|
ನವದೆಹಲಿ – ‘ಬುಲ್ಡೋಜರ ತರುವುದು ಮತ್ತು ರಾತ್ರೋರಾತ್ರಿ ಕಟ್ಟಡಗಳನ್ನು ಕೆಡವುದನ್ನು ನೀವು ಮಾಡಲು ಸಾಧ್ಯವಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯವು ಉತ್ತರ ಪ್ರದೇಶ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯವು 2019 ರಲ್ಲಿ, ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಸರಕಾರ ನಡೆಸಿರುವ ಕಾರ್ಯಾಚರಣೆ `ಕಾನೂನು ಬಾಹಿರ’ ವೆಂದು ಹೇಳುತ್ತಾ ರಸ್ತೆ ಅಗಲೀಕರಣ ಮತ್ತು ಅತಿಕ್ರಮಣವನ್ನು ತೆಗೆದುಹಾಕುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿದೆ. ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಮಹಾರಾಜಗಂಜ ಜಿಲ್ಲೆಯ ಒಂದು ಮನೆಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸಿ ಸೂಕ್ತ ಕ್ರಮ ಕೈಕೊಳ್ಳುವಂತೆಯೂ ಪೀಠವು ಆದೇಶಿಸಿದೆ.
ಸರ್ವೋಚ್ಚ ನ್ಯಾಯಾಲಯವು, ನೀವು ಈ ರೀತಿ ಜನರ ಮನೆಗಳನ್ನು ಹೇಗೆ ಧ್ವಂಸಗೊಳಿಸುತ್ತೀರಿ ? ಇದು ಸಂಪೂರ್ಣವಾಗಿ ಅರಾಜಕತೆಯಲ್ಲವೇ? ಯಾವುದೇ ನೊಟೀಸು ನೀಡದೇ ನೇರವಾಗಿ ಬಂದು ಮನೆಯನ್ನು ಧ್ವಂಸಗೊಳಿಸುತ್ತೀರಿ. ನೀವು ಕುಟುಂಬಕ್ಕೆ ಮನೆಯನ್ನು ಖಾಲಿ ಮಾಡಲು ಸಮಯವನ್ನೂ ಕೊಡುವುದಿಲ್ಲ. ಮನೆಯಲ್ಲಿರುವ ವಸ್ತುಗಳ ಬಗ್ಗೆ ಏನು? ಸಂಪೂರ್ಣ ಕಾರ್ಯಾಚರಣೆಯ ಹಿಂದೆ ರಸ್ತೆ ಅಗಲೀಕರಣವಾಗಿದೆಯೆಂದು ತೋರುವುದಿಲ್ಲ, ರಸ್ತೆ ಅಗಲಿಕರಣಕ್ಕಾಗಿಯೇ ಈ ಕಾರ್ಯಾಚರಣೆ ಎಂದು ಅನಿಸುವುದಿಲ್ಲ. ಮನಸ್ಸಿಗೆ ಬಂದಂತೆ ನೀವು ಯಾರನ್ನೂ ಮನೆ ಖಾಲಿ ಮಾಡುವಂತೆ ಹೇಳುವಂತಿಲ್ಲ.
ಸರ್ವೋಚ್ಚ ನ್ಯಾಯಾಲಯದ ಆದೇಶಗಳು
1. ಅತಿಕ್ರಮಣವನ್ನು ಪತ್ತೆಗೆ ದಾಖಲೆ ಹಾಗೂ ನಕ್ಷೆಗಳ ಆಧಾರದ ಮೇಲೆ ರಸ್ತೆ ಅಗಲೀಕರಣವನ್ನು ಕಂಡು ಹಿಡಿಯಬೇಕು ಮತ್ತು ಸರ್ವೆ ನಡೆಸಬೇಕು.
2. ರಸ್ತೆ ಅಗಲೀಕರಣಕ್ಕೆ ಸಾಕಷ್ಟು ಸ್ಥಳವಿಲ್ಲದಿದ್ದರೆ, ಮೊದಲು ಕಾನೂನಿನಂತೆ ಸಂಬಂಧಪಟ್ಟ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕ್ರಮ ಕೈಕೊಳ್ಳಬೇಕು.
3. ಅತಿಕ್ರಮಣದ ವಿರುದ್ಧ ಕಾರ್ಯಾಚರಣೆ ಕೈಗೊಳ್ಳುವ ಮೊದಲು ಅತಿಕ್ರಮಣಕಾರರಿಗೆ ನೊಟೀಸು ಜಾರಿ ಮಾಡಬೇಕು.
4. ಅತಿಕ್ರಮಣದಾರರು ಆಕ್ಷೇಪಣೆಯನ್ನು ವ್ಯಕ್ತಪಡಿಸಿದರೆ, ಸಹಜವಾಗಿ ನ್ಯಾಯದ ತತ್ವಗಳ ಪ್ರಕಾರ ಆದೇಶಗಳನ್ನು ಹೊರಡಿಸಬೇಕು. ಆಕ್ಷೇಪಣೆಗಳನ್ನು ತಿರಸ್ಕರಿಸಿದರೆ, ತರ್ಕಬದ್ಧವಾಗಿ ನೊಟೀಸು ಜಾರಿಗೊಳಿಸಬೇಕು.
5. ಅತಿಕ್ರಮಣದಾರರು ಆದೇಶದ ಪಾಲನೆ ಮಾಡಲು ನಿರಾಕರಿಸಿದರೆ ಮತ್ತು ಸಕ್ಷಮ ಪ್ರಾಧಿಕಾರವು ಅತಿಕ್ರಮಣವನ್ನು ತೆಗೆದುಹಾಕಲು ಕ್ರಮ ತೆಗೆದುಕೊಳ್ಳಬೇಕು.