Video – ನೇಪಾಳ ಹಿಂದೂ ರಾಷ್ಟ್ರವನ್ನಾಗಿಸಲು ಭಾರತದ ಸಹಾಯದ ಅವಶ್ಯಕತೆ ಇದೆ ! ಡಾ. ಬೋಲೆನಾಥ ಯೋಗಿ ಹಿಂದೂ ವಿದ್ಯಾಪೀಠ, ನೇಪಾಳ

ಡಾ. ಬೋಲೆನಾಥ ಯೋಗಿ

ನೇಪಾಳದಲ್ಲಿ ಶೇಕಡ ೯೫ ರಷ್ಟು ಹಿಂದುಗಳಿದ್ದಾರೆ, ಆದರೆ ಪಾಶ್ಚಾತ್ಯದ ಪ್ರಭಾವದಿಂದ ಅವರು ಇಲ್ಲಿ ಟೋಪಿಯ ಬದಲು ಟೈ ಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ನೌಕರಿಯ ನಿಮಿತ್ತ ಪಾಶ್ಚಾತ್ಯ ದೇಶಗಳಿಗೆ ಹೋಗುವುದರಿಂದ ನೇಪಾಳದಲ್ಲಿ ಪಾಶ್ಚಾತ್ಯ ಪ್ರಭಾವ ಹೆಚ್ಚುತ್ತಿದೆ. ಆದ್ದರಿಂದ ಕೈಯಿಂದ ಭೋಜನ ಮಾಡುವುದು ಅಸಭ್ಯ ತಿಳಿಯಲಾಗುತ್ತದೆ. ಪಾಶ್ಚಾತ್ಯ ಪ್ರಭಾವ ಹೆಚ್ಚುತ್ತಿದ್ದರೂ ನೇಪಾಳ ಇಂದಿಗೂ ಭಾರತೀಯ ಸಂಸ್ಕೃತಿಯ ಜೊತೆಗೆ ಜೋಡಿಸಲ್ಪಟ್ಟಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ನೇಪಾಳದಲ್ಲಿ ೧೦ ಸಾವಿರ ನಾಗರಿಕರು ಭಾರತೀಯ ಧಾರ್ಮಿಕ ಕ್ಷೇತ್ರಗಳ ದರ್ಶನ ಪಡೆಯಲು ಭಾರತಕ್ಕೆ ಆಗಮಿಸಿದ್ದಾರೆ. ಆದರೆ ಈ ಎಲ್ಲ ಹಿಂದೂಗಳು ಸಂಘಟಿತರಾಗಿಲ್ಲ. ಆದ್ದರಿಂದ ನೇಪಾಳ ಸಾಮ್ಯವಾದಿ ಮತ್ತು ನಾಸ್ತಿಕವಾದಿಗಳ ಕೇಂದ್ರವಾಗಿದೆ. ನೇಪಾಳ ಸಾಂಸ್ಕೃತಿಕ ದೃಷ್ಟಿಯಿಂದ ಹಿಂದೂ ರಾಷ್ಟ್ರವೇ ಆಗಿದೆ ಆದರೆ ಸಂವಿಧಾನ ಅದಕ್ಕೆ ಮಾನ್ಯತೆ ನೀಡಿ ಇದು ಹಿಂದೂರಾಷ್ಟ್ರ ಆಗುವುದು ಅವಶ್ಯಕವಾಗಿದೆ. ನೇಪಾಳಿ ಜನರು ತೋಡುತ್ತಿರುವ ಟೋಪಿ ಇದು ಹಿಮಾಲಯದ ಪ್ರತೀಕವಾಗಿದೆ.

ನೇಪಾಳದಲ್ಲಿ ನೋಟುಗಳ ಮೇಲೆ ಭಗವಾನ್ ಗೋರಕನಾಥರ ಚಿತ್ರವಿದೆ. ನೇಪಾಳದಲ್ಲಿ ಇಂದಿಗೂ ಕ್ರೈಸ್ತ ಕ್ಯಾಲೆಂಡರ್ ನಡೆಯುವುದಿಲ್ಲ. ನೇಪಾಳದಲ್ಲಿ ಹಿಂದೂ ಪಂಚಾಂಗವನ್ನು ಉಪಯೋಗಿಸಲಾಗುತ್ತದೆ. ಸಾಂವಿಧಾನಿಕ ಹಿಂದೂರಾಷ್ಟ್ರವಾಗಲು ನಮಗೆ ಭಾರತದಿಂದ ಸಹಾಯದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿರುವ ನೇಪಾಳದ ಹಿಂದೂ ವಿದ್ಯಾಪೀಠದ ಡಾ. ಬೋಲಾ ನಾಥಯೋಗಿ ಇವರು ಪ್ರತಿಪಾದಿಸಿದರು. ಅವರು ಅಧಿವೇಶನದ ಆರನೆಯ ದಿನದಂದು, ವಿದೇಶಿ ಹಿಂದೂಗಳ ರಕ್ಷಣೆ, ಈ ಸತ್ರದಲ್ಲಿ ಪಾಶ್ಚಾತ್ಯ ಪ್ರಭಾವದಿಂದ ನೇಪಾಳದ ಹಿಂದೂ ಸಂಸ್ಕೃತಿಗಾಗುತ್ತಿರುವ ಹಾನಿ ಈ ವಿಷಯವಾಗಿ ಅವರು ಮಾತನಾಡುತ್ತಿದ್ದರು.