ್ನು ಸರಕಾರ ಸ್ವಾಧೀನ ಪಡಿಸಿಕೊಂಡಿದ್ದರೆ, ಇನ್ನೊಂದು ಕಡೆಗೆ ಮುಸಲ್ಮಾನರ ಧಾರ್ಮಿಕ ಸ್ಥಳಗಳು ಅಥವಾ ಆಸ್ತಿಯನ್ನು ಮುಟ್ಟುವ ಬದಲು ಅವರರಕ್ಷಣೆಗಾಗಿ ಈ ಕಾನೂನು ಜಾರಿಗೆತರಲಾಗಿದೆ. ಇದು ಹಿಂದೂ ಗಳೊಂದಿಗೆ ಮಾಡಿದ ವಂಚನೆ ಯಾಗಿದೆ. ಲ್ಯಾಂಡ್ ಜಿಹಾದ್ ಅಂದರೆ ಭೂ ಕಬಳಿಕೆಗೆ ಕಾನೂನಿನ ಮೂಲಕ ಸಮನಾಂತರ ವ್ಯವಸ್ಥೆಯನ್ನು ರಚಿಸಲಾಗಿದೆ. ಇದು ಮುಸಲ್ಮಾನರಿಗೆ ನೀಡಿದ ಅಸ್ತ್ರವೇ ಆಗಿದೆ. ಲ್ಯಾಂಡ್ ಜಿಹಾದ್‌ಗೆ ಉತ್ತೇಜನ ನೀಡುವ ಈ ಕಾನೂನನ್ನು ರದ್ದುಪಡಿಸಲು ಹಿಂದೂಗಳು ಹೋರಾಟ ನಡೆಸಬೇಕು.