
‘ಅನೇಕ ಬಾರಿ ಸನಾತನ ಸಂಸ್ಥೆಯ ಸಾಧಕರು ಸಮಾಜದಲ್ಲಿ ಆಧುನಿಕ ವೈದ್ಯ, ನ್ಯಾಯವಾದಿಗಳಂತಹ ಪ್ರತಿಷ್ಠಿತ ವ್ಯಕ್ತಿ ಗಳನ್ನು ಸಂಪರ್ಕಿಸಲು ಹೋಗುತ್ತಾರೆ. ಅವರ ಬಳಿಯಿರುವ ಜ್ಞಾನವನ್ನು ನೋಡಿ ಅನೇಕ ಸಾಧಕರಿಗೆ ಅವರಷ್ಟು ಬೌದ್ಧಿಕ ಕ್ಷಮತೆ ನಮ್ಮಲ್ಲಿಲ್ಲ ಅಥವಾ ವಿದ್ಯಾಭ್ಯಾಸ ಕಮ್ಮಿಯಿರುವ ಸಾಧಕರಿಗೆ ’ಅವರಿಗೆ ಸಾಧನೆಯನ್ನು ಹೇಗೆ ತಿಳಿಸಿ ಹೇಳಬೇಕು ಮತ್ತು ಸಂಸ್ಥೆಯ ಕಾರ್ಯವನ್ನು ಹೇಗೆ ತಿಳಿಸಿ ಹೇಳಬೇಕು ?’, ಎಂದು ಕೀಳರಿಮೆ ಅನಿಸುತ್ತದೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ವಿವಿಧ ವಿಷಯಗಳಲ್ಲಿ ಸಂಕಲನ ಮಾಡಿದ ಗ್ರಂಥಸಂಪತ್ತು ಅಮೂಲ್ಯವಾಗಿದೆ; ಪೃಥ್ವಿಯಲ್ಲಿ ಎಲ್ಲಿಯೂ ಲಭ್ಯವಿರದಿರುವ ಜ್ಞಾನವು ಸನಾತನ ಗ್ರಂಥಗಳಲ್ಲಿವೆ. ಇದರೊಂದಿಗೆ ಕಳೆದ ಕೆಲವು ವರ್ಷಗಳಲ್ಲಿ ಸನಾತನ ಸಂಸ್ಥೆಯೊಂದಿಗೆ ಸಮಾಜದಲ್ಲಿನ ಎಲ್ಲ ಸ್ತರಗಳ ವ್ಯಕ್ತಿಗಳು ಸನಾತನ ಸಂಸ್ಥೆಯ ಅಧ್ಯಾತ್ಮಪ್ರಸಾರದ ಕಾರ್ಯವನ್ನು ಗಮನದಲ್ಲಿರಿಸಿಕೊಂಡು ಮತ್ತು ಅದಕ್ಕನುಸಾರ ಕೃತಿ ಮಾಡುವುದರಿಂದ ಅವರಿಗೆ ಬಂದ ಅನುಭೂತಿಗಳಿಂದ ಸನಾತನದೆಡೆಗೆ ಆಕರ್ಷಿತರಾಗುತ್ತಿದ್ದಾರೆ. ಆದ್ದರಿಂದ ಸಾಧಕರೇ, ನಮ್ಮ ಗುರುಗಳು ನೀಡಿದ ಜ್ಞಾನವು ಅಮೂಲ್ಯವಾಗಿರುವುದರಿಂದ ಸಂಪರ್ಕದಲ್ಲಿ ಕೀಳರಿಮೆ ಇಟ್ಟುಕೊಳ್ಳಬೇಡಿ !’
– ಸದ್ಗುರು ಸ್ವಾತಿ ಖಾಡ್ಯೆ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
’ಎಲ್ಲಿ ಹೋಗುತ್ತೇನೆ ಅಲ್ಲಿ ನೀವೇ (ಗುರುದೇವರು) ನನ್ನ ಸಂಗಾತಿ !’
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !