ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ವಿನಂತಿ !
೨೬.೨.೨೦೨೫ ರಂದು ಮಹಾಶಿವರಾತ್ರಿಯಿದೆ. ಆ ನಿಮಿತ್ತದಿಂದ ಸನಾತನದ ಗ್ರಂಥಗಳು, ಕಿರುಗ್ರಂಥ ಮತ್ತು ಸಾತ್ತ್ವಿಕ ಉತ್ಪಾದನೆಗಳನ್ನು ಹೆಚ್ಚೆಚ್ಚು ಜಿಜ್ಞಾಸುಗಳ ವರೆಗೆ ತಲುಪಿಸುವ ಸುವರ್ಣಾವಕಾಶದ ಲಾಭ ಪಡೆಯಲು ಸಾಧಕರು ಇಲ್ಲಿ ನಮೂದಿಸಿದ ಗ್ರಂಥಗಳು ಮತ್ತು ಪ್ರಸಾರ ಸಾಹಿತ್ಯಗಳನ್ನು ಹೆಚ್ಚೆಚ್ಚು ವಿತರಿಸಲು ಪ್ರಯತ್ನಿಸಬೇಕು.
೧. ಸನಾತನದ ಗ್ರಂಥಗಳು
೧ ಅ. ಶಿವನ ಬಗ್ಗೆ ಅಧ್ಯಾತ್ಮಶಾಸ್ತ್ರೀಯ ವಿವೇಚನೆ : ಈ ಗ್ರಂಥದಲ್ಲಿ ಶಿವನ ಬಗ್ಗೆ ಸಾಮಾನ್ಯವಾಗಿ ಎಲ್ಲಿಯೂ ಲಭ್ಯವಿಲ್ಲದಿರುವ ಅಧ್ಯಾತ್ಮಶಾಸ್ತ್ರೀಯ ವಿವೇಚನೆಗೆ ಒತ್ತು ನೀಡಲಾಗಿದೆ.ಶಿವನ ಕೆಲವು ಹೆಸರುಗಳು ಮತ್ತು ಗಂಗೆ, ಮೂರನೆಯ ಕಣ್ಣು, ನಾಗ, ಭಸ್ಮ, ರುದ್ರಾಕ್ಷಿ ಮುಂತಾದ ಶಿವನ ವೈಶಿಷ್ಟ್ಯಗಳ ಆಧ್ಯಾತ್ಮಿಕ ಅರ್ಥ; ಮಹಾತಪಸ್ವಿ, ಭೂತಗಳ ಸ್ವಾಮಿ, ವಿಶ್ವದ ಉತ್ಪತ್ತಿ ಮಾಡುವವನು ಇಂತಹ ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಕಾರ್ಯ; ರುದ್ರ, ಕಾಲಭೈರವ, ನಟರಾಜ ಇತ್ಯಾದಿ ರೂಪಗಳು; ಜ್ಯೋತಿರ್ಲಿಂಗ ಮುಂತಾದವುಗಳ ತಾತ್ತ್ವಿಕ ಮಾಹಿತಿ; ಭಸ್ಮವನ್ನು ಹಚ್ಚಿಕೊಳ್ಳುವುದು, ನಂದಿಯ ಕೊಂಬುಗಳ ಮೂಲಕ ಶಿವಲಿಂಗದ ದರ್ಶನ ಪಡೆಯುವುದು, ಶಿವನಿಗೆ ಬಿಲ್ವ ಮತ್ತು ಅಕ್ಷತೆ ಅರ್ಪಿಸುವುದು; ಆದರೆ ಅರಿಶಿನ-ಕುಂಕುಮ ಅರ್ಪಿಸದಿರುವುದು, ಮುಂತಾದ ಉಪಾಸನೆಗೆ ಸಂಬಂಧಿಸಿದ ಪ್ರಾಯೋಗಿಕ ಮಾಹಿತಿಯನ್ನೂ ಶಾಸ್ತ್ರಸಹಿತ ನೀಡಲಾಗಿದೆ. ಶೃಂಗದರ್ಶನ, ಶಿವನಿಗೆ ಬಿಲ್ವವನ್ನು ಅರ್ಪಿಸುವುದು, ಅಭಿಷೇಕ ಮಾಡುವುದು ಮುಂತಾದವುಗಳ ಸಮಯದಲ್ಲಿ ಸೂಕ್ಷ್ಮದಲ್ಲಿ ನಿರ್ದಿಷ್ಟವಾಗಿ ಏನು ನಡೆಯುತ್ತದೆ ಎಂದು ಸಾಮಾನ್ಯ ಜನರಿಗೆ ತಿಳಿಯುವುದಿಲ್ಲ. ಇದನ್ನು ತಿಳಿದುಕೊಳ್ಳುವ ಕ್ಷಮತೆಯಿರುವ ಸನಾತನದ ಸಾಧಕರು ಮಾಡಿದ ‘ಸೂಕ್ಷ್ಮಜ್ಞಾನದ ಪರೀಕ್ಷಣೆ’ ಮತ್ತು ತೆಗೆದಿರುವ ‘ಸೂಕ್ಷ್ಮಜ್ಞಾನದ ಚಿತ್ರ’ಗಳು ಈ ಗ್ರಂಥದ ಒಂದು ವೈಶಿಷ್ಟ್ಯವಾಗಿದೆ. ಶಿವನ ಬಗ್ಗೆ ಇರುವ ಅಧ್ಯಾತ್ಮಶಾಸ್ತ್ರೀಯ ವಿವೇಚನೆಯಿಂದ ಶಿವಭಕ್ತರಿಗೆ ಮತ್ತು ಶಿವನ ಸಂಪ್ರದಾಯಿಕ ಸಾಧನೆ ಮಾಡುವವರಿಗೆ ಖಂಡಿತ ಉಪಯುಕ್ತವಾಗುವುದು.
೧ ಆ. ಶಿವನ ಉಪಾಸನೆಯ ಹಿಂದಿನ ಶಾಸ್ತ್ರ : ಪ್ರಸ್ತುತ ಗ್ರಂಥದಲ್ಲಿ ಶಿವನ ಪೂಜೆಯ ಮೊದಲು ಪೂಜಕನು ಭಸ್ಮವನ್ನು ಹೇಗೆ ಹಚ್ಚಿಕೊಳ್ಳಬೇಕು, ಶಿವನ ಎದುರಿನಲ್ಲಿ ಯಾವ ರಂಗೋಲಿ ಬಿಡಿಸ ಬೇಕು, ಶಿವನಿಗೆ ಯಾವ ಹೂವುಗಳನ್ನು ಎಷ್ಟು ಅರ್ಪಿಸಬೇಕು, ಯಾವ ಊದುಬತ್ತಿಯಿಂದ ಬೆಳಗಬೇಕು, ಯಾವ ಪರಿಮಳದ ಸುಗಂಧದ್ರವ್ಯವನ್ನು ಅರ್ಪಿಸಬೇಕು ಇತ್ಯಾದಿಗಳ ಬಗ್ಗೆ ವಿವೇಚನೆ ಮಾಡಲಾಗಿದೆ. ಶಿವನ ದೈನಂದಿನ ಉಪಾಸನೆ ಮಾಡುವವರ ಜೊತೆಗೆ ಹದಿನಾರು ಸೋಮವಾರ, ಶ್ರಾವಣಿ ಸೋಮವಾರ, ಶಿವಮುಷ್ಠಿವ್ರತ, ಹರಿತಾಲಿಕಾ, ಮಹಾಶಿವರಾತ್ರಿ ಮುಂತಾದ ವ್ರತಗಳು ಮತ್ತು ಉತ್ಸವಗಳನ್ನು ಆಚರಿಸುವ ಶಿವಭಕ್ತರಿಗೂ ಈ ಗ್ರಂಥದಲ್ಲಿ ಕೊಟ್ಟಿರುವ ಆಯಾ ವಿಷಯದ ಬಗೆಗಿನ ವಿವೇಚನೆಯು ಉಪಯುಕ್ತವಾಗಿದೆ.
೧ ಇ. ‘ಶಿವ’ ಇದು ಕಿರುಗ್ರಂಥ
೧ ಈ. ‘ದೇವತೆಗಳು, ಅಧ್ಯಾತ್ಮಶಾಸ್ತ್ರ, ಸಾಧನೆ, ಧಾರ್ಮಿಕ ಕೃತಿಗಳು, ಆಚಾರಧರ್ಮ’ ಇತ್ಯಾದಿಗಳ ಬಗೆಗಿನ ಅಮೂಲ್ಯ ಜ್ಞಾನವಿರುವ ಗ್ರಂಥಗಳು
೨. ದೇವತೆಗಳ ನಾಮಪಟ್ಟಿಗಳು
ವಿವಿಧ ದೇವತೆಗಳ ನಾಮಪಟ್ಟಿಗಳು, ಹಾಗೆಯೇ ವಾಸ್ತು ಶುದ್ಧೀಕರಿಸಲು ಉಪಯುಕ್ತವಾಗಿರುವ ವಾಸ್ತುಛಾವಣಿ.
೩. ದೇವತೆಗಳ ಸಾತ್ತ್ವಿಕ ಚಿತ್ರಗಳು ಮತ್ತು ಪದಕಗಳು
ಶಿವ, ದತ್ತ, ಗಣಪತಿ, ಶ್ರೀರಾಮ, ಶ್ರೀಕೃಷ್ಣ, ಮಾರುತಿ, ಶ್ರೀ ದುರ್ಗಾದೇವಿ, ಶ್ರೀ ಲಕ್ಷ್ಮಿ ಮತ್ತು ಅಷ್ಟದೇವತೆಗಳ ಕಿರು, ಮಧ್ಯಮ ಮತ್ತು ದೊಡ್ಡ ಆಕಾರದ ಚಿತ್ರಗಳು (ಫ್ರೇಮಸಹಿತ), ಹಾಗೆಯೇ ಶಿವ-ದುರ್ಗಾ, ದತ್ತ-ಗಣಪತಿ, ಕೃಷ್ಣ-ಲಕ್ಷ್ಮಿ, ರಾಮ-ಮಾರುತಿ, ಇವರ ಚಿತ್ರಗಳಿರುವ ಪದಕಗಳು (ಲಾಕೆಟ್ಸ್) ದಾರಸಹಿತ.
ಗ್ರಂಥಗಳು, ಉತ್ಪಾದನೆಗಳ ಇತ್ಯಾದಿಗಳ ಪ್ರದರ್ಶನ ಆಯೋಜಿಸಿ ಪ್ರದರ್ಶನದ ಸ್ಥಳದಲ್ಲಿ ಗ್ರಂಥ ಗಳ ಮಾಹಿತಿಯನ್ನು ನೀಡುವ ಫ್ಲೆಕ್ಸ್ ಹಾಕಬಹುದು. ಸಾಧಕರು ಮತ್ತು ವಾಚಕರು ಮೇಲಿನ ಪ್ರಸಾರ ಸಾಹಿತ್ಯಗಳನ್ನು ಸ್ಥಳೀಯ ವಿತರಕರಿಂದ ತೆಗೆದು ಕೊಳ್ಳಬೇಕು. ವಾಚಕರು, ಹಿತಚಿಂತಕರು ಮತ್ತು ಧರ್ಮ ಪ್ರೇಮಿಗಳು ಮೇಲಿನ ಗ್ರಂಥಗಳ ಮತ್ತು ಇತರ ಪ್ರಸಾರ ಸಾಹಿತ್ಯಗಳ ಬೇಡಿಕೆಗಳನ್ನು ಸ್ಥಳೀಯ ವಿತರಕರಲ್ಲಿ ಅಥವಾ 9322315317 ಈ ಸಂಪರ್ಕ ಕ್ರಮಾಂಕಕ್ಕೆ ಅಥವಾ https://sanatanshop.com/ ಈ ಜಾಲತಾಣದಲ್ಲಿ ಕೊಡಬೇಕು.
ಸನಾತನದ ಗ್ರಂಥಸಂಪತ್ತನ್ನು ಜನಸಾಮಾನ್ಯರ ವರೆಗೆ ತಲುಪಿಸಲು ಪ್ರಯತ್ನಿಸಿ !ಅಖಿಲ ಜಗತ್ತಿನಲ್ಲಿ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಅಡಿಪಾಯವನ್ನು ಹಾಕುವ ಮತ್ತು ಜಿಜ್ಞಾಸುಗಳನ್ನು ಧರ್ಮಾಚರಣಿಯನ್ನಾಗಿಸಲು ಸನಾತನವು ಪ್ರಕಾಶಿಸಿರುವ ಗ್ರಂಥಗಳ ಪಾಲು ಅಮೂಲ್ಯವಾಗಿದೆ. ಮಹಾಶಿವರಾತ್ರಿಯ ನಿಮಿತ್ತ ಗ್ರಂಥಪ್ರದರ್ಶನವನ್ನು ಏರ್ಪಡಿಸುವಾಗ ಹೆಚ್ಚೆಚ್ಚು ಜನರ ವರೆಗೆ ಗ್ರಂಥಗಳನ್ನು ತಲುಪಿಸಲು ಪ್ರಯತ್ನಿಸಬೇಕು. ‘ಪ್ರದರ್ಶನದ ಸ್ಥಳದಲ್ಲಿ ಹೆಚ್ಚೆಚ್ಚು ಗ್ರಂಥಗಳನ್ನು ಪ್ರದರ್ಶಿಸಲು (ಡಿಸ್ಪ್ಲೆ ಮಾಡಲು) ಪ್ರಯತ್ನಿಸಬೇಕು. ಸ್ಥಳದ ಅಭಾವದಿಂದ ಕೆಲವು ಗ್ರಂಥಗಳನ್ನು ಪ್ರದರ್ಶಿಸಲು ಸಾಧ್ಯವಾಗದಿದ್ದರೆ, ಗ್ರಂಥಗಳ ಮಾಹಿತಿಯನ್ನು ನೀಡುವ ಗ್ರಂಥಪಟ್ಟಿಯನ್ನು ಪ್ರದರ್ಶನದ ಸ್ಥಳದಲ್ಲಿಡಬೇಕು. ಇಂತಹ ಸಮಯದಲ್ಲಿ ಸಾಧ್ಯವಿದ್ದರೆ ಹೊಸದಾಗಿ ಪ್ರಕಾಶಿತವಾದ ಗ್ರಂಥಗಳನ್ನು ಪ್ರತ್ಯೇಕವಾಗಿ ಮಂಡಣೆ ಮಾಡ ಬಹುದು. |