ಹನುಮಂತನನ್ನು ಒಪ್ಪದೇ ಇರುವವರು ಭಾರತದಿಂದ ತೊಲಗುವಂತೆ ಕರೆ
ಅಮರಾವತಿ (ಮಹಾರಾಷ್ಟ್ರ) – ತ್ರೇತಾಯುಗದಲ್ಲಿ ಹನುಮಂತ ಇದ್ದನು; ಆದರೆ ಇಸ್ಲಾಂ ಹೆಸರಿನ ಯಾವುದೇ ವಿಷಯ ಈ ಪೃಥ್ವಿಯಲ್ಲಿ ಇರಲಿಲ್ಲ. ಇಂದು ನಾವು ಹನುಮಾನ ಚಾಲಿಸಾದ ಪಠಣೆ ಮಾಡುತ್ತೇವೆ, ಶ್ರೀ ರಾಮನವಮಿಗೆ ಶೋಭಾ ಯಾತ್ರೆ ನಡೆಸುತ್ತೇವೆ; ಆದರೆ ಅದನ್ನು ನಿಷೇಧಿಸಲಾಗುತ್ತಿದೆ, ಅಡೆತಡೆ ನಿರ್ಮಾಣ ಮಾಡಲಾಗುತ್ತದೆ. ಏತಕ್ಕಾಗಿ ? ಪ್ರಭು ಶ್ರೀರಾಮಚಂದ್ರನನ್ನು ನಂಬುವುದಿಲ್ಲ, ಭಜರಂಗಬಲಿಯನ್ನು ನಂಬದೇ ಇರುವಂತಹ ಯಾರಾದರು ಭಾರತದಲ್ಲಿ ಇದ್ದಾರೆಯೇ, ಯಾರು ಹನುಮಂತನನ್ನು ಒಪ್ಪುವುದಿಲ್ಲ, ಅವರು ಅವರು ಇದನ್ನು ಒಪ್ಪಿಕೊಂಡು ಇಲ್ಲಿಂದ ಹೊರಟು ಹೋಗಬೇಕೆಂದು ಉತ್ತರ ಪ್ರದೇಶದ ಭಾಜಪ ಸರಕಾರದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಕರೆ ನೀಡಿದರು. ಇಲ್ಲಿ ಚುನಾವಣೆಯ ಪ್ರಯುಕ್ತ ಆಯೋಜಿಸಿರುವ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಇದು ರಾಷ್ಟ್ರ ಮತ್ತು ಧರ್ಮದ ರಕ್ಷಣೆಯ ಚುನಾವಣೆ !
ಯೋಗಿ ಆದಿತ್ಯನಾಥ ಇವರು, “ಇದು ರಾಷ್ಟ್ರ ಮತ್ತು ಧರ್ಮದ ರಕ್ಷಣೆಯ ಚುನಾವಣೆ ಆಗಿದೆ. ಇಲ್ಲಿ ಎಲ್ಲವೂ ದೇಶದ ಹೆಸರಿನಲ್ಲಿ ಇರಬೇಕು. ಪ್ರತಿಯೊಂದು ಕೆಲಸ ದೇಶದ ಹೆಸರಿನಲ್ಲಿ ಮಾಡಬೇಕು. ಇಲ್ಲಿ ನಮ್ಮ ವೈಯಕ್ತಿಕ ಅಸ್ತಿತ್ವ ಬೇಡ. ಯಾವುದು ದೇಶ ಹಿತದಲ್ಲಿದೆ, ಅದು ನಮ್ಮ ಹಿತದ್ದಾಗಿದೆ. ಯಾವುದು ದೇಶದ ವಿರುದ್ಧವಾಗಿದೆ, ಅದು ನಮ್ಮ ವಿರುದ್ಧವಾಗಿದೆ. ಇದೇ ಪರಿಕಲ್ಪನೆಯ ಜೊತೆಗೆ ನಾವು ಮಹಾರಾಷ್ಟ್ರದ ಚುನಾವಣೆಯಲ್ಲಿ ಹೋರಾಡಬೇಕು. ಯಾವುದೇ ಪರಿಸ್ಥಿತಿಯಲ್ಲಿ ದೇಶದ ಮೈತ್ರಿ ಸರಕಾರ ತರುವುದಿದೆ.” ಎಂದು ಹೇಳಿದರು.