ಹಿಂದೂ ರಾಷ್ಟ್ರದ ಉದ್ಗೋಷ ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅಲೌಕಿಕ ಚರಿತ್ರೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ೮೩ ನೇ ಜನ್ಮೋತ್ಸವದ ನಿಮಿತ್ತ…

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಾಲ್ಯದಿಂದ ನೌಕರಿಯ ತನಕದ ಕಾಲ

‘ಜ್ಞಾನಿಗಳ ರಾಜ, ಗುರು ಮಹಾರಾಜ’ ಎಂದು ವರ್ಣಿಸಬಹುದಾದ ವ್ಯಕ್ತಿತ್ವವೆಂದರೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ! ಧರ್ಮ, ಕಲೆ, ಭಾಷೆ, ರಾಷ್ಟ್ರರಕ್ಷಣೆ, ಧರ್ಮಜಾಗೃತಿ ಮುಂತಾದ ವಿಷಯಗಳ ಬಗ್ಗೆ ವಿಪುಲ ಗ್ರಂಥಗಳನ್ನು ಬರೆದಿರುವ ಅವರು ‘ಜ್ಞಾನಗುರು’ ಆಗಿದ್ದಾರೆ. ಶೀಘ್ರ ಈಶ್ವರಪ್ರಾಪ್ತಿಗಾಗಿ ‘ಗುರುಕೃಪಾಯೋಗ’ ಎಂಬ ಸುಲಭ ಸಾಧನಾಮಾರ್ಗವನ್ನು ನಿರ್ಮಿಸಿ ಸಾಧಕರಿಗೆ ಕಾಲಾನುಸಾರ ಯೋಗ್ಯ ಸಾಧನೆಯನ್ನು ಕಲಿಸುವ ಅವರು ‘ಮೋಕ್ಷಗುರು’ ಆಗಿದ್ದಾರೆ ! ಇತ್ತೀಚಿನ ದಿನಗಳಲ್ಲಿ ‘ವಿಶ್ವ ಕಲ್ಯಾಣಕ್ಕಾಗಿ ಸತ್ತ್ವಗುಣವುಳ್ಳ ಜನರ ‘ಈಶ್ವರೀ ರಾಜ್ಯ’ (ಹಿಂದೂ ರಾಷ್ಟ್ರ, ಸನಾತನ ಧರ್ಮ ರಾಜ್ಯ) ಅತ್ಯಗತ್ಯ’ ಎಂದು ಮೊದಲು ಘೋಷಿಸಿದ ಅವರು ‘ರಾಷ್ಟ್ರಗುರು’ ಆಗಿದ್ದಾರೆ. ಹಿಂದೂ ಸಮಾಜ, ರಾಷ್ಟ್ರ ಮತ್ತು ಧರ್ಮದ ಉನ್ನತಿಯ ದುರ್ದಮ್ಯ ಧ್ಯೇಯವಾದ ಅವರ ವಿಚಾರ ಮತ್ತು ಕೃತಿಗಳಲ್ಲಿ ಹೆಜ್ಜೆ ಹೆಜ್ಜೆಗೂ ಕಂಡುಬರುತ್ತದೆ. ಇದಕ್ಕಾಗಿಯೇ ಅನೇಕ ಹಿಂದೂ ಧರ್ಮೀಯರು, ಹಿಂದುತ್ವವಾದಿಗಳು, ಧರ್ಮಪ್ರಚಾರಕರು ಮತ್ತು ಸಂತರು ಅವರನ್ನು ‘ಧರ್ಮಗುರು’ ಎಂದು ಪರಿಗಣಿಸುತ್ತಾರೆ. ದೇಶ-ವಿದೇಶಗಳ ವಿವಿಧ ಪಂಥದವರಿಗೆ ಹಿಂದೂ ಧರ್ಮದ ಮಹತ್ವ ಮತ್ತು ಸಾಧನೆ ಬಗ್ಗೆ ಅಮೂಲ್ಯ ಮಾರ್ಗದರ್ಶನ ನೀಡುವ ಅವರು ‘ಜಗದ್ಗುರು’ ಆಗಿದ್ದಾರೆ. ಸೂಕ್ಷ್ಮ ಜಗತ್ತಿನ ಬಗ್ಗೆ ಅವರಷ್ಟು ಅಧ್ಯಯನ, ಸಂಶೋಧನೆ ಮಾಡುವ ವ್ಯಕ್ತಿ ಬಹುಶಃ ಜಗತ್ತಿನಲ್ಲಿ ಸಿಗಲಾರರು. ಹಾಗಾಗಿ ಒಂದರ್ಥದಲ್ಲಿ ‘ಸೂಕ್ಷ್ಮ-ಜಗತ್ತು ಸಂಶೋಧನಾಗುರು’ ಆಗಿದ್ದಾರೆ ! ಅಂತಹ ಪರಾತ್ಪರ ಗುರು ಡಾ. ಆಠವಲೆಯವರ ಜೀವನಚರಿತ್ರೆಯ ಸಂಕ್ಷಿಪ್ತ ಪರಿಚಯ ಈ ಲೇಖನಮಾಲೆಯಿಂದ ತಿಳಿಯೋಣ.

ಸಾತ್ತ್ವಿಕ ಕುಟುಂಬದಲ್ಲಿ ಜನ್ಮ ಮತ್ತು ಶಿಕ್ಷಣ

ಪರಮಪೂಜ್ಯ ಬಾಳಾಜಿ ಆಠವಲೆ (ಪ.ಪೂ. ದಾದಾ) ಮತ್ತು ಪೂಜ್ಯ (ಶ್ರೀಮತಿ) ನಳಿನಿ ಆಠವಲೆ (ಪೂ. ತಾಯಿ)

೧ ಅ. ಜನನ : ‘ಶುದ್ಧ ಬೀಜದ ಒಡಲಲ್ಲಿ, ರಸಭರಿತ ಸುಂದರ ಫಲಗಳು’ (ತುಕಾರಾಮಗಾಥಾ, ಅಭಂಗ ೩೭, ದ್ವಿಪದಿ ೧) ಈ ದ್ವಿಪದಿಯ ಪ್ರಕಾರ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ೬ ಮೇ ೧೯೪೨ (ವೈಶಾಖ ಕೃಷ್ಣ ಸಪ್ತಮಿ, ಕಲಿಯುಗ ವರ್ಷ ೫೦೪೪) ರಂದು ಶ್ರೀ. ಬಾಳಾಜಿ ವಾಸುದೇವ ಆಠವಲೆ (ತೀ. ದಾದಾ) ಮತ್ತು ಸೌ. ನಲಿನಿ ಬಾಳಾಜಿ ಆಠವಲೆ ದಂಪತಿಗಳಿಗೆ ಜನಿಸಿದರು. ಅವರಿಬ್ಬರೂ ಮುಂದೆ ಸಂತ ಪದವಿ ತಲುಪಿದರು.

ನಾಗೋಠಣೆ (ರೋಹಾ ತಾಲೂಕು, ರಾಯಗಡ ಜಿಲ್ಲೆ, ಮಹಾರಾಷ್ಟ್ರ) ಇಲ್ಲಿನ ದಿವಂಗತ ಗಣೇಶ ಜನಾರ್ದನ ವರ್ತಕ (ಡಾ. ಜಯಂತ ಆಠವಲೆಯವರ ತಾಯಿಯ ತಂದೆ) ಅವರ ಮನೆಯಲ್ಲಿ ಚಿ. ಜಯಂತ ಜನಿಸಿದರು. ತೀ. ದಾದಾ ಗಿರ್ಗಾಂವ್‌ (ಮುಂಬೈ) ಇಲ್ಲಿನ ‘ಆರ್ಯನ್‌ ಹೈಸ್ಕೂಲ್‌’ನಲ್ಲಿ ಶಿಕ್ಷಕರಾಗಿದ್ದರು.

ಪವಿತ್ರ ಸ್ಥಳ ! : ನಾಗೋಠಣೆ (ರೋಹಾ ತಾಲೂಕು, ರಾಯಗಡ ಜಿಲ್ಲೆ, ಮಹಾರಾಷ್ಟ್ರ) ಡಾ. ಆಠವಲೆಯವರ ಜನ್ಮಸ್ಥಳ

೧ ಆ. ಸಾತ್ತ್ವಿಕ ಕುಟುಂಬ

೧ ಆ ೧. ಸಾಧನೆಯ ಸಂಸ್ಕಾರ ನೀಡುವ ಆದರ್ಶ ತಂದೆ ತಾಯಿ ! : ‘ತೀ. ದಾದಾ (ತಂದೆ) ಮತ್ತು ತೀ. (ಸೌ.) ತಾಯಿ ಅವರು ಚಿಕ್ಕಂದಿನಿಂದಲೂ ತಮ್ಮ ಐದು ಜನ ಮಕ್ಕಳಿಗೆ ಸಾತ್ತ್ವಿಕತೆ ಮತ್ತು ಸಾಧನೆಯ ಸಂಸ್ಕಾರ ನೀಡಿದ್ದರಿಂದ ನಾವು ಸಾಧನೆಯಲ್ಲಿ ತೊಡಗಿದೆವು. ನನ್ನ ತಂದೆಯವರು ಅಧ್ಯಾತ್ಮಕ್ಕೆ ಸಂಬಂಧಿಸಿದ ಬರವಣಿಗೆಯ ದೊಡ್ಡ ಸಂಗ್ರಹವನ್ನು ಹೊಂದಿದ್ದರು. ಈ ಬರವಣಿಗೆಯ ೫ ಗ್ರಂಥಗಳನ್ನು ನಾನು ಪ್ರಕಟಿಸಿದೆ.

೧ ಆ ೧ ಅ. ತೀ. ದಾದಾರವರ ಸಂತತ್ವವನ್ನು ಪ.ಪೂ ಭಕ್ತರಾಜ ಮಹಾರಾಜರು (ಪ.ಪೂ. ಬಾಬಾರವರು) ಗುರುತಿಸುವುದು : ‘ಪ.ಪೂ. ಭಕ್ತರಾಜ ಮಹಾರಾಜರು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಗುರುಗಳು) ಅವರು ಯಾವಾಗಲೂ ತೀ. ತಂದೆಯವರನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಿದ್ದರು.

ಪ. ಪೂ. ಬಾಬಾ ಅವರು ವಯಸ್ಸಾದ ಭಕ್ತರನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಳ್ಳುವುದು ಬಹಳ ಅಪರೂಪ. ಪ.ಪೂ. ಬಾಬಾ ಅವರು ೧೯೮೭ ರಲ್ಲಿ ನಮ್ಮ ಮನೆಗೆ ಬಂದಿದ್ದಾಗ ಅವರು ‘ದಾದಾರವರು ಸಂತರಾಗಿದ್ದಾರೆ !’ ಎಂದಿದ್ದರು.’ – ಡಾ. ಆಠವಲೆ

೧ ಆ ೨. ಉನ್ನತ ವಿದ್ಯಾಭ್ಯಾಸ ಪಡೆದಿದ್ದರೂ ಅಧ್ಯಾತ್ಮದಲ್ಲಿ ಉನ್ನತಿ ಸಾಧಿಸಿದ ಎಲ್ಲಾ ಸಹೋದರರು ! : ಪರಾತ್ಪರ ಗುರು ಡಾ. ಆಠವಲೆಯವರ ಹಿರಿಯ ಸಹೋದರ ಮತ್ತು ಪ್ರಸಿದ್ಧ ಬಾಲರೋಗತಜ್ಞ ವೈದ್ಯಾಚಾರ್ಯ ಸದ್ಗುರು ಡಾ. ವಸಂತ ಆಠವಲೆಯವರು ಕೂಡ ಸಾಧನೆ ಮಾಡಿ ಸಂತಪದವಿಗೆ ತಲುಪಿದ್ದರು. ಅವರು ಪಾಲಕರಿಗೆ ಉಪಯುಕ್ತವಾದ ೧೬, ಆಯುರ್ವೇದಕ್ಕೆ ಸಂಬಂಧಿಸಿದ ೩೩ ಮತ್ತು ಪರಾತ್ಪರ ಗುರು ಡಾ. ಆಠವಲೆ ಯವರ ಬಗ್ಗೆ ೧, ಹೀಗೆ ಒಟ್ಟು ೫೦ ಗ್ರಂಥಗಳನ್ನು ಬರೆದರು. ಇಂಜಿನಿಯರ್‌ ಆಗಿದ್ದ ಎರಡನೇ ಹಿರಿಯ ಸಹೋದರ ಶ್ರೀ. ಅನಂತ ಆಠವಲೆ ಯವರು ಜೂನ್‌ ೨೦೧೯ ರಲ್ಲಿ ಸಂತ ಪದವಿಯನ್ನು ತಲುಪಿದರು.

ಅವರು ‘ಗೀತಾಜ್ಞಾನದರ್ಶನ’ ಮತ್ತು ‘ಅಧ್ಯಾತ್ಮಶಾಸ್ತ್ರದ ವಿವಿಧ ಅಂಶಗಳ ಬೋಧನೆ’ ಎಂಬ ೨ ಗ್ರಂಥಗಳನ್ನು ಬರೆದರು. ನಾಲ್ಕನೆಯ ಸಹೋದರ ದಿವಂಗತ ಡಾ. ಸುಹಾಸ ಆಠವಲೆಯವರು ವ್ಯಷ್ಟಿ ಸಾಧನೆ ಮಾಡುತ್ತಿದ್ದರು. (ಟಿಪ್ಪಣಿ ೧) ಅವರು ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದರು. ಅವರ ಆಧ್ಯಾತ್ಮಿಕ ಮಟ್ಟ ಶೇ. ೬೫ ರಷ್ಟು ಇತ್ತು. ಕಿರಿಯ ಸಹೋದರ ಡಾ. ವಿಲಾಸ ಆಠವಲೆಯವರ ಆಧ್ಯಾತ್ಮಿಕ ಮಟ್ಟ  ಶೇ. ೬೫ ರಷ್ಟಿದ್ದು, ಅವರು ಹರಿದ್ವಾರದ ಪ.ಪೂ. ದೇವಾನಂದಸ್ವಾಮಿಯವರ ಕಾರ್ಯದಲ್ಲಿ ಭಾಗವಹಿಸುತ್ತಾರೆ.

ಪರಾತ್ಪರ ಗುರು ಡಾ. ಆಠವಲೆಯವರ ಎರಡನೇ ಸಹೋದರ ಶ್ರೀ. ಅನಂತ ಆ ಸಮಯದಲ್ಲಿ ಮುಂಬೈಯಲ್ಲಿ ಇಲ್ಲದ ಕಾರಣ ಅವರನ್ನು ಹೊರತುಪಡಿಸಿ, ಇಡೀ ಕುಟುಂಬಕ್ಕೆ ಸಂತ ಭಕ್ತರಾಜ ಮಹಾರಾಜರು ಗುರುಮಂತ್ರ ನೀಡಿದರು. (‘ಒಂದೇ ಕುಟುಂಬದ ಎಲ್ಲಾ ಸಹೋದರರು ಅಧ್ಯಾತ್ಮದಲ್ಲಿ ಉನ್ನತಿ ಸಾಧಿಸುವುದು’, ಈಗಿನ ಕಲಿಯುಗದಲ್ಲಿ ಬಹಳ ಅಪರೂಪ. ಪರಾತ್ಪರ ಗುರು ಡಾಕ್ಟರರ ಎಲ್ಲಾ ಸಹೋದರರು ಉನ್ನತ ವಿದ್ಯಾಭ್ಯಾಸ ಹೊಂದಿದ್ದರೂ ಅವರು ಲೌಕಿಕ ಜೀವನದಲ್ಲಿ ಇದ್ದುಕೊಂಡೇ ಸಾಧನೆ ಮಾಡಿದರು ಅಲ್ಲದೇ ಅಧ್ಯಾತ್ಮದಲ್ಲಿ ಉತ್ತಮ ಪ್ರಗತಿ ಸಾಧಿಸಿದರು. ಈ ಐದು ಸಹೋದರರನ್ನು ನೋಡಿದರೆ ಭಗವಂತನ ಭಕ್ತರಾಗಿದ್ದ ಐದು ಪಾಂಡವರ ನೆನಪಾಗುತ್ತದೆ.’ – ಸಂಕಲನಕಾರರು) 

ಶಾಲಾ ಜೀವನ ಬುದ್ಧಿವಂತ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿ !

* ಮೊದಲನೇ ತರಗತಿಯಿಂದ ಹತ್ತನೇ ತರಗತಿಯ ವರೆಗೆ ಮೊದಲ ಸ್ಥಾನ !

* ಹನ್ನೊಂದನೇ ತರಗತಿಯ (ಮೆಟ್ರಿಕ್) ಪರೀಕ್ಷೆಯಲ್ಲಿ ಸುಮಾರು ೧ ಲಕ್ಷ ವಿದ್ಯಾರ್ಥಿಗಳಲ್ಲಿ ಮೆರಿಟ್‌ ಪಟ್ಟಿಯಲ್ಲಿ ೩೭ ನೇ ಸ್ಥಾನ !

* ಏಳನೇ ತರಗತಿಯಲ್ಲಿ ಗುಣಮಟ್ಟದ ವಿದ್ಯಾರ್ಥಿ ವೇತನ

* ಶಾಲೆಯಿಂದ ಪ್ರಕಟವಾದ ‘ಆರ್ಯ’ ನಿಯತಕಾಲಿಕದಲ್ಲಿ ೧೯೫೬-೫೭ ರಲ್ಲಿ ಸಂಪಾದಕರಾಗಿ (ವಿದ್ಯಾರ್ಥಿ ಪ್ರತಿನಿಧಿಯಾಗಿ) ಕೆಲಸ ಮಾಡಿದರು.

ಮಹಾವಿದ್ಯಾಲಯ ಶಿಕ್ಷಣ ಮತ್ತು ವಿದ್ಯಾರ್ಥಿ ಸಂಘಟನೆಗಳಲ್ಲಿ ಸಕ್ರಿಯ ಮಹಾವಿದ್ಯಾಲಯದ ಶಿಕ್ಷಣ

ಜಯಂತನ ವಿಜ್ಞಾನ ವಿಭಾಗದ ಮೊದಲ ವರ್ಷದ ಶಿಕ್ಷಣವು ೧೯೫೯ ರಲ್ಲಿ ಮುಂಬೈನ ‘ವಿಲ್ಸನ್‌ ಮಹಾವಿದ್ಯಾಲಯ’ದಲ್ಲಿ ಮತ್ತು ಎರಡನೇ ವರ್ಷದ ಶಿಕ್ಷಣವು ೧೯೬೦ ರಲ್ಲಿ ‘ಜೈ ಹಿಂದ್‌ ಮಹಾವಿದ್ಯಾಲಯ’ದಲ್ಲಿ ನಡೆಯಿತು.

ವೈದ್ಯಕೀಯ ಶಿಕ್ಷಣ

೧೯೬೧ ರಿಂದ ೧೯೬೪ ರ ವರೆಗೆ ಗ್ರ್ಯಾಂಟ್‌ ಮೆಡಿಕಲ್‌ ಕಾಲೇಜು ಮುಂಬೈಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದರು. ೧೯೬೪ ರಲ್ಲಿ ಮಹಾವಿದ್ಯಾಲಯದ ಗ್ರ್ಯಾಂಟ್‌ ಮೆಡಿಕಲ್‌ ಕಾಲೇಜು ಮ್ಯಾಗ್ಜೀನ್‌  ಇದರ ಸಂಪಾದಕರಾಗಿ ಕಾರ್ಯನಿರ್ವಹಿಸಿದರು.

ಪಠ್ಯೇತರ ಹವ್ಯಾಸಗಳು, ಶಿಕ್ಷಣ ಮತ್ತು ಕೌಶಲ್ಯಗಳು

ಹಗ್ಗದ ಸಹಾಯದಿಂದ ಪರ್ವತವನ್ನು ಹತ್ತುತ್ತಿರುವ ಡಾ. ಜಯಂತ ಆಠವಲೆ

ಕಲೆ

ಸಂಗೀತ-ಹಾರ್ಮೋ ನಿಯಂ, ಬುಲ್ಬುಲ್‌ ತರಂಗ್‌ ಮತ್ತು ಮೌತ್‌ ಆರ್ಗನ್‌ ನುಡಿಸುವುದು ಮತ್ತು ಚಿತ್ರಕಲಾ ಸ್ಪರ್ಧಾ ತ್ಮಕ ಪರೀಕ್ಷೆಗಳನ್ನು ನೀಡುವುದು.

ಕ್ರೀಡೆ

ನೆಲದ ಮೇಲೆ ಸ್ಕೇಟಿಂಗ್‌ ಮಾಡು ವುದು, ಗಾಳಿಪಟ ಹಾರಿ ಸುವುದು, ಈಜುವುದು, ಟೇಬಲ್‌ ಟೆನ್ನಿಸ್‌ ಆಡು ವುದು ಮತ್ತು ಹಾಕಿ ಕಲಿಯುವುದು.

ಇತರ ಶಿಕ್ಷಣ

ಹಿಂದಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನೀಡುವುದು, ರಾಷ್ಟ್ರೀಯ ವಿದ್ಯಾರ್ಥಿ ದಳದಲ್ಲಿ (ಎನ್‌.ಸಿ.ಸಿ.) ಭಾಗವಹಿಸುವುದು ಮತ್ತು ಬೆರಳಚ್ಚು (ಟೈಪಿಂಗ್) ಕಲಿಯುವುದು.

ಕೌಶಲ್ಯಗಳು

ಧ್ವನಿಮುದ್ರಣ, ಛಾಯಾಚಿತ್ರಗ್ರಹಣ, ಧ್ವನಿ-ಚಿತ್ರೀಕರಣ (ವೀಡಿಯೋಗ್ರಫಿ), ಪರ್ವತಾರೋಹಣ ಮತ್ತು ಕುದುರೆ ಸವಾರಿ. (ಉಲ್ಲೇಖ: ಛಾಯಾಚಿತ್ರಮಯ ಜೀವನದರ್ಶನ ಭಾಗ ೧)

(ಡಾ. ಜಯಂತ ಆಠವಲೆಯವರ ವಿದ್ಯಾರ್ಥಿ ಜೀವನದ ಎಲ್ಲಾ ಹವ್ಯಾಸಗಳು ಅವರಲ್ಲಿನ ‘ಕಲಾತ್ಮಕತೆ’, ‘ಶೌರ್ಯ’, ‘ನಿರ್ಭಯತೆ’ ಮುಂತಾದ ಗುಣಗಳನ್ನು ಬೆಳೆಸಲು ಪೂರಕವಾಗಿದ್ದವು. ಚಲನಚಿತ್ರ, ಪಬ್, ಪಾರ್ಟಿಗಳಲ್ಲಿ ಸಮಯ ವ್ಯರ್ಥ ಮಾಡುವ ಇಂದಿನ ಯುವ ಪೀಳಿಗೆಗೆ ಇದರಿಂದ ಕಲಿಯಲು ಬಹಳಷ್ಟಿದೆ.’ – ಸಂಕಲನಕಾರರು)

ವಿದ್ಯಾರ್ಥಿ ಸಂಘಟನೆಗಳಲ್ಲಿನ ಕಾರ್ಯ

೧. ೧೯೬೫ ರಲ್ಲಿ ಜಯಂತ ರಾಜಕೀಯ ಪಕ್ಷಗಳೊಂದಿಗೆ ಸಂಬಂಧವಿಲ್ಲದ ವಿದ್ಯಾರ್ಥಿ ಸಂಘಟನೆಯಾದ ‘ಯೂತ್‌ ಫೋರಂ’ನ ಸಂಸ್ಥಾಪಕ-ಅಧ್ಯಕ್ಷರಾದರು.

೨. ೧೯೬೯ ರಿಂದ ೧೯೭೧ ರವರೆಗೆ ಅವರು ಶಿವಸೇನೆಯ ‘ವಿದ್ಯಾರ್ಥಿ ಸೇನೆ’ಯ ಸಂಘಟಕರಾಗಿದ್ದರು. ೧೯೭೦ ರಿಂದ ೧೯೭೧ ರ ವರೆಗೆ ಅವರು ‘ಆರ್ಯನ್‌ ಎಜುಕೇಶನ್‌ ಸೊಸೈಟಿ ಮಾಜಿ ವಿದ್ಯಾರ್ಥಿ ಸಂಘ’ದ ಕಾರ್ಯಧ್ಯಕ್ಷರಾಗಿದ್ದನು.


ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಇಂಗ್ಲೆಂಡ್‌ ನಿರ್ಗಮನ, ನೌಕರಿ ಮತ್ತು ಸಂಶೋಧನಾ ಕಾರ್ಯ

ಇಂಗ್ಲೆಂಡ್‌ಗೆ ನಿರ್ಗಮನ

ಮುಂಬೈಯ ವಿವಿಧ ಆಸ್ಪತ್ರೆಗಳಲ್ಲಿ ೫ ವರ್ಷಗಳ ಕಾಲ ನೌಕರಿ ಮಾಡಿದ ನಂತರ, ಡಾ. ಆಠವಲೆ ಅವರು ೪.೭.೧೯೭೧ ರಂದು ಮನೋರೋಗಗಳಿಗೆ ಸಂಮೋಹನ ಚಿಕಿತ್ಸಾ-ಪದ್ಧತಿಗಳ ಬಗ್ಗೆ ಮುಂದಿನ ಸಂಶೋಧನೆಗಾಗಿ ಇಂಗ್ಲೆಂಡ್‌ಗೆ ತೆರಳಿದರು. ಅವರು ೧೯೭೧ ರಿಂದ ೧೯೭೮ ರ ವರೆಗೆ ಬ್ರಿಟನ್‌ನಲ್ಲಿ ನೆಲೆಸಿದ್ದರು.

ಸಂಮೋಹನ ಚಿಕಿತ್ಸೆಗಳ ಸಂಶೋಧನೆಗಾಗಿ ಆಸ್ಪತ್ರೆಯಲ್ಲಿ ನೌಕರಿ

 ಡಾ. ಆಠವಲೆ ಅವರು ೧೯೭೧ ರಿಂದ ೧೯೭೮ ರ ವರೆಗೆ ಬ್ರಿಟನ್‌ನ ‘ಲ್ಯಾನ್‌ಫ್ರೆಚಾ ಗ್ರೇಂಜ್‌ ಹಾಸ್ಪಿಟಲ್’ (ಕುಂಬ್ರಾನ್, ಗ್ವೆಂಟ್, ವೇಲ್ಸ್‌) ಆಸ್ಪತ್ರೆಯಲ್ಲಿ ‘ಡಾಕ್ಟರ್‌’ರಾಗಿ ನೌಕರಿ ಮಾಡುತ್ತ ಸಂಮೋಹನ ಚಿಕಿತ್ಸಾ-ಪದ್ಧತಿಗಳ ಸಂಶೋಧನೆ ಮಾಡಿದರು. ಅಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಗ್ಗೆ ೧೦ ರಿಂದ ೧೨ ರವರೆಗೆ, ಹಾಗೆಯೇ ವಾರದಲ್ಲಿ ಎರಡು ದಿನ ಮತ್ತು ತಿಂಗಳಲ್ಲಿ ಒಂದು ಶನಿವಾರ-ಭಾನುವಾರ ವಸತಿ ಕೆಲಸ ಇತ್ತು. ಆದ್ದರಿಂದ ಉಳಿದ ಸಮಯದಲ್ಲಿ ಅವರು ಕೆಲವು ಆಸ್ಪತ್ರೆಗಳಲ್ಲಿ ‘ಬದಲಿ ಡಾಕ್ಟರ್’ ಆಗಿ ನೌಕರಿ ಮಾಡುತ್ತಿದ್ದರು.

ವೈದ್ಯಕೀಯ ಸಂಶೋಧನಾಕಾರ್ಯ

೧. ಮನೋರೋಗಗಳಿಗೆ ಸಂಮೋಹನ ಚಿಕಿತ್ಸಾ-ಪದ್ಧತಿ ಸಂಶೋಧನೆ

‘ಅಯೋಗ್ಯ ಕೃತ್ಯದ ಅರಿವು ಮತ್ತು ಅದರ ನಿಯಂತ್ರಣ, ಅಯೋಗ್ಯ ಪ್ರತಿಕ್ರಿಯೆಗಳ ಜಾಗದಲ್ಲಿ ಯೋಗ್ಯ ಪ್ರತಿಕ್ರಿಯೆಗಳನ್ನು ನಿರ್ಮಿಸುವುದು, ಪ್ರಸಂಗದ ಬಗ್ಗೆ ಮನಸ್ಸಿನಲ್ಲಿ ಅಭ್ಯಾಸ ಮಾಡುವುದು’ ಇತ್ಯಾದಿ ಸ್ವಸಂಮೋಹನ ಚಿಕಿತ್ಸೆಗಳ ನಾವೀನ್ಯಪೂರ್ಣ ಪದ್ಧತಿ ಕಂಡುಹಿಡಿದರು.

೨. ಶಾರೀರಿಕ ರೋಗದ ಬಗ್ಗೆ ಶೋಧ ಕಾರ್ಯ

‘ಇಸಿನೋಫಿಲಿಯಾ’ ಎಂಬ ಕೋಶಗಳ ರೋಗವು ಮಾನಸಿಕ ಒತ್ತಡದಿಂದ ಆಗಬಹುದು’, ಎಂಬುದನ್ನು ಮೊದಲು ಕಂಡುಹಿಡಿದರು.

೩. ಇತರ ಸಂಶೋಧನೆಗಳು

ಕಿವಿ ಪರೀಕ್ಷಿಸುವ ಪ್ಲಾಸ್ಟಿಕ್‌ನ ಒಮ್ಮೆ ಉಪಯೋಗಿಸಿ ಬಿಸಾಡುವ ಉಪಕರಣ (ಡಿಸ್ಪೋಸೇಬಲ್‌ ಓರಲ್‌ ಸ್ಪೆಕ್ಯುಲಮ್) ವನ್ನು ವೈದ್ಯಕೀಯ ಶಾಸ್ತ್ರದಲ್ಲಿ ಮೊದಲು ತಯಾರಿಸಿದರು.

ಭಾರತಕ್ಕೆ ಪುನರಾಗಮನ ಮತ್ತು ‘ಸಂಮೋಹನ ಚಿಕಿತ್ಸಾ ತಜ್ಞ’ರಾಗಿ ಮಾಡಿದ ಕಾರ್ಯ

ಡಾ. ಆಠವಲೆ ಅವರು ೧೧.೬.೧೯೭೮ ರಂದು ಇಂಗ್ಲೆಂಡ್‌ನಿಂದ ಭಾರತಕ್ಕೆ ಮರಳಿದ ನಂತರ ಮುಂಬೈನಲ್ಲಿ ‘ಸಂಮೋಹನ ಚಿಕಿತ್ಸಾತಜ್ಞ’ರಾಗಿ ವೈದ್ಯಕೀಯ ವ್ಯವಸಾಯ ಪ್ರಾರಂಭಿಸಿದರು. ನಂತರ ಡಾ. ಆಠವಲೆ ಅವರು ರೋಗಿಗಳ ಅನುಕೂಲಕ್ಕಾಗಿ ತೊದಲುವಿಕೆ, ಲೈಂಗಿಕ ಸಮಸ್ಯೆಗಳು ಇತ್ಯಾದಿ ತೊಂದರೆಗಳ ಮರಾಠಿ, ಗುಜರಾತಿ, ಹಿಂದಿ, ಕೊಂಕಣಿ, ಆಂಗ್ಲ ಮುಂತಾದ ಭಾಷೆಗಳಲ್ಲಿ ಮಾಹಿತಿಪತ್ರ ಸಿದ್ಧಪಡಿಸಿದರು. ಅವರು ‘ದಿನಪತ್ರಿಕೆಗಳಲ್ಲಿ ಲೇಖನ ಬರೆಯುವುದು, ಡಾಕ್ಟರರಿಗೆ ಅಧ್ಯಯನ ತರಗತಿಗಳನ್ನು ತೆಗೆದುಕೊಳ್ಳುವುದು’ ಇತ್ಯಾದಿಗಳ ಮೂಲಕವೂ ಸಂಮೋಹನ ಚಿಕಿತ್ಸೆಗಳ ಪ್ರಸಾರದ ಕಾರ್ಯ ಮಾಡಿದರು.

ಸಂಮೋಹನ ಚಿಕಿತ್ಸಾ ತಜ್ಞ’ರಾಗಿ ಸಾಮಾಜಿಕ ಬದ್ಧತೆಯಿಂದ ಮಾಡಿದ ವಿವಿಧ ಕಾರ್ಯಗಳು !


೧. ಉಪನ್ಯಾಸಗಳು

ಸಮಾಜಕ್ಕೆ ಸಂಮೋಹನ ಚಿಕಿತ್ಸೆಗಳ ಬಗ್ಗೆ ಮಾಹಿತಿ ಸಿಗಲಿ ಎಂದು ಡಾ. ಆಠವಲೆ ಅವರು ಈ ಕೆಳಗಿನ ವಿಷಯಗಳ ಮೇಲೆ ಉಪನ್ಯಾಸಗಳನ್ನು ನೀಡಿದರು.

ಅ. ವ್ಯಸನಗಳು ಮತ್ತು ಸಂಮೋಹನ ಚಿಕಿತ್ಸೆ

ಆ. ಹಿರಿಯ ನಾಗರಿಕರು ಮತ್ತು ಸ್ವಸಂಮೋಹನ

ಇ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಶ್ನೆಗಳು ಮತ್ತು ಸಂಮೋಹನ ಚಿಕಿತ್ಸೆ

ಈ. ಪೊಲೀಸರು ಮತ್ತು ಸಂಮೋಹನಶಾಸ್ತ್ರ

ಉ. ನ್ಯಾಯವಾದಿಗಳು ಮತ್ತು ಸಂಮೋಹನಶಾಸ್ತ್ರ

ಊ. ಡಾಕ್ಟರರು ಮತ್ತು ಸಂಮೋಹನಶಾಸ್ತ್ರ

ಎ. ಸುಖೀ ಜೀವನಕ್ಕಾಗಿ ಸಂಮೋಹನ

ಐ. ವ್ಯಕ್ತಿತ್ವ ವಿಕಾಸ (ಈ ವಿಷಯದ ಮೇಲೆ ಆಕಾಶವಾಣಿ ಮತ್ತು ‘ಬಹಿಃಶಾಲಾ ಶಿಕ್ಷಣ ಮಂಡಳಿ’ಯಲ್ಲಿ (ಮುಂಬೈ ವಿಶ್ವವಿದ್ಯಾಲಯ) ಉಪನ್ಯಾಸಗಳನ್ನು ನೀಡಿದರು.)

೨. ಪೊಲೀಸರಿಗೆ ತನಿಖೆಗೆ ಸಹಾಯ

ಮುಂಬೈನ ಅಂದಿನ ಪೊಲೀಸ್‌ ಆಯುಕ್ತ ಶ್ರೀ. ಅರವಿಂದ ಇನಾಮದಾರ್‌ ಅವರು ‘ಒಂದು ಕುಟುಂಬದ ಹತ್ಯೆಯ ತನಿಖೆ ಮತ್ತು ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಸ್ಫೋಟದಿಂದ ‘ಏರ್‌ ಇಂಡಿಯಾ’ ವಿಮಾನವನ್ನು ಸ್ಫೋಟಿಸಿದ ಭಯೋತ್ಪಾದಕರಿಂದ ಮಾಹಿತಿ ಪಡೆಯಲು’ ಡಾ. ಆಠವಲೆಯವರನ್ನು ಕರೆಸಿದ್ದರು. ಈ ಕೆಲಸದಲ್ಲಿ ಡಾ. ಆಠವಲೆ ಅವರು ಪೊಲೀಸರಿಗೆ ಉಚಿತವಾಗಿ ಸಹಾಯ ಮಾಡಿದರು.

ಶಿವ (ಮುಂಬೈ)ದಲ್ಲಿ ಸ್ವಂತ ಚಿಕಿತ್ಸಾಲಯದ ಆರಂಭ

ಡಾ. ಆಠವಲೆ ಅವರು ‘ಸಂಮೋಹನತಜ್ಞ’ರಾಗಿ ಅಲ್ಲ, ‘ಸಂಮೋಹನ ಚಿಕಿತ್ಸಾ ತಜ್ಞ’ರಾಗಿ ಪ್ರಖ್ಯಾತರಾಗಿದ್ದರು ! ಅವರು ತಮ್ಮ ಚಿಕಿತ್ಸಾಲಯದ ಕಾಯುವ ಕೋಣೆಯಲ್ಲಿ ರೋಗಿಗಳಿಗೆ ‘ಸಂಮೋಹನ ಚಿಕಿತ್ಸಾ ಪದ್ಧತಿ’ಗಳ ಬಗ್ಗೆ ಮಾಹಿತಿ ನೀಡುವ ಭಿತ್ತಿಪತ್ರಗಳನ್ನು ಹಾಕಿದ್ದರು, ಹಾಗೆಯೇ ‘ವಿವಿಧ ರೋಗಗಳಿಗೆ ‘ಸಂಮೋಹನ ಚಿಕಿತ್ಸೆ’ಯನ್ನು ಹೇಗೆ ಮಾಡಲಾಗುತ್ತದೆ ?’ ಎಂಬ ಮಾಹಿತಿಯನ್ನು ನೀಡುವ ಮುದ್ರಿತ ಲೇಖನಗಳನ್ನು ಸಹ ಇಟ್ಟಿದ್ದರು.

ಅಂತಾರಾಷ್ಟ್ರೀಯ ಕೀರ್ತಿಯ ಸಂಮೋಹನ ಚಿಕಿತ್ಸಾತಜ್ಞರಾಗಿ ಕೀರ್ತಿ ಹೊಂದುವುದು

೧. ೧೯೭೮ ರಿಂದ ೧೯೯೩ ರ ವರೆಗೆ ಡಾ. ಆಠವಲೆ ಅವರು ೫೦೦ ಕ್ಕೂ ಹೆಚ್ಚು ಡಾಕ್ಟರ್ಸ್‌, ದಂತ ತಜ್ಞರು, ಮಾನಸೋಪಚಾರ ತಜ್ಞರು ಮುಂತಾದವರಿಗೆ ಸಂಮೋಹನಶಾಸ್ತ್ರ ಮತ್ತು ಸಂಮೋಹನ-ಚಿಕಿತ್ಸೆಯ ಸಿದ್ಧಾಂತಗಳು ಮತ್ತು ಪ್ರಾಯೋಗಿಕವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಿದರು.

೨. ೧೯೯೪ ರಲ್ಲಿ ಡಾ. ಆಠವಲೆ ಅವರು ವೈದ್ಯಕೀಯ ವ್ಯವಸಾಯವನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಆಗ ಅವರು ೧ ಸಾವಿರದ ರೋಗಿಗಳಿಗೆ ನೀಡಿದ ಸಂಮೋಹನ ಚಿಕಿತ್ಸೆಗಳ ಪರಿಪೂರ್ಣ ಮಾಹಿತಿ (ಕೇಸ್‌ ಸ್ಟಡಿ) ಹೊಂದಿರುವ ಜಗತ್ತಿನ ಅತಿ ದೊಡ್ಡ ಸಂಗ್ರಹವನ್ನು ಹೊಂದಿದ್ದರು. ಅರ್ಧಕ್ಕೆ ನಿಂತ ಚಿಕಿತ್ಸೆಗಳು ಅಥವಾ ಚಿಕಿತ್ಸೆ ಪೂರ್ಣಗೊಂಡ ನಂತರ ಫಾಲೋ ಅಪ್‌ ಮಾಡಲಾಗದ ರೋಗಿಗಳು ಅದರಲ್ಲಿ ಸೇರಿರಲಿಲ್ಲ.

೩. ‘ಡಾ. ಆಠವಲೆಯವರ ಸಂಮೋಹನ ಚಿಕಿತ್ಸಾ ಪದ್ಧತಿಯನ್ನು ಕಲಿಸುವ ಗ್ರಂಥಗಳು, ಸತತ ೫ ವರ್ಷ ‘ಭಾರತೀಯ ವೈದ್ಯಕೀಯ ಸಂಮೋಹನ ಮತ್ತು ಸಂಶೋಧನಾ ಪತ್ರಿಕೆ’ಯ ಸಂಪಾದನೆ, ಜನಪ್ರಿಯ ನಿಯತಕಾಲಿಕೆಗಳಲ್ಲಿ ಪ್ರಕಟವಾದ ೧೨೩ ಕ್ಕೂ ಹೆಚ್ಚು ಲೇಖನಗಳು, ವಿದೇಶದಲ್ಲಿ ಮೆಚ್ಚುಗೆ ಪಡೆದ ಸಂಶೋಧನಾ ಪ್ರಬಂಧಗಳು’, ಇವು ಅವರ ವೈದ್ಯಕೀಯ ಕ್ಷೇತ್ರದ ಯಶಸ್ವಿ ವೃತ್ತಿಜೀವನದ, ಹಾಗೆಯೇ ಅಧ್ಯಯನಶೀಲ ಮತ್ತು ಅನನ್ಯ ಸಂಶೋಧನೆಯ ಫಲಿತಾಂಶವಾಗಿದೆ.

‘ಭಾರತೀಯ ವೈದ್ಯಕೀಯ ಸಂಮೋಹನ ಮತ್ತು ಸಂಶೋಧನಾ ಸಂಸ್ಥೆ’ಯ ಸ್ಥಾಪನೆ ಮತ್ತು ಅದರಿಂದ ಮಾಡಿದ ಕಾರ್ಯ

ಡಾ. ಆಠವಲೆಯವರ ಎದುರು ವಿವಿಧ ಸ್ವರದಲ್ಲಿ ಹಾಡುತ್ತಿರುವ ಸಂಮೋಹಿತ ವಿದ್ಯಾರ್ಥಿ

ಡಾ. ಆಠವಲೆ ಅವರು ೧.೧.೧೯೮೨ ರಂದು ‘ಭಾರತೀಯ ವೈದ್ಯಕೀಯ ಸಂಮೋಹನ ಮತ್ತು ಸಂಶೋಧನಾ ಸಂಸ್ಥೆ (ದಿ ಇಂಡಿಯನ್‌ ಸೊಸೈಟಿ ಫಾರ್‌ ಕ್ಲಿನಿಕಲ್‌ ಹಿಪ್ನೋಸಿಸ್‌ ಅಂಡ್‌ ರಿಸರ್ಚ್‌)’ ಸ್ಥಾಪಿಸಿದರು. ‘ಅಂತಾರಾಷ್ಟ್ರೀಯ ಸಂಮೋಹನ ಸಂಸ್ಥೆ’ಗೆ ಸಂಯೋಜಿತವಾದ ಈ ಸಂಸ್ಥೆಯ ಉದ್ದೇಶಗಳು ‘ವೈದ್ಯಕೀಯ ದೃಷ್ಟಿಕೋನದಿಂದ ಸಂಮೋಹನ ಶಾಸ್ತ್ರದ ಬಗ್ಗೆ ಸಂಶೋಧನೆ ಮಾಡುವುದು ಮತ್ತು ಭಾರತದಲ್ಲಿ ಸಂಮೋಹನ ಚಿಕಿತ್ಸಾ ಪದ್ಧತಿಗಳನ್ನು ಪ್ರಸಾರ ಮಾಡುವುದು’ ಆಗಿದ್ದವು. ಈ ಸಂಸ್ಥೆಯಲ್ಲಿ ೮ ರಿಂದ ೧೦ ವೈದ್ಯರು ಸಂಶೋಧನೆಯಲ್ಲಿ ತೊಡಗಿದ್ದರು. ಈ ಸಂಸ್ಥೆಯ ಮೂಲಕ ಡಾಕ್ಟರ್, ದಂತವೈದ್ಯರು, ಮನೋವಿಜ್ಞಾನಿಗಳು (ಸೈಕಾಲಜಿಸ್ಟ್‌) ಮತ್ತು ಮಾನಸೋಪಚಾರತಜ್ಞ ಮುಂತಾದವರಿಗೆ ೧೯೮೨ ರಿಂದ ೧೯೮೬ ರವರೆಗೆ ಮುಂಬೈ, ಬಡೋದಾ, ಕೊಲಕಾತಾ ಇತ್ಯಾದಿ ಸ್ಥಳಗಳಲ್ಲಿ ಸಂಮೋಹನ ಚಿಕಿತ್ಸಾ ಶಾಸ್ತ್ರದ ಅಧ್ಯಯನ ತರಗತಿಗಳನ್ನು ಆಯೋಜಿಸಿ ಸುಮಾರು ೪೦೦ ತಜ್ಞರಿಗೆ ತರಬೇತಿ ನೀಡಲಾಯಿತು.

ಸಂಮೋಹನಶಾಸ್ತ್ರ ಮತ್ತು ಸಂಮೋಹನ-ಚಿಕಿತ್ಸೆಗಳ ವಿಷಯದ ಗ್ರಂಥ ಸಂಪತ್ತು !

ಡಾ. ಆಠವಲೆ ಅವರು ಬರೆದ ‘ದಿ ಇಂಡಿಯನ್‌ ಜರ್ನಲ್‌ ಆಫ್‌ ಕ್ಲಿನಿಕಲ್‌ ಹಿಪ್ನೋಸಿಸ್‌ ಅಂಡ್‌ ರಿಸರ್ಚ್‌’ನ ೧ ರಿಂದ ೫ ಭಾಗಗಳು (೧೯೮೩-೧೯೮೭), ‘ಹಿಪ್ನೋಥೆರಪಿ ಅಕಾರ್ಡಿಂಗ್‌ ಟು ದಿ ಪರ್ಸನಾಲಿಟಿ ಡಿಫೆಕ್ಟ್ ಮಾಡೆಲ್‌ ಆಫ್‌ ಸೈಕೋಥೆರಪಿ’, ‘ಸಂಮೋಹನ ಶಾಸ್ತ್ರ’, ‘ಸುಖೀ ಜೀವನಕ್ಕಾಗಿ ಸಂಮೋಹನ ಚಿಕಿತ್ಸೆ’, ‘ಶಾರೀರಿಕ ರೋಗಗಳಿಗೆ ಸ್ವಸಂಮೋಹನ ಚಿಕಿತ್ಸೆ’, ‘ಲೈಂಗಿಕ ಸಮಸ್ಯೆಗಳಿಗೆÉ ಸ್ವಸಂಮೋಹನ ಚಿಕಿತ್ಸೆ’, ‘ಮನೋರೋಗಗಳಿಗೆ ಸ್ವಸಂಮೋಹನ ಚಿಕಿತ್ಸೆ’ (೨ ಭಾಗಗಳು), ‘ಸ್ವಭಾವದೋಷ-ನಿರ್ಮೂಲನೆ ಮತ್ತು ಗುಣಸಂವರ್ಧನೆ ಪ್ರಕ್ರಿಯೆ’ (೩ ಭಾಗಗಳು), ಈ ಗ್ರಂಥಗಳು; ಜನಪ್ರಿಯ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಅವರ ೧೨೩ ಲೇಖನಗಳು ಮತ್ತು ವಿದೇಶದಲ್ಲಿ ಮೆಚ್ಚುಗೆ ಪಡೆದ ಸಂಶೋಧನಾ ಪ್ರಬಂಧಗಳು ಅವರ ವೈದ್ಯಕೀಯ ಕ್ಷೇತ್ರದ ಯಶಸ್ವಿ ವೃತ್ತಿಜೀವನದ, ಹಾಗೆಯೇ ಸಂಮೋಹನ-ಚಿಕಿತ್ಸೆಗಳ ಅಧ್ಯಯನಶೀಲ ಮತ್ತು ಅನನ್ಯ ಸಂಶೋಧನೆಯ ಫಲಿತಾಂಶವಾಗಿದೆ. ‘ಸಂಮೋಹನ ಚಿಕಿತ್ಸಾ ತಜ್ಞ’ ಎಂದು ಸತ್ಕಾರ  ೧.೫.೧೯೮೮ ರಂದು ಮುಂಬೈನ ‘ಚತುರಂಗ ಪ್ರತಿಷ್ಠಾನ’ವು ‘ಸಂಮೋಹನ ಚಿಕಿತ್ಸಾಶಾಸ್ತ್ರದಲ್ಲಿ ಪ್ರಾವೀಣ್ಯ ಪಡೆದ ಭಾರತದ ಮೊದಲ ಡಾಕ್ಟರ್’ ಎಂದು ಸತ್ಕರಿಸಿತು. ೧೯೮೭ ರಲ್ಲಿ ಗೋವಾದ ಮ್ಹಾಪ್ಸಾ ಎಂಬಲ್ಲಿ ಸಂಮೋಹನ ಮತ್ತು ಅಧ್ಯಾತ್ಮಶಾಸ್ತ್ರದ ವ್ಯಾಖ್ಯಾನ ನೀಡುತ್ತಿರುವ ಡಾ. ಆಠವಲೆ  (೪೫ ವರ್ಷ)  ವ್ಯಾಖ್ಯಾನಕ್ಕೆ ಉಪಸ್ಥಿತ ಜಿಜ್ಞಾಸು ಡಾಕ್ಟರ ಹಾಗೂ ಸಂಮೋಹನ ಉಪಚಾರ ತಜ್ಞರು ಡಾ. ಆಠವಲೆಯವರ ಎದುರು ವಿವಿಧ ಸ್ವರದಲ್ಲಿ ಹಾಡುತ್ತಿರುವ ಸಂಮೋಹಿತ ವಿದ್ಯಾರ್ಥಿ