ದಶಮ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ನಿಮಿತ್ತ ಸಂದೇಶ
ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶದಿಂದ ಒಟ್ಟಾಗಿರುವ ಹಿಂದೂ ರಾಷ್ಟ್ರವೀರರಿಗೆ ನನ್ನ ನಮಸ್ಕಾರಗಳು ! ಹಿಂದೂ ರಾಷ್ಟ್ರದ ಸ್ಥಾಪನೆಯು ಸುಲಭವಲ್ಲ. ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ‘ನಾನು ಸಹಾಯ ಮಾಡುವೆ’, ಈ ರೀತಿಯ ದೃಷ್ಟಿಕೋನವನ್ನು ಇಟ್ಟುಕೊಳ್ಳದಿರಿ ಬದಲಾಗಿ ‘ಇದು ನನ್ನದೇ ಕರ್ತವ್ಯವಾಗಿದೆ’, ಎಂಬ ದೃಷ್ಟಿಕೋನವನ್ನು ಇಟ್ಟುಕೊಳ್ಳಿರಿ. ಹೀಗೆ ಮಾಡಿದರೆ ಮಾತ್ರ ನಿಮ್ಮಿಂದ ಹಿಂದೂ ರಾಷ್ಟ್ರಕ್ಕಾಗಿ ಬೃಹತ್ ಕಾರ್ಯವಾಗಲಿದೆ.
ಹಿಂದೂ ರಾಷ್ಟ್ರದ ಕಾರ್ಯ ಮಾಡುವವರು, ಶಾರೀರಿಕ ಮತ್ತು ಮಾನಸಿಕ ಬಲಕ್ಕಿಂತ ಆಧ್ಯಾತ್ಮಿಕ ಬಲ ಶ್ರೇಷ್ಠವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಛತ್ರಪತಿ ಶಿವಾಜಿ ಮಹಾರಾಜರು ಸ್ವತಃ ಸಾಧನೆ ಮಾಡಿದರು, ಯುದ್ಧಕೌಶಲ್ಯ ಕಲಿತರು, ಮಾವಳೆಯರನ್ನು ಸಂಘಟಿಸಿ ಬಲಾಢ್ಯ ಶತ್ರುಗಳೊಂದಿಗೆ ಹೋರಾಡಿದರು, ಅವರನ್ನು ಸೋಲಿಸಿದರು ಮತ್ತು ‘ಹಿಂದವೀ ಸ್ವರಾಜ್ಯ’ದ ಸ್ಥಾಪನೆ ಮಾಡಿದರು. ಇಂದು ನಮಗೆ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಬೇಕಾದರೆ, ಅವರಂತೆ ಆಧ್ಯಾತ್ಮಿಕ ಸಾಮರ್ಥ್ಯ ಹಾಗೂ ಹಿಂದೂಸಂಘಟನಶಕ್ತಿ ಇವೆರಡರ ಆವಶ್ಯಕತೆ ಇದೆ. ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಾಧನೆ ಮಾಡಿ ‘ಉಪಾಸನೆಯ ಶಕ್ತಿ’ ಹೆಚ್ಚಿಸಿ ಹಾಗೂ ಹಿಂದೂಸಂಘಟನೆ ಮಾಡುವುದರೊಂದಿಗೆ ಹಿಂದೂಗಳ ರಕ್ಷಣೆಗಾಗಿ ‘ಶಕ್ತಿಯ ಉಪಾಸನೆ’ಯನ್ನೂ ಮಾಡಿರಿ. ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಿಂದ ಎಲ್ಲ ಹಿಂದೂ ರಾಷ್ಟ್ರವೀರರಿಗೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪೂರಕ ಕಾರ್ಯ ಮಾಡಲು ಪ್ರೇರಣೆ ಸಿಗಲಿ’, ಎಂದು ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ !
– (ಪರಾತ್ಪರ ಗುರು) ಡಾ. ಜಯಂತ ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ