ರಾಮನಾಥಿ ಆಶ್ರಮದ ಪರಿಸರದಲ್ಲಿರುವ ದೇವಸ್ಥಾನಗಳ ಬಗ್ಗೆ ಸಾಧಕನಿಗೆ ಬಂದ ಅನುಭೂತಿ

ಶ್ರೀ. ಪ್ರಶಾಂತ ಹರಿಹರ

‘ನಾನು ಗೋವಾದ ರಾಮನಾಥಿಯಲ್ಲಿರುವ ಸನಾತನ ಆಶ್ರಮದ ಪರಿಸರ ದಲ್ಲಿರುವ ‘ಶ್ರೀ ಸಿದ್ಧಿವಿನಾಯಕ’ ಮತ್ತು ‘ಶ್ರೀ ಭವಾನಿಮಾತಾ’ ಈ ದೇವತೆಗಳ ದೇವಸ್ಥಾನಗಳಿಗೆ ಯಾವಾಗಲೂ ದರ್ಶನಕ್ಕೆ ಹೋಗುತ್ತೇನೆ. ನಾನು ಯಾವಾಗಲೂ ದೇವಸ್ಥಾನಗಳಿಂದ ಸ್ವಲ್ಪ ದೂರ ನಿಂತುಕೊಂಡು ಪ್ರಾರ್ಥಿಸುತ್ತೇನೆ; ಆದರೆ ಕೆಲವೊಮ್ಮೆ ದೇವಸ್ಥಾನಗಳ ಬಹಳ ಹತ್ತಿರ ಹೋಗಿ ದರ್ಶನ ಪಡೆಯುತ್ತೇನೆ. ಆಗ ನನಗೆ ಬಂದ ಅನುಭೂತಿಯನ್ನು ನೀಡಲಾಗಿದೆ.

೧. ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಬಂದ ಅನುಭೂತಿಗಳು

ಅ. ದೇವಸ್ಥಾನದ ಹತ್ತಿರ ಹೋದಾಗ ಮೂರ್ತಿಯ ಮೇಲಿನ ಗೋಪುರದ ಒಳಗಿನ ಟೊಳ್ಳು ಸಹ ಕಾಣಿಸುತ್ತದೆ. ಆ ಸಮಯದಲ್ಲಿ ಆ ಟೊಳ್ಳಿನ ಕಡೆಗೆ ನೋಡಿದಾಗ ‘ಇಡೀ ಬ್ರಹ್ಮಾಂಡವೇ ಇಲ್ಲಿ ಇಳಿದಿದೆ’, ಎಂದು ನನಗೆ ಅನಿಸುತ್ತದೆ.

ಆ. ಆ ಟೊಳ್ಳಿನಲ್ಲಿ ನನಗೆ ಆಕಾಶತತ್ತ್ವದ ಅರಿವಾಗುತ್ತದೆ.

ಇ. ಒಂದು ಸಲ ನನಗೆ ಅಲ್ಲಿ ‘ಓಂ’ಕಾರ ನಾದವು ಕೇಳಿಸಿತು.

ಈ. ಮೂರ್ತಿ ಮತ್ತು ಆ ಟೊಳ್ಳನ್ನು ಒಟ್ಟಿಗೆ ನೋಡಿದಾಗ ‘ನಾನು ಆಯಾ ದೇವತೆಯ ಲೋಕಗಳಲ್ಲಿದ್ದೇನೆ ಮತ್ತು ಆ ದೇವತೆಗಳು ಸಗುಣದಲ್ಲಿವೆ’, ಎಂದು ನನಗೆ ಅನಿಸುತ್ತದೆ.

ಉ. ಆ ಟೊಳ್ಳು ಖಾಲಿಯಾಗಿ ಕಾಣದೇ ‘ಒಂದು ನಿರ್ಗುಣ

ತತ್ತ್ವದಿಂದ ಕೂಡಿದೆ’, ಎಂದು ನನಗೆ ಅನಿಸುತ್ತದೆ.

ಊ. ಹೊರಬದಿಯಿಂದ ಗೋಪುರ ನೋಡಿದಾಗ ಅದು ಪೂರ್ಣ ಕಾಣಿಸದಿದ್ದರೂ ‘ಬಹಳ ಎತ್ತರ ಮತ್ತು ವಿಶಾಲವಾಗಿದೆ’, ಎಂದು ನನಗೆ ಅನಿಸುತ್ತದೆ. ‘ಆ ಗೋಪುರವು ಸೂಕ್ಷ್ಮದಿಂದ ಆಯಾ ದೇವತಾತತ್ತ್ವಕ್ಕೆ ಜೋಡಿಸಲ್ಪಟ್ಟಿದೆ ಎಂದು ಅನಿಸುತ್ತದೆ.

೨. ದೇವಸ್ಥಾನಗಳ ಬಗ್ಗೆ ಬಂದ ಅನುಭೂತಿಗಳ ಬಗ್ಗೆ ಸಾಧಕನ ಚಿಂತನ

೨ ಅ. ದೇವಸ್ಥಾನಗಳ ಗರ್ಭಗುಡಿಯಲ್ಲಿರುವ ಅತ್ಯಧಿಕ ಊರ್ಜೆಯಿಂದ ತೊಂದರೆಯಾಗಬಾರದೆಂದು ಆಧ್ಯಾತ್ಮಿಕ ಅಧಿಕಾರವುಳ್ಳ ವ್ಯಕ್ತಿಯೇ ಗರ್ಭಗುಡಿಯಲ್ಲಿ ಪ್ರವೇಶಿಸಬೇಕು ! : ‘ದೇವಸ್ಥಾನಗಳಲ್ಲಿ ದೇವತೆಗಳ ದರ್ಶನ ಪಡೆಯುವಾಗ ಮೊದಲು ಕಲಶದ ದರ್ಶನ ಪಡೆಯುವುದು ಮಹತ್ವದ್ದಾಗಿದೆ; ಏಕೆಂದರೆ ಅದು ಸಗುಣ-ನಿರ್ಗುಣವಾಗಿದೆ. ಸಾಮಾನ್ಯ ಜೀವಗಳಿಗೆ ಅದರಿಂದ ಪೃಥ್ವಿ ತತ್ತ್ವದ ಅನುಭೂತಿ ಬರುತ್ತದೆ. ಗೋಪುರದ ಒಳಗಿನ ಟೊಳ್ಳು ಸ್ವಲ್ಪ ಕಾಣಿಸಿದರೂ ಅದು ವಿಶಾಲವಾಗಿರುವುದರಿಂದ ನಿರ್ಗುಣ-ಸಗುಣವಾಗಿದೆ. ಆ ಟೊಳ್ಳು ಜೀವವು ಬ್ರಹ್ಮಾಂಡದೊಂದಿಗೆ ಜೋಡಿಸಲ್ಪಟ್ಟಿರುವ ಅನುಭೂತಿ ನೀಡುತ್ತದೆ. ನಮ್ಮ ಸಾಧನೆ ಹೆಚ್ಚಾದಂತೆ ಒಳಗಿನ ನಿರ್ಗುಣ ತತ್ತ್ವದ ಅನುಭೂತಿಯನ್ನೂ ಪಡೆಯ ಬಹುದು; ಆದುದರಿಂದಲೇ ‘ದೇವಸ್ಥಾನದ ಗರ್ಭಗುಡಿಯಲ್ಲಿ ಆಧ್ಯಾತ್ಮಿಕ ಅಧಿಕಾರವುಳ್ಳ ವ್ಯಕ್ತಿಯೇ ಪ್ರವೇಶಿಸಬೇಕು. ಇಲ್ಲವಾದರೆ ಅಲ್ಲಿನ ಅತ್ಯಧಿಕ ಊರ್ಜೆಯನ್ನು ಸಹಿಸಲು ಸಾಧ್ಯವಾಗದೇ ತೊಂದರೆಯಾಗುವ ಸಾಧ್ಯತೆ ಇರುತ್ತದೆ’, ಎಂದು ಹೇಳಲಾಗುತ್ತದೆ.

ಪ್ರಶ್ನೆ : ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಕೃಪೆಯಿಂದ ಈ ವಿಷಯದಲ್ಲಿ ಇಂತಹ ಚಿಂತನೆ ಹೊಳೆಯಿತು, ಇದು ಸರಿ ಇದೆಯೇ ?

ಉತ್ತರ : ಹೌದು.

– ಶ್ರೀ. ಪ್ರಶಾಂತ ಹರಿಹರ (ವಯಸ್ಸು ೪೨ ವರ್ಷ), ಸನಾತನ ಆಶ್ರಮ, ರಾಮನಾಥಿ, ಫೋಂಡಾ, ಗೋವಾ. (೮.೨.೨೦೨೫)

ಅನುಭೂತಿ : ಇಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು