‘ಶಿವಾಜಿ ವಿಶ್ವವಿದ್ಯಾಲಯ’ದ ಹೆಸರು ‘ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯ’ ಆಗಲೇಬೇಕು!

ಕೊಲ್ಲಾಪುರದಲ್ಲಿ 10 ಸಾವಿರಕ್ಕೂ ಹೆಚ್ಚು ಹಿಂದೂಗಳ ಮೆರವಣಿಗೆಯ ಮೂಲಕ ಗರ್ಜನೆ

ಕೊಲ್ಲಾಪುರ – ಇಲ್ಲಿನ ‘ಶಿವಾಜಿ ವಿಶ್ವವಿದ್ಯಾಲಯ’ವನ್ನು ‘ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಬೇಕೆಂಬ ಬೇಡಿಕೆಗಾಗಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಮಾರ್ಚ್ 17 ರಂದು ಜಿಲ್ಲಾಧಿಕಾರಿ ಕಚೇರಿಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯ ಮೂಲಕ ಸಾವಿರಾರು ಹಿಂದೂಗಳು ಒಕ್ಕೊರಲಿನಿಂದ ‘ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡಲೇಬೇಕು’ ಎಂದು ಬಲವಾಗಿ ಒತ್ತಾಯಿಸಿದರು.

ಮೆರವಣಿಗೆಯ ಆರಂಭದಲ್ಲಿ ಗಣ್ಯರ ಹಸ್ತದಿಂದ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಪುಷ್ಪಾರ್ಚನೆ ಮಾಡಲಾಯಿತು. ನಗರದ ದಸರಾ ವೃತ್ತದಿಂದ ಪ್ರಾರಂಭವಾದ ಈ ಮೆರವಣಿಗೆ ಲಕ್ಷ್ಮೀಪುರಿ, ವೀನಸ್ ಕಾರ್ನರ್ ಮೂಲಕ ‘ಬಿ ನ್ಯೂಸ್’ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ಬಂದ ನಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಅದೇ ರೀತಿ ಕ್ರೂರ ಔರಂಗಜೇಬನ ಗೋರಿಯ ವೈಭವೀಕರಣವನ್ನು ತಕ್ಷಣವೇ ನಿಲ್ಲಿಸಲು ಗೋರಿಗೆ ನೀಡುವ ಅನುದಾನವನ್ನು ಸ್ಥಗಿತಗೊಳಿಸಬೇಕು ಮತ್ತು ಔರಂಗಜೇಬನ ಗೋರಿಯನ್ನು ತೆಗೆದುಹಾಕಬೇಕು ಎಂಬ ಬೇಡಿಕೆಯ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಯಿತು.

ಮೆರವಣಿಗೆಯಲ್ಲಿ ವಿವಿಧ ಆಧ್ಯಾತ್ಮಿಕ ಸಂಪ್ರದಾಯಗಳು, ಹಿಂದೂತ್ವನಿಷ್ಠ ಸಂಘಟನೆಗಳು, ರಾಜಕೀಯ ಪಕ್ಷಗಳು, ಯುವ ಮಂಡಳಿಗಳು, ವಿವಿಧ ಸಾಮಾಜಿಕ ಸಂಘಟನೆಗಳು ಮತ್ತು ವ್ಯಾಪಾರ ಸಂಘಟನೆಗಳು ಪ್ರಮುಖವಾಗಿ ಭಾಗವಹಿಸಿದ್ದವು. ಅನೇಕ ಅಂಗಡಿ ಮಾಲೀಕರು 2 ಗಂಟೆಗಳ ಕಾಲ ಅಂಗಡಿಗಳನ್ನು ಮುಚ್ಚಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ಮೆರವಣಿಗೆಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸದ್ಗುರು ಸ್ವಾತಿ ಖಾಡ್ಯೆಯವರ ವಂದನೀಯ ಉಪಸ್ಥಿತಿ ಇತ್ತು.

ಮೆರವಣಿಗೆಯ ಕೊನೆಯಲ್ಲಿ ತೆಲಂಗಾಣದ ಭಾಜಪದ ಪ್ರಖರ ಹಿಂದೂತ್ವನಿಷ್ಠ ಶಾಸಕ ಟಿ. ರಾಜಸಿಂಗ್, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಶ್ರೀ. ಅಭಯ ವರ್ತಕ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ರಾಷ್ಟ್ರೀಯ ಸಂಘಟಕ ಶ್ರೀ. ಸುನಿಲ್ ಘನವಟ, ‘ಛತ್ರಪತಿ ಗ್ರೂಪ್’ ನ ಸಂಸ್ಥಾಪಕ ಶ್ರೀ. ಪ್ರಮೋದದಾದಾ ಪಾಟೀಲ್ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದಲ್ಲಿ ಭಾಗವಹಿಸಿದ ಮಾವಳೆಯವರ ವಂಶಸ್ಥರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಇವರಲ್ಲಿ ಮುಖ್ಯವಾಗಿ ವೀರ ಶಿವ ಕಾಶೀದ್ ಅವರ ವಂಶಸ್ಥರಾದ ಶ್ರೀ. ಆನಂದರಾವ್ ಕಾಶೀದ್, ಸರ್ದಾರ್ ಮಾಲುಸರೆ ಅವರ ವಂಶಸ್ಥರಾದ ಶ್ರೀ. ಕುನಾಲ್ ಮಾಲುಸರೆ ಮತ್ತು ಸೇನಾಪತಿ ಹಂಬೀರರಾವ್ ಮೋಹಿತೆ ಅವರ ವಂಶಸ್ಥರು ಸಹ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಗಣ್ಯರ ಅಭಿಪ್ರಾಯಗಳು!

1. ಮರುನಾಮಕರಣವನ್ನು ವಿರೋಧಿಸುವ ಪ್ರಗತಿಪರರಿಗೆ ಹಿಂದೂಗಳ ಸಂಘಟಿತ ಶಕ್ತಿಯು ಉತ್ತರಿಸುತ್ತದೆ! – ಟಿ. ರಾಜಸಿಂಗ್, ಶಾಸಕರು, ತೆಲಂಗಾಣ

ಇಂದು ನಾವು ಇಲ್ಲಿ ಕೇವಲ ಮರುನಾಮಕರಣದ ಮೆರವಣಿಗೆಗಾಗಿ ಸೇರಿಲ್ಲ, ಹಿಂದೂಗಳ ಅಸ್ಮಿತೆ, ಗೌರವ ಮತ್ತು ಹಿಂದೂ ಸ್ವರಾಜ್ಯದ ಸಂಕಲ್ಪಕ್ಕಾಗಿ ಒಗ್ಗೂಡಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜ ವಿಶ್ವವಿದ್ಯಾಲಯವು ಕೇವಲ ವಿಶ್ವವಿದ್ಯಾಲಯವಲ್ಲ, ಅದು ನಮ್ಮ ಹೆಮ್ಮೆಯಾಗಿದೆ. ಇಷ್ಟು ವರ್ಷ ‘ಛತ್ರಪತಿ’ ಎಂಬ ಬಿರುದು ಸಿಗದಂತೆ ಪ್ರಯತ್ನಿಸಿದ ಪ್ರಗತಿಪರರು ಮತ್ತು ಜಾತ್ಯತೀತವಾದಿಗಳಿಗೆ ಬಹಿರಂಗವಾಗಿ ಸವಾಲು ಹಾಕಲು ನಾನು ಬಂದಿದ್ದೇನೆ ಮತ್ತು ಹಿಂದೂಗಳ ಸಂಘಟಿತ ಶಕ್ತಿಯು ಇಲ್ಲಿ ದೃಢವಾಗಿ ನಿಂತಿದೆ. ಕೊಲ್ಲಾಪುರ ಜಿಲ್ಲೆಯ ವಿಶಾಲಗಡದಲ್ಲಿ ಇಂದಿಗೂ ಅನೇಕ ಅತಿಕ್ರಮಣಗಳು ಬಾಕಿ ಇದ್ದು, ಸರಕಾರವು ಈ ಅತಿಕ್ರಮಣಗಳನ್ನು ತಕ್ಷಣವೇ ತೆಗೆದುಹಾಕಬೇಕು, ಇಲ್ಲದಿದ್ದರೆ ಛತ್ರಪತಿ ಶಿವಾಜಿ ಮಹಾರಾಜರ ಮಾವಳೆಯವರು ಅದನ್ನು ತೆಗೆದುಹಾಕುವ ಕಾರ್ಯಾಚರಣೆಯನ್ನು ಕೈಗೊಳ್ಳಬೇಕಾಗುತ್ತದೆ, ಎಂದು ಹೇಳಿದರು.

ಒಂದೆಡೆ, ಸಿಂಧುದುರ್ಗ ಜಿಲ್ಲೆಯ ಛತ್ರಪತಿ ಶಿವಾಜಿ ಮಹಾರಾಜರ ದೇವಸ್ಥಾನಕ್ಕೆ ನೀಡಲು ಆಡಳಿತದ ಬಳಿ ಹಣವಿಲ್ಲ, ಆದರೆ ಅದೇ ಪುರಾತತ್ವ ಇಲಾಖೆಯು ಛತ್ರಪತಿ ಸಂಭಾಜಿನಗರದಲ್ಲಿನ ಔರಂಗಜೇಬನ ಗೋರಿಗೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ. ಇದನ್ನು ನಾವು ಸಹಿಸುವುದಿಲ್ಲ, ಆದ್ದರಿಂದ ಔರಂಗಜೇಬನ ಗೋರಿಯ ನಿರ್ವಹಣೆಗೆ ಖರ್ಚು ಮಾಡುವ ಹಣವನ್ನು ಸರಕಾರವು ತಕ್ಷಣವೇ ನಿಲ್ಲಿಸಬೇಕು ಮತ್ತು ಈ ಗೋರಿಯನ್ನು ಸಹ ತೆಗೆದುಹಾಕಬೇಕು.

ಕಾಮ್ರೆಡ್ ಪಾನಸರೆ ಬರೆದಿರುವ ‘ಶಿವಾಜಿ ಯಾರಿದ್ದನು ?’ಈ ಪುಸ್ತಕವನ್ನು ನಿಷೇಧಿಸಿ ! – ಹಿಂದೂ ರಾಷ್ಟ್ರ ಸಮನ್ವಯ ಸಮಿತಿ

ಈ ಸಮಯದಲ್ಲಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಶ್ರೀ. ಸುನೀಲ ಘನವಟ ಇವರು ಮಾತನಾಡುತ್ತಾ, ಛತ್ರಪತಿ ಶಿವಾಜಿ ಮಹಾರಾಜ ಇವರನ್ನು ಗೌರವದಿಂದ ಉಲ್ಲೇಖಿಸುವ ಬದಲು ‘ಶಿವಾಜಿ ಯಾರಿದ್ದನು ?’ ಹೀಗೆ ಪುಸ್ತಕ ಬರೆಯುವ ಕಾಮ್ರೆಡ್ ಪಾನಸರೆ ಯಾರು ? ಛತ್ರಪತಿ ಶಿವಾಜಿ ಮಹಾರಾಜರನ್ನು ಏಕವಚನದಲ್ಲಿ ಉಲ್ಲೇಖಿಸುವುದು ಇದು ಹಿಂದುಗಳ ಘನತೆಯ ಮೇಲೆ ಆಘಾತವಾಗಿದ್ದು ಸರಕಾರ ಈ ಪುಸ್ತಕವನ್ನು ನಿಷೇಧಿಸುವುದು ಅಪೇಕ್ಷಿತವಾಗಿದೆ. ೨೬/೧೧ ರ ಭಯೋತ್ಪಾದಕ ದಾಳಿ ಕಸಾಬನು ನಡೆಸಿದ್ದನು, ಇದು ಸರ್ವೋಚ್ಚ ನ್ಯಾಯಾಲಯ ಕೂಡ ಒಪ್ಪಿರುವಾಗ ಭಾರತೀಯ ಗುಪ್ತಚರ ಇಲಾಖೆಯ ಮೇಲೆ ಸಂದೇಹ ವ್ಯಕ್ತಪಡಿಸಲಾಗಿತ್ತು. ‘ಹೂ ಫೀಲ್ಡ್ ಕರಕರೆ ?’ ಈ ಪುಸ್ತಕ ಯಾರು ಬರೆದಿದ್ದರೂ ಅವರ ಸಮರ್ಥನೆ ಮಾಡುವ ಪ್ರಗತಿಪರರ ಮುಖವಾಡ ಇದರಿಂದ ಈಗ ಬಹಿರಂಗವಾಗುತ್ತಿದೆ.

೨. ಬಜೆಟ್ ಅಧಿವೇಶನದವರೆಗೆ ಹೆಸರು ಬದಲಾಯಿಸದೆ ಇದ್ದರೆ, ಸಂಪೂರ್ಣ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸುವೆವು ! – ಸುನಿಲ ಘನವಟ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ

ಛತ್ರಪತಿ ಶಿವಾಜಿ ಮಹಾರಾಜ ಜಯಂತಿಯಂದೇ ಛತ್ರಪತಿ ಶಿವಾಜಿ ಮಹಾರಾಜ ಎಂದು ಬಿರುದು ನೀಡಲು ಆಗ್ರಹಿಸಬೇಕಾಗುತ್ತದೆ, ಇದು ದೌರ್ಭಾಗ್ಯವಾಗಿದೆ. ಈ ವಿರೋಧ ಕೆವಲ ‘ಛತ್ರಪತಿ’ ಈ ಪದಕ್ಕಾಗಿ ಅಲ್ಲದೆ ‘ಛತ್ರಪತಿ ಶಿವಾಜಿ ಮಹಾರಾಜ’ ಇವರಿಗಾಗಿ ಇದೆ. ಇವರು ನೆಹರು ಇವರಿಗೆ ಪಂಡಿತ ಎಂದು ಬಿರುದು, ಗಾಂಧಿಜಿಯವರಿಗೆ ‘ಮಹಾತ್ಮಾ’ ಈ ಬಿರುದೂ ಆಗಬಹುದಾದರೆ ಶಿವಾಜಿ ಮಹಾರಾಜರಿಗೆ ‘ಛತ್ರಪತಿ’ ಎಂದು ಬಿರುದು ಏಕೆ ನಡೆಯುವುದಿಲ್ಲ ? ಪ್ರಗತಿಪರರಿಗೆ ‘ಛತ್ರಪತಿ’ ಎಂದು ಹೇಳುವಲ್ಲಿ ನಾಚಿಕೆ ಏಕೆ ಅನಿಸುತ್ತದೆ ?’, ಫೆಬ್ರವರಿ ೨೦೧೧ ರಲ್ಲಿ ಮಹಾರಾಷ್ಟ್ರ ಸರಕಾರದಿಂದ ಹೊರಡಿಸಿರುವ ಆದೇಶದಲ್ಲಿ ‘ರಾಷ್ಟ್ರ ಪುರುಷ ಮತ್ತು ಕ್ರಾಂತಿಕಾರರಿಗೆ ಅವಮಾನಿಸಬಾರದು !’ ಪ್ರಗತಿಪರರು ತಮ್ಮನ್ನು ಶಿವಾಜಿ ಪ್ರೇಮಿಗಳೆಂದು ತಿಳಿಯುತ್ತಾರೆ; ಆದರೆ ಇವರು ತಥಾ ಕಥಿತ ಶಿವಾಜಿ ಪ್ರೇಮಿಗಳಾಗಿದ್ದಾರೆ. ಅವರ ‘ಸಿಲೆಕ್ಟೆಡ್’ (ಆಯ್ದ) ಶಿವಾಜಿ ಪ್ರೇಮ ಇದೆ, ಕಾರಣ ಈ ಜನರು ಔರಂಗಜೇಬನ ಗೋರಿಯನ್ನು ಸಮರ್ಥಿಸುವವರು ಹಾಗೂ ಔರಂಗಜೇಬನ ಸ್ಟೇಟಸ್ ಇಟ್ಟುಕೊಳ್ಳುವವರ ಬಗ್ಗೆ ಚಕಾರ ಎತ್ತುವುದಿಲ್ಲ.

ಯಾವುದೇ ಪರಿಸ್ಥಿತಿಯಲ್ಲಿ ಶಿವಾಜಿ ವಿದ್ಯಾಪೀಠಕ್ಕೆ ‘ಜೆ.ಎನ್.ಯೂ.’ ಆಗಲು ಬಿಡುವುದಿಲ್ಲ !

ಮಹಾರಾಷ್ಟ್ರದಲ್ಲಿ ‘ಸಾವಿತ್ರಿಬಾಯಿ ಫುಲೆ ಪುಣೆ ವಿದ್ಯಾಪೀಠ’, ‘ಪುಣ್ಯ ಶ್ಲೋಕ ಅಹಿಲ್ಲಾಬಾಯಿ ಹೊಳ್ಕರ್ ವಿದ್ಯಾಪೀಠ’, ‘ರಾಜರ್ಷಿ ಛತ್ರಪತಿ ಶಾಹು ಮಹಾರಾಜ್ ಕೃಷಿ ಮಹಾವಿದ್ಯಾಲಯ’, ಹೀಗೆ ಸಂಪೂರ್ಣ ಹೆಸರುಗಳು ನೀಡಿದೆ, ಅದು ನಡೆಯುತ್ತದೆ; ಆದರೆ ‘ಶಿವಾಜಿ ವಿದ್ಯಾಪೀಠದ ಹೆಸರು ಬದಲಾಯಿಸಿ ಅದನ್ನು ಛತ್ರಪತಿ ಶಿವಾಜಿ ಮಹಾರಾಜ ವಿದ್ಯಾಪೀಠ ಮಾಡಿರಿ’ ಎಂದರೆ ಅದಕ್ಕೆ ಅಡ್ಡಗಾಲು ಹಾಕುತ್ತಾರೆ. ಪ್ರಸ್ತುತ ಜವಹಾರ ಲಾಲ ನೆಹರು ಯುನಿವರ್ಸಿಟಿಯಲ್ಲಿ (ಜೆ.ಎನ್.ಯೂ.ದಲ್ಲಿ) ‘ಭಾರತ ತೆರೆ ಟುಕಡೆ ಹೊಂಗೆ’ ಹೀಗೆ ಘೋಷಣೆ ನೀಡಲಾಗುತ್ತದೆ. ಸ್ವಾಮಿ ವಿವೇಕಾನಂದರ ಮೂರ್ತಿಯ ವಿಡಂಬನೆ ಮಾಡಲಾಗುತ್ತದೆ, ದಂತೆವಾಡ ಆದಲ್ಲಿ ನಕ್ಸಲ್ ವಾದಿಗಳು ಭಾರತೀಯ ಸೈನಿಕರನ್ನು ಹತ್ಯೆಗೈದ ನಂತರ ವಿದ್ಯಾಪೀಠದಲ್ಲಿ ಸಿಹಿ ಹಂಚುತ್ತಾರೆ. ಅದೇ ರೀತಿ ನಾವು ಕೊಲ್ಲಾಪುರದಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ನಡೆಯಲು ಬಿಡುವುದಿಲ್ಲ, ಶಿವಾಜಿ ವಿದ್ಯಾಪೀಠವನ್ನು ಜೆ.ಎನ್.ಯೂ. ಆಗಲು ಬಿಡುವುದಿಲ್ಲ. ಕೊಲ್ಲಾಪುರ ಇದನ್ನು ಎಂದಿಗೂ ಸಹಿಸುವುದಿಲ್ಲ. ಬಜೆಟ್ ಅಧಿವೇಶನ ಮುಗಿಯುಹೊತ್ತಿಗೆ ‘ಛತ್ರಪತಿ ಶಿವಾಜಿ ಮಹಾರಾಜ ವಿದ್ಯಾಪೀಠ’ ಹೀಗೆ ವಿದ್ಯಾಪೀಠಕ್ಕೆ ಹೆಸರು ನೀಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಈ ವಿಷಯದ ಕುರಿತು ಪ್ರತಿಭಟನೆ ನಡೆಸಿ ಹೋರಾಟ ಆರಂಭಿಸಲಾಗುವುದು.

೩. ಎಲ್ಲಿಯವರೆಗೆ ವಿದ್ಯಾರ್ಥಿಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಿಜವಾದ ವಿಚಾರಗಳು ಬೇರೂರುವುದಿಲ್ಲ, ಅಲ್ಲಿಯವರೆಗೆ ಈ ಹೋರಾಟ ಮುಂದುವರೆಯುವುದು ! – ಅಭಯ ವರ್ತಕ, ಸನಾತನ ಸಂಸ್ಥೆ

ಯಾವ ಜನರು ಛತ್ರಪತಿ ಶಿವಾಜಿ ಮಹಾರಾಜ ಇವರನ್ನು ಯಾವಾಗಲೂ ಏಕವಚನದಲ್ಲಿ ಉಲ್ಲೇಖಿಸುತ್ತಾರೆ, ಆ ವಿಚಾರಧಾರೆಯಲ್ಲಿನ ಜನರು ವಿದ್ಯಾಪೀಠದ ನಾಮವಿಸ್ತಾರ ಸಹಿಸುವುದಿಲ್ಲ. ಈ ನಾಮ ವಿಸ್ತಾರದ ನೆಪ ಮಾಡಿಕೊಂಡು ಪ್ರಗತಿಪರರು, ಎಡಪಥಿಯರು ಮತ್ತು ಹಿಂದೂ ವಿರೋಧಿಗಳ ವಿರೋಧ ಇದಕ್ಕೆ ಇರುವುದರಿಂದ ‘ಕಿರುರೂಪದ’ ಸುಳ್ಳು ಕಥೆಗಳು ರಚಿಸಲಾಗಿದೆ. ಆದ್ದರಿಂದ ಛತ್ರಪತಿ ಶಿವಾಜಿ ಮಹಾರಾಜ ಇವರನ್ನು ‘ಸೆಕ್ಯುಲರ್’ ಮಾಡುವ ಷಡ್ಯಂತ್ರ ನಾವು ಯಶಸ್ವಿ ಆಗಲು ಬಿಡುವುದಿಲ್ಲ. ಛತ್ರಪತಿಯ ರಾಜ್ಯ ಇದು ‘ಹಿಂದವೀ ಸ್ವರಾಜ್ಯ’ ಎಂದು ಗುರುತಿಸುತ್ತಾರೆ, ಆ ಛತ್ರಪತಿಯ ವಿದ್ಯಾಪೀಠದಲ್ಲಿನ ಪುತ್ತಳಿಯ ಎದುರು ಕೇಸರಿ ಧ್ವಜ ಇಲ್ಲದಿರುವುದು ಎಷ್ಟು ದೌರ್ಭಾಗ್ಯ ಅನ್ನಬೇಕು. ಆದ್ದರಿಂದ ನಮ್ಮ ಈ ಮುಂದಿನ ಹೋರಾಟ ಕೇವಲ ನಾಮವಿಸ್ತಾರಕ್ಕೆ ಅಷ್ಟೇ ಸೀಮಿತವಾಗದೆ ಎಲ್ಲಿಯವರೆಗೆ ವಿದ್ಯಾರ್ಥಿಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ನಿಜವಾದ ವಿಚಾರಗಳು ಬೇರೂರುವುದಿಲ್ಲ, ಅಲ್ಲಿಯವರೆಗೆ ಈ ಹೋರಾಟ ಮುಂದುವರೆಯುವುದು !

ಸಹಭಾಗಿ ಸಂಘಟನೆಗಳು ಮತ್ತು ಸಂಪ್ರದಾಯಗಳು

‘ಶ್ರೀ’ ಸಂಪ್ರದಾಯ, ವಾರಕರಿ ಸಂಪ್ರದಾಯ, ಸ್ವಾಮಿ ಸಮರ್ಥ ಸಂಪ್ರದಾಯ, ಇಸ್ಕಾನ್, ದೇವಸ್ಥಾನ ಸೇವಕರು, ಗಜಾನನ ಮಹಾರಾಜ ಭಕ್ತ ಮಂಡಳಿ, ಶ್ರೀ ಶಿವಪ್ರತಿಷ್ಠಾನ ಹಿಂದುಸ್ತಾನ್, ಹಿಂದೂ ಏಕತಾ ಆಂದೋಲನ, ಹಿಂದೂ ಮಹಾಸಭಾ, ಛತ್ರಪತಿ ಗ್ರೂಪ್, ಮಹಾರಾಷ್ಟ್ರ ಮಂದಿರ ಮಹಾಸಂಘ, ಮಹಾರಾಷ್ಟ್ರ ಚೆಂಬರ್ ಆಫ್ ಕಾಮರ್ಸ್, ಅಖಿಲ ಭಾರತೀಯ ರೇಷನಿಂಗ್ ಮಹಾಸಂಘ, ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ, ಶಿವ ಸೇನೆ, ಭಾಜಪ, ಉದ್ದವ ಬಾಳಾ ಸಾಹೇಬ ಠಾಕರೆ ಗುಂಪು, ವಿವಿಧ ಯುವಕ ಮಂಡಳಗಳು ಮತ್ತು ತಾಲಮಿ.

ವಿಶೇಷತೆ !

೧. ಅತ್ಯಂತ ಶಿಸ್ತಿನಿಂದ ಮತ್ತು ಆಯೋಜಿತವಾಗಿ ನಡೆದಿರುವ ಪ್ರತಿಭಟನೆ ಎಲ್ಲರ ಗಮನ ಸೆಳೆಯಿತು. ಪ್ರತಿಭಟನೆಗಾಗಿ ಸಾತಾರ, ಸಾಂಗಲಿ, ಬೆಳಗಾಂ ಸಹಿತ ಕೊಲ್ಲಾಪುರ ಜಿಲ್ಲೆಯಲ್ಲಿನ ಪ್ರತಿಯೊಂದು ತಾಲೂಕಿನಲ್ಲಿ ಕೇಸರಿ ಧ್ವಜ ಹಿಡಿದು ಗುಂಪು ಗುಂಪಾಗಿ ಯುವಕರು ಉತ್ಸಾಹದಿಂದ ಜಯಘೋಷ ಮಾಡುತ್ತಾ ಸಹಭಾಗಿದ್ದರು.
೨. ಪ್ರತಿಭಟನೆಗಾಗಿ ಛತ್ರಪತಿ ಶಿವಾಜಿ ಮಹಾರಾಜ ಇವರ ಸೈನ್ಯದಲ್ಲಿ ಸಹಭಾಗಿಯಾಗಿದ್ದ ಸರದಾರ ಮಾವಳೆ ಇವರ ವಂಶಜರು ಉಪಸ್ಥಿತರಿದ್ದರು.

3. ಈ ಮೆರವಣಿಗೆಯಲ್ಲಿ ಅನೇಕ ತಂಡಗಳು ಭಾಗವಹಿಸಿದ್ದವು. ಡೋಲು-ತಾಷಾ ತಂಡ, ಸಾಹಸ ಕ್ರೀಡೆಗಳು, ಶಿವಕಾಲೀನ ಯುದ್ಧ ತಂಡ, ತಾಳ-ಮೃದಂಗ ತಂಡ, ವಿವಿಧ ಸಂಪ್ರದಾಯಗಳ ಭಕ್ತರು, ಮಾವಳೆಯವರ ವೇಷಭೂಷಣ ಮತ್ತು ಸಾಂಪ್ರದಾಯಿಕ ವೇಷಭೂಷಣದ ತಂಡಗಳು, ಮಹಿಳೆಯರ ರಣರಾಗಿಣಿ ತಂಡ ಭಾಗವಹಿಸಿದ್ದವು.

ಫಲಕದ ಮೇಲಿನ ವಿಶಿಷ್ಟವಾದ ಮಾಹಿತಿ – ‘ಶಿವಾಜಿ ವಿದ್ಯಾಪೀಠ’ ಅಲ್ಲ, ಇದು ಛತ್ರಪತಿ ಶಿವಾಜಿ ಮಹಾರಾಜ ವಿದ್ಯಾಪೀಠ ಎನ್ನಿ ಮತ್ತು ಹಿಂದವೀ ಘನತೆ ರಕ್ಷಿಸಿ !