ಪೂರ್ಣಿಯಾ (ಬಿಹಾರ) ಗ್ರಾಮದಲ್ಲಿ ಘಟನೆ
ಪೂರ್ಣಿಯಾ (ಬಿಹಾರ) – ಇಲ್ಲಿನ ಶರ್ಮಾ ಟೋಲಿ ಗ್ರಾಮದಲ್ಲಿ ಸುಮಾರು ೧೫೦ ಹಿಂದೂ ಕುಟುಂಬಗಳ ಮನೆಗಳಿಗೆ ಹೋಗುವ ರಸ್ತೆಯನ್ನು ಮುಸ್ಲಿಮರು ಮುಚ್ಚಿದ್ದಾರೆ. ಈ ಬಗ್ಗೆ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ದಾರಿ ತೆರೆಯುವಂತೆ ಜನರು ಮನವಿ ಮಾಡಿದ್ದಾರೆ. ಗ್ರಾಮದ ಸುತ್ತಲೂ ಮುಸ್ಲಿಮರ ಖಾಸಗಿ ಭೂಮಿ ಇರುವುದರಿಂದ ಗ್ರಾಮಕ್ಕೆ ಬೇರೆ ದಾರಿಯಿಲ್ಲ ಎಂದು ಹಿಂದೂಗಳು ತಿಳಿಸಿದ್ದಾರೆ.
೧. ಇಲ್ಲಿನ ಸುಮಾರು ೧೫೦ ಕುಟುಂಬಗಳ ಮನೆಗಳಿಗೆ ಹೋಗಲು ಸರಕಾರಿ ರಸ್ತೆ ಇಲ್ಲ. ಕಳೆದ ಹಲವು ವರ್ಷಗಳಿಂದ ಜನರು ಖಾಸಗಿ ರಸ್ತೆಯ ಮೂಲಕ ಈ ಪ್ರದೇಶಕ್ಕೆ ಹೋಗುತ್ತಿದ್ದರು. ಆದರೆ ಸುತ್ತಮುತ್ತಲು ಮುಸಲ್ಮಾನರ ವಾಸಸ್ಥಾನಗಳು ಮತ್ತು ಭೂಮಿವು ಮುಸ್ಲಿಮರ ಮಾಲೀಕತ್ವದಲ್ಲಿರುವುದರಿಂದ ಗ್ರಾಮಕ್ಕೆ ಹೋಗುವ ಮಾರ್ಗವನ್ನು ನಿರ್ಬಂಧಿಸಿದ್ದಾರೆ.
೨. ಸಂತ್ರಸ್ತರು ರಸ್ತೆಗಾಗಿ ಭೂಮಾಲೀಕರಿಗೆ ೧ ಲಕ್ಷ ರೂಪಾಯಿ ನೀಡಿದ್ದರು; ಆದರೆ ನಂತರ ಸಾಮಾಜಿಕ ಒತ್ತಡದಿಂದ ಭೂಮಾಲೀಕರು ಹಣವನ್ನು ಹಿಂದಿರುಗಿಸಿದರು ಮತ್ತು ರಸ್ತೆಯನ್ನು ತೆರವುಗೊಳಿಸಲಿಲ್ಲ ಎಂದು ಹೇಳುತ್ತಾರೆ. ಗ್ರಾಮಕ್ಕೆ ಹೋಗುವ ಎಲ್ಲಾ ರಸ್ತೆಗಳು ಮುಚ್ಚಿಹೋಗಿರುವ ಪರಿಸ್ಥಿತಿ ಈಗ ಇದೆ. ಇದರಿಂದ ಹಿಂದೂಗಳ ಗಂಡು- ಹೆಣ್ಣು ಮಕ್ಕಳ ಮದುವೆಗಳು ನಡೆಯುತ್ತಿಲ್ಲ. ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಅವರನ್ನು ಆಸ್ಪತ್ರೆಗೆ ಸಾಗಿಸುವುದು ಕಷ್ಟಕರವಾಗಿದೆ. ಮುಸ್ಲಿಮರು ಈಗ ಹಿಂದೂಗಳನ್ನು ಪೂಜೆ ಮಾಡುವುದರಿಂದ ಮತ್ತು ಧ್ವನಿವರ್ಧಕಗಳನ್ನು ಹಾಕುವುದರಿಂದ ತಡೆಯುತ್ತಿದ್ದಾರೆ.
೩. ಶರ್ಮಾ ಟೋಲಾ ನಿವಾಸಿಗಳು ಈ ರಸ್ತೆಯ ಬೇಡಿಕೆಗೆ ಸಂಬಂಧಿಸಿದಂತೆ ಉಪವಿಭಾಗೀಯ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿತ್ತು. ಆದರೆ ನಂತರ ಸಿವಿಲ್ ನ್ಯಾಯಾಲಯದಲ್ಲಿ ಈ ತೀರ್ಪನ್ನು ಬದಲಾಯಿಸಿ ಮುಸ್ಲಿಮರ ಪರವಾಗಿ ನೀಡಿತು. ಈಗ ಗ್ರಾಮಕ್ಕೆ ಹೋಗಲು ರಸ್ತೆ ನೀಡುವಂತೆ ಜಿಲ್ಲಾಧಿಕಾರಿ ಕುಂದನ ಕುಮಾರ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.
೪. ಉಪವಿಭಾಗಾಧಿಕಾರಿ ಕುಮಾರಿ ತೌಸಿ ಅವರು, ಕಾನೂನಿನಲ್ಲಿ ೧೦೦ ಕ್ಕಿಂತ ಹೆಚ್ಚು ಕುಟುಂಬಗಳಿದ್ದರೆ, ಅವರ ಮಾರ್ಗವು ಖಾಸಗಿಯಾಗಿದ್ದರೂ ಅದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಬರೆಯಲಾಗಿದೆ. ಇಲ್ಲಿ ೧೫೦ ಕ್ಕಿಂತ ಹೆಚ್ಚು ಕುಟುಂಬಗಳಿವೆ, ಹಾಗಾದರೆ ಅವರನ್ನು ಯಾರು ತಡೆಯಲು ಸಾಧ್ಯ? ಇದಕ್ಕಾಗಿ ಪೊಲೀಸ್ ಠಾಣೆ ಮತ್ತು ವಿಭಾಗೀಯ ಅಧಿಕಾರಿಗಳಿಗೆ ಹಲವು ಬಾರಿ ಪತ್ರಗಳನ್ನು ಕಳುಹಿಸಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರ ಕಂಡುಬಂದಿಲ್ಲ’, ಎಂದು ಹೇಳಿದ್ದಾರೆ.
೫. ಶರ್ಮಾ ಟೋಲಾ ಗ್ರಾಮದ ಮುಖ್ಯಸ್ಥ ಸಬ್ನೂರ್ ಆಲಂ ಅವರು, ಕೆಲವು ಜನರು ತಮ್ಮ ಖಾಸಗಿ ಭೂಮಿ ಇರುವುದರಿಂದ ರಸ್ತೆ ನೀಡುತ್ತಿಲ್ಲ ಎಂದು ಹೇಳಿದ್ದಾರೆ; ಆದರೆ ಅವರಿಗೆ ಇನ್ನೊಂದು ಬದಿಯಿಂದ ರಸ್ತೆ ನೀಡುವ ಬಗ್ಗೆ ಚರ್ಚೆ ನಡೆಯಿತು; ಆದರೆ ಶರ್ಮಾ ಟೋಲಾ ಗ್ರಾಮದ ಜನರು ಇನ್ನೊಂದು ಮಾರ್ಗವನ್ನು ಸ್ವೀಕರಿಸಲು ಸಿದ್ಧರಿಲ್ಲ. ಹಿಂದೂಗಳ ಧ್ವನಿವರ್ಧಕಗಳು ಮತ್ತು ಧಾರ್ಮಿಕ ಆಚರಣೆಗಳನ್ನು ತಡೆಯುವ ಆರೋಪವು ತಪ್ಪಾಗಿದೆ. ಕೆಲವರು ಈ ಘಟನೆಯನ್ನು ರಾಜಕೀಯ ಮಾಡುತ್ತಿದ್ದಾರೆ, ಎಂದು ಹೇಳಿದರು.
Purnia (Bihar): Mu$l!ms blocked the access road to 150 Hindu families' homes
It is shameful for Hindus that, despite being the majority in India, Mu$l!ms are displaying such dominance in a village!
Legal action must be taken against this as per the law!
The so-called… pic.twitter.com/eTGsD8WGD2
— Sanatan Prabhat (@SanatanPrabhat) March 3, 2025
ಸಂಪಾದಕೀಯ ನಿಲುವು
|