ಸನಾತನ ಸಂಸ್ಥೆಯ ವತಿಯಿಂದ ದೇಶಾದ್ಯಂತ ೧೫೩ ಸ್ಥಳಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನವಾಯಿತು!

ಮುಂಬೈ, ಜುಲೈ ೧೩(ವಾರ್ತೆ) – ಮಾಯೆಯ ಭವಸಾಗರದಿಂದ ಶಿಷ್ಯರು ಹಾಗೂ ಭಕ್ತರನ್ನು ಹೂವಿನ ಹಾಗೆ ಹಗುರವಾಗಿ ಎತ್ತಿ ಹೊರತೆಗೆಯುವ, ಅವರಿಂದ ಅವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಷ್ಟದ ಸಮಯದಲ್ಲಿ ಅವರಿಗೆ ನಿರಪೇಕ್ಷ ಪ್ರೀತಿಯ ಆಧಾರ ನೀಡಿ ಸಂಕಟಗಳಿಂದ ಮುಕ್ತಗೊಳಿಸುವವರು ಗುರುಗಳೇ ಆಗಿರುತ್ತಾರೆ. ಇಂತಹ ಪರಮ ಪೂಜನೀಯ ಗುರುಗಳ ಪ್ರತಿ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವೆಂದರೆ ಗುರುಪೂರ್ಣಿಮೆ ! ಇದೇ ಕೃತಜ್ಞತಾಭಾವದಲ್ಲಿ ಹಾಗೂ ಚೈತನ್ಯಮಯ ವಾತಾವರಣದಲ್ಲಿ ಸನಾತನ ಸಂಸ್ಥೆಯ ವತಿಯಿಂದ ದೇಶದಾದ್ಯಂತ ೧೫೩ ಸ್ಥಳಗಳಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ವನ್ನು ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾಯಿತು. ಇದರಲ್ಲಿ ದೆಹಲಿ, ಹರಿಯಾಣ, ಗುಜರಾತ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಝಾರಖಂಡ, ಗೋವಾ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಈ ರಾಜ್ಯಗಳೂ ಸೇರಿವೆ. ಮಹೋತ್ಸವದ ಆರಂಭದಲ್ಲಿ ಶ್ರೀ ವ್ಯಾಸಪೂಜೆ ಹಾಗೂ ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆಯನ್ನು ಮಾಡಲಾಯಿತು.

ಎಲ್ಲೆಡೆ ಗುರುಪೂರ್ಣಿಮಾ ಮಹೋತ್ಸವಗಳಲ್ಲಿ ಗೌರವಾನ್ವಿತ ವಕ್ತಾರರು ‘ಧರ್ಮನಿಷ್ಠ ಸಮಾಜದ ನಿರ್ಮಾಣ ಮತ್ತು ಧರ್ಮಾಧಾರಿತ ಹಿಂದೂ ರಾಷ್ಟ್ರದ ಸ್ಥಾಪನೆಯ ಆವಶ್ಯಕತೆಯ ಬಗ್ಗೆ ಮಾರ್ಗದರ್ಶನ ಮಾಡಿದರು. ಈ ಮಹೋತ್ಸವದಲ್ಲಿ ಸ್ವಸಂರಕ್ಷಣಾ ಪ್ರಶಿಕ್ಷಣದ ಪ್ರಾತ್ಯಕ್ಷಿಕೆಗಳು ಉಪಸ್ಥಿತರಿಗಾಗಿ ವಿಶೇಷ ಆಕರ್ಷಣೆಯಾಗಿದ್ದವು. ಈ ಮಹೋತ್ಸವದಲ್ಲಿ ಧರ್ಮ, ಅಧ್ಯಾತ್ಮ, ಸಾಧನೆ, ಬಾಲಸಂಸ್ಕಾರ, ಆಚಾರಧರ್ಮ, ಆಯುರ್ವೇದ, ಪ್ರಥಮೋಪಚಾರ, ಹಿಂದೂ ರಾಷ್ಟ್ರ ಮುಂತಾದ ವಿವಿಧ ವಿಷಯಗಳ ಬಗ್ಗೆ ಗ್ರಂಥಗಳ ಪ್ರದರ್ಶನ, ಹಾಗೆಯೇ ರಾಷ್ಟ್ರ-ಧರ್ಮದ ವಿಷಯದಲ್ಲಿನ ಫಲಕ ಪ್ರದರ್ಶನವನ್ನು ಹಾಕಲಾಗಿತ್ತು.

೯ ಭಾಷೆಗಳಲ್ಲಿ ‘ಆನ್ಲೈನ್’ ಗುರುಪೂರ್ಣಿಮಾ ಮಹೋತ್ಸವ’

ಈ ವರ್ಷದಂದು ಸನಾತನ ಸಂಸ್ಥೆಯ ವತಿಯಿಂದ ಮರಾಠಿ, ಹಿಂದಿ, ಆಂಗ್ಲ, ಕನ್ನಡ, ತಮಿಳು, ತೆಲುಗು, ಗುಜರಾತಿ, ಬಂಗಾಲಿ ಮತ್ತು ಒಡಿಯಾ ಈ ೯ ಭಾಷೆಗಳಲ್ಲಿ ಆನ್ಲೈನ್ ಗುರುಪೂರ್ಣಿಮಾ ಮಹೋತ್ಸವವು ನೆರವೇರಿತು. ಈ ಮಾಧ್ಯಮದಿಂದ ದೇಶದಾದ್ಯಂತ ಸಾವಿರಾರು ಭಾವಿಕರು ‘ಗುರುಪೂರ್ಣಿಮಾ ಮಹೋತ್ಸವ’ದ ಲಾಭ ಪಡೆದರು.

‘ಇಂಪಾರ್ಟೆನ್ಸ್‌ ಆಫ್ ಗುರು’ ಎಂಬ ‘ಈ-ಬುಕ್’ನ ಪ್ರಕಾಶನ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳರವರ ಕರಕಮಲಗಳಿಂದ ‘ಇಂಪಾರ್ಟೆನ್ಸ್‌ ಆಫ್ ಗುರು’ ಎಂಬ ‘ಈ-ಬುಕ್’ ಪ್ರಕಾಶನ

‘ಆನ್ಲೈನ್’ ಗುರುಪೂರ್ಣಿಮಾ ಮಹೋತ್ಸವದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಓರ್ವ ಆಧ್ಯಾತ್ಮಿಕ ಉತ್ತರಾಧಿಕಾರಿಯಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳರವರ ಕರಕಮಲಗಳಿಂದ ‘ಇಂಪಾರ್ಟೆನ್ಸ್‌ ಆಫ್ ಗುರು’ ಎಂಬ ‘ಈ-ಬುಕ್’ನ್ನು ಪ್ರಕಾಶಿಸಲಾಯಿತು.


ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಶ್ರೀ ದತ್ತಗುರುಗಳ ರೂಪದಲ್ಲಿ ಪಾದಪೂಜೆ !

ಸನಾತನದ ಗೋವಾದ ರಾಮನಾಥಿಯಲ್ಲಿರುವ ಆಶ್ರಮದಲ್ಲಿ ಜರುಗಿತು ಮಹೋತ್ಸವ !

ಶ್ರೀ ದತ್ತಗುರುಗಳ ರೂಪದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಾದಪೂಜೆಯನ್ನು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಮಾಡುವಾಗ

ಫೋಂಡಾ (ಗೋವಾ), ಜುಲೈ ೧೩ (ವಾರ್ತೆ.) – ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಪವಿತ್ರ ದಿನವೆಂದರೆ ಗುರುಪೂರ್ಣಿಮೆ ! ಈ ಶುಭದಿನದಂದು ಸನಾತನದ ಸಾಧಕರಿಗೆ ಗುರುದರ್ಶನದ ಅಮೂಲ್ಯ ಉತ್ಸವವು ಲಭಿಸಿತು !

ಸಪ್ತರ್ಷಿಗಳ ಆಜ್ಞೆಯಿಂದ ಗುರುಪೂರ್ಣಿಮೆಯ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಶ್ರೀ ದತ್ತಗುರುಗಳ ರೂಪದಲ್ಲಿ ದರ್ಶನ ನೀಡಿದರು. ಜುಲೈ ೧೩ ರಂದು ಸನಾತನದ ರಾಮನಾಥಿ(ಗೋವಾ)ಯಲ್ಲಿನ ಆಶ್ರಮದಲ್ಲಿ ನೆರವೇರಿದ ಈ ಭಕ್ತಿಮಯ ಮಹೋತ್ಸವದಲ್ಲಿ ಶ್ರೀ ದತ್ತಗುರುಗಳ ರೂಪದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಾದಪೂಜೆಯನ್ನು ಮಾಡಲಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಆಧ್ಯಾತ್ಮಿಕ ಉತ್ತರಾಧಿಕಾರಿ’ಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರು ಶ್ರೀ ದತ್ತಾತ್ರೇಯರ ರೂಪದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪಾದಪೂಜೆಯನ್ನು ಮಾಡಿದರು. ಗಣಕೀಯ ವ್ಯವಸ್ಥೆಯ ಮೂಲಕ ಎಲ್ಲೆಡೆ ಇರುವ ಸನಾತನದ ಸಾಧಕರು ಶ್ರೀ ಗುರುಗಳ ಈ ಪಾವನ ಪೂಜೆಯ ಲಾಭವನ್ನು ಪಡೆದರು.

ದತ್ತಗುರುಗಳ ರೂಪದಲ್ಲಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪೂಜೆಯ ಸ್ಥಳದಲ್ಲಿ ಆಗಮನವಾದ ನಂತರ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳರವರು ಅವರಿಗೆ ಮಲ್ಲಿಗೆ ಹೂವಿನ ಹಾರ, ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರವರು ಗುಲಾಬಿ ಹೂವಿನ ಹಾರವನ್ನು ಅರ್ಪಿಸಿದರು. ಅನಂತರ ಶ್ರೀಸತ್‌ಶಕ್ತಿ ಮತ್ತು ಶ್ರೀಚಿತ್‌ಶಕ್ತಿಯವರು ಶ್ರೀ ದತ್ತಗುರುಗಳ ರೂಪದಲ್ಲಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಚಂದನದ ಗಂಧ, ಕುಂಕುಮ ಮತ್ತು ಅಕ್ಷತೆಯನ್ನು ಅರ್ಪಿಸಿದರು. ಸಪ್ತರ್ಷಿಗಳು ಈ ಹಿಂದೆಯೇ, ‘ಪರಾತ್ಪರ ಗುರು ಡಾ. ಆಠವಲೆಯವರು ಈಗ ‘ಸಚ್ಚಿದಾನಂದ ಪರಬ್ರಹ್ಮಸ್ವರೂಪ’ರಿದ್ದಾರೆ. ಆದುದರಿಂದ ಅವರನ್ನು ’ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ’ ಎಂದು ಸಂಬೋಧಿಸಬೇಕು’ ಎಂದು ಹೇಳಿದ್ದರು. ಆದುದರಿಂದ ಈ ಸಮಯದಲ್ಲಿ ಸಪ್ತರ್ಷಿಗಳ ಆಜ್ಞೆಯಿಂದ ೧೦೮ ಬಾರಿ ‘ಓಂ ಐಂ ಕ್ಲಿಂ ಶ್ರೀಂ ಶ್ರೀಂ ಶ್ರೀಂ ಸಚ್ಚಿದಾನಂದ ಪರಬ್ರಹ್ಮಣೆ ನಮಃ |’ ಎಂಬ ಮಂತ್ರಘೋಷವನ್ನು ಮಾಡುತ್ತ ಶ್ರೀಸತ್‌ಶಕ್ತಿ ಮತ್ತು ಶ್ರೀಚಿತ್‌ಶಕ್ತಿಯವರು ಗುರುದೇವರ ಚರಣಗಳಲ್ಲಿ ಪುಷ್ಪಗಳನ್ನು ಅರ್ಪಿಸಿದರು. ಈ ಸಮಯದಲ್ಲಿ ಸಂಗಣಕೀಯ ವ್ಯವಸ್ಥೆಯ ಮೂಲಕ ಜೋಡಿಸಲ್ಪಟ್ಟ ಎಲ್ಲೆಡೆಯ ಸಾಧಕರೂ ಮಂತ್ರಜಪವನ್ನು ಮಾಡಿ ಶ್ರೀಗುರುಗಳಲ್ಲಿ ಮೊರೆಯಿಟ್ಟರು. ಶ್ರೀ ಗುರುಗಳಿಗೆ ಧೂಪ ಮತ್ತು ದೀಪಗಳಿಂದ ಆರತಿ ಬೆಳಗಿ, ಅವರಿಗೆ ನೈವೇದ್ಯವನ್ನು ಅರ್ಪಿಸಲಾಯಿತು. ಈ ಸಮಯದಲ್ಲಿ ಸಾಮವೇದದ ಮಂತ್ರಘೋಷದಲ್ಲಿ ಶ್ರೀ ದತ್ತಗುರುಗಳ ರೂಪದಲ್ಲಿರುವ ಗುರುದೇವರಿಗೆ ಆರತಿಯನ್ನು ಬೆಳಗಲಾಯಿತು.

ಶ್ರೀ ಗುರುಗಳ ಪಾದಪೂಜೆಯ ಅಮೂಲ್ಯ ಕ್ಷಣವನ್ನು ಅಂತರ್ಮನಸ್ಸಿನಲ್ಲಿ ಸಂಗ್ರಹಿಸಿ ಸಾಧಕರು ಸನಾತನದ ಗುರುಪರಂಪರೆಯ ಪಾವನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು !

ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಶ್ರೀ ದತ್ತಗುರುಗಳ ರೂಪದ ದರ್ಶನದಿಂದ ಬಂದಂತಹ ವಿವಿಧ ಅನುಭೂತಿಗಳು !

ಸಪ್ತರ್ಷಿಗಳ ಆಜ್ಞೆಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀ ದತ್ತಗುರುಗಳ ರೂಪದಲ್ಲಿ ದರ್ಶನವನ್ನು ನೀಡಿದ ನಂತರ ಸಮಾರಂಭದಲ್ಲಿ ನಿರ್ಗುಣ ಸ್ತರದ ವಾತಾವರಣವಿತ್ತು. ಈ ಸಮಾರಂಭದಲ್ಲಿ ಸಾಧಕರಿಗೆ ‘ಮನಸ್ಸು ನಿರ್ವಿಚಾರವಾಗುವುದು’, ‘ಧ್ಯಾನ ತಗುಲುವುದು’ ಇಂತಹ ವಿವಿಧ ಉಚ್ಚ ಮಟ್ಟದ ಆಧ್ಯಾತ್ಮಿಕ ಅನುಭೂತಿಗಳು ಬಂದವು. ಸಮಾರಂಭವು ನಡೆಯುತ್ತಿರುವಾಗ ಸಾಧಕರು ನಿರ್ಗುಣ ಸ್ತರದ ಶಾಂತಿಯನ್ನು ಅನುಭವಿಸಿದರು. ಸಪ್ತರ್ಷಿಗಳೂ ಈ ಸಮಾರಂಭವು ನಿರ್ಗುಣ ಸ್ತರದಲ್ಲಿ ಆಗಿರುವುದಾಗಿ ಹೇಳಿದರು. ಸಾಧಕರಿಗೆ ಶ್ರೀಗುರುಗಳ ದತ್ತರೂಪದ ದರ್ಶನದ ಲಾಭವು ಆಧ್ಯಾತ್ಮಿಕ ಮಟ್ಟದಲ್ಲಿ ಆಯಿತು.

ಈ ನಿಮಿತ್ತ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ಕ್ಕೂ ‘ಆಧ್ಯಾತ್ಮಿಕ ಉನ್ನತ್ತರು ದೇವತೆಗಳ ವಸ್ತ್ರಾಲಂಕಾರಗಳನ್ನು ಧರಿಸಿದ ನಂತರ ಅವರ ದೇಹ ಮತ್ತು ವಾತಾವರಣದ ಮೇಲೆ ಯಾವ ಪರಿಣಾಮಗಳಾಗುತ್ತವೆ ?’, ಎಂಬುದರ ಬಗ್ಗೆ ವೈಜ್ಞಾನಿಕ ಉಪಕರಣಗಳಿಂದ ಸಂಶೋಧನೆಯನ್ನು ನಡೆಸಲು ಸಾಧ್ಯವಾಯಿತು !

ಸಂತರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ‘ಅವತಾರ’ ವೆಂದು ಸಂಬೋಧಿಸುವುದರ ಹಿಂದಿನ ಕಾರಣ!

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಎಂದಿಗೂ ತಮ್ಮನ್ನು ‘ಅವತಾರ’ವೆಂದು ಹೇಳಿಲ್ಲ. ಸನಾತನ ಸಂಸ್ಥೆಯು ಎಂದಿಗೂ ಹೀಗೆ ಹೇಳುವುದಿಲ್ಲ. ‘ನಾಡಿಭವಿಷ್ಯ’ ಎಂಬ ಪ್ರಾಚೀನ ಹಾಗೂ ಪ್ರಗಲ್ಭ ಜೋತಿಷ್ಯಶಾಸ್ತ್ರದ ಅನುಸಾರ ಸಪ್ತರ್ಷಿಗಳು ಪ್ರತಿಯೊಬ್ಬ ವ್ಯಕ್ತಿಯ ಭವಿಷ್ಯವನ್ನು ಬರೆದಿಟ್ಟಿದ್ದಾರೆ. ತಮಿಳುನಾಡಿನ ಜೀವನಾಡಿಪಟ್ಟಿಯ ವಾಚಕರಾದ ಪೂ. ಡಾ. ಓಂ ಉಲಗನಾಥನ್‌ರವರ ಮಾಧ್ಯಮದಿಂದ ಸಪ್ತರ್ಷಿಗಳು ಜೀವನಾಡಿಪಟ್ಟಿಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀವಿಷ್ಣುವಿನ ಅವತಾರವಾಗಿರುವುದಾಗಿ ಬರೆದಿಟ್ಟಿದ್ದಾರೆ. ಸಪ್ತರ್ಷಿಗಳ ಆಜ್ಞೆಯಿಂದ ಹಾಗೂ ನಾಡೀಪಟ್ಟಿಯಲ್ಲಿ ಹೇಳಿದಂತೆ ಜನ್ಮೋತ್ಸವದ ದಿನ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀವಿಷ್ಣುವಿನ ರೂಪದ ವಸ್ತ್ರಾಲಂಕಾರಗಳನ್ನು ಧರಿಸಿದ್ದಾರೆ.