ಸನಾತನದ ಆಯುರ್ವೇದಿಕ ಔಷಧಿಗಳು

ಸನಾತನ ಯಷ್ಟಿಮಧು (ಜೇಷ್ಠಮಧು) ಚೂರ್ಣದ ಔಷಧದ ಉಪಯೋಗ 

೧. ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಗಂಟಲು ಕೂರುವುದು, ಗಂಟಲಿನಿಂದ ಕಫ ಹೊರಗೆ ಬೀಳದಿರುವುದು ಮತ್ತು ಬಾಯಿ ಹುಣ್ಣು : ಕಾಲು ಚಮಚದಷ್ಟು ಜೇಷ್ಠಮಧು ಚೂರ್ಣವನ್ನು ದಿನಕ್ಕೆ ೩-೪ ಬಾರಿ ಜಗಿದು ತಿನ್ನಬೇಕು. (೫ ದಿನ)

೨. ಮಲಬದ್ಧತೆ : ಎರಡು ಊಟದ ಮೊದಲು ೧ ಚಮಚ ಜೇಷ್ಠಮಧು ಚೂರ್ಣ ಮತ್ತು ೧ ಚಿಟಿಕೆ ಉಪ್ಪು ಅರ್ಧ ಬಟ್ಟಲು ಉಗುರುಬೆಚ್ಚ ನೀರಿನಲ್ಲಿ ಸೇರಿಸಿ ಕುಡಿಯಬೇಕು. (೧೫ ದಿನ)

೩. ಉಷ್ಣತೆಯ ರೋಗ (ಉಷ್ಣ ಪದಾರ್ಥಗಳ ತೊಂದರೆಯಾಗುವುದು, ಬಾಯಿ ಹುಣ್ಣು, ಮೈಯೆಲ್ಲ ಉರಿಯುವುದು, ಮೂತ್ರ ಮಾರ್ಗದಲ್ಲಿ ಉರಿಯುವುದು, ಮೈಮೇಲೆ ಬೊಕ್ಕೆಗಳಾಗುವುದು, ತಲೆ ಸುತ್ತುವುದು ಇತ್ಯಾದಿಗಳು) : ದಿನಕ್ಕೆ ೨-೩ ಬಾರಿ ೧ ಚಮಚ ಜೇಷ್ಠ ಮಧು ಚೂರ್ಣ ೧ ಚಮಚ ತುಪ್ಪದಲ್ಲಿ ತೆಗೆದುಕೊಳ್ಳಬೇಕು. (೧೫ ದಿನ)

ವೈದ್ಯ ಮೇಘರಾಜ ಮಾಧವ ಪರಾಡಕರ

ಸನಾತನದ ಉಶೀರ (ಲಾವಂಚ) ಚೂರ್ಣದ ಔಷಧೀಯ ಉಪಯೋಗ

೧. ಉಷ್ಣತೆಯ ತೊಂದರೆಗಳು (ಉಷ್ಣ ಪದಾರ್ಥ ಆಗದಿರುವುದು, ಬಾಯಿ ಹುಣ್ಣು, ಶರೀರ ಉರಿಯುವುದು, ಮೂತ್ರ ಮಾರ್ಗದಲ್ಲಿ ಉರಿ ಬರುವುದು, ಮೈ ಮೇಲೆ ಗುಳ್ಳೆ ಬರುವುದು, ತಲೆ ಸುತ್ತು, ಕೂದಲು ಉದುರುವುದು ಇತ್ಯಾದಿ) : ಕಾಲು ಚಮಚ ಲಾವಂಚದ ಪುಡಿಯನ್ನು ಬಟ್ಟಲಿನಷ್ಟು ನೀರಿನಲ್ಲಿ ಸೇರಿಸಿ ದಿನದಲ್ಲಿ ೩-೪ ಸಲ ಕುಡಿಯಬೇಕು. (೭ ದಿನ)

೨. ಹೊಟ್ಟೆ ತೊಳೆಸುವುದು, ವಾಂತಿ, ಭೇದಿ ಆಗುವುದು ಮತ್ತು ಮಲ ವಿಸರ್ಜನೆಯ ಜಾಗದಲ್ಲಿ ರಕ್ತ ಬರುವುದು : ಈ ಮೇಲಿನಂತೆ ತೆಗೆದುಕೊಳ್ಳುವುದು. (೭ ದಿನ)

೩. ಬಿಸಿಲಿನಲ್ಲಿ ಅಥವಾ ಅಕ್ಟೋಬರನಲ್ಲಿ ವಾತಾವರಣದಲ್ಲಿನ ಉಷ್ಣತೆಯ ತೊಂದರೆಯಾಗಬಾರದು, ಅದಕ್ಕಾಗಿ : ೧ ಲೀಟರ್ ನೀರಿನಲ್ಲಿ ಅರ್ಧ ಚಮಚದಂತೆ ಲಾವಂಚದ ಪುಡಿ ಹಾಕಿಡುವುದು. ಬಾಯಾರಿಕೆ ಆದಾಗ ಇದೇ ನೀರು ಕುಡಿಯುವುದು. (ಬಿಸಿಲಿನಲ್ಲಿ ಹಾಗೂ ಅಕ್ಟೋಬರ್‌ನಲ್ಲಿ)

ಶಾಂತ ನಿದ್ದೆಗಾಗಿ ಬ್ರಾಹ್ಮಿ ಚೂರ್ಣ

ಮುಂದಿನ ಎರಡೂ ಚಿಕಿತ್ಸೆಗಳನ್ನು ಕಡಿಮೆಪಕ್ಷ ೩ ತಿಂಗಳು ಮಾಡಬೇಕು.

೧. ನಾಲ್ಕು ಚಮಚದಷ್ಟು ಬ್ರಾಹ್ಮಿ ಚೂರ್ಣ ೪ ಬಟ್ಟಲು ಕೊಬ್ಬರಿ ಎಣ್ಣೆಯಲ್ಲಿ ಸಾಧಾರಣ ೧ ನಿಮಿಷ ಕುದಿಸಬೇಕು. ಈ ಎಣ್ಣೆಯನ್ನು ಸೋಸಿ ತಣ್ಣಗಾದ ನಂತರ ಬಾಟಲಿಯಲ್ಲಿ ತುಂಬಿ ಅದರಲ್ಲಿ ೧೦ ಗ್ರಾಮ್ ಭೀಮಸೇನಿ ಕರ್ಪೂರವನ್ನು ಪುಡಿ ಮಾಡಿ ಹಾಕಬೇಕು ಮತ್ತು ಬಾಟಲಿಯ ಮುಚ್ಚಳವನ್ನು ಹಾಕಿಡಬೇಕು. ಪ್ರತಿದಿನ ರಾತ್ರಿ ಮಲಗುವಾಗ ಅದರಲ್ಲಿನ ೧-೨ ಚಮಚದಷ್ಟು ಎಣ್ಣೆಯನ್ನು ತಲೆಗೆ ಹಚ್ಚಿ ಮಲಗಬೇಕು.

೨. ರಾತ್ರಿ ಮಲಗುವಾಗ ೧ ಚಮಚ ಬ್ರಾಹ್ಮಿ ಚೂರ್ಣವನ್ನು ಅರ್ಧ ಬಟ್ಟಲು ಉಗುರುಬೆಚ್ಚಗಿನ ನೀರಿನಲ್ಲಿ ಸೇರಿಸಿ ಕುಡಿಯಬೇಕು.

ಬಿಕ್ಕಳಿಕೆಗೆ ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

‘ಲಶುನಾದಿ ವಟಿ’ ಈ ಔಷಧಿಯ ೨ ರಿಂದ ೪ ಮಾತ್ರೆಗಳನ್ನು ಸಣ್ಣ ಪುಡಿ ಮಾಡಿ ಅದನ್ನು ೨ ಚಮಚ ತುಪ್ಪದಲ್ಲಿ ಸರಿಯಾಗಿ ಕಲಸಿ ನೆಕ್ಕಬೇಕು. ತುಪ್ಪವು ಲಭ್ಯವಿಲ್ಲದಿದ್ದರೆ ಮಾತ್ರೆಗಳನ್ನು ಜಗಿದು ತಿನ್ನಬೇಕು. ಔಷಧಿಯನ್ನು ಸೇವಿಸಿದ ನಂತರ ಸ್ವಲ್ಪ ಬೆಚ್ಚಗಿನ ನೀರನ್ನು ಕುಡಿಯಬೇಕು.’

೧. ಅಳತೆಗಾಗಿ ಚಹಾದ ಚಮಚವನ್ನು ಉಪಯೋಗಿಸಬೇಕು.

೨. ಇಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಲಾಗಿದೆ. ೭ ದಿನಗಳಲ್ಲಿ ಗುಣಮುಖವಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.

೩. ಸನಾತನ ಯಷ್ಟಿಮಧು (ಜೇಷ್ಠಮಧು) ಚೂರ್ಣ, ಸನಾತನದ ಉಶೀರ (ಲಾವಂಚ) ಚೂರ್ಣ, ಸನಾತನದ ಬ್ರಾಹ್ಮಿ ಚೂರ್ಣ ಮತ್ತು ಭೀಮಸೇನಿ ಕರ್ಪೂರ ಲಭ್ಯವಿದೆ. ಇವುಗಳಿಂದ ಇತರ ರೋಗಗಳ ಮೇಲೆ ವಿವರವಾದ ಉಪಯೋಗವನ್ನು ಆ ಡಬ್ಬಿಯಲ್ಲಿನ ಪತ್ರದಲ್ಲಿ ಕೊಡಲಾಗಿದೆ.

೪. ಇಲ್ಲಿ ಕೊಟ್ಟಿರುವ ಮಾಹಿತಿ ಮತ್ತು ಪತ್ರದಲ್ಲಿನ ಮಾಹಿತಿಗಳಲ್ಲಿ ವ್ಯತ್ಯಾಸ ಇರಬಹುದು. ಎರಡರಲ್ಲಿ ಯಾವುದೇ ರೀತಿಯ ಔಷಧದ ಉಪಯೋಗವನ್ನು ಮಾಡಬಹುದು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.