ಮಿಲಿಂದ ಚವಂಡಕೆಯವರು ಬರೆದ ‘ಶ್ರೀಕಾನಿಫನಾಥಮಾಹಾತ್ಮ್ಯ’ ಎಂಬ ಗ್ರಂಥಕ್ಕೆ ಭಾವಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ !

ನವನಾಥ 

೫ ಭಾಷೆಗಳಲ್ಲಿ ನವನಾಥರ ದ್ವಿಪದಿಗಳ ಗ್ರಂಥನಿರ್ಮಿತಿ ಮಾಡುವುದರ ಬೇಡಿಕೆ

ನಗರ – ನಾಥಸಂಪ್ರದಾಯದ ಸಂಶೋಧಕರಾರ ಶ್ರೀ. ಮಿಲಿಂದ ಸದಾಶಿವ ಚವಂಡಕೆಯವರ ಸಿದ್ಧಹಸ್ತ ಲೇಖನಿಯಿಂದ ಸಾಕಾರವಾದ ‘ಶ್ರೀಕಾನಿಫನಾಥಮಾಹಾತ್ಮ್ಯ’ ಎಂಬ ಗ್ರಂಥಕ್ಕೆ ವಿವಿಧ ಪ್ರಾಂತ್ಯಗಳಲ್ಲಿನ ಭಾವಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಕೇವಲ ೨೭ ದಿನಗಳಲ್ಲಿ ೧ ಸಾವಿರ ಗ್ರಂಥಗಳು ಭಾವಿಕರನ್ನು ತಲುಪಿವೆ. ಸರಳ, ಸುಲಭ, ರಸಭರಿತ, ಶುದ್ಧ ಮರಾಠಿ ಭಾಷೆಯಲ್ಲಿ ದ್ವಿಪದಿಗಳಿಂದ ರಚಿಸಿರುವ ಈ ಗ್ರಂಥದಲ್ಲಿನ ಅಧ್ಯಾಯಗಳು ಭಾವಿಕರಿಗೆ ಹೆಚ್ಚು ಇಷ್ಟವಾಗಿದೆ. ಕರವೀರಪೀಠದ ಶಂಕರಾಚಾರ್ಯರೂ ಈ ಗ್ರಂಥದ ಇಂದಿನ ಕಾಲದಲ್ಲಿರುವ ಮಹತ್ತ್ವವನ್ನು ಒತ್ತಿ ಹೇಳಿದ್ದಾರೆ. ವಾರಕರಿ ಸಂಪ್ರದಾಯದ ಪ್ರಮುಖರಾದ ಶ್ರೀಕ್ಷೇತ್ರ ದೇವಗಡದಲ್ಲಿನ ಹ.ಬ.ಪ. ಭಾಸ್ಕರಗಿರಿ ಮಹಾರಾಜರೂ ಈ ಗ್ರಂಥದ ವಿಭಿನ್ನತೆಯನ್ನು ತೋರಿಸಿಕೊಟ್ಟಿದ್ದಾರೆ. ‘ಶ್ರೀಕಾನಿಫನಾಥಮಾಹಾತ್ಮ್ಯ’ ಎಂಬ ಮರಾಠಿಯಲ್ಲಿರುವ ಗ್ರಂಥದ ಅನುವಾದ ಹಿಂದಿ, ಆಂಗ್ಲ, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿಯೂ ಮಾಡಬೇಕಾಗಿ ಭಾವಿಕರು ಮನವಿ ಮಾಡಿದ್ದಾರೆ.

ಗ್ರಂಥನಿರ್ಮಿತಿಗಾಗಿ ವಿವಿಧ ಸಂತರಿಂದ ದೊರೆತ ಆಶೀರ್ವಾದ

‘ಇಂದಿನ ಪ್ರಗತಿ ಹೊಂದಿರುವ ಸಂಗಣಕ ಯುಗದಲ್ಲಿ ದ್ವಿಪದಿಯಲ್ಲಿ ಗ್ರಂಥಲೇಖನ ಮಾಡುವವರು ಸಂಪೂರ್ಣ ವಿಶ್ವದಲ್ಲಿ ಅತ್ಯಂತ ವಿರಳವಾಗಿದ್ದಾರೆ. ಮಹಾರಾಷ್ಟ್ರದಲ್ಲಿನ ಶ್ರೀ. ಮಿಲಿಂದ ಚವಂಡಕೆಯವರಿಂದ ನಾಥಸಂಪ್ರದಾಯದ ಮೇಲೆ ವಿಶೇಷ ಕಾರ್ಯ ನಡೆದಿದೆ, ಎಂಬುದನ್ನು ಸಂತ ಪೂ. ಶ್ರೀ. ಪ್ರಾ. ಅಶೋಕಜೀ ನೇವಾಸಕರರವರು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರಿಗೆ ನಗರದ ಭೇಟಿಯಲ್ಲಿಯೇ ಹೇಳಿದ್ದರು. ಅದು ಅಕ್ಷರಶಃ ನಿಜವಾಯಿತು. ಶ್ರೀಕ್ಷೇತ್ರ ಮಢೀಯಲ್ಲಿನ ಪ.ಪೂ. ಶ್ರೀಕಾನಿಫನಾಥ ಸಂಜೀವನ ಸಮಾಧಿ ದೇವಸ್ಥಾನದ ವಿಶ್ವಸ್ಥ ಮಂಡಳಿಯ ವಿಶ್ವಸ್ಥರೆಂದು ಕಾರುಬಾರು ಕೈಗೆತ್ತಿಕೊಳ್ಳುತ್ತಲೇ ಶ್ರೀ. ಮಿಲಿಂದ ಚವಂಡಕೆಯವರು ಗರ್ಭಗಿರಿಯಲ್ಲಿನ ಮೊದಲ ನಾಥ ಸಮ್ಮೇಳನವನ್ನು ನಡೆಸಿ ಎಲ್ಲರ ಗಮನವನ್ನು ಸೆಳೆದುಕೊಂಡಿದ್ದರು. ಸಮ್ಮೇಳನದ ಆಯೋಜನೆಯನ್ನು ಮಾಡುವಾಗ ಅವರು ಮಹಾರಾಷ್ಟ್ರದಲ್ಲಿನ ನಾಥಪೀಠಗಳಲ್ಲಿನ ಪೀಠಾಧಿಪತಿಗಳು ಹಾಗೂ ಮಠಾಧಿಪತಿಗಳ ಪ್ರತ್ಯಕ್ಷ ಭೇಟಿ ನಡೆಸಿ ಆಶೀರ್ವಾದ ಪಡೆದರು. ಈ ಭೇಟಿಯಲ್ಲಿಯೂ ಎಲ್ಲರೂ ಅವರಿಗೆ ‘ನಿಮ್ಮ ಕೈಯಿಂದ ಅಲೌಕಿಕ ಕಾರ್ಯ ನಡೆಯುವುದು’ ಎಂದು ಹೇಳಿದ್ದರು. ನಾಥ ಸಮ್ಮೇಳನದ ವ್ಯಾಸಪೀಠದಿಂದ ಜಾಹೀರಾಗಿ ಅವರ ಭವಿಷ್ಯವಾಣಿಯ ಪುನರುಚ್ಚಾರವಾಗಿತ್ತು.

ಗ್ರಂಥದಿಂದ ಭಾವಿಕರಿಗೆ ಬಂದಂತಹ ವಿವಿಧ ಅನುಭೂತಿಗಳು

ಶ್ರೀ. ಚವಂಡಕೆಯವರಿಗೆ ದ್ವಿಪದಿಯಲ್ಲಿ ಗ್ರಂಥಲೇಖನ ಮಾಡುವ ಪ್ರೇರಣೆಯನ್ನು ಸ್ವತಃ ನಾಥರೇ ನೀಡುವುದು ಹಾಗೂ ಗ್ರಂಥವನ್ನು ಬರೆದು ಮುಕ್ತಾಯಗೊಳಿಸುವುದು, ಇದು ನಾಥಭಕ್ತರಿಗಾಗಿ ಒಂದು ದೊಡ್ಡ ಕೃಪಾಪ್ರಸಾದವೇ ಆಗಿದೆ ಎಂಬುದನ್ನು ಮನೆಮನೆಗಳಿಗೆ ತಲುಪಿರುವ ಶ್ರೀಕಾನಿಫನಾಥಮಹಾತ್ಮ್ಯ’ ಎಂಬ ಗ್ರಂಥವು ಸ್ಪಷ್ಟಪಡಿಸಿದೆ. ಮಹಾರಾಷ್ಟ್ರದೊಂದಿಗೆ ಕರ್ನಾಟಕ, ಉತ್ತರಪ್ರದೇಶ, ಆಂಧ್ರಪ್ರದೇಶ, ಗೋವಾ, ಗುಜರಾತ, ಮಧ್ಯಪ್ರದೇಶ, ದುಬೈ, ಅಮೇರಿಕಾದಲ್ಲಿನ ಮರಾಠಿ ಭಾಷೆಯ ಭಾವಿಕರು ಗ್ರಂಥವಾಚನದಿಂದ ಬರುತ್ತಿರುವ ಪ್ರಭಾವಿ ಅನುಭೂತಿಗಳ ಆನಂದವನ್ನು ಪಡೆಯುತ್ತಿದ್ದಾರೆ. ‘ನಮ್ಮ ಕುಟುಂಬದಲ್ಲಿನ ಪ್ರಾಪಂಚಿಕ ಸಮಸ್ಯೆ, ವೈವಾಹಿಕ ಸಮಸ್ಯೆಗಳು, ಉದ್ಯೋಗದ ಸಮಸ್ಯೆ, ಬಾಧೆ, ಅಡಚಣೆಗಳು ಈ ಗ್ರಂಥದ ನಿತ್ಯ ವಾಚನದಿಂದ ದೂರವಾಗುತ್ತಿವೆ’ ಎಂಬ ಪ್ರತಿಕ್ರಿಯೆಗಳು ಶ್ರೀ. ಚವಂಡಕೆಯವರನ್ನು ತಲುಪುತ್ತಿವೆ.

‘ಶ್ರೀಕಾನಿಫನಾಥಮಾಹಾತ್ಮ್ಯ’ ಎಂಬ ಮರಾಠಿಯಲ್ಲಿರುವ ದ್ವಿಪದಿಗಳ ಗ್ರಂಥದ ಹಿಂದಿ, ಆಂಗ್ಲ, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಅನುವಾದವಾದರೆ ಎಲ್ಲ ಪ್ರಾಂತ್ಯಗಳಲ್ಲಿರುವ ಭಾವಿಕರಿಗೆ ಈ ಗ್ರಂಥದಿಂದ ಲಾಭವಾಗುವುದು. ಅವರ ದೈನಂದಿನ ಜೀವನವು ಸುಖಕರವಾಗಲು ಮಹತ್ತರ ಸಹಾಯವಾಗುವುದು ಎಂದು ಭಾವಿಕರಲ್ಲಿ ಮಾತುಕತೆ ನಡೆಯುತ್ತಿದೆ.

ಕರೆ

ಭಾವಿಕರು ಅಪಾರ ಸಂಖ್ಯೆಯಲ್ಲಿ ಈ ಅದ್ವಿತೀಯ ಕಾರ್ಯಕ್ಕೆ ಸ್ವಯಂಸ್ಫೂರ್ತಿಯಿಂದ ತನು-ಮನ-ಧನಗಳಿಂದ ಸಾಧ್ಯವಿದ್ದಷ್ಟು ಸಹಾಯ ಮಾಡಬೇಕು. ಜನಮಾನಸದಲ್ಲಿ ಪ್ರಚಲಿತವಾಗಿರುವ ಹಾಗೂ ಮಹಾತ್ಮ್ಯವನ್ನು ಹೆಚ್ಚಿಸುವ ನವನಾಥರ ಕಥೆ ಶ್ರೀ. ಮಿಲಿಂದ ಚವಂಡಕೆಯವರಿಗೆ ಕಳುಹಿಸಬೇಕು. ವಿಭಿನ್ನ ಪ್ರಾಂತ್ಯಗಳಲ್ಲಿ ನವನಾಥರ ಮನಸ್ಸನ್ನು ಮರುಳಾಗಿಸುವ ಕಥೆಗಳಿವೆ. ಶ್ರದ್ಧಾಳು ಭಾವಿಕರ ಭಕ್ತಿಯನ್ನು ಹೆಚ್ಚಿಸುವ ಕಥೆಗಳು ಜನಮಾನಸದಲ್ಲಿ ಇಂದಿಗೂ ಪ್ರಚಲಿತವಾಗಿವೆ. ವಿವಿಧ ಪುರಾತನ ಗ್ರಂಥಗಳಲ್ಲಿಯೂ ನವನಾಥರ ಕಥೆಗಳಿವೆ. ನಾಥರ ಪಾದಸ್ಪರ್ಷದಿಂದ ಪಾವನವಾಗಿರುವ ನಾಥಸ್ಥಳ, ತಪೋಭೂಮಿ, ಸಾಧನಾಭೂಮಿ ವಿವಿಧ ಕಡೆಗಳಲ್ಲಿವೆ. ಈ ಎಲ್ಲವುಗಳ ವಿಸ್ತ್ರತ ಮಾಹಿತಿಯನ್ನು ಪುರಾತನ ಗಂಥಗಳ ಆಧಾರದಲ್ಲಿ ಸಂಕಲಿಸಿ ಶ್ರೀ. ಚವಂಡಕೆಯವರಿಗೆ ಕಳುಹಿಸಿ ಈ ದೈವೀ ಕಾರ್ಯದಲ್ಲಿ ಸಹಭಾಗಿಯಾಗುವ ಭಾಗ್ಯವನ್ನು ಪಡೆಯಬೇಕು, ಎಂದು ಕರೆ ನೀಡಲಾಗಿದೆ.

೮ ನಾಥರ ಕುರಿತು ಗ್ರಂಥ ನಿರ್ಮಾಣದ ಸಂಕಲ್ಪ

ಪ.ಪೂ. ಶ್ರೀಕಾನಿಫನಾಥರ ಗ್ರಂಥದ ಹಾಗೆಯೇ ಉಳಿದ ೮ ನಾಥರ ಸ್ವತಂತ್ರ ಗ್ರಂಥ ನಿರ್ಮಾಣ ಮಾಡಿ ಅವುಗಳನ್ನೂ ಕೂಡ ಇದೇ ರೀತಿಯಲ್ಲಿ ಐದು ಭಾಷೆಗಳಲ್ಲಿ ಭಕ್ತರಿಗೆ ನೀಡುವ ಸಂಕಲ್ಪವನ್ನು ಶ್ರೀ. ಮಿಲಿಂದ ಚವಂಡಕೆ ಇವರು ಮಾಡಿದ್ದಾರೆ. ನವನಾಥರ ಗ್ರಂಥದ ಸ್ವತಂತ್ರ ಲೇಖನ ಪ್ರಪ್ರಥಮಬಾರಿಗೆ ನಡೆಯುವುದರಿಂದ ನಾವೆಲ್ಲರೂ ಈ ಐತಿಹಾಸಿಕ ಘಟನೆಗೆ ಸಾಕ್ಷಿದಾರರಾಗುವವರಿದ್ದೇವೆ. ಈ ಸದ್ಭಾವನೆಯಿಂದ ನಾಥ ಭಕ್ತರಲ್ಲಿ ಅತ್ಯಂತ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ.

ಮಾಹಿತಿ ಕಳಿಸಲು ವಿಳಾಸ

ಶ್ರೀ. ಮಿಲಿಂದ ಸದಾಶಿವ ಚವಂಡಕೆ

ಸ್ವಾಗತ ಬಿಲ್ಡಿಂಗ್, ಮಹಾದೇವ ದೇವಸ್ಥಾನದ ಎದುರು, ಅಮೃತಕಲಶ ಅಪಾರ್ಟ್ಮೆಂಟ್ ಹತ್ತಿರ, ಬೊರುಡೆ ಮಳಾ, ಮು.ಪೋ.ಜಿ. ಅಹಮದನಗರ (ಮಹಾರಾಷ್ಟ್ರ) ೪೧೪ ೦೦೧

ಸಂಚಾರಿವಾಣಿ ಸಂಖ್ಯೆ – ೯೪೨೨೪೯೫೨೮೯

‘ಯುನಿವರ್ಸಲ್ ಆರಾ ಸ್ಕ್ಯಾನರ್’ನ ನಿರೀಕ್ಷಣೆಯಿಂದ ಬಹಿರಂಗವಾಯಿತು ಗ್ರಂಥದ ದೈವಿ ಶಕ್ತಿಯ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

ಗ್ರಂಥದ ಲೇಖಕರಾದ ಶ್ರೀ. ಮಿಲಿಂದ ಚವಂಡಕೆ ಇವರು ಗ್ರಂಥದ ಎಲ್ಲಾ ಅಧ್ಯಾಯಗಳನ್ನು ರಾಮನಾಥಿಯ (ಗೋವಾ) ಸನಾತನ ಆಶ್ರಮದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ ಇವರಿಗೆ ನೀಡಿದ್ದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ‘ಯುನಿವರ್ಸಲ್ ಆರಾ ಸ್ಕ್ಯಾನರ್’ ಎಂಬ ಅತ್ಯಾಧುನಿಕ ಉಪಕರಣದ ಮೂಲಕ ಈ ಗ್ರಂಥದ ಪರೀಕ್ಷಣೆ ನಡೆಸಿತು. ‘ವೈಜ್ಞಾನಿಕ ಪರೀಕ್ಷಣೆಯ ವರದಿಯು ‘ಗ್ರಂಥದಲ್ಲಿರುವ ನಾಥರ ದೈವೀಶಕ್ತಿಯನ್ನು ತೋರಿಸಿಕೊಡುವ ಮತ್ತು ಭಕ್ತರ ಭಕ್ತಿ ಭಾವ ಹೆಚ್ಚಿಸುವಂತೆ ಇದೆ’ ಎಂದು ಶ್ರೀ. ಚವಂಡಕೆ ಇವರು ಹೇಳಿದರು. ಭಕ್ತರ ಬೇಡಿಕೆಯ ವಿಚಾರ ಮಾಡಿ ಗ್ರಂಥ ಲೇಖಕ ಶ್ರೀ. ಮಿಲಿಂದ ಚವಂಡಕೆ ಇವರು ಮರಾಠಿಯಲ್ಲಿರುವ ‘ಶ್ರೀಕಾನಿಫನಾಥಮಹಾತ್ಮೆ’ ಗ್ರಂಥವನ್ನು ಹಿಂದಿ, ಇಂಗ್ಲೀಷ್, ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಅನುವಾದಿಸುವ ಸಂಕಲ್ಪ ಮಾಡಿದ್ದಾರೆ. ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗಿಳ ಇವರ ಪ್ರಬಲ ಬೆಂಬಲದಿಂದ ಈ ಅನುವಾದದ ಕಾರ್ಯ ಪ್ರಭಾವಿಯಾಗಿ ನೆರವೇರುವುದು, ಎಂದು ಶ್ರೀ. ಮಿಲಿಂದ ಚವಂಡಕೆ ಇವರು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಂದ ಗ್ರಂಥ ನಿರ್ಮಾಣಕ್ಕಾಗಿ ನಿಧಿ ಸಿಗಬೇಕು ! – ನಾಥಭಕ್ತರ ಅಪೇಕ್ಷೆ

ನವನಾಥರ ಸ್ವತಂತ್ರ ಗ್ರಂಥದ ರಚನೆಗಾಗಿ ಪ್ರಚಲಿತ ಪ್ರಾಚೀನ ಕಥೆಗಳ ಸಂಕಲನ ಮಾಡುವ ಶುಭಾರಂಭವನ್ನು ಶ್ರೀ. ಮಿಲಿಂದ ಚವಂಡಕೆ ಇವರು ಈಗಷ್ಟೇ ಮಾಡಿದ್ದಾರೆ. ಸಂಪೂರ್ಣ ವಿಶ್ವದಲ್ಲಿಯೇ ಈ ನಾಥಕಾರ್ಯ ಮೊಟ್ಟಮೊದಲ ಬಾರಿಗೆ ಆಗಲಿದೆ. ಹಿಂದಿ, ಮರಾಠಿ, ಇಂಗ್ಲೀಷ್, ಕನ್ನಡ ಮತ್ತು ತೆಲುಗು ಹೀಗೆ ಐದು ಭಾಷೆಗಳಲ್ಲಿ ನವನಾಥರ ಪಾರಾಯಣ ಗ್ರಂಥ ಮೊದಲ ಬಾರಿಗೆ ಸಾಕಾರಗೊಳ್ಳುತ್ತಿದ್ದು ಪ್ರತಿದಿನ ಓದುವುದಕ್ಕಾಗಿ ಉಪಯುಕ್ತವಾಗುವುದು. ಈ ಕಾರ್ಯಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹಣ ಖರ್ಚಾಗುವುದು ತಿಳಿದಿರುವ ವಿಷಯವೇ. ಒಂದು ಭಾಷೆಯಲ್ಲಿ ನಾಥರ ಕಾವ್ಯಾತ್ಮಕ ಸಚಿತ್ರ ಗ್ರಂಥದ ನಿರ್ಮಾಣಕ್ಕಾಗಿ ಮೂರು ಲಕ್ಷ ಖರ್ಚು ಆಗುವುದೆಂಬ ಅಂದಾಜಿದೆ. ಐದು ಭಾಷೆಗಳಲ್ಲಿ ಒಂದು ನಾಥರ ಗ್ರಂಥಕ್ಕಾಗಿ ಒಟ್ಟು ೧೫ ಲಕ್ಷ ಖರ್ಚು ಬರಲಿದೆ. ನವನಾಥರ ೯ ಗ್ರಂಥಗಳ ಪ್ರತಿಯೊಂದು ಐದು ಭಾಷೆಗಳಲ್ಲಿ ನಿರ್ಮಿಸಲು ೧ ಕೋಟಿ ೩೫ ಲಕ್ಷ ಬೇಕಾಗುವುದು. ಗೊರಖಪುರದಲ್ಲಿ ಪ.ಪೂ. ಶ್ರೀಗುರು ಗೋರಕ್ಷಕನಾಥರ ಪೀಠದ ಅಧ್ಯಕ್ಷರಾದ ಯೋಗಿ ಆದಿತ್ಯನಾಥರು ಈ ಐತಿಹಾಸಿಕ ನಾಥಕಾರ್ಯ ಪೂರ್ಣತ್ವಕ್ಕೆ ತಲುಪಿಸಲು ನಿಧಿಯ ಸಹಾಯ ಮಾಡಬೇಕು ಎಂದು ನಾಥ ಭಕ್ತರು ಒತ್ತಾಯಿಸುತ್ತಿದ್ದಾರೆ. ನಾಥಕಾರ್ಯದ ಪ್ರಚಾರ ಮತ್ತು ಪ್ರಸಾರ ಮಾಡುವ ವ್ರತ ಸ್ವತಃ ನವನಾಥರೇ ಕೈಗೆಯೆತ್ತಿಕೊಂಡಿದ್ದರು. ಈ ವ್ರತ ಈ ಗ್ರಂಥ ನಿರ್ಮಾಣದಿಂದ ಮುಂದುವರೆಯುವುದು.