ಮುಖ್ಯಮಂತ್ರಿ ಯೋಗಿ ಅವರ ‘ಬಟೇಂಗೆ ತೊ ಕಟೇಂಗೆ’ ಹೇಳಿಕೆಯ ಪುನರುಚ್ಚಾರ!
ಕುಂಡಾ (ಉತ್ತರಪ್ರದೇಶ) – ಉತ್ತರಪ್ರದೇಶದ ಪ್ರತಾಪಗಢ ಜಿಲ್ಲೆಯ ಕುಂಡಾ ಕ್ಷೇತ್ರದ ಶಾಸಕ ರಘುರಾಜ ಪ್ರತಾಪ ಸಿಂಗ ಉರ್ಫ್ ರಾಜಾ ಭೈಯ್ಯಾ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ‘ಬಟೇಂಗೆ ತೊ ಕಟೇಂಗೆ’(ವಿಭಜಿಸಲ್ಪಟ್ಟರೆ ಕತ್ತರಿಸಲ್ಪಡುತ್ತೇವೆ?) ಎಂಬ ಹೇಳಿಕೆಯನ್ನು ಪುನರುಚ್ಚರಿಸುವ ಮೂಲಕ ಹಿಂದೂಗಳಿಗೆ ಒಗ್ಗಟ್ಟಾಗುವಂತೆ ಕರೆ ನೀಡಿದ್ದಾರೆ. ರಾಜಾ ಭೈಯ್ಯ ಅವರು 23 ವರ್ಷಗಳ ಹಿಂದಿನ ಗುಜರಾತ್‌ನ ಗೋದ್ರಾ ಹತ್ಯಾಕಾಂಡವನ್ನು ಉಲ್ಲೇಖಿಸಿ, ಸಾಬರಮತಿ ಎಕ್ಸ್ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದಾಗ, ಬೆಂಕಿ ಹಚ್ಚಿದವರು ಮೇಲ್ವರ್ಗದವರು, ಹಿಂದುಳಿದವರು ಅಥವಾ ದಲಿತರು ಎಂದು ನೋಡಲಿಲ್ಲ ಎಂದು ಹೇಳಿದರು.
1. ರಾಜಾ ಭೈಯ್ಯ ಅವರು ‘ಎಕ್ಸ್’ ನಲ್ಲಿ, ಫೆಬ್ರವರಿ 27, 2002 ರಂದು ಸಾಬರಮತಿ ಎಕ್ಸ್ಪ್ರೆಸ್‌ನಲ್ಲಿ ಶ್ರೀರಾಮ ಭಕ್ತರನ್ನು ಜೀವಂತವಾಗಿ ಸುಡಲಾಯಿತು. ಮುಸಲ್ಮಾನರ ದೃಷ್ಟಿಯಲ್ಲಿ ಆ ಶ್ರೀರಾಮ ಭಕ್ತರ ‘ಅಪರಾಧ’ ಎಂದರೆ ಅವರು ಶ್ರೀರಾಮಲಲ್ಲಾನ ದರ್ಶನ ಪಡೆದು ಅಯೋಧ್ಯೆಯಿಂದ ಹಿಂದಿರುಗುತ್ತಿದ್ದರು.
2. ಅವರು, ದಾಳಿಕೋರರು ಒಬ್ಬರನ್ನೂ ಬಿಡಲಿಲ್ಲ. ಜಗತ್ತಿನ ಇತಿಹಾಸದಲ್ಲಿ ಯಾವುದೇ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತ ಸಮಾಜದ ಮೇಲೆ ಮಾಡಿದ ಇಂತಹ ಅಮಾನವೀಯ ನರಮೇಧದ ಮತ್ತೊಂದು ಉದಾಹರಣೆ ಹುಡುಕಿದರೂ ಸಿಗುವುದಿಲ್ಲ, ಎಂದು ಬರೆದಿದ್ದಾರೆ.
3. ಫೆಬ್ರವರಿ 27, 2002 ರಂದು ಗುಜರಾತ್‌ನ ಗೋದ್ರಾ ನಿಲ್ದಾಣದಿಂದ ಹೊರಡುವ ಸಾಬರಮತಿ ಎಕ್ಸ್ಪ್ರೆಸ್ ಅನ್ನು ಮುಸ್ಲಿಂ ಗುಂಪು ಬೆಂಕಿ ಹಚ್ಚಿದ್ದರಿಂದ 59 ಹಿಂದೂ ಯಾತ್ರಿಕರು ಸಾವನ್ನಪ್ಪಿದರು. ಈ ಘಟನೆಯಿಂದ ಗುಜರಾತ್‌ನಲ್ಲಿ ಕೋಮು ಗಲಭೆಗಳು ಭುಗಿಲೆದ್ದಿತ್ತು.