ಬಾಂಗ್ಲಾದೇಶದ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿನಿಗಳಿಗೆ ಹಿಜಾಬ ಕಡ್ಡಾಯ !

ಈ ಫತ್ವಾ ಎಂದರೆ ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿರುವುದಾಗಿ ಹಿಂದೂ ಸಂಘಟನೆಗಳ ಹೇಳಿಕೆ

* ಭಾರತ ಸರಕಾರವು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಬಾಂಗ್ಲಾದೇಶ ಈ ನಿರ್ಣಯವನ್ನು ರದ್ದುಗೊಳಿಸುವಂತೆ ಆದೇಶಿಸಬೇಕೆಂದು ಹಿಂದೂಗಳಿಗೆ ಅನಿಸುತ್ತದೆ ! -ಸಂಪಾದಕರು 

* ಕರ್ನಾಕದಲ್ಲಿ ನಡೆದಿರುವ ಹಿಜಾಬವಿರೋಧಿ ಆಂದೋಲನದಿಂದ ಭಾರತದಲ್ಲಿ ಅಲ್ಪಸಂಖ್ಯಾತರ ಧಾರ್ಮಿಕ ಅಧಿಕಾರವನ್ನು ಹೊಸಕಿ ಹಾಕಲಾಗಿದೆಯೆಂದು ಕೂಗುವ ಮುಸ್ಲಿಂ ದೇಶಗಳು ಬಾಂಗ್ಲಾದೇಶದಲ್ಲಿ ಹೊಸಕಿ ಹಾಕಲಾಗಿರುವ ಅಲ್ಪಸಂಖ್ಯಾತ ಹಿಂದೂಗಳ ಧಾರ್ಮಿಕ ಅಧಿಕಾರಗಳ ವಿಷಯದಲ್ಲಿ ಚಕಾರವನ್ನೂ ತೆಗೆಯುತ್ತಿಲ್ಲ, ಇದನ್ನು ಗಮನದಲ್ಲಿಟ್ಟುಕೊಳ್ಳಿ ! -ಸಂಪಾದಕರು

ಅದ್-ದೀನ ಸಕೀನಾ ಮೆಡಿಕಲ ಕಾಲೇಜ ಅಂಡ್ ಹಾಸ್ಪಿಟಲ ಎಲ್ಲ ಧರ್ಮದ ವಿದ್ಯಾರ್ಥಿನಿಗಳಿಗೆ ಹಿಜಾಬ ಧರಿಸುವುದನ್ನು ಕಡ್ಡಾಯಗೊಳಿಸಿದೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಜೆಸ್ಸೋರನ `ಅದ್-ದೀನ ಸಕೀನಾ ಮೆಡಿಕಲ ಕಾಲೇಜ ಅಂಡ್ ಹಾಸ್ಪಿಟಲ’ ಈಗ ಅಲ್ಲಿ ಕಲಿಯುತ್ತಿರುವ ಎಲ್ಲ ಧರ್ಮದ ವಿದ್ಯಾರ್ಥಿನಿಗಳಿಗೆ ಹಿಜಾಬ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಈಗ ಮುಸಲ್ಮಾನರನ್ನು ಹೊರತುಪಡಿಸಿ ಇನ್ನಿತರ ವಿದ್ಯಾರ್ಥಿನಿಗಳೂ ಹಿಜಾಬ ಧರಿಸಬೇಕಾಗಲಿದೆ. ಹಿಜಾಬ ಹಾಕದೇ ಇರುವವರಿಗೆ ವಿಶ್ವವಿದ್ಯಾಲಯದಲ್ಲಿ ಪ್ರವೇಶವನ್ನು ನಿರ್ಬಂಧಿಸಲಿದ್ದಾರೆ. `ಅಕೀಜ ಗ್ರೂಪ್ಸ್ ಲಿಮಿಟೆಡ್’ ನಡೆಸುತ್ತಿರುವ ಎಲ್ಲ ವಿಶ್ವವಿದ್ಯಾಲಯಗಳಲ್ಲಿಯೂ ಹಿಜಾಬ ಅನಿವಾರ್ಯಗೊಳಿಸಲಾಗಿದೆ. ವಿಶೇಷವೆಂದರೆ ಅಕ್ಟೋಬರ 4, 2010 ರಲ್ಲಿ ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ `ಯಾವುದೇ ವ್ಯಕ್ತಿಯನ್ನು ಅವನ ಇಚ್ಛೆಯ ವಿರುದ್ಧ ಧಾರ್ಮಿಕ ಪೋಷಾಕು ಧರಿಸಲು ಒತ್ತಾಯ ಹೇರಬಾರದು’, ಎಂದು ಹೇಳಿದೆ.

ಹಿಂದೂ ಸಂಘಟನೆಗಳ ವಿರೋಧ

ಹಿಂದೂ ಸಂಘಟನೆಗಳು ಮಾತ್ರ ಇದನ್ನು ವಿರೋಧಿಸಿವೆ. ಈ ಪ್ರಕರಣದಲ್ಲಿ ಪ್ರಧಾನಮಂತ್ರಿ ಶೇಖ ಹಸೀನಾ ಮಧ್ಯಪ್ರವೇಶಿಸಬೇಕು ಎಂದು ಹಿಂದೂ ಸಂಘಟನೆಗಳು ಮನವಿ ಮಾಡಿವೆ. ಬಾಂಗ್ಲಾದೇಶದ ಹಿಂದೂ ಸಂಘಟನೆಯಾಗಿರುವ `ಬಾಂಗ್ಲಾದೇಶದ ಜಾತೀಯ ಹಿಂದೂ ಮಹಾಜೋಟ’, ದೇಶದಲ್ಲಿರುವ ಯಾವುದೇ ಶೈಕ್ಷಣಿಕ ಸಂಸ್ಥೆಯಲ್ಲಿ ಮುಸಲ್ಮಾನರನ್ನು ಹೊರತುಪಡಿಸಿ ಮುಸ್ಲಿಂ ಬಟ್ಟೆಯನ್ನು ಧರಿಸಲು ಒತ್ತಾಯಿಸಬಾರದು. ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರನ್ನು ಪೀಡಿಸುವುದರ ಹಿಂದೆ ‘ಅದ್-ದೀನ ಸಕೀನಾ ಮೆಡಿಕಲ್ ಕಾಲೇಜ ಅಂಡ್ ಹಾಸ್ಪಿಟಲ್’ನ ಶೇಖ ಅಫಿಲುದ್ದೀನ ಇವರ ಕೈವಾಡವಿದೆ ಎಂದು ಹೇಳಿದೆ.

`ಬಾಂಗ್ಲಾದೇಶ ಹಿಂದೂ ನ್ಯಾಶನಲ ಗ್ರ್ಯಾಂಡ ಅಲಾಯನ್ಸ’ನ ವಕ್ತಾರರಾದ ಪಲಾಶ ಕಾಂತಿ ಡೆ ಇವರು ಮಾತನಾಡುತ್ತಾ, ಈ ನಿರ್ಣಯ ಬಾಂಗ್ಲಾದೇಶದ ನ್ಯಾಯಾಲಯದ ವಿರುದ್ಧವಿದೆ. ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಮುಸ್ಲಿಂ ಪೋಷಾಕು ಧರಿಸಲು ಕಡ್ಡಾಯಗೊಳಿಸಲು ಅವಕಾಶವಿಲ್ಲ. ಈಗ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗ ಅವರಿಂದ ಮುಸ್ಲಿಂ ಪೋಷಾಕು ಧರಿಸುವ ವಿಷಯದಲ್ಲಿ ಲಿಖಿತ ಅನುಮತಿಯನ್ನು ಪಡೆಯುತ್ತಿದೆ. ಅನುಮತಿ ನೀಡದೆ ಇರುವವರಿಗೆ ಪ್ರವೇಶವನ್ನು ನಿರಾಕರಿಸಲಾಗುತ್ತಿದೆ. ಈ ಮಹಾವಿದ್ಯಾಲಯದ ಸಂಸ್ಥಾಪಕರ ತಂದೆ ಶೇಖ ಮೊಹಿಉದ್ದೀನ 1971 ರ ಬಾಂಗ್ಲಾದೇಶದ ಸ್ವಾತಂತ್ರ್ಯದ ವಿರುದ್ಧ ಇದ್ದರು. ಆಗ ಅವರು `ಜಮಾತ-ಎ-ಇಸ್ಲಾಮಿ’ ವಿದ್ಯಾರ್ಥಿ ಸಂಘಟನೆ `ವಿದ್ಯಾರ್ಥಿ ಶಿಬಿರ’ದ ಸದಸ್ಯರಾಗಿದ್ದರು. ಅವರ ಕುಟುಂಬದವರ ಮೇಲೆ 1971 ರಲ್ಲಿ ಹಿಂದೂ ನಿರಾಶ್ರಿತರನ್ನು ಲೂಟಿಮಾಡಿರುವ ಆರೋಪವಿತ್ತು.

ನಿರ್ಣಯ ಹಳೆಯದಾಗಿದೆಯೆಂದು ಆಡಳಿತದ ಹೇಳಿಕೆ

ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಸುಬ್ರತಾ ಬಾಸಕ ಇವರು, ಈ ನಿಯಮ 2011 ರಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಗೊಂಡಿದೆ. ಆಗಿನಿಂದ ಜಾರಿಗೊಳಿಸಲಾಗಿದೆ’, ಅವರಿಗೆ ಸರ್ವೋಚ್ಚ ನ್ಯಾಯಾಲಯದ ಆದೇಶದ ವಿಷಯದ ವಿಚಾರಿಸಿದಾಗ ಅವರು ಯಾವುದೇ ಉತ್ತರವನ್ನು ನೀಡಲಿಲ್ಲ.

ಮತಾಂಧರು ಈ ಹಿಂದೆಯೇ ಹಿಜಾಬ ಕುರಿತು ಬೆದರಿಕೆ !

ಬಾಂಗ್ಲಾದೇಶದಲ್ಲಿರುವ ಮತಾಂಧರು ಈ ಹಿಂದೆಯೂ ಹಿಂದೂಗಳಿಗೆ ಒಂದು ವೇಳೆ ಭಾರತದಲ್ಲಿ ಮುಸಲ್ಮಾನರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ ಧರಿಸಲು ಅನುಮತಿ ನೀಡದಿದ್ದರೆ, ಅದರ ಗಂಭೀರ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂದು ಬೆದರಿಕೆ ಹಾಕಿದ್ದಾರೆ.