ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀರಾಮರಕ್ಷಾಸ್ತೋತ್ರ ಪಠಿಸಿದ ಬಳಿಕ ಅವರ ಸಮಷ್ಟಿ ಭಾವದಿಂದಾಗಿ ಶ್ರೀರಾಮನ ಚಿತ್ರದಲ್ಲಿನ ದೇವತಾತತ್ತ್ವವು ಕಾರ್ಯನಿರತವಾಯಿತು

‘ನಮ್ಮಲ್ಲಿ ಮನೆಮನೆಗಳಲ್ಲಿ ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಿದ ನಂತರ ‘ಶುಭಂ ಕರೋತಿ’ಯೊಂದಿಗೆ ಶ್ರೀರಾಮರಕ್ಷಾಸ್ತೋತ್ರ ಮತ್ತು ಶ್ರೀ ಮಾರುತಿಸ್ತೋತ್ರವನ್ನು ಹೇಳುವ ಪರಿಪಾಠವಾಗಿದೆ. ರಾಮರಕ್ಷಾ ಸ್ತೋತ್ರವನ್ನು ಬುಧಕೌಶಿಕಋಷಿಗಳು ರಚಿಸಿದ್ದಾರೆ. ಆತ್ಮಜ್ಞಾನಸಂಪನ್ನ ಋಷಿಮುನಿಗಳಿಗೆ ಮತ್ತು ಸಾಧುಸಂತರಿಗೆ ಈ ವಾಗ್ಮಯವು ಪರಾವಾಣಿಯಲ್ಲಿಸ್ಫುರಿಸುತ್ತದೆ. ಈ ಸ್ಥಿತಿಯಲ್ಲಿ ಅವರು ಈಶ್ವರನೊಂದಿಗೆ ಸಂಪೂರ್ಣ ಅದ್ವೈತರಾಗಿರುವುದರಿಂದ ಮತ್ತು ಈಶ್ವರನೇ ಈ ಎಲ್ಲರ ಕರ್ತನಾಗಿದ್ದಾನೆ, ಈ ಅನುಭೂತಿಯಿಂದ ‘ರಾಮರಕ್ಷಾಸ್ತೊತ್ರವನ್ನು ಶಿವನು ಸ್ವಪ್ನಾವಸ್ಥೆಯಲ್ಲಿ ಹೇಳಿದನು’ ಎಂದು ಬುಧಕೌಶಿಕಋಷಿಗಳು ಬರೆದಿರುವುದು ಕಂಡುಬರುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿದಿನ ಓರ್ವ ಸಂತರು ಹೇಳಿದ್ದರಿಂದ ತಮ್ಮ ಆರೋಗ್ಯಕ್ಕಾಗಿ ಉಪಾಯವೆಂದು ಶ್ರೀರಾಮರಕ್ಷಾಸ್ತೋತ್ರವನ್ನು ಪಠಿಸುತ್ತಾರೆ. ‘ಶ್ರೀರಾಮರಕ್ಷಾಸ್ತೋತ್ರವನ್ನು ಪಠಿಸುವುದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮೇಲೆ ಏನು ಪರಿಣಾಮವಾಗುತ್ತದೆ ?’, ಇದರ ಅಧ್ಯಯನಕ್ಕಾಗಿ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಈ ಪರೀಕ್ಷಣೆಯಲ್ಲಿ ತುಲನೆಗಾಗಿ ಓರ್ವ ಸಾಧಕನು ಶ್ರೀರಾಮರಕ್ಷಾಸ್ತೋತ್ರವನ್ನು ಪಠಿಸುವುದರಿಂದ ಅವನ ಮೇಲೆ ಏನು ಪರಿಣಾಮವಾಗುತ್ತದೆ ?, ಎಂಬುದನ್ನೂ ಅಧ್ಯಯನ ಮಾಡಲಾಯಿತು. ಈ ಸಂಶೋಧನಾತ್ಮಕ ಪರೀಕ್ಷಣೆಗಾಗಿ ‘ಯು.ಎ.ಎಸ್. (ಯುನಿವರ್ಸಲ್‌  ಔರಾ  ಸ್ಕ್ಯಾನರ್‌)’ ಈ ಉಪಕರಣ ಮತ್ತು ಲೋಲಕ ಉಪಯೋಗಿಸಲಾಯಿತು. ‘ಯುನಿವರ್ಸಲ್‌ ಔರಾ ಸ್ಕ್ಯಾನರ್’ ಮತ್ತು ಲೋಲಕದಿಂದ ವಸ್ತು, ವಾಸ್ತು ಮತ್ತು ವ್ಯಕ್ತಿಯಲ್ಲಿನ ಸಕಾರಾತ್ಮಕ ಮತ್ತು ನಕಾರಾತ್ಮಕ ಊರ್ಜೆಯನ್ನು ಅಳೆಯಲು ಬರುತ್ತದೆ.

ಟಿಪ್ಪಣಿ – ‘ಯು.ಎ.ಎಸ್‌.’ ಈ ಉಪಕರಣದಿಂದ ಪ್ರಭಾವಲಯ ವನ್ನು ಅಳೆಯಲು ಪರೀಕ್ಷಣೆಯ ಸ್ಥಳದಲ್ಲಿ ಕೇವಲ ೩೦ ಮೀಟರ್‌ ಜಾಗ ಲಭ್ಯವಿತ್ತು. ಆದ್ದರಿಂದ ಪ್ರಭಾವಲಯವನ್ನು ಸರಿಯಾಗಿ ಅಳೆಯಲು ಲೋಲಕವನ್ನು ಉಪಯೋಗಿಸಲಾಯಿತು.

೧. ಪರೀಕ್ಷಣೆಗಳ ನೋಂದಣಿಗಳ ವಿವೇಚನೆ

ಲೋಲಕ

ಪ್ರಯೋಗದಲ್ಲಿ ಮೊದಲನೇ ದಿನ (೨೬.೧೦.೨೦೨೪ ರಂದು) ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ತಮ್ಮ ಕೋಣೆಯಲ್ಲಿ ಶ್ರೀರಾಮರಕ್ಷಾ ಸ್ತೋತ್ರವನ್ನು ಪಠಿಸಿದರು. ಪ್ರಯೋಗದಲ್ಲಿನ ಎರಡನೇ ದಿನ (೨೭.೧೦.೨೦೨೪ ರಂದು) ಓರ್ವ ಸಾಧಕನು ಆಶ್ರಮದಲ್ಲಿನ ಧ್ಯಾನಮಂದಿರದಲ್ಲಿ ಶ್ರೀರಾಮರಕ್ಷಾ ಸ್ತೋತ್ರವನ್ನು ಪಠಿಸಿದನು. ಶ್ರೀರಾಮರಕ್ಷಾ ಸ್ತೋತ್ರವನ್ನು ಪಠಿಸುವ ಮೊದಲು ಮತ್ತು ಪಠಿಸಿದ ನಂತರ ಇಬ್ಬರ ಛಾಯಾಚಿತ್ರಗಳ ‘ಯು.ಎ.ಎಸ್‌.’ ಉಪಕರಣದಿಂದ ಪರೀಕ್ಷಣೆಯನ್ನು ಮಾಡಲಾಯಿತು. ‘ಸಂತರು ಮತ್ತು ಸಾಧಕ ಇವರಿಬ್ಬರು ಶ್ರೀರಾಮರಕ್ಷಾಸ್ತೋತ್ರವನ್ನು ಪಠಿಸಿದ ನಂತರ ಶ್ರೀರಾಮನ ಚಿತ್ರದಲ್ಲಿ, ಹಾಗೆಯೇ ಅದರ ಮುಂದೆ ಹಚ್ಚಿದ ಊದುಬತ್ತಿಯ ವಿಭೂತಿಯ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದರ ಅಧ್ಯಯನವನ್ನೂ ಮಾಡಲಾಯಿತು. ಪ್ರಯೋಗದ ಎರಡೂ ದಿನ ಶ್ರೀರಾಮನ ಅದೇ ಚಿತ್ರವನ್ನು ಉಪಯೋಗಿಸಲಾಗಿತ್ತು. ಶ್ರೀರಾಮನ ಚಿತ್ರ ಮತ್ತು ಊದುಬತ್ತಿಯ ವಿಭೂತಿಯ ಛಾಯಾಚಿತ್ರಗಳ ಪರೀಕ್ಷಣೆ ಮಾಡಲಾಯಿತು.

೧ ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಓರ್ವ ಸಾಧಕ ಇವರಿಬ್ಬರ ಮೇಲೆಯೂ ಶ್ರೀರಾಮರಕ್ಷಾಸ್ತೋತ್ರದ ಪಠಣದಿಂದ ಸಕಾರಾತ್ಮಕ ಪರಿಣಾಮವಾಯಿತು : ಶ್ರೀರಾಮರಕ್ಷಾಸ್ತೋತ್ರದ ಪಠಣವನ್ನು ಮಾಡುವ ಮೊದಲು ಸಾಧಕನಲ್ಲಿ ೪.೭ ಮೀಟರ್‌ ನಕಾರಾತ್ಮಕ ಊರ್ಜೆ ಇತ್ತು ಮತ್ತು ಪಠಿಸಿದ ನಂತರ ಅದು ಇಲ್ಲವಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ ಮತ್ತು ಪರೀಕ್ಷಣೆಗಳಲ್ಲಿನ ಇತರ ಘಟಕಗಳಲ್ಲಿ ನಕಾರಾತ್ಮಕ ಊರ್ಜೆ ಕಂಡುಬರಲಿಲ್ಲ. ಈ ಪರೀಕ್ಷಣೆಗಳಲ್ಲಿನ ಎಲ್ಲ ಘಟಕಗಳಲ್ಲಿನ ಸಕಾರಾತ್ಮಕ ಊರ್ಜೆಯ ನೊಂದಣಿಯನ್ನು ಮುಂದೆ ಕೊಡಲಾಗಿದೆ.

ಮೇಲಿನ ನೋಂದಣಿಗಳಿಂದ ಮುಂದಿನ ಅಂಶಗಳು ಗಮನಕ್ಕೆ ಬಂದವು. 

೧. ಸಾಧಕನು ಶ್ರೀರಾಮರಕ್ಷಾಸ್ತೋತ್ರವನ್ನು ಪಠಿಸಿದ ನಂತರ ಶ್ರೀರಾಮನ ಚಿತ್ರದಲ್ಲಿ ಸಕಾರಾತ್ಮಕ ಊರ್ಜೆಯಲ್ಲಿ ೩೦ ಮೀಟರ್‌ಗಳಷ್ಟು ಹೆಚ್ಚಳವಾಯಿತು. ಆ ಸ್ಥಳದಲ್ಲಿನ ವಿಭೂತಿಯಲ್ಲಿ ೪೪ ಮೀಟರ್‌ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಶ್ರೀರಾಮರಕ್ಷಾಸ್ತೋತ್ರವನ್ನು ಪಠಿಸಿದ ನಂತರ ಸಾಧಕನಲ್ಲಿನ ಊರ್ಜೆಯಲ್ಲಿ ೯.೬ ಮೀಟರ್‌ಗಳಷ್ಟು ಹೆಚ್ಚಳವಾಯಿತು.

೨. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಶ್ರೀರಾಮರಕ್ಷಾಸ್ತೋತ್ರವನ್ನು ಪಠಿಸಿದ ನಂತರ ಶ್ರೀರಾಮನ ಚಿತ್ರದಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ೪೩೩ ಮೀಟರ್‌ಗಳಷ್ಟು ಹೆಚ್ಚಳವಾಯಿತು. ಆ ಸ್ಥಳದಲ್ಲಿನ ವಿಭೂತಿಯಲ್ಲಿ ೩೯೪ ಮೀಟರ್‌ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಶ್ರೀರಾಮರಕ್ಷಾ ಸ್ತೋತ್ರವನ್ನು ಪಠಿಸಿದ ನಂತರ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಭಾವಲಯವು ೨೦ ಸಾವಿರ ಮೀಟರ್‌ಗಳಷ್ಟು, ಅಂದರೆ ಗಣನೀಯವಾಗಿ ಹೆಚ್ಚಾಯಿತು.

ಸೌ. ಮಧುರಾ ಧನಂಜಯ ಕರ್ವೆ

೨. ಪರೀಕ್ಷಣೆಗಳ ನಿಷ್ಕರ್ಷ

ಇದರಿಂದ ಗಮನಕ್ಕೆ ಬರುವುದೇನೆಂದರೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮತ್ತು ಓರ್ವ ಸಾಧಕನು ಈ ಇಬ್ಬರೂ ಶ್ರೀರಾಮರಕ್ಷಾಸ್ತೋತ್ರವನ್ನು ಪಠಿಸಿದ ನಂತರ ಆಧ್ಯಾತ್ಮಿಕ ಸ್ತರದಲ್ಲಿ ಲಾಭವಾಯಿತು; ಆದರೆ ಅದರ ಪ್ರಮಾಣವು ಭಿನ್ನವಾಗಿದೆ. ಹಾಗೆಯೇ ಇಬ್ಬರೂ ಒಂದೇ ಚಿತ್ರದ ಮುಂದೆ ಪಠಿಸಿದ್ದರೂ ಆ ಚಿತ್ರದಿಂದ ಪ್ರಕ್ಷೇಪಿಸಿದ ಶ್ರೀರಾಮತತ್ತ್ವದ (ಚೈತನ್ಯದ) ಪ್ರಮಾಣವು ಭಿನ್ನವಾಗಿದೆ.

೩. ಪರೀಕ್ಷಣೆಗಳಲ್ಲಿನ ನೋಂದಣಿಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಶ್ರೀರಾಮರಕ್ಷಾಸ್ತೋತ್ರವನ್ನು ಪಠಿಸಿದ ನಂತರ ಸಾಧಕನ ಸುತ್ತಲು ರಕ್ಷಣಾಕವಚ ನಿರ್ಮಾಣವಾಗುವುದು : ಶ್ರೀರಾಮ ರಕ್ಷಾಸ್ತೋತ್ರದ ಪಠಣದಿಂದ ವಿಶಿಷ್ಟ ಶಕ್ತಿ (ಚೈತನ್ಯ) ನಿರ್ಮಾಣವಾಗುತ್ತದೆ. ಆದ್ದರಿಂದ ಸ್ತೋತ್ರವನ್ನು ಪಠಿಸುವವರ ಸುತ್ತಲೂ ರಕ್ಷಣಾಕವಚ ನಿರ್ಮಾಣವಾಗುತ್ತದೆ. ಸಾಧಕನು ಶ್ರೀರಾಮರಕ್ಷಾ ಸ್ತೋತ್ರವನ್ನು ಭಾವಪೂರ್ಣವಾಗಿ ಪಠಿಸಿದ್ದಾನೆ. ಆದ್ದರಿಂದ ಶ್ರೀರಾಮನ ಚಿತ್ರದಲ್ಲಿನ ಚೈತನ್ಯವು ಕಾರ್ಯನಿರತವಾಗಿ ಸಾಧಕನ ಸುತ್ತಲೂ ರಕ್ಷಣಾಕವಚ ನಿರ್ಮಾಣವಾಯಿತು

ಸಾಧಕನು ಆಶ್ರಮದಲ್ಲಿನ ಧ್ಯಾನಮಂದಿರದಲ್ಲಿ ಪಠಿಸಿರುವುದರಿಂದ ಅಲ್ಲಿನ ಸಾತ್ತ್ವಿಕತೆಯಿಂದಲೂ ಅವನ ಮೇಲೆ ಸಕಾರಾತ್ಮಕ ಪರಿಣಾಮವಾಯಿತು. ಆದ್ದರಿಂದ ಸಾಧಕನಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಯಿತು ಮತ್ತು ಅವನಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು. ಶ್ರೀರಾಮನ ಚಿತ್ರದಿಂದ ಪ್ರಕ್ಷೇಪಿಸಿದ ಚೈತನ್ಯದ ಸಕಾರಾತ್ಮಕ ಪರಿಣಾಮವು ವಿಭೂತಿಯ ಮೇಲಾಯಿತು. ಆದ್ದರಿಂದ ವಿಭೂತಿಯಲ್ಲಿಯೂ ತುಂಬಾ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಇದರಿಂದ ದೇವತೆಗಳ ಸ್ತೋತ್ರಗಳನ್ನು ಭಾವಪೂರ್ಣ ಹೇಳುವ ಮಹತ್ವವು ಗಮನಕ್ಕೆ ಬರುತ್ತದೆ.

೩ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀರಾಮರಕ್ಷಾ ಸ್ತೋತ್ರವನ್ನು ಪಠಿಸಿದ ನಂತರ ಅವರಲ್ಲಿನ ಸಮಷ್ಟಿ ಭಾವದಿಂದ ಶ್ರೀರಾಮನ ಚಿತ್ರದಲ್ಲಿನ ದೇವತೆಯ ತತ್ತ್ವವು ಸಮಷ್ಟಿ-ಕಲ್ಯಾಣಕ್ಕಾಗಿ ಕಾರ್ಯನಿರತವಾಗುವುದು : ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಉನ್ನತ ಮಟ್ಟದ ಸಮಷ್ಟಿ ಸಂತರಾಗಿದ್ದಾರೆ. ಅವರು ಮಾಡುತ್ತಿರುವ ಎಲ್ಲ ಕೃತಿಗಳು ಸಂಪೂರ್ಣ ಸೃಷ್ಟಿಯ ಕಲ್ಯಾಣಕ್ಕಾಗಿರುತ್ತವೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಶ್ರೀರಾಮನ ಚಿತ್ರದ ಮುಂದೆ ಪಠಿಸಿದ ನಂತರ ಆ ಚಿತ್ರದ ಸಕಾರಾತ್ಮಕ ಊರ್ಜೆ ೩೦ ಮೀಟರ್‌ನಿಂದ ೪೬೩ ಮೀಟರಗಳ ವರೆಗೆ ಗಣನೀಯವಾಗಿ ಹೆಚ್ಚಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸಮಷ್ಟಿ ಭಾವದಿಂದ ಶ್ರೀರಾಮನ ಚಿತ್ರದಲ್ಲಿನ ದೇವತೆಯ ತತ್ತ್ವವು ಜಾಗೃತವಾಗಿ ಸಮಷ್ಟಿಗಾಗಿ ಕಾರ್ಯನಿರತವಾಯಿತು. ಮರುದಿನ ಅದೇ ಚಿತ್ರದ ಮುಂದೆ ಸಾಧಕನು ಪಠಿಸಿದಾಗ ಆ ಚಿತ್ರದಲ್ಲಿನ ಚೈತನ್ಯವು ಕೇವಲ ಆ ಸಾಧಕನಿಗಷ್ಟೇ ಕಾರ್ಯನಿರತವಾಯಿತು. ಆದ್ದರಿಂದ ಚಿತ್ರದಲ್ಲಿನ ಸಕಾರಾತ್ಮಕ ಊರ್ಜೆಯು ೭೦ ಮೀಟರ್‌ನಿಂದ ೧೦೫ ಮೀಟರ್‌ಗಳಷ್ಟು ಹೆಚ್ಚಾಯಿತು. ಇದರಿಂದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಳ ವಾಗಿರುವುದು ಕಂಡುಬಂದಿತು. ಶ್ರೀರಾಮನ ಚಿತ್ರದಲ್ಲಿನ ಕಾರ್ಯ ನಿರತ ಚೈತನ್ಯದಿಂದ ವಿಭೂತಿಯ ಮೇಲೆ ಸಕಾರಾತ್ಮಕ ಪರಿಣಾಮ ವಾಯಿತು. ಆದ್ದರಿಂದ ವಿಭೂತಿಯಲ್ಲಿ ಹೆಚ್ಚು ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು. ಇದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೊಂದಿಗೆ ಸಮಷ್ಟಿ ಸಂತರ ಪ್ರತಿ ಯೊಂದು ಕೃತಿಯೂ ಸಮಷ್ಟಿ-ಕಲ್ಯಾಣಕ್ಕಾಗಿರುತ್ತದೆ, ಎಂಬುದು ಗಮನಕ್ಕೆ ಬರುತ್ತದೆ.’

– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೦.೧೧.೨೦೨೪)

ವಿ-ಅಂಚೆ : mav.research@2014gmail.com