ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು
ಓದಿರಿ ಹೊಸ ಲೇಖನಮಾಲೆ : ‘ಸನಾತನದ ದೈವಿ ಬಾಲಕರ ಅಲೌಕಿಕ ಗುಣವೈಶಿಷ್ಟ್ಯಗಳು’
ಪರಾತ್ಪರ ಗುರು ಡಾ. ಆಠವಲೆ ಇವರ ಸಂಕಲ್ಪದಂತೆ ಕೆಲವು ವರ್ಷಗಳಲ್ಲೇ ಈಶ್ವರೀ ರಾಜ್ಯ ಸ್ಥಾಪನೆಯಾಗಲಿದೆ. ಬಹಳಷ್ಟು ಜನರ ಮನಸ್ಸಿನಲ್ಲಿ ‘ಈ ಹಿಂದೂ ರಾಷ್ಟ್ರವನ್ನು ಮುನ್ನಡೆಸುವವರು ಯಾರು ?’ ಎಂಬ ಪ್ರಶ್ನೆ ಬರುತ್ತದೆ. ಈಶ್ವರನು ಉಚ್ಚ ಲೋಕದಿಂದ ದೈವಿ ಬಾಲಕರನ್ನು ಪೃಥ್ವಿಯ ಮೇಲೆ ಜನ್ಮ ಪಡೆಯಲು ಕಳುಹಿಸಿದ್ದಾರೆ. ಅವರಲ್ಲಿರುವ ಪ್ರಬುದ್ಧ ವಿಚಾರ ಮತ್ತು ಅಲೌಕಿಕ ವೈಶಿಷ್ಟ್ಯಗಳನ್ನು ಈ ಮಾಲಿಕೆಯ ಅಂರ್ತಗತ ಪ್ರಕಟಿಸುತ್ತಿದ್ದೇವೆ.
ಈ ಲೇಖನದ ಹಿಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/56795.html |
ತಾಯಿ-ತಂದೆಯರೇ, ದೈವಿ ಬಾಲಕರ ಸಾಧನೆಗೆ ವಿರೋಧಿಸದೇ ಅವರ ಸಾಧನೆಯತ್ತ ಗಮನ ಹರಿಸಿ !‘ಕೆಲವು ದೈವಿ ಬಾಲಕರ ಆಧ್ಯಾತ್ಮಿಕ ಮಟ್ಟ ಎಷ್ಟು ಒಳ್ಳೆದಿರುತ್ತದೆ ಎಂದರೆ ಅವರು ೨೦-೨೫ ವಯಸ್ಸನ್ನು ತಲುಪುವುದರೊಳಗೆ ಸಂತರಾಗಬಹುದು. ತಾಯಿ-ತಂದೆಯರು ಇಂತಹ ಬಾಲಕರಿಗೆ ಪೂರ್ಣವೇಳೆ ಸಾಧನೆ ಮಾಡಲು ವಿರೋಧಿಸುತ್ತಾರೆ ಮತ್ತು ಅವರಿಗೆ ಮಾಯೆಯಲ್ಲಿನ ಶಿಕ್ಷಣ ನೀಡಿ ಅವರ ಜೀವನವನ್ನು ವ್ಯರ್ಥಗೊಳಿಸುತ್ತಾರೆ. ಸಾಧಕನಿಗೆ ಸಾಧನೆಗೆ ವಿರೋಧ ಮಾಡುವಷ್ಟು ಮಹಾಪಾಪ ಇನ್ನೊಂದಿಲ್ಲ. ಇದನ್ನು ಗಮನದಲ್ಲಿಟ್ಟು ತಾಯಿ-ತಂದೆಯರು ಮಕ್ಕಳ ಸಾಧನೆ ಒಳ್ಳೆಯದಾಗಲು ಗಮನಹರಿಸಿದರೆ ತಾಯಿ-ತಂದೆಯರ ಸಾಧನೆಯಾಗಿ ಅವರೂ ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗುವರು ! – ಪರಾತ್ಪರ ಗುರು ಡಾ. ಆಠವಲೆ (೧೮.೧೦.೨೦೨೧) |
ಕು. ಅಪಾಲಾ ಮೇ ತಿಂಗಳಿನಲ್ಲಿ ಗೋವಾದಲ್ಲಿನ ನಮ್ಮ ಮನೆಗೆ (ಅಜ್ಜಿಯ ಮನೆಗೆ) ಬಂದಿದ್ದಳು. ಆಗ ಅವಳ ಚಿಕ್ಕ ವಯಸ್ಸಿನಲ್ಲಿನ ‘ಸಾಧನೆಯ ತಳಮಳ ಮತ್ತು ಗುರುಚರಣಗಳ ಹತ್ತಿರ ಹೋಗುವ ಸೆಳೆತ’ ಇವು ನಮಗೆ ಅನುಭವಿಸಲು ಸಿಕ್ಕವು.
೧. ಹಗಲುರಾತ್ರಿ ‘ಗುರುಚರಣಗಳ ಹತ್ತಿರ ಹೋಗುವುದಿದೆ’, ಎಂಬ ಒಂದೇ ಹಂಬಲವಿರುವುದು
ಅಪಾಲಾ ಗೋವಾಕ್ಕೆ ಬಂದಾಗ, ಸಂಚಾರ ಸಾರಿಗೆ ನಿರ್ಬಂಧ ಇದ್ದುದರಿಂದ ಅವಳಿಗೆ ಬೇಗನೆ ಆಶ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅವಳಲ್ಲಿ ಗುರುಚರಣಗಳ ಹತ್ತಿರ ಹೋಗುವ ತಳಮಳ ತುಂಬಾ ಇತ್ತು. ಅವಳಿಗೆ ಆಶ್ರಮಕ್ಕೆ ಬರುವ ಸಂದೇಶ ಬರುವವರೆಗೆ ಅವಳ ಸ್ಥಿತಿಯು ‘ನೀರಿಲ್ಲದ ಮೀನಿನಂತೆ’ ಆಗಿತ್ತು.
೨. ಭಾವವೃದ್ಧಿ ಪ್ರಯೋಗವನ್ನು ಮಾಡುವಾಗ ಅವಳು ‘ಸಾಕ್ಷಾತ್ ಪರಾತ್ಪರ ಗುರುದೇವರ ಎದುರಿಗೆ ಕುಳಿತು ಅವರಿಗೆ ಸಾಧನೆಯ ಬಗೆಗಿನ ಪ್ರಶ್ನೆಗಳನ್ನು ಕೇಳುತ್ತಿದ್ದಾಳೆ ಮತ್ತು ಗುರುದೇವರು ಅವಳಿಗೆ ಅವುಗಳ ಉತ್ತರಗಳನ್ನೂ ಹೇಳುತ್ತಿದ್ದಾರೆ’, ಎಂಬ ಭಾವವನ್ನಿಡುವುದು
ಆ ಕಾಲಾವಧಿಯಲ್ಲಿ ಅವಳು ಪರಾತ್ಪರ ಗುರು ಡಾ. ಆಠವಲೆಯವರನ್ನು ನೆನಪಿಸುವ ಸತತವಾಗಿ ಭಾವಾವಸ್ಥೆಯಲ್ಲಿರುತ್ತಿದ್ದಳು. ಅವಳಲ್ಲಿ ಪರಾತ್ಪರ ಗುರುದೇವರ ಸೆಳೆತ ನಿರ್ಮಾಣವಾಗಿದ್ದರಿಂದ ಕ್ರಮೇಣ ಅವಳ ಊಟ-ತಿಂಡಿಯ ಆಸಕ್ತಿಯೂ ಕಡಿಮೆ ಆಯಿತು. ಈ ಮೊದಲು ಅವಳು ಮನೆಗೆ ಬಂದಾಗ ನನ್ನ ಬಳಿ ತನಗೆ ಇಷ್ಟವಾದ ಪದಾರ್ಥಗಳನ್ನು ಮಾಡಲು ಹೇಳುತ್ತಿದ್ದಳು; ಆದರೆ ಈ ಸಮಯದಲ್ಲಿ ಅವಳಲ್ಲಿ ಇತರ ಬಾಹ್ಯ ವಿಷಯಗಳ ಆಸಕ್ತಿಯೇ ಇರಲಿಲ್ಲ. ನಮ್ಮೆಲ್ಲರ ಊಟವಾದರೂ ಅವಳು ಊಟಕ್ಕೆ ಬರುತ್ತಿರಲಿಲ್ಲ. ಆ ಸಮಯದಲ್ಲಿ ಅವಳು ಭಾವವೃದ್ಧಿಗಾಗಿ ಪ್ರಯೋಗ ಮತ್ತು ಪ್ರಾರ್ಥನೆಯನ್ನು ಮಾಡುತ್ತಿದ್ದಳು. ಆ ಸಮಯದಲ್ಲಿ ‘ಅವಳು ಸಾಕ್ಷಾತ್ ಗುರುದೇವರ ಎದುರಿಗೆ ಕುಳಿತುಕೊಂಡು ಅವರಿಗೆ ಸಾಧನೆಯ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದಾಳೆ ಮತ್ತು ಗುರುದೇವರು ಅವಳಿಗೆ ಉತ್ತರಗಳನ್ನೂ ಕೊಡುತ್ತಿದ್ದಾರೆ’, ಎಂಬ ಭಾವ ಅವಳಲ್ಲಿ ಇರುತ್ತಿತ್ತು. ಅವಳ ಈ ಪ್ರಯತ್ನಗಳನ್ನು ನೋಡಿ ನಮ್ಮ ಭಾವಜಾಗೃತಿಯಾಗುತ್ತಿತ್ತು.
೩. ಅಪಾಲಾಳು ಭಾವಪ್ರಯೋಗ ಮತ್ತು ನೃತ್ಯಾಭ್ಯಾಸವನ್ನು ಮಾಡುವಾಗ ಹಸಿವು-ನೀರಡಿಕೆಯನ್ನು ಮರೆತು ಅನುಭವಿಸಿದ ಭಾವಪ್ರಯೋಗವನ್ನು ಬರೆಯುವುದು ಹಾಗು ಅವಳ ಬರೆದಿದ್ದನ್ನು ಓದುವಾಗ ಭಾವಜಾಗೃತಿಯಾಗುವುದು
ಒಮ್ಮೆ ಅವಳು ಮನೆಯಲ್ಲಿದ್ದಾಗ ಮಧ್ಯಾಹ್ನ ಊಟದ ಸಮಯವಾಗಿತ್ತು. ನಾನು ಎಲ್ಲರಿಗೂ “ಊಟಕ್ಕೆ ಬನ್ನಿರಿ”, ಎಂದು ಹೇಳಿದೆ, ಆಗ ಅಪಾಲಾಳು, “ನಾನು ೫ ನಿಮಿಷಗಳ ನಂತರ ಬರುತ್ತೇನೆ, ಅಲ್ಲಿಯವರೆಗೆ ನೀವು ಊಟಕ್ಕೆ ಕುಳಿತುಕೊಳ್ಳಿ”, ಎಂದಳು. ಅವಳು ಕೋಣೆಯಲ್ಲಿ ಭಾವಪ್ರಯೋಗ ಮತ್ತು ನೃತ್ಯಾಭ್ಯಾಸವನ್ನು ಮಾಡತೊಡಗಿದಳು. ನಮ್ಮೆಲ್ಲರ ಊಟವಾದರೂ ಅವಳು ಕೋಣೆಯಿಂದ ಹೊರಗೆ ಬರಲಿಲ್ಲ; ಆದುದರಿಂದ ‘ಮಲಗಿರಬಹುದು ಏನೋ ನೋಡೊಣ ಎಂದೆನಿಸಿ ನಾನು (ಸೌ. ಸುಜಾತಾ ರೇಣಕೆ) ಕೋಣೆಯೊಳಗೆ ಹೋದೆನು. ಆಗ ನನಗೆ ‘ಅಪಾಲಾಳು ತಾನು ಶಾಂತ ರೀತಿಯಿಂದ ಅನುಭವಿಸಿದ ಭಾವಪ್ರಯೋಗವನ್ನು ಬರೆಯುತ್ತಿರುವುದು ಕಾಣಿಸಿತು. ಅವಳು ಒಂದರ ಹಿಂದೆ ಒಂದು ಹೀಗೆ ೮ ಪುಟಗಳನ್ನು ಬರೆದಿದ್ದಳು. ಅವಳ ಬರವಣಿಗೆಯಲ್ಲಿ ಎಲ್ಲಿಯೂ ತಿದ್ದುಪಡಿ ಇರಲಿಲ್ಲ. ಅವಳು ಬರೆದ ಬರವಣಿಗೆಯನ್ನು ಓದುವಾಗ ನಮ್ಮ ಭಾವಜಾಗೃತವಾಯಿತು.
೪. ‘ಅವಳನ್ನು ಆಶ್ರಮಕ್ಕೆ ಕರೆದ ದಿನ ರಾತ್ರಿ ಅವಳಿಗೆ ಶಾಂತ ನಿದ್ರೆ ಬಂದಿತು’, ಎಂದು ಅವಳು ನನಗೆ ಹೇಳಿದಳು. ‘ಅವಳ ಈ ಮಾತುಗಳನ್ನು ಕೇಳಿ ನಮಗಿಬ್ಬರಿಗೂ, ‘ಈ ಜೀವವು ಕೇವಲ ಸಾಧನೆಗಾಗಿಯೇ ಪೃಥ್ವಿಯ ಮೇಲೆ ಬಂದಿದೆ’, ಎಂದು ಅನಿಸಿತು.
೫. ಕೃತಜ್ಞತೆ ಮತ್ತು ಪ್ರಾರ್ಥನೆ
ಹೇ ಗುರುದೇವಾ, ನಮಗೆ ಅಪಾಲಾಳಿಂದ ಗುರುಗಳ ಬಗೆಗಿರಬೇಕಾದ ಭಾವ, ತಳಮಳ ಮುಂತಾದ ಅನೇಕ ವಿಷಯಗಳು ಕಲಿಯಲು ಸಿಕ್ಕವು. ತಮ್ಮ ಕೃಪೆಯಿಂದಲೇ ನಮಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಾಧನೆಯ ತೀವ್ರ ತಳಮಳವಿರುವ ಮೊಮ್ಮಗಳು ಸಿಕ್ಕಳು. ಗುರುದೇವಾ, ನಾವು ಧನ್ಯ ಧನ್ಯರಾದೆವು. ‘ಅಪಾಲಾಳಂತೆ ನಮ್ಮಲ್ಲಿಯೂ ಗುರುಚರಣಗಳ ಹತ್ತಿರ ಹೋಗುವ ಸೆಳೆತ ನಿರ್ಮಾಣವಾಗಲಿ, ಇದೇ ತಮ್ಮಲ್ಲಿ ಪ್ರಾರ್ಥನೆ !
– ಶ್ರೀ. ಅಶೋಕ ರೇಣಕೆ ಮತ್ತು ಸೌ. ಸುಜಾತಾ ರೇಣಕೆ (ಕು. ಅಪಾಲಾಳ ಅಜ್ಜಿ-ಅಜ್ಜ (ತಾಯಿಯ ತಾಯಿ-ತಂದೆ), ಸನಾತನ ಆಶ್ರಮ, ರಾಮನಾಥಿ, ಗೋವಾ. (೨.೧೧.೨೦೨೧)
ಸಮಷ್ಟಿ ಪ್ರಕೃತಿ ಇದ್ದರೂ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಸುಂದರ ಸಂಗಮವಿರುವ ರಾಮನಾಥಿ ಆಶ್ರಮದಲ್ಲಿನ ಅಲೌಕಿಕ ದೈವೀ ಬಾಲಕರು !‘ಗೋವಾದಲ್ಲಿನ ಸನಾತನ ಸಂಸ್ಥೆಯ ರಾಮನಾಥಿ ಆಶ್ರಮ’ದಲ್ಲಿ ದೈವೀ ಬಾಲಕರ ಸತ್ಸಂಗದಲ್ಲಿ ನಾನು ಅನುಭವಿಸಿರುವ ಕೆಲವು ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇನೆ. ೧. ಹೆಚ್ಚಾಗಿ ಸಮಷ್ಟಿ ಪ್ರಕೃತಿಯಿರುವ ಸಾಧಕರಿಗೆ ವ್ಯಷ್ಟಿ ಸಾಧನೆಯನ್ನು ಮಾಡುವ ಗಾಂಭೀರ್ಯತೆ ಇಲ್ಲದಿರುವುದರಿಂದ ಅವರ ಸ್ವಭಾವದೋಷಗಳು ಕಡಿಮೆ ಆಗದಿರುವುದು ಮತ್ತು ಪ್ರಗತಿಯೂ ಆಗದಿರುವುದು‘ಧರ್ಮಪ್ರಸಾರವನ್ನು ಮಾಡುವಾಗ ನನಗೆ, ‘ಸಾಮಾನ್ಯವಾಗಿ ಸಮಷ್ಟಿ ಪ್ರಕೃತಿ ಇರುವ ಸಾಧಕರಲ್ಲಿ ವ್ಯಷ್ಟಿ ಸಾಧನೆಯ ಸೆಳೆತ ಅಷ್ಟೊಂದು ಇರುವುದಿಲ್ಲ’, ಎಂದು ಅರಿವಾಯಿತು. ಸಮಷ್ಟಿ ಸಾಧಕರ ವೃತ್ತಿಯು ಬಹಿರ್ಮುಖವಾಗಿರುವುದರಿಂದ ಅವರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಆಗುವುದಿಲ್ಲ; ಆದುದರಿಂದ ಕೆಲವೊಮ್ಮೆ ಅನೇಕ ವರ್ಷಗಳ ವರೆಗೆ ಸಾಧನೆಯನ್ನು ಮಾಡಿದರೂ ಅವರ ಅಪೇಕ್ಷಿತ ಪ್ರಗತಿ ಆಗುವುದಿಲ್ಲ. ಅವರಿಗೆ ಆಗಾಗ ವ್ಯಷ್ಟಿ ಸಾಧನೆಯನ್ನು ಮಾಡುವುದರ ಬಗ್ಗೆ ಹೇಳಬೇಕಾಗುತ್ತದೆ. ಅವರು ನಾಮಜಪ ಮತ್ತು ಅವರಿಗೆ ಆಧ್ಯಾತ್ಮಿಕ ತೊಂದರೆಗಳು ಆಗುತ್ತಿರುವಾಗ ಹೇಳಿದ ನಾಮಜಪಾದಿ ಉಪಾಯಗಳನ್ನು ಮಾಡುತ್ತಾರೆ; ಆದರೆ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡಲು ಅವರಿಗೆ ಆಗಾಗ ಹೇಳುತ್ತಿದ್ದರೆ ಅವರು ಕೆಲವು ವರ್ಷಗಳ ನಂತರ ಈ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. ಅನೇಕ ಸಲ ‘ಅವರಿಗೆ ಅವರ ಸ್ವಭಾವದೋಷ ಮತ್ತು ಅಹಂ ಇವುಗಳಿಂದ ಹೇಗೆ ಸಮಷ್ಟಿಯ ಹಾನಿಯಾಗುತ್ತದೆ ?’, ಎಂಬುದನ್ನೂ ಪುನಃ ಪುನಃ ಹೇಳಬೇಕಾಗುತ್ತದೆ. ೨. ಹೆಚ್ಚಿನ ದೈವೀ ಬಾಲಕರಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಗಾಂಭೀರ್ಯತೆ ನೋಡಲು ಸಿಗುವುದು ಮತ್ತು ಚಿಕ್ಕ ವಯಸ್ಸಿನಲ್ಲಿಯೇ ಅವರು ಸ್ವಭಾವದೋಷ ನಿರ್ಮೂಲನೆಗಾಗಿ ಜಾಗರೂಕರಾಗಿರುವುದು ಕಂಡುಬರುವುದು, ಇದರಿಂದ ಅವರಲ್ಲಿನ ಅಸಾಧಾರಣ ಅಲೌಕಿಕತ್ವವು ಕಾಣಿಸುವುದುಹೆಚ್ಚಿನ ದೈವೀ ಬಾಲಕರ ಪ್ರಕೃತಿ ಸಮಷ್ಟಿಯಾಗಿದೆ; ಏಕೆಂದರೆ ಅವರು ಹಿಂದೂ ರಾಷ್ಟ್ರದ ಕಾರ್ಯವನ್ನು ಮಾಡಲು ಈ ಪೃಥ್ವಿಯ ಮೇಲೆ ಜನ್ಮ ತಾಳಿದ್ದಾರೆ. ಆದುದರಿಂದ ಈ ದೈವೀ ಬಾಲಕರಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಸುಂದರ ಸಂಗಮವಾಗಿದೆ. ಕೆಲವು ದೈವೀ ಬಾಲಕರು ಕೇವಲ ೭ ರಿಂದ ೯ ವರ್ಷದವರಾಗಿದ್ದಾರೆ, ಆದರೂ ಅವರು ನಿಯಮಿತವಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸುತ್ತಾರೆ, ಉದಾ. ಯಾವುದಾದರೊಂದು ತಪ್ಪಾದಾಗ ಅದನ್ನು ಪಟ್ಟಿಯಲ್ಲಿ ಮತ್ತು ಆಶ್ರಮದಲ್ಲಿನ ಫಲಕದ ಮೇಲೆ ಬರೆಯುವುದು, ಸ್ವಭಾವದೋಷ ನಿರ್ಮೂಲನೆ ಮಾಡಲು ಸ್ವಯಂ ಸೂಚನೆಗಳನ್ನು ಕೊಡುವುದು, ತಮ್ಮ ಅಹಂನ ಲಕ್ಷಣಗಳ ಬಗ್ಗೆ ಜಾಗರೂಕರಾಗಿರುವುದು ಇತ್ಯಾದಿ. ಅವರ ಮನಸ್ಸಿನಲ್ಲಿ ಅಹಂನ ಬಗ್ಗೆ ವಿಚಾರಗಳು ಬಂದರೆ, ಈ ಬಾಲಕರು ಸತ್ಸಂಗದಲ್ಲಿ ಪ್ರಾಮಾಣಿಕವಾಗಿ ಆತ್ಮನಿವೇದನೆಯನ್ನು ಮಾಡುತ್ತಾರೆ. ಕೇವಲ ೧೦ ವರ್ಷದ ಓರ್ವ ದೈವೀ ಬಾಲಕಿ ಇದ್ದಾಳೆ. ಅವಳ ಬಗ್ಗೆ ಓರ್ವ ಇತರ ಸಾಧಕಿಯು, “ಕೆಲವು ಕಾರಣಗಳಿಂದ ಅವಳಿಗೆ ದಿನವಿಡಿ ಸ್ವಭಾವದೋಷ ಪಟ್ಟಿಯನ್ನು ಬರೆಯಲು ಆಗದಿದ್ದರೆ, ಅವಳು ರಾತ್ರಿ ೧೧ ಗಂಟೆಯ ವರೆಗೆ ಎಚ್ಚರವಿದ್ದು ಪಟ್ಟಿಯಲ್ಲಿ ಬರೆದ ನಂತರವೇ ಮಲಗುತ್ತಾಳೆ”, ಎಂದು ಹೇಳಿದಳು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವಳ ತಳಮಳವು ಪ್ರಶಂಸನೀಯವಾಗಿದೆ. ಇದರಿಂದ ಈ ದೈವೀ ಬಾಲಕರ ವಿಲಕ್ಷಣ ಅಲೌಕಿಕತ್ವವು ಕಂಡುಬರುತ್ತದೆ. ೩. ದೈವೀ ಬಾಲಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಸಂದರ್ಭದಲ್ಲಿನ ಚಿಂತೆನೆಯನ್ನು ಕೇಳಿ ಆಶ್ಚರ್ಯವಾಗುವುದು, ಈ ದೈವೀ ಬಾಲಕರಂತೆ ಅನೇಕ ವರ್ಷ ಸಾಧನೆಯನ್ನು ಮಾಡಿದ ಸಾಧಕರೂ ಚಿಂತನೆಯನ್ನು ಮಾಡಲಾರರು, ಭಾವಿ ಹಿಂದೂ ರಾಷ್ಟ್ರವನ್ನು ನಡೆಸಲು ಇವರಂತಹ ದಿವ್ಯಾತ್ಮಗಳ ಅವಶ್ಯಕತೆ ಇರುವುದುಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಯತ್ನಗಳೊಂದಿಗೆ ಅವರ ಈ ಸಂದರ್ಭದಲ್ಲಿನ ಯಾವ ಚಿಂತನೆ ಆಗುತ್ತದೆಯೋ, ಅದು ಆಶ್ಚರ್ಯಚಕಿತ ಮಾಡುವಂತಹದ್ದಾಗಿರುತ್ತದೆ. ದೈವೀ ಬಾಲಕರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಕುರಿತು ಅವರ ವಿಚಾರಗಳನ್ನು ಹೇಳುತ್ತಿರುವಾಗ, ‘ಕಳೆದ ೨೦ ವರ್ಷಗಳಿಂದ ಸಾಧನೆಯನ್ನು ಮಾಡುವ ಪ್ರೌಢ ವಯಸ್ಸಿನ ಸಾಧಕರೂ ಈ ರೀತಿ ವಿಚಾರವನ್ನು ಮಾಡಲಾರರು’, ಎಂದೆನಿಸುತ್ತದೆ. ಇದರಿಂದ ಅವರ ವ್ಯಷ್ಟಿ ಸಾಧನೆಯ ಬಗೆಗಿನ ಗಾಂಭೀರ್ಯವು ಗಮನಕ್ಕೆ ಬರುತ್ತದೆ. ದೈವೀ ಬಾಲಕರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯ ಸಂದರ್ಭದಲ್ಲಿ ಮಾಡಿದ ಚಿಂತನೆಯು ಅವರಲ್ಲಿನ ಉಚ್ಚ ಮಟ್ಟದ ಭಾವ ಮತ್ತು ಅತ್ಯಂತ ಪ್ರಬುದ್ಧ ಜ್ಞಾನವನ್ನು ತೋರಿಸುತ್ತದೆ. ಹಿಂದೂ ರಾಷ್ಟ್ರವನ್ನು ನಡೆಸಲು ನಮಗೆ ಇಂತಹ ದಿವ್ಯಾತ್ಮಗಳ ಅವಶ್ಯಕತೆಯೇ ಇದೆ. ೪. ಕೃತಜ್ಞತೆಪ.ಪೂ. ಗುರುದೇವರ ಸಮಷ್ಟಿ ಕಾರ್ಯಕ್ಕಾಗಿ ಇಂತಹ ದೈವೀ ಬಾಲಕರು ಅವತರಿಸಿದ್ದಾರೆ. ‘ನಾವು ಯಾವ ಕಾರ್ಯದ ಕಲ್ಪನೆಯನ್ನೂ ಮಾಡಲು ಸಾಧ್ಯವಿಲ್ಲವೋ, ಅಷ್ಟೊಂದು ಪ್ರಚಂಡ ಸಮಷ್ಟಿ ಕಾರ್ಯವನ್ನು ಪ.ಪೂ. ಗುರುದೇವರು ಇದುವರೆಗೆ ಮಾಡಿದ್ದಾರೆ. ಇದು ನಿಶ್ಚಿತವಾಗಿ ಅದರ ಪರಿಣಾಮವೇ ಆಗಿದೆ. ಅದಕ್ಕಾಗಿ ನಾವೆಲ್ಲ ಸಾಧಕರು ಅವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸೋಣ. – ಪೂ. ತನುಜಾ ಠಾಕೂರ, ಸಂಸ್ಥಾಪಕ, ವೈದಿಕ ಉಪಾಸನಾಪೀಠ. (೩.೧೧.೨೦೨೧) |