ಮಥುರಾ : ಔರಂಗಜೇಬನ ಗೋರಿ ಬುಲ್ಡೋಜರ್ ಮೂಲಕ ತೆರವುಗೊಳಿಸಿ !

ಸಂತರ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಪಡನ್ವಿಸ್ ಅವರಿಗೆ ಮನವಿ !

ಮಥುರಾ(ಉತ್ತರಪ್ರದೇಶ) – ಧರ್ಮರಕ್ಷಾ ಸಂಘ ಮತ್ತು ಶ್ರೀ ಕೃಷ್ಣ ಜನ್ಮಭೂಮಿ ಸಂಘರ್ಷ ಸಂಸ್ಥೆಗಳು ಮಹಾರಾಷ್ಟ್ರದಲ್ಲಿನ ಛತ್ರಪತಿ ಸಂಭಾಜಿನಗರದಲ್ಲಿರುವ ಕ್ರೂರಿ ಮೊಗಲ್ ಬಾದಷಾ ಔರಂಗಜೇಬನ ಗೋರಿಯನ್ನು ಬುಲ್ಡೋಜರ್ ನಿಂದ ತೆರವುಗೊಳಿಸುವಂತೆ ಆಗ್ರಹಿಸಲು ಬೃಂದಾವನದಲ್ಲಿ ಮಾರ್ಚ್ ೨ ರಂದು ಸಭೆಯನ್ನು ಆಯೋಜನೆ ಮಾಡಿತ್ತು.

‘ಹಿಂದುಗಳ ಮೇಲೆ ದೌರ್ಜನ್ಯ ನಡೆಸುವ ಇಂತಹ ಕ್ರೂರ ರಾಜರ ಒಂದು ಕುರುಹು ಕೂಡ ಭಾರತದಲ್ಲಿ ಕಾಣಬಾರದು, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಈ ಮೂಲಕ ಮನವಿ ಮಾಡಲಾಯಿತು. ಛತ್ರಪತಿ ಸಂಭಾಜಿ ಮಹಾರಾಜರು ಮರಾಠ ಸಾಮ್ರಾಜ್ಯ ಸ್ಥಾಪನೆಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದರು; ಆದರೆ ಅವರಂಗಜೇಬನ ಕ್ರೂರತೆಗೆ ಹೆದರಿ ಸನಾತನ ಧರ್ಮವನ್ನು ಬಿಡಲಿಲ್ಲ.

೧. ಈ ಸಭೆಯಲ್ಲಿ ಮಾತನಾಡಿದ ಸಂತ ಅತುಲ ಕೃಷ್ಣ ದಾಸ್ ಅವರು, ನಾವು ಮಹಾರಾಷ್ಟ್ರ ಸರಕಾರಕ್ಕೆ ವಿನಂತಿಸುವುದೇನೆಂದರೆ, ಔರಂಗಜೇಬನ ಗೋರಿ ಅಗೆದು ಕೊಳಕು ಚರಂಡಿಯಲ್ಲಿ ಎಸೆಯಬೇಕು. ಭಾರತದ ನೆಲದಲ್ಲಿ ಔರಂಗಜೇಬನ ಕುರುಹದ ಒಂದು ಗುರುತು ಕೂಡ ಕಾಣಬಾರದು. ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಇಂತಹ ಕೆಲಸ ಮಾಡಿದರೆ, ಹಿಂದೂ ಸನಾತನ ಧರ್ಮದವರಿಗೆ ಅವರ ಬಗ್ಗೆ ಅಭಿಮಾನ ಅನಿಸುವುದು ಎಂದು ಹೇಳಿದರು.

೨. ಸಂತ ಸೌರಭ ದೇವ ಅವರು ಮಾತನಾಡಿ, ನಮ್ಮ ಭಾರತೀಯ ಇತಿಹಾಸದಲ್ಲಿಯೇ ಅತ್ಯಂತ ಕ್ರೂರಿ ಮತ್ತು ಅತ್ಯಾಚಾರಿ ಆಡಳಿತಗಾರ ಔರಂಗಜೇಬನಾಗಿದ್ದನು. ಔರಂಗಜೇಬನ ಗೋರಿ ಮಹಾರಾಷ್ಟ್ರದಲ್ಲಿರುವುದು ಭಾರತಕ್ಕೆ ಒಂದು ಕಳಂಕವಾಗಿದೆ. ನಾವೆಲ್ಲಾ ಸಂತರು ಮತ್ತು ಋಷಿಗಳು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೂ ವಿನಂತಿಸುತ್ತೇವೆ. ಔರಂಗಜೇಬ ಹಾಗೂ ಎಲ್ಲಾ ಕ್ರೂರ ಆಡಳಿತಗಾರರಿಗೆ ನೀಡುವ ಗೌರವವನ್ನು ನಿಲ್ಲಿಸಬೇಕು. ಅಂತವರ ಸ್ಮಾರಕಗಳು ಮತ್ತು ಗೋರಿಗಳು ಬುಲ್ಡೋಜರದಿಂದ ನೆಲೆಸಮ ಮಾಡಬೇಕು ಎಂದು ಆಗ್ರಹಿಸಿದರು.

೩. ಆಚಾರ್ಯ ಬದ್ರೇಶ ಪ್ರಸಾದ ಅವರು ಬಗ್ಗೆ ಮಾತನಾಡಿ, ನಮ್ಮ ಎಲ್ಲಾ ಸಂತರ ಹೃದಯದಲ್ಲಿ ಒಂದೇ ನೋವಿದೆ. ಸನಾತನ ಧರ್ಮದ ಮೇಲೆ ದೌರ್ಜನ್ಯ ನಡೆಸಿರುವ ಇಂತಹ ಕಳಂಕಿತ ರಾಜರ ಹೆಸರು ಮತ್ತು ಅವರ ಗುರುತುಗಳನ್ನು ಅಳಿಸಿ ಹಾಕಬೇಕು. ನಗರದ ರಸ್ತೆಗಳಿಗೆ ಇಂತವರ ಹೆಸರುಗಳನ್ನಿಡಲಾಗಿದ್ದು ಹಾಗೆ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ದೇಶದ ಯಾವ ಮೂಲೆಯಲ್ಲಿ ಇಂತಹ ಕಳಂಕಿತ ರಾಜರ ಗುರುತುಗಳಿವೆ, ಅವೆಲ್ಲವನ್ನೂ ಬುಲ್ಡೋಜರ್ ನಿಂದ ಕಿತ್ತೆಸೆಯಬೇಕೆಂದು ಮನವಿ ಮಾಡಿದರು.

ಸಂಪಾದಕೀಯ ನಿಲುವು

  • ಔರಂಗಜೇಬನ ಗೋರಿ ಬುಲ್ಡೋಜರ್ ಮೂಲಕ ತೆರವುಗೊಳಿಸಿ !
  • ಎಲ್ಲೆಡೆಯಿಂದ ಈ ರೀತಿಯ ಬೇಡಿಕೆಗಳು ಬರುತ್ತಿದ್ದು ‘ ಛಾವಾ ‘ ಚಲನಚಿತ್ರ ನೋಡಿದ ನಂತರ ಜಾಗೃತಗೊಂಡಿರುವ ಹಿಂದೂ ವೀಕ್ಷಕರು. ಒಂದು ಚಲನಚಿತ್ರದ ಮೂಲಕ ಎಷ್ಟು ಪರಿಣಾಮವಾಗುತ್ತದೆ ಎಂಬುದನ್ನು ಗಮನಿಸಿ, ಹಿಂದೂಗಳು ಇಂತಹ ನೈಜ ಇತಿಹಾಸವನ್ನು ಬಿಂಬಿಸುವ ಚಲನಚಿತ್ರಗಳನ್ನು ನಿರ್ಮಿಸುವುದು ಅಗತ್ಯವಾಗಿದೆ !