‘ಮೂರನೇ ಮಹಾಯುದ್ಧವು ಹತ್ತಿರ ಬರುತ್ತಿದ್ದಂತೆಯೇ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳ ತೀವ್ರತೆಯು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಈ ಹಿಂದೆ ಕೆಟ್ಟ ಶಕ್ತಿಗಳು ಸಾಧಕರು ಮತ್ತು ಸಮಾಜದ ಮೇಲೆ ಆಕ್ರಮಣ ಮಾಡುತ್ತಿದ್ದವು. ಈಗ ಆಪತ್ಕಾಲದ ತೀವ್ರತೆಯು ಹೆಚ್ಚುತ್ತಿರುವುದರಿಂದ, ಹಾಗೆಯೇ ಮೂರನೇ ಮಹಾಯುದ್ಧವು ಹತ್ತಿರ ಬಂದಿರುವುದರಿಂದ ಕೆಟ್ಟ ಶಕ್ತಿಗಳ ಆಕ್ರಮಣದ ಪ್ರಮಾಣವೂ ಆ ತುಲನೆಯಲ್ಲಿ ಹೆಚ್ಚಳವಾಗುತ್ತಿದೆ. ಈಗ ಕೆಟ್ಟ ಶಕ್ತಿಗಳು ಸಂತರ ಮೇಲೆಯೂ ಆಕ್ರಮಣ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದುದರಿಂದ ಸಮಾಜ, ಸಾಧಕರು ಮತ್ತು ಸಂತರು ಒಂದು ಕ್ಷಣವನ್ನೂ ವ್ಯರ್ಥಗೊಳಿಸದೇ ಪ್ರತಿಯೊಬ್ಬರೂ ತಮ್ಮ ಸಾಧನೆಯನ್ನು ಹೆಚ್ಚಿಸಬೇಕು. ಎಲ್ಲ ಸಾಧಕರು ಮತ್ತು ಸಂತರು ಮೂರನೇ ಮಹಾಯುದ್ಧವನ್ನು ಎದುರಿಸಲು ಸಕ್ಷಮರಾಗುವುದು ಮತ್ತು ಅದರಿಂದ ತಮ್ಮ ರಕ್ಷಣೆಯಾಗಲು ತೀವ್ರ ತಳಮಳದಿಂದ ಸಾಧನೆ ಮಾಡದೇ ಬೇರೆ ಪರ್ಯಾಯವಿಲ್ಲ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೭.೯.೨೦೨೨)