ಉದಯಪುರ ಹತ್ಯಾಕಾಂಡದಲ್ಲಿ ೨ ಮೌಲವಿ ಮತ್ತು ೨ ವಕೀಲರ ಕೈವಾಡ !

(ಮೌಲವಿ ಅಂದರೆ ಇಸ್ಲಾಮಿನ ಧಾರ್ಮಿಕ ನಾಯಕರು )

ಜಯಪುರ – ಉದಯಪುರದ ಕನ್ಹೈಯ್ಯಲಾಲ ಇವರ ಹತ್ಯೆಯ ಪ್ರಕರಣದ ತನಿಖೆ ಯಲ್ಲಿ ದೊಡ್ಡ ಖುಲಾಸೆ! ಉದಯಪುರದ ರಿಯಾಸತ ಹುಸೇನ ಮತ್ತು ಅಬ್ದುಲ ರಜ್ಜಾಕ ಎಂಬ ಎರಡು ಮೌಲವಿಗಳು ಹತ್ಯೆಯ ಆರೋಪಿ ಮಹಮದ್ ಗೌಸ ಇವನಿಗೆ ದಾವತ – ಏ – ಇಸ್ಲಾಮಿಯ ಪ್ರಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ಕಳುಹಿಸಿದ್ದರು. ಗೌಸ್ ನ ಜೊತೆಗೆ ಮುಖ್ಯ ಆರೋಪಿ ರಿಯಾಜ್ ಅತ್ತಾರಿ ಹಾಗೂ ಅಖ್ತರ ರಜಾ ಸಹ ಪಾಕಿಸ್ತಾನಕ್ಕೆ ಹೋಗಿದ್ದರು. ಈ ೫ ಜನರನ್ನು ರಾಷ್ಟ್ರೀಯ ತನಿಖಾ ದಳದವರು ವಶಕ್ಕೆ ಪಡೆದಿದ್ದಾರೆ. ಸೂತ್ರಗಳು ನೀಡಿರುವ ಮಾಹಿತಿಯ ಪ್ರಕಾರ ಇಬ್ಬರು ವಕೀಲರು ಈ ಸಂಚಿನಲ್ಲಿ ಭಾಗವಹಿಸಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ.

ಹತ್ಯೆಯ ಸಂಚು ರೂಪಿಸಲು ಬೈಠಕ್ ನಡೆದಿತ್ತು !

ಆರೋಪಿಗಳ ಒಂದು ಬೈಠಕ ನಡೆದಿತ್ತು. ಅದರಲ್ಲಿ ರಿಯಾಜ್ ಅತ್ತಾರಿ ಇವನು ಕನ್ಹೈಯ್ಯಲಾಲ ಇವರ ಹತ್ಯೆಯ ಹೊಣೆ ಹೊತ್ತಿದ್ದ. ಈ ಬೈಠಕಿಗೆ ರಿಯಾಜ್ ಜೊತೆಗೆ ಮಹಮ್ಮದ್ ಗೌಸ, ಆಸೀಫ್ ಮತ್ತು ಮೋಹಸಿನ ಕನ್ಹೈಯ್ಯಲಾಲ ಇವರ ಅಂಗಡಿಯ ಹತ್ತಿರ ಇರುವ ಕೆಲವೇ ಅಂತರದಲ್ಲಿ ಮೋಹಸಿನ ಅಂಗಡಿಯಲ್ಲಿ ಮತ್ತು ಪಕ್ಕದಲ್ಲಿರುವ ಆಸೀಫ ನ ಕೋಣೆಯಲ್ಲಿ ಹತ್ಯೆಯ ಸಂಚು ನಡೆಸಲಾಗಿತ್ತು. ರಾಜಸ್ಥಾನದ ಭಯೋತ್ಪಾದನೆ ನಿಗ್ರಹ ದಳದವರು ಮೋಹಸೀನ್ ಮತ್ತು ಆಸಿಫ್ ಇವರನ್ನು ಬಂಧಿಸಿದ್ದಾರೆ. ಹತ್ಯೆಯ ನಿಯೋಜನೆಯಿಂದ ಹಿಡಿದು ಶಸ್ತ್ರ ತಯಾರಿಸುವ ಕಾರ್ಯದಲ್ಲಿ ಮೋಹಸೀನ್ ಮತ್ತು ಆಸೀಫ್ ಇಬ್ಬರೂ ಸಹ ಭಾಗಿಯಾಗಿದ್ದರು. ಯಾವ ಓಣಿಯಲ್ಲಿ ಕನ್ಹೈಯ್ಯಲಾಲ ಇವರ ಅಂಗಡಿಗೆ ಇತ್ತು, ಅದೇ ಓಣಿಯಲ್ಲಿ ರಿಯಾಜ್ ಮತ್ತು ಮಹಮ್ಮದ್ ಗೌಸ್ ಇವರು ಓಡಾಟ ಮೊದಲಿನಿಂದಲೇ ಇರುವುದರಿಂದ ಅವರಿಗೆ ಆ ಪರಿಸರದ ಬಗ್ಗೆ ಚೆನ್ನಾಗಿ ತಿಳಿದಿತ್ತು.

ಸಂಪಾದಕೀಯ ನಿಲುವು

  • ಭಯೋತ್ಪಾದಕರಿಗೆ ಧರ್ಮ ಇರುವದಿಲ್ಲ ಎಂದು ಬೊಬ್ಬೆ ಹಾಕುವವರು ಈಗ ಏನು ಹೇಳುತ್ತಾರೆ ? 
  • ಇಬ್ಬರು ಮೌಲವಿಗಳ ಮೇಲೆ ಹತ್ಯೆಯ ಆರೋಪ ಇರುವುದರಿಂದ ಮದರಸ ಮತ್ತು ಮಸೀದಿಯಲ್ಲಿ ಯಾವ ಶಿಕ್ಷಣ ನೀಡುತ್ತಾರೆ ಎಂಬುವುದರ ವಿಚಾರಣೆ ನಡೆಯಬೇಕು, ಎಂದು ಯಾರಾದರೂ ಬಯಸಿದರೆ ತಪ್ಪೇನು ? 
  • ಜಿಹಾದಿ ಕಾರ್ಯಾಚರಣೆಯಲ್ಲಿ ಉಚ್ಚ ಶಿಕ್ಷಣ ಪಡೆದಿರುವ ವಕೀಲರು ಭಾಗವಿಹಿಸಿರುವುದು ನೋಡಿದರೆ, ಮುಸಲ್ಮಾನರಿಗೆ ಮುಖ್ಯ ವಾಹಿನಿಗೆ ತಂದರೆ ಅಪರಾಧಿ ಕೃತ್ಯದ ಪ್ರಮಾಣ ಕಡಮೆ ಆಗಬಹುದು ಎಂದು ಹೇಳುವವರು ಈಗ ಏನು ಹೇಳುತ್ತಾರೆ?