ಭಾರತದಲ್ಲಿ ಸುರಕ್ಷೆ ಇದೆ !

ನಟ ಜಾನ್‌ ಅಬ್ರಹಾಂ

ಒಂದು ಸಂದರ್ಶನದಲ್ಲಿ ‘ನಾನು ಅಲ್ಪಸಂಖ್ಯಾತನಾಗಿದ್ದೇನೆ, ಆದರೆ ಭಾರತದಲ್ಲಿ ನಾನು ನಿರಂತರ ಸುರಕ್ಷಿತನಾಗಿದ್ದೇನೆಂದು ಅನಿಸುತ್ತದೆ’, ಎಂದರು. ‘ನಾನು ಭಾರತೀಯ ಎಂಬ ಬಗ್ಗೆ ನನಗೆ ಅಭಿಮಾನವಿದೆ. ನನಗೆ ನನ್ನ ದೇಶ ತುಂಬಾ ಇಷ್ಟವಾಗುತ್ತದೆ’, ಎಂದು ಕೂಡ ಅವರು ಹೇಳಿದರು. ಒಬ್ಬ ಅಲ್ಪಸಂಖ್ಯಾತ ವ್ಯಕ್ತಿಯಿಂದ ಇಂತಹ ಹೇಳಿಕೆಯು ನಿಜವಾಗಿಯೂ ಆಶ್ಚರ್ಯಕರವಾಗಿದೆ. ಈ ನಟ ತನ್ನ ಅನುಭವವನ್ನು ಮನಮುಕ್ತವಾಗಿ ವ್ಯಕ್ತಪಡಿಸಿದರು. ಇಂದಿನ ವರೆಗೆ ಯಾರ್ಯಾರಿಗೆ ಭಾರತ ಅಸುರಕ್ಷಿತವೆಂದು ಅನಿಸಿತೋ, ಅವರು ಈ ವಿಷಯದಲ್ಲಿ ಏನು ಹೇಳುವರು, ಎಂಬುದನ್ನು ಕೇಳಲು ಪ್ರತಿಯೊಬ್ಬ ರಾಷ್ಟ್ರಾಭಿಮಾನಿ ಭಾರತೀಯನು ಆತುರಪಡುತ್ತಿದ್ದಾನೆ; ಆದರೆ ದುರದೃಷ್ಠವಶಾತ್, ಜಾನ್‌ ಅಬ್ರಹಾಂರ ಹೇಳಿಕೆಯ ಬಗ್ಗೆ ‘ಭಾರತ ಅಲ್ಪಸಂಖ್ಯಾತರಿಗೆ ಅಸುರಕ್ಷಿತವಾಗಿದೆ’, ಎಂದು ಬಾಯಿ ಬಡಿದುಕೊಳ್ಳುವವರಲ್ಲಿ ಯಾರು ಕೂಡ ಯಾವುದೇ ಹೇಳಿಕೆ ನೀಡಿಲ್ಲ ಅಥವಾ ಅವರ ಹೇಳಿಕೆಯ ವಿಷಯದಲ್ಲಿ ತುಟಿ ಬಿಚ್ಚಲಿಲ್ಲ. ಕಲಾವಿದರಲ್ಲಿಯೂ ಅನೇಕ ಜನ ಅಲ್ಪಸಂಖ್ಯಾತರಿದ್ದಾರೆ; ಆದರೆ ಜಾನ್‌ ಇವರ ಹೇಳಿಕೆಯ ವಿಷಯದಲ್ಲಿ ಅವರಿಗೆ ಯಾವುದೇ ಕೊಡುಕೊಳ್ಳುವಿಕೆ ಇಲ್ಲ. ಭಾರತದಲ್ಲಿ ಸುಖ ಸಮೃದ್ಧಿಯೊಂದಿಗೆ ತನ್ನ ಉದರಪೋಷಣೆ ಮಾಡಿಕೊಳ್ಳುವ ಇಂತಹ ಸ್ವಾರ್ಥಿ ಮಾನಸಿಕತೆಯವರಿಗೆ ಭಾರತದ ಬಗ್ಗೆ ಅಭಿಮಾನ ಇರುತ್ತದೆಯೇ ? ಈ ಭಾರತದಲ್ಲಿದ್ದು ನಿಮ್ಮ ಪಾಲನೆ ಪೋಷಣೆಯಾಗುತ್ತದೆ, ಮನೋರಂಜನೆಯ ಆಧಾರದಲ್ಲಿ ಕೆಲಸ ಮಾಡಿ ನಿಮ್ಮ ಭವಿಷ್ಯವನ್ನು ರೂಪಿಸಲು ಭಾರತ ನಿಮಗೆ ಸಹಾಯ ಮಾಡುತ್ತದೆ, ನಿಮಗೆ ಪ್ರಸಿದ್ಧಿ ನೀಡುತ್ತದೆ, ಅದರ ಬಗ್ಗೆ ಯಾರಿಂದಲೂ ಅಭಿಮಾನದ ಮಾತು ಕೇಳಿಬರುವುದಿಲ್ಲ. ತದ್ವಿರುದ್ಧ ಭಾರತ ಅಸುರಕ್ಷಿತವಾಗಿದೆ, ಇಲ್ಲಿ ವಾಸಿಸುವುದು ಎಷ್ಟು ಅಪಾಯಕಾರಿಯಾಗಿದೆ ಎಂದು ಪದೇ ಪದೇ ಹೇಳುವವರು ಈ ದೇಶದಲ್ಲಿದ್ದಾರೆ. ಇದು ದೇಶದ ದೌರ್ಭಾಗ್ಯವಾಗಿದೆ. ಅನೇಕ ಇಸ್ಲಾಮೀ ದೇಶಗಳಿಗೆ ಭಾರತದ ವಿಷಯದಲ್ಲಿ ದ್ವೇಷ ಹಾಗೂ ಭಾರತದ ಅಲ್ಪಸಂಖ್ಯಾತರ ವಿಷಯದಲ್ಲಿ ಅತ್ಯಂತ ಕಳವಳವಿದೆ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದೆಯೆಂಬ ಕಾಲ್ಪನಿಕ ವದಂತಿಯಿಂದಲೇ ಈ ದೇಶಗಳು ಯಾವಾಗಲೂ ಹಿಂದೂಗಳ ವಿರುದ್ಧ ವಿಷಕಾರುತ್ತವೆ. ‘ಭಾರತ ಅಲ್ಪಸಂಖ್ಯಾತರಿಗೆ ಹೇಗೆ ಅಸುರಕ್ಷಿತವಾಗಿದೆ ?’, ಅಲ್ಲಿ ಅಲ್ಪಸಂಖ್ಯಾತರಿಗೆ ಮಾತ್ರ ಅನ್ಯಾಯ ಹಾಗೂ ಅತ್ಯಾಚಾರ ಹೇಗಾಗುತ್ತದೆ ?’, ಎನ್ನುವ ವಿಷಯ ವನ್ನು ಬಣ್ಣಿಸುವುದು ಮಾತ್ರವಲ್ಲ, ಭಾರತವನ್ನು ನಿಯೋಜನಾಬದ್ಧ ವಾಗಿ ಅವಮಾನಗೊಳಿಸುತ್ತವೆ. ಈಗ ಜಾನ್‌ ಅಬ್ರಹಾಂರ ಹೇಳಿಕೆಯಿಂದ ಸಾಮ್ಯವಾದಿ ವಿಚಾರಶೈಲಿಯ ಎಲ್ಲ ಜನರ ಬಾಯಿಯಿಂದ ಮಾತೆ ಹೊರಡುವುದಿಲ್ಲ.

ಅಸುರಕ್ಷಿತತೆ ಎಂಬ ಢೋಂಗಿತನ !

ಕೆಲವು ವರ್ಷಗಳ ಹಿಂದೆ ಅಂದಿನ ಮುಂಬಯಿ ಕಾಂಗ್ರೆಸ್ಸಿನ ಅಧ್ಯಕ್ಷ ಸಂಜಯ ನಿರುಪಮರ ಪತ್ನಿ ಗೀತಾ ನಿರುಪಮ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ‘ಭಾರತದಲ್ಲಿ ನನ್ನ ಕುಟುಂಬದವರಿಗೆ ಅಪಾಯವಿದೆ’, ಎಂದು ಹೇಳಿದ್ದರು. ನಟ ಆಮೀರ ಖಾನ್‌ ಇವರ ಎರಡನೇ ಪತ್ನಿ ಕಿರಣ ರಾವ್‌ ಇವರು ಕೂಡ ಭಾರತ ಅಸುರಕ್ಷಿತವೆನಿಸುತ್ತದೆ ಎಂದು ಬಾಯಿ ಬಡಿದುಕೊಂಡಿದ್ದರು; ಆದರೂ ಅವರು ಇದುವರೆಗೆ ಭಾರತದ ಸೆರಗು ಹಿಡಿದುಕೊಂಡೇ ಇದ್ದಾರೆ. ನಟ ನಾಸಿರುದ್ದೀನ ಶಾಹ ಇವರು ಕೂಡ ಈ ಹಿಂದೆ ತಮ್ಮ ಮಕ್ಕಳನ್ನು ಭಾರತದಲ್ಲಿ ಇಟ್ಟುಕೊಳ್ಳಲು ಅಸುರಕ್ಷಿತವೆನಿಸುತ್ತದೆ ಎಂದಿದ್ದರು. ಭಾರತ ಅಸುರಕ್ಷಿತವೆಂದು ತಿಳಿಯುವವರು ನೇರವಾಗಿ ಬೇರೆ ದೇಶಕ್ಕೆ ಹೋಗಿ ವಾಸಿಸುವುದಿಲ್ಲವೇಕೆ ? ಭಾರತದಲ್ಲಿ ಭಯವೆನಿಸುವವರು ಭಾರತವನ್ನು ಬಿಟ್ಟು ತೊಲಗಿದರೆ ಏನೂ ಹಾನಿಯಾಗಲಿಕ್ಕಿಲ್ಲ ಎಂದೆನಿಸುತ್ತದೆ ! ಆದರೆ ಅದು ಸಾಧ್ಯವಿಲ್ಲ ! ‘ಭಾರತ ನಮ್ಮ ಆಶ್ರಯದಾತ ಆಗಿದೆ. ಅದನ್ನು ಹೇಗೆ ತ್ಯಜಿಸುವುದು ?’, ಈ ರೀತಿಯ ವ್ಯರ್ಥ ಸ್ವಾಭಿಮಾನ, ಅಲ್ಲ ಅಹಂಕಾರವನ್ನು ಪ್ರದರ್ಶಿಸುತ್ತಾ ರಾಷ್ಟ್ರಾಭಿಮಾನವನ್ನು ಕಾಲಿನಡಿ ತುಳಿಯುವವರ ತಿನ್ನುವ ಹಲ್ಲು ಬೇರೆ, ತೋರಿಸುವ ಹಲ್ಲು ಬೇರೆ ಎಂದು ಗಮನಕ್ಕೆ ಬರುತ್ತದೆ. ಇಂದಿನವರೆಗಿನ ಅಲ್ಪಸಂಖ್ಯಾತರ ಓಲೈಕೆಯ ಪರಿಣಾಮವಾಗಿದೆ. ಇಂತವರನ್ನು ರಾಷ್ಟ್ರನಿಷ್ಠ ಭಾರತೀಯರು ಭಾರತದ ಗಡಿಗೆ ಒಯ್ದು ಅವರ ನೆಚ್ಚಿನ ದೇಶದೊಳಗೆ ತಳ್ಳಬೇಕು. ‘ಬಹುಸಂಖ್ಯಾತರು ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತರೆ ಆಗಿದ್ದಾರೆ’, ಎಂಬುದನ್ನು ಗಮನದಲ್ಲಿಡಬೇಕು ಹಾಗೂ ಅಲ್ಪಸಂಖ್ಯಾತರು ಕೂಡ ರಾಷ್ಟ್ರಕರ್ತವ್ಯವನ್ನು ನಿರ್ವಹಿಸಬೇಕು !

ಕಾರ್ಯಕ್ಕೆ ವೇಗ ಬೇಕು !

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಇತ್ತೀಚೆಗೆ ಸನಾತನ ಧರ್ಮ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದ ಒಂದು ಪ್ರಮುಖ ಮತ್ತು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸಾರವಾಗುವ ಸರಕಾರಿ ಅಧಿಸೂಚನೆಗಳು, ಗೆಜೆಟ್, ಉದ್ಘಾಟನಾ ಫಲಕಗಳು, ಶಾಸನಗಳು ಇತ್ಯಾದಿಗಳಲ್ಲಿ ದಿನಾಂಕ ಮತ್ತು ವರ್ಷದೊಂದಿಗೆ ಹಿಂದೂ ಪಂಚಾಂಗದ (ವಿಕ್ರಮ ಸಂವತ್ಸರ) ಪ್ರಕಾರ ತಿಂಗಳು ಮತ್ತು ತಿಥಿ (ಉದಾ. ಫಾಲ್ಗುಣ, ಶುಕ್ಲ ಪಕ್ಷ/ಕೃಷ್ಣ ಪಕ್ಷ) ಉಲ್ಲೇಖಿಸುವಂತೆ ಆದೇಶಿಸಿದ್ದಾರೆ. ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಶ್ಲಾಘನೀಯ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರಿಗೆ ಅಭಿನಂದನೆಗಳು ! ಮೂಲ ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ ದೇಶಾದ್ಯಂತದ ಭಾಜಪ ಆಡಳಿತವಿರುವ ರಾಜ್ಯಗಳಲ್ಲಿ ಒಂದಲ್ಲ ಒಂದು ಪ್ರಯತ್ನಗಳು ನಡೆಯುತ್ತಿವೆ. ಭಾರತದ ವೈಭವಯುತ ಪರಂಪರೆಯನ್ನು ವಿದೇಶಿ ಆಕ್ರಮಣಕಾರರು ಅಳಿಸಿ ಹಾಕಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರೂ ಮಹಾನ್‌ ಸನಾತನ ಹಿಂದೂ ಧರ್ಮವನ್ನು ಸಂಪೂರ್ಣವಾಗಿ ನಶಿಸಲು ಅವರಿಂದಾಗÀಲಿಲ್ಲ. ಇದುವೇ ಸನಾತನ ಹಿಂದೂ ಧರ್ಮದ ಮಹತ್ವವಾಗಿದೆ. ಅದು ಕಾಲಾತೀತ. ವಿದೇಶಿಯರ ಕುರುಹುಗಳನ್ನು ಅಳಿಸಲು, ಅವರ ಸ್ಥಳಗಳನ್ನು ನಾಶ ಮಾಡಲು ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕವಾಗಿ ಸ್ಪಷ್ಟವಾಗಿ ಬೇಡಿಕೆಯಿಡುತ್ತಿದ್ದಾರೆ. ಇತ್ತೀಚೆಗೆ ನಡೆಯುತ್ತಿರುವ ಘಟನೆಗಳಿಂದ ಇದು ಸ್ಪಷ್ಟವಾಗುತ್ತದೆ. ಹಿಂದೂಗಳು ತಮ್ಮದೇ ದೇಶದಲ್ಲಿ ತಮ್ಮದೇ ವೈಭವಯುತ ಐತಿಹಾಸಿಕ ಪರಂಪರೆಗಾಗಿ ಹೋರಾಡಬೇಕಾಗಿರುವುದು ಸ್ವಧರ್ಮ, ಸ್ವಾಭಿಮಾನ ಮರೆತ

ಗಾಂಧಿ-ನೆಹರೂ ಇವರ ಆಧುನಿಕ ವ್ಯವಸ್ಥೆಯೇ ಮೂಲ ಕಾರಣ ವಾಗಿದೆ. ಹಿಂದೂಗಳನ್ನು ಜಾಗೃತಗೊಳಿಸಲು ಹಿಂದುತ್ವವಾದಿ ಗಳು ದೀರ್ಘಕಾಲದ ತನಕ ಅವರಿಗೆ ಬೋಧಿಸಬೇಕಾಯಿತು. ಅದಕ್ಕಾಗಿಯೇ ಈಗ ಹಿಂದೂಗಳು ಎಚ್ಚೆತ್ತುಕೊಂಡು ತಮ್ಮದೇ ವೈಭವಯುತ ಪರಂಪರೆಗಾಗಿ ಹೋರಾಡುತ್ತಿದ್ದಾರೆ. ಅದಕ್ಕಾಗಿ ಹಿಂದುತ್ವವಾದಿ ನಾಯಕರು ಅವರಿಗೆ ಬೆಂಬಲ ನೀಡುತ್ತಿದ್ದರೂ, ಆಕಾಶವನ್ನು ಆಮೆಯ ವೇಗದಲ್ಲಿ ತಲುಪಲು ಇನ್ನೂ ದೀರ್ಘಕಾಲ ಕಳೆಯ ಬೇಕಾಗಬಹುದು. ಭಾರತವನ್ನು ಭೇದಿಸಲಾಗದ, ನಿತ್ಯ ಮತ್ತು ಶಾಶ್ವತವಾದ ಸನಾತನ ಹಿಂದೂ ಧರ್ಮದ ಪುನರುತ್ಥಾನಕ್ಕೆ ಧಾಮಿ ನಿಧಾನವಾಗಿ ಅಲ್ಲ, ಆದರೆ ತ್ವರಿತವಾಗಿ ಹೆಜ್ಜೆಗಳನ್ನು ಇಡಬೇಕು ಮತ್ತು ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಹಗಲಿರುಳು ಪ್ರಯತ್ನಿಸಬೇಕಾಗುತ್ತದೆ.

ಮುಖ್ಯಮಂತ್ರಿ ಧಾಮಿ ಅವರು ಅಕ್ರಮ ಮಸೀದಿಗಳನ್ನು ಮುಚ್ಚುವ ಕಾರ್ಯಾಚರಣೆಯನ್ನೂ ಪ್ರಾರಂಭಿಸಿದ್ದಾರೆ. ಧಾರ್ಮಿಕ ರಾಜ್ಯವಾದ ಉತ್ತರಾಖಂಡದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಸೀದಿಗಳು ನಿರ್ಮಾಣವಾಗುವುದು ಮತ್ತು ಅವು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುವುದು ಹೇಗೆ ? ಭಾರತದ ಸ್ವಾತಂತ್ರ್ಯದ ನಂತರ, ಉತ್ತರಾಖಂಡ ಸೇರಿದಂತೆ ಭಾರತದಾದ್ಯಂತ ಲೆಕ್ಕವಿಲ್ಲದಷ್ಟು ಅನಧಿಕೃತ ಮಸೀದಿಗಳು ನಿರ್ಮಾಣಗೊಂಡವು ಮತ್ತು ಅವು ಅಕ್ರಮ ಚಟುವಟಿಕೆಗಳ ಕೇಂದ್ರಗಳಾದವು. ಅವುಗಳ ಮೇಲೆ ಆಗೊಮ್ಮೆ ಈಗೊಮ್ಮೆ ಕ್ರಮ ಕೈಗೊಂಡಾಗ ೧-೨ ಸುದ್ದಿಗಳನ್ನು ನೀಡಿ ಅದನ್ನು ದೊಡ್ಡದು ಮಾಡದ ಎಡಪಂಥೀಯ ಮಾಧ್ಯಮಗಳು ಅದಕ್ಕೆ ಅಗತ್ಯವಾದ ಗಾಂಭೀರ್ಯವನ್ನು ನೀಡಲಿಲ್ಲ; ಆದರೆ ಈಗ ಸ್ವಲ್ಪ ಮಟ್ಟಿಗೆ ಕೆಲವು ಹೆಜ್ಜೆಗಳನ್ನು ಇಡಲಾಗುತ್ತಿದೆ. ಇದು ಖಂಡಿತವಾಗಿಯೂ ಒಳ್ಳೆಯದು; ಆದರೆ ಇದಕ್ಕೆ ವೇಗದ ಅಗತ್ಯವಿದೆ !

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರದ ಭಾಜಪ ಸರಕಾರವು ಅಭಿವೃದ್ಧಿಶೀಲ ಭಾರತದ ಕಡೆಗೆ ಸಾಗುತ್ತಿದೆ. ದೇಶದ ೧೫ ರಾಜ್ಯಗಳಲ್ಲಿ ಭಾಜಪದ ಸರಕಾರವಿದ್ದರೆ, ೬ ರಾಜ್ಯಗಳಲ್ಲಿ ಭಾಜಪ ಸರಕಾರದ ಒಂದು ಭಾಗವಾಗಿದೆ. ಉತ್ತರಾಖಂಡದಲ್ಲಿ ಹಿಂದೂ ಪಂಚಾಂಗದ ತಿಥಿಯನ್ನು ಸರಕಾರಿ ದಾಖಲೆಗಳಲ್ಲಿ ಬಳಸಬಹುದಾದರೆ, ಭಾಜಪ ಆಡಳಿತವಿರುವ ಪ್ರತಿಯೊಂದು ರಾಜ್ಯದಲ್ಲೂ ಅದನ್ನು ಸುಲಭವಾಗಿ ಮಾಡಬಹುದು ಎಂದು ಹಿಂದೂಗಳು ಭಾವಿಸುತ್ತಾರೆ. ಹಿಂದೂಗಳು ಯಾವ ನಂಬಿಕೆಯಿಂದ ಭಾಜಪವನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಗಮನದಲ್ಲಿಟ್ಟು, ‘ಹಿಂದೂ ಹಿತಾಸಕ್ತಿಗೆ ಸಂಬಂಧಿಸಿದ ನಿರ್ಧಾರ ಗಳನ್ನು ತೆಗೆದುಕೊಳ್ಳುವಲ್ಲಿನ ಅಡೆತಡೆಗಳನ್ನು ನಿವಾರಿಸಿ ಮತ್ತು ಒಳ್ಳೆಯ ನಿರ್ಧಾರಗಳ ವೇಗವನ್ನು ಹೆಚ್ಚಿಸಬೇಕು’ ಎಂಬುದು ಹಿಂದೂಗಳ ನಿರೀಕ್ಷೆಯಾಗಿದೆ.